Naveen-ul-Haq: ಅಫ್ಘಾನಿಸ್ತಾನ್ ತಂಡದಿಂದ ನವೀನ್ ಉಲ್ ಹಕ್ ಔಟ್..!

| Updated By: ಝಾಹಿರ್ ಯೂಸುಫ್

Updated on: Jul 08, 2023 | 6:52 PM

Bangladesh vs Afghanistan: ಬಾಂಗ್ಲಾದೇಶ್ ಹಾಗೂ ಅಫ್ಘಾನಿಸ್ತಾನ್ ನಡುವಣ ಮೊದಲ ಟಿ20 ಪಂದ್ಯ ಜುಲೈ 14 ರಂದು ನಡೆಯಲಿದ್ದು, 2ನೇ ಪಂದ್ಯವು ಜುಲೈ 16 ರಂದು ಜರುಗಲಿದೆ.

Naveen-ul-Haq: ಅಫ್ಘಾನಿಸ್ತಾನ್ ತಂಡದಿಂದ ನವೀನ್ ಉಲ್ ಹಕ್ ಔಟ್..!
Naveen-ul-Haq
Follow us on

Bangladesh vs Afghanistan: ಜನವರಿ 14 ರಿಂದ ಶುರುವಾಗಲಿರುವ ಬಾಂಗ್ಲಾದೇಶ್ ವಿರುದ್ಧದ ಟಿ20 ಸರಣಿಯಿಂದ ಅಫ್ಘಾನಿಸ್ತಾನ್ ವೇಗಿ ನವೀನ್ ಉಲ್ ಹಕ್ (Naveen-ul-Haq) ಹೊರಬಿದ್ದಿದ್ದಾರೆ. ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಯುವ ವೇಗಿ ಇದೀಗ ಹೆಚ್ಚಿನ ಚಿಕಿತ್ಸೆಗೆ ಇಂಗ್ಲೆಂಡ್​ಗೆ ಪ್ರಯಾಣಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಬಾಂಗ್ಲಾ ವಿರುದ್ಧದ ಟಿ20 ಸರಣಿಯಲ್ಲಿ ನವೀನ್ ಉಲ್ ಹಕ್ ಕಾಣಿಸಿಕೊಳ್ಳುವುದಿಲ್ಲ. ಇತ್ತ ನವೀನ್ ಉಲ್ ಹಕ್ ಹೊರಗುಳಿಯುತ್ತಿದ್ದಂತೆ ಮತ್ತೋರ್ವ ವೇಗಿ ನಿಜಾತ್ ಮಸೂದ್ ಅವರನ್ನು ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿ ಆಯ್ಕೆ ಮಾಡಿದೆ.

ಇದುವರೆಗೆ ಕೇವಲ 3 ಟಿ20 ಪಂದ್ಯಗಳನ್ನಾಡಿರುವ ಮಸೂದ್ 4 ವಿಕೆಟ್ ಕಬಳಿಸಲು ಮಾತ್ರ ಯಶಸ್ವಿಯಾಗಿದ್ದಾರೆ. ಇದಾಗ್ಯೂ ಇತ್ತೀಚೆಗೆ ನಡೆದ ಬಾಂಗ್ಲಾದೇಶ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ನಿಜಾತ್ ಮಸೂದ್ 5 ವಿಕೆಟ್ ಕಬಳಿಸಿ ಮಿಂಚಿದ್ದರು. ಹೀಗಾಗಿ ನವೀನ್ ಸ್ಥಾನದಲ್ಲಿ ಮಸೂದ್​ಗೆ ಅವಕಾಶ ನೀಡಲಾಗಿದೆ.

ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ನವೀನ್ ಉಲ್ ಹಕ್ ಎರಡು ತಿಂಗಳ ಕಾಲ ತಂಡದಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರ ಅಸಾದುಲ್ಲಾ ಖಾನ್ ಶನಿವಾರ ತಿಳಿಸಿದ್ದಾರೆ. ಇದಾಗ್ಯೂ ಅವರು ಏಕದಿನ ವಿಶ್ವಕಪ್​ ವೇಳೆಗೆ ತಂಡಕ್ಕೆ ಕಂಬ್ಯಾಕ್ ಮಾಡಲಿದ್ದಾರಾ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿಲ್ಲ.

ಬಾಂಗ್ಲಾದೇಶ್ ಹಾಗೂ ಅಫ್ಘಾನಿಸ್ತಾನ್ ನಡುವಣ ಮೊದಲ ಟಿ20 ಪಂದ್ಯ ಜುಲೈ 14 ರಂದು ನಡೆಯಲಿದ್ದು, 2ನೇ ಪಂದ್ಯವು ಜುಲೈ 16 ರಂದು ಜರುಗಲಿದೆ. ಈ ಸರಣಿಗಾಗಿ ಆಯ್ಕೆ ಮಾಡಲಾದ ಅಫ್ಘಾನಿಸ್ತಾನ್ ತಂಡ ಈ ಕೆಳಗಿನಂತಿದೆ.

ಇದನ್ನೂ ಓದಿ: Virat Kohli vs Naveen-ul-Haq: ನಾನಲ್ಲ, ಜಗಳ ಶುರು ಮಾಡಿದ್ದೇ ಕೊಹ್ಲಿ ಎಂದ ನವೀನ್ ಉಲ್ ಹಕ್

ಅಫ್ಘಾನಿಸ್ತಾನ್ ಟಿ20 ತಂಡ: ರಶೀದ್ ಖಾನ್ (ನಾಯಕ), ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ಮೊಹಮ್ಮದ್ ಶೆಹಝಾದ್, ವಫಾದರ್ ಮೊಮಂಡ್, ಹಝರತುಲ್ಲಾ ಝಝೈ, ಸಿದ್ದಿಕುಲ್ಲಾ ಅಟಲ್, ನಜಿಬುಲ್ಲಾ ಝದ್ರಾನ್, ಕರೀಮ್ ಜನತ್, ಮೊಹಮ್ಮದ್ ನಬಿ, ಅಝ್ಮತುಲ್ಲಾ ಒಮರ್​ಝೈ, ನೂರ್ ಅಹ್ಮದ್, ಮುಜೀಬ್ ಉರ್ ರೆಹಮಾನ್, ಫರೀದ್ ಅಹ್ಮದ್, ಫಝಲ್ಹಕ್ ಫಾರೂಕಿ ಮತ್ತು ನಿಜಾತ್ ಮಸೂದ್.