Nathan Smith Catch: ನ್ಯೂಜಿಲೆಂಡ್ ಆಟಗಾರ ಹಿಡಿದ ಕ್ಯಾಚ್ ಕಂಡು ನಿಬ್ಬೆರಗಾದ ಕ್ರಿಕೆಟ್ ಜಗತ್ತು: ಇಲ್ಲಿದೆ ರೋಚಕ ವಿಡಿಯೋ

| Updated By: Vinay Bhat

Updated on: Nov 27, 2021 | 9:45 AM

Canterbury vs Wellington, Super Smash T20: ನ್ಯೂಜಿಲೆಂಡ್​ನಲ್ಲಿ ಆರಂಭಗೊಂಡಿರುವ ಸೂಪರ್ ಸ್ಮಾಶ್ ಟಿ20 ಲೀಗ್​ನ ಕ್ಯಾಂಟರ್ಬರಿ ಮತ್ತು ವೆಲ್ಲಿಂಗ್ಟನ್ ಪಂದ್ಯದಲ್ಲಿ ನಥನ್ ಸ್ಮಿತ್ ಹಿಡಿದಿರುವ ಈ ಅದ್ಭುತ ಕ್ಯಾಚ್​ನ ವಿಡಿಯೋ ವೈರಲ್ ಆಗುತ್ತಿದೆ.

Nathan Smith Catch: ನ್ಯೂಜಿಲೆಂಡ್ ಆಟಗಾರ ಹಿಡಿದ ಕ್ಯಾಚ್ ಕಂಡು ನಿಬ್ಬೆರಗಾದ ಕ್ರಿಕೆಟ್ ಜಗತ್ತು: ಇಲ್ಲಿದೆ ರೋಚಕ ವಿಡಿಯೋ
Nathan Smith Catch
Follow us on

ಕ್ರಿಕೆಟ್ (Cricket) ಜಗತ್ತಿನಲ್ಲಿ ಇದುವರೆಗೆ ನಾವು ನಾನಾ ರೀತಿಯ ಅಚ್ಚರಿಯ ಕ್ಯಾಚ್​ಗಳನ್ನು ಆಟಗಾರರು ಹಿಡಿದಿರುವುದು ಕಂಡಿದ್ದೇವೆ. ಡೈವ್ ಬಿದ್ದು, ಸೂಪರ್ ಮ್ಯಾನ್​ನಂತೆ (Super Man) ಹಾರಿ ಅಥವಾ ಬೌಂಡರಿ ಲೈನ್ ಬಳಿ ತಮ್ಮ ಕೌಶಲ್ಯ ತೋರಿಸಿ ಎದುರಾಳಿ ಬ್ಯಾಟರ್ ಅನ್ನು ಔಟ್ ಮಾಡಿದ್ದಾರೆ. ಆದರೆ, ನ್ಯೂಜಿಲೆಂಡ್ ಕ್ರಿಕೆಟಿಗನೊಬ್ಬ (New Zealand Cricket) ಹಾರಿ, ಡೈವ್ ಬಿದ್ದು ಬಳಿಕ ಸೂಪರ್ ಮ್ಯಾನ್​ನಂತೆ ಹಾರಿ ಊಹಿಸಲಾಗದ ರೀತಿಯಲ್ಲಿ ಹಿಡಿದಿರುವ ಕ್ಯಾಚ್​ನ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ (Viral Video) ಆಗುತ್ತಿದೆ. ಇದನ್ನು ಸ್ವತಃ ಕ್ರಿಕೆಟ್ ಜಗತ್ತು ಕೂಡ ನಿಬ್ಬೆರಗಾಗಿದೆ. ಹೌದು, ಈ ಘಟನೆ ನ್ಯೂಜಿಲೆಂಡ್​ ದೇಶೀಯ ಟಿ20 ಟೂರ್ನಮೆಂಟ್​ ಸೂಪರ್ ಸ್ಮಾಶ್​​ನಲ್ಲಿ (Super Smash T20 Tournament) ನಡೆದಿದೆ. ಈ ಮನಮೋಹಕ ಕ್ಯಾಚ್ ಅನ್ನು ಹಿಡಿದ ಆಟಗಾರನ ಹೆಸರು ನಥನ್ ಸ್ಮಿತ್ (Nathan Smith).

