Shreyas Iyer: ಟೆಸ್ಟ್ ಕ್ಯಾಪ್ ಸ್ವೀಕರಿಸುವಾಗ ಶ್ರೇಯಸ್ ಅಯ್ಯರ್​ಗೆ ಗವಾಸ್ಕರ್ ಹೇಳಿದ ಮಾತು ಏನು ಗೊತ್ತೇ?

India vs New Zealand 1st Test: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಸುನೀಲ್ ಗವಾಸ್ಕರ್ ಅವರು ಶ್ರೇಯಸ್ ಅಯ್ಯರ್​ಗೆ ಟೆಸ್ಟ್ ಕ್ಯಾಪ್ ತೊಟ್ಟು ವೆಲ್​ಕಮ್ ಮಾಡಿದರು. ಈ ಸಂದರ್ಭ ಗವಾಸ್ಕರ್ ಏನು ಹೇಳಿದರು ಎಂಬುದನ್ನು ಶ್ರೇಯಸ್ ಬಹಿರಂಗ ಪಡಿಸಿದ್ದಾರೆ.

Shreyas Iyer: ಟೆಸ್ಟ್ ಕ್ಯಾಪ್ ಸ್ವೀಕರಿಸುವಾಗ ಶ್ರೇಯಸ್ ಅಯ್ಯರ್​ಗೆ ಗವಾಸ್ಕರ್ ಹೇಳಿದ ಮಾತು ಏನು ಗೊತ್ತೇ?
shreyas iyer and Sunil gavaskar
Follow us
TV9 Web
| Updated By: Vinay Bhat

Updated on: Nov 27, 2021 | 8:19 AM

ಕಾನ್ಪುರದ ಗ್ರೀನ್ ಪಾರ್ಕ್​ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್‌ (India vs Nw Zealand) ವಿರುದ್ಧ ಟೆಸ್ಟ್‌ ಕ್ರಿಕೆಟ್‌ ಪದಾರ್ಪಣೆ ಪಂದ್ಯದಲ್ಲಿಯೇ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿದ ಶ್ರೇಯಸ್‌ ಅಯ್ಯರ್‌ (Shreyas Iyer) ಚೊಚ್ಚಲ ಶತಕ ಸಿಡಿಸಿ ಗಮನ ಸೆಳೆದರು. ಜೊತೆಗೆ ವಿಶೇಷ ದಾಖಲೆಯನ್ನೂ ಮಾಡಿದರು. ಪದಾರ್ಪಣೆ ಟೆಸ್ಟ್‌ ಪಂದ್ಯದಲ್ಲಿಯೇ ಶತಕ ಸಿಡಿಸಿದ ಭಾರತದ 16ನೇ ಬ್ಯಾಟರ್ ಎಂಬ ಕೀರ್ತಿಗೆ ಅಯ್ಯರ್‌ ಪಾತ್ರರಾದರು. ಅಲ್ಲದೆ, ತವರಿನಲ್ಲಿ ಪದಾರ್ಪಣೆ (Shreyas Iyer debut) ಟೆಸ್ಟ್‌ನಲ್ಲೇ ಶತಕ ಸಿಡಿಸಿದ 10ನೇ ಬ್ಯಾಟರ್ ಎನಿಸಿಕೊಂಡರು. ಈ ಮೂಲಕ ತಡವಾಗಿಯಾದರೂ ಭಾರತ ಟೆಸ್ಟ್‌ ತಂಡದಲ್ಲಿ ತಮಗೆ ಸ್ಥಾನ ಸಿಕ್ಕಿದ್ದನ್ನು ಸಮರ್ಥಿಸಿಕೊಂಡ ಶ್ರೇಯಸ್ 171 ಎಸೆತಗಳಲ್ಲಿ 13 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ 105 ರನ್ ಬಾರಿಸಿದರು. ಇವರ ದಿಟ್ಟ ಆಟದಿಂದಾಗಿ ಭಾರತ (India) ತಂಡವು ನ್ಯೂಜಿಲೆಂಡ್ ಎದುರಿನ ಮೊದಲ ಟೆಸ್ಟ್‌ನ ಪ್ರಥಮ ಇನಿಂಗ್ಸ್‌ನಲ್ಲಿ 111.1 ಓವರ್‌ಗಳಲ್ಲಿ 345 ರನ್‌ ಗಳಿಸಿತು.

