VIDEO: ಚೆಂಡನ್ನು ಮುಟ್ಟಿ ಔಟಾದ ಮುಶ್ಫಿಕುರ್ ರಹೀಮ್

Bangladesh vs New Zealand: ಈ ಹಂತದಲ್ಲಿ ಜೊತೆಗೂಡಿದ ಮುಶ್ಫಿಕುರ್ ರಹೀಮ್ ಹಾಗೂ ಶಾಹದತ್ ಹೊಸೈನ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಐದನೇ ವಿಕೆಟ್​ಗೆ ಜೊತೆಗೂಡಿದ ಈ ಜೋಡಿಯು 57 ರನ್​ಗಳ ಕಾಣಿಕೆ ನೀಡಿದರು. ಆದರೆ ಪಂದ್ಯದ 41ನೇ ಓವರ್​ನ 4ನೇ ಎಸೆತದಲ್ಲಿ ಮಾಡಿದ ಎಡವಟ್ಟಿನಿಂದಾಗಿ ಮುಶ್ಫಿಕುರ್ ರಹೀಮ್ ಔಟಾದರು.

VIDEO: ಚೆಂಡನ್ನು ಮುಟ್ಟಿ ಔಟಾದ ಮುಶ್ಫಿಕುರ್ ರಹೀಮ್
Mushfiqur Rahim
Follow us
TV9 Web
| Updated By: ಝಾಹಿರ್ ಯೂಸುಫ್

Updated on: Dec 06, 2023 | 2:31 PM

ಮಿರ್‌ಪುರ್​ನಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಮುಶ್ಫಿಕುರ್ ರಹೀಮ್ (Mushfiqur Rahim)  ವಿಚಿತ್ರವಾಗಿ ಔಟಾಗಿದ್ದರು. ಅದು ಕೂಡ ಬ್ಯಾಟ್​ನಿಂದ ಬಾಲ್ ಅನ್ನು ಬಾರಿಸಿ ಚೆಂಡನ್ನು ಮುಟ್ಟುವ ಮೂಲಕ ಎಂಬುದು ಇಲ್ಲಿ ಅಚ್ಚರಿ. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡವು ಮೊದಲು ಬ್ಯಾಟ್ ಮಾಡುವ ನಿರ್ಧಾರ ತೆಗೆದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಹಸನ್ ಜಾಯ್ (14) ಹಾಗೂ ಝಾಕಿರ್ ಹಸನ್ (8) ಬೇಗನೆ ವಿಕೆಟ್ ಒಪ್ಪಿಸಿದ್ದರು. ಆ ಬಳಿಕ ಬಂದ ನಾಯಕ ನಜ್ಮುಲ್ ಹೊಸೈನ್ ಶಾಂಟೊ (5) ಹಾಗೂ ಮೊಯಿನುಲ್ ಹಕ್ (5) ಕ್ರೀಸ್ ಕಚ್ಚಿ ನಿಲ್ಲುವಲ್ಲಿ ವಿಫಲರಾದರು.

ಈ ಹಂತದಲ್ಲಿ ಜೊತೆಗೂಡಿದ ಮುಶ್ಫಿಕುರ್ ರಹೀಮ್ ಹಾಗೂ ಶಾಹದತ್ ಹೊಸೈನ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಐದನೇ ವಿಕೆಟ್​ಗೆ ಜೊತೆಗೂಡಿದ ಈ ಜೋಡಿಯು 57 ರನ್​ಗಳ ಕಾಣಿಕೆ ನೀಡಿದರು. ಆದರೆ ಪಂದ್ಯದ 41ನೇ ಓವರ್​ನ 4ನೇ ಎಸೆತದಲ್ಲಿ ಮಾಡಿದ ಎಡವಟ್ಟಿನಿಂದಾಗಿ ಮುಶ್ಫಿಕುರ್ ರಹೀಮ್ ಔಟಾದರು. ಕೈಲ್ ಜೇಮಿಸನ್ ಎಸೆದ ಎಸೆತವನ್ನು ಮುಶ್ಫಿಕುರ್ ರಕ್ಷಣಾತ್ಮಕವಾಗಿ ಆಡಿದ್ದರು. ಬ್ಯಾಟ್​​ಗೆ ತಾಗಿದ ಚೆಂಡು ಮತ್ತೆ ಬೌನ್ಸ್ ಆಗುತ್ತಿದ್ದಂತೆ ಬಾಂಗ್ಲಾದೇಶ್ ತಂಡದ ಆಟಗಾರ ಕೈಯಿಂದ ತಡೆದರು.

ಇದರ ಬೆನ್ನಲ್ಲೇ ನ್ಯೂಝಿಲೆಂಡ್ ಆಟಗಾರರು ಫೀಲ್ಡ್​ ಅಂಪೈರ್​ಗೆ ಮನವಿ ಸಲ್ಲಿಸಿದ್ದಾರೆ. ಈ ಮನವಿಯನ್ನು ಪುರಸ್ಕರಿಸಿದ ತೀರ್ಪುಗಾರರು ಚರ್ಚಿಸಿ ಮರು ಪರಿಶೀಲನೆಗೆ ಮೂರನೇ ಅಂಪೈರ್​ಗೆ ಮನವಿ ಸಲ್ಲಿಸಿದರು.

ರೀಪ್ಲೆ ಪರಿಶೀಲಿಸಿದ ಮೂರನೇ ಅಂಪೈರ್​ ಔಟ್ ಎಂದು ತೀರ್ಪು ನೀಡಿದ್ದಾರೆ. ಈ ಮೂಲಕ ಮುಶ್ಫಿಕುರ್ ರಹೀಮ್​​ ಟೆಸ್ಟ್ ಕ್ರಿಕೆಟ್‌ನಲ್ಲಿ ಫೀಲ್ಡಿಂಗ್​ಗೆ ಅಡ್ಡಿಪಡಿಸಿ ಔಟಾದ ಮೊದಲ ಬಾಂಗ್ಲಾದೇಶ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಐಸಿಸಿ ನಿಯಮ ಏನು ಹೇಳುತ್ತೆ?

ಐಸಿಸಿ ನಿಯಮ 37.1.2 ರ ಪ್ರಕಾರ, “37.2 ರ ಸಂದರ್ಭಗಳನ್ನು ಹೊರತುಪಡಿಸಿ, ಬೌಲರ್ ಎಸೆದ ಚೆಂಡನ್ನು ಸ್ವೀಕರಿಸುವ ಕ್ರಿಯೆಯಲ್ಲಿ, ಅವನು/ಅವಳು ಉದ್ದೇಶಪೂರ್ವಕವಾಗಿ ಬ್ಯಾಟ್ ಅನ್ನು ಹಿಡಿಯದೆ ಕೈಯಿಂದ ಚೆಂಡನ್ನು ಹೊಡೆಯುವಂತಿಲ್ಲ ಅಥವಾ ತಡೆಯುವಂತಿಲ್ಲ. ಹಾಗೆಯೇ ಕೈಯಿಂದ ಚೆಂಡನ್ನು ತಡೆದು ಫೀಲ್ಡರ್​ಗಳಿಗೆ ಅಡ್ಡಿಪಡಿಸುವಂತಿಲ್ಲ.

ಇದನ್ನೂ ಓದಿ: Shubman Gill: ಸಚಿನ್​ರ​ ಮತ್ತೊಂದು ವಿಶ್ವ ದಾಖಲೆ ಸರಿಗಟ್ಟಿದ ಶುಭ್​ಮನ್ ಗಿಲ್

ಒಂದು ವೇಳೆ ಚೆಂಡು ವಿಕೆಟ್​​ಗೆ ಬೀಳುತ್ತಿದ್ದರೆ ಒಂದಕ್ಕಿಂತ ಹೆಚ್ಚು ಬಾರಿ ಚೆಂಡನ್ನು ಹೊಡೆಯಬಹುದು ಎಂದು ತಿಳಿಸಲಾಗಿದೆ. ಇಲ್ಲಿ ಮುಶ್ಫಿಕುರ್ ರಹೀಮ್ ಹೊರ ಹೋಗುತ್ತಿದ್ದಂತೆ ಚೆಂಡನ್ನು ಕೈಯಿಂದ ತಡೆದಿದ್ದಾರೆ. ಹೀಗಾಗಿ ಐಸಿಸಿ ನಿಯಮದ ಪ್ರಕಾರ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದಾರೆ.

ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