ನ್ಯೂಜಿಲೆಂಡ್​ನಲ್ಲಿ ಶುಕ್ರವಾರ ಆರಂಭಗೊಂಡಿರುವ ಸೂಪರ್ ಸ್ಮಾಶ್ ಟಿ20 ಲೀಗ್​ನ ಉದ್ಘಾಟನಾ ಪಂದ್ಯದಲ್ಲಿ ಕ್ಯಾಂಟರ್ಬರಿ ಮತ್ತು ವೆಲ್ಲಿಂಗ್ಟನ್ ತಂಡಗಳು ಮುಖಾಮುಖಿ ಆಗಿದ್ದವು. ವೆಲ್ಲಿಂಗ್ಟನ್ ನೀಡಿದ್ದ 178 ರನ್​ಗಳ ಟಾರ್ಗೆಟ್ ಬೆನ್ನಟ್ಟುವ ಆರಂಭದಲ್ಲೇ ಕ್ಯಾಂಟರ್ಬರಿ ತಂಡಕ್ಕೆ ಶಾಕ್ ನೀಡಿದ್ದೇ ಈ ಕ್ಯಾಚ್. ಮೊದಲ ಓವರ್​ನ ಬೆನ್ನೆಟ್ ಅವರ ಮೂರನೇ ಎಸೆತದಲ್ಲಿ ವೆಲ್ಲಿಂಗ್ಟನ್ ಬ್ಯಾಟರ್ ಕೆನ್ ಮೆಕ್ಲ್ಯೂರ್ ಅವರು ಸ್ಮಿತ್ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು.

 

ಹಮೀಶ್ ಎಸೆದ ಈ ಚೆಂಡು ಟ್ರಿಕ್ಕಿ ಏನು ಆಗಿರಲಿಲ್ಲ. ಪ್ಯಾಡ್ಸ್​ ಕಡೆ ಬಂದ ಬಾಲ್ ಅನ್ನು ಮೆಕ್ಲ್ಯೂರ್ ಪನಿಶ್ ಮಾಡಿದರು. ಆದರೆ, ಸರಿಯಾಗಿ ಟೈಮ್ ಆಗದೆ ಫೈನ್​​ ಲೆಗ್ ಬೌಂಡರಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸ್ಮಿತ್ ಬಳಿ ಚೆಂಡು ಬಂತು. ಚೆಂಡು ಇನ್ನೇನು ಕೈಗೆ ಸಿಕ್ಕಿತು ಎಂದಾದಾಗ ನಿಯಂತ್ರಣ ಸಾಲದೆ ಬೌಂಡರಿ ಲೈನ್ ಆಚೆಗೆ ಫೀಲ್ಡರ್ ವಾಲಿದರು. ತಕ್ಷಣ ಇದನ್ನು ಅರಿತ ಅವರು ಚೆಂಡನ್ನು ಮೇಲಕ್ಕೆ ಎಸೆದು ಬೌಂಡರಿ ಗೆರೆ ದಾಟಿ ಬಳಿಕ ಅಲ್ಲಿಂದ ಬೌಂಡರಿ ಗೆರೆ ಒಳಗೆ ಡೈವ್ ಬಿದ್ದು ಅದ್ಭುತವಾಗಿ ಚೆಂಡನ್ನು ಹಿಡಿದರು. ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಲ್ಲಿಂಗ್ಟನ್ 20 ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ 177 ರನ್ ಬಾರಿಸಿತು. ಫಿನ್ ಅಲೆನ್ ಕೇವಲ 30 ಎಸೆತಗಳಲ್ಲಿ ತಲಾ 4 ಫೋರ್ ಸಿಕ್ಸರ್ ಸಿಡಿಸಿ 57 ರನ್ ಚಚ್ಚಿದರು. ಲ್ಯೂಕ್ ಜಾರ್ಗೆಸನ್ 30 ಮತ್ತು ನಾಯಕ ಬ್ರೇಸ್​ವೆಲ್ 27 ರನ್ ಬಾರಿಸಿದರು. ಎದುರಾಳಿ ಪರ ಎಡ್ ನಟಲ್ 3 ವಿಕೆಟ್ ಕಿತ್ತರು.

178 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಕ್ಯಾಂಟರ್ಬರಿ ತಂಡ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿತು. ಜ್ಯಾಕ್ ಬೋಯ್ಲ್ 31 ಮತ್ತು ವಿಲ್ ವಿಲಿಯಮ್ಸ್ ಅಜೇಯ 29 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್​ಗಳು ತಂಡಕ್ಕೆ ನೆರವಾಗಲಿಲ್ಲ. ಪರಿಣಾಮ 20 ಓವರ್​ನಲ್ಲಿ 9 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಗೊಂಡಿತು.

IND vs NZ 1st Test, Day 3 LIVE Score: ಮೂರನೇ ದಿನದಾಟ ಆರಂಭ

(Nathan Smith took a stunning catch in the Super Smash T20 tournament match between Canterbury vs Wellington)