ಪಂದ್ಯ ಆರಂಭಕ್ಕೂ ಮೊದಲು ನಾಯಕ ಅಜಿಂಕ್ಯಾ ರಹಾನೆ ಅಯ್ಯರ್ ಪದಾರ್ಪಣೆ ಬಗ್ಗೆ ಸುಳಿವು ನೀಡಿದ್ದರು. ಬಳಿಕ ಸುನೀಲ್ ಗವಾಸ್ಕರ್ ಅಯ್ಯರ್​ಗೆ ಟೆಸ್ಟ್ ಕ್ಯಾಪ್ ತೊಟ್ಟು ವೆಲ್​ಕಮ್ ಮಾಡಿದರು. ಈ ಸಂದರ್ಭ ಗವಾಸ್ಕರ್ ಏನು ಹೇಳಿದರು ಎಂಬುದನ್ನು ಶ್ರೇಯಸ್ ಬಹಿರಂಗ ಪಡಿಸಿದ್ದಾರೆ. ಎರಡನೇ ದಿನದಾಟ ಮುಗಿದ ಬಳಿಕ ಮಾತನಾಡಿದ ಶತಕವೀರ, “ಮುಂದಿನ ಸಮಯದ ಬಗ್ಗೆ ನೋಡಬೇಡ, ಹಿಂದಿನ ಸಮಯದ ಬಗ್ಗೆಯೂ ಚಿಂತಿಸಬೇಡ, ನೀನು ಈ ಕ್ಷಣದ ಬಗ್ಗೆ ಮಾತ್ರ ಯೋಚಿಸು, ಮುಂದಿನ ಎಸೆತದ ಬಗ್ಗೆ ಮಾತ್ರ ನಿನ್ನ ಗುರಿ ಇರಲಿ ಎಂದು ಗವಾಸ್ಕರ್ ಹೇಳಿದರೆಂದು” ಅಯ್ಯರ್ ಬಹುರಂಗ ಪಡಿಸಿದರು.

ಇನ್ನು ಪದಾರ್ಪಣೆ ಮಾಡಿದ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲಿಯೇ ಶತಕವನ್ನು ಬಾರಿಸುವ ಮೂಲಕ ಶ್ರೇಯಸ್ ಅಯ್ಯರ್ ಈ ಹಿಂದೆ ತನ್ನ ಕೋಚ್ ಪ್ರವೀಣ್ ಆಮ್ರೆ ವಿಧಿಸಿದ್ದ ಷರತ್ತನ್ನು ಗೆದ್ದಿದ್ದಾರೆ. ಹೌದು, “ನೀನು ಯಾವ ದಿನ ಅಂತರರಾಷ್ಟ್ರೀಯ ಟೆಸ್ಟ್ ಶತಕವನ್ನು ಬಾರಿಸುತ್ತೀಯೋ, ಅಂದೇ ನಾನು ನಿಮ್ಮ ಮನೆಗೆ ಊಟಕ್ಕೆ ಬರುತ್ತೇನೆ. ಅಲ್ಲಿಯವರೆಗೂ ಯಾವುದೇ ಕಾರಣಕ್ಕೂ ನನ್ನನ್ನು ಆಹ್ವಾನಿಸಬೇಡ” ಎಂದು ತರಬೇತುದಾರ ಪ್ರವೀಣ್ ಆಮ್ರೆ ಅಯ್ಯರ್ ಅವರಿಗೆ ಷರತ್ತನ್ನು ವಿಧಿಸಿದ್ದರಂತೆ.

ಹೀಗೆ ಈ ಹಿಂದೆ ತನ್ನ ಕೋಚ್ ಪ್ರವೀಣ್ ಆಮ್ರೆ ವಿಧಿಸಿದ್ದ ಷರತ್ತನ್ನು ಚೊಚ್ಚಲ ಟೆಸ್ಟ್ ಪಂದ್ಯದಲ್ಲಿಯೇ ಗೆದ್ದಿರುವ ಶ್ರೇಯಸ್, “ಇಂದಿನ ಪಂದ್ಯ ಮುಗಿದ ನಂತರ, ನಿಜ ಹೇಳಬೇಕೆಂದರೆ ಪಂದ್ಯವಲ್ಲ ಇಂದಿನ ಶತಕ ಮುಗಿದ ನಂತರ ನಾನು ನನ್ನ ಕೋಚ್ ಪ್ರವೀಣ್ ಆಮ್ರೆ ಅವರಿಗೆ ಸಂದೇಶ ಕಳುಹಿಸುವುದರ ಮೂಲಕ ಊಟಕ್ಕೆ ಆಹ್ವಾನಿಸಲಿದ್ದೇನೆ” ಎಂದು ಹೇಳಿಕೆಯನ್ನು ನೀಡಿದರು.

India vs New Zealand 1st Test: ಕಿವೀಸ್ ವಿಕೆಟ್ ಕೀಳಬೇಕಿದೆ ಭಾರತೀಯ ಬೌಲರ್​ಗಳು: ಕುತೂಹಲ ಮೂಡಿಸಿದೆ ಮೂರನೇ ದಿನದಾಟ

(Shreyas Iyer revealed what Sunil Gavaskar told him while giving him the Test cap)

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