Viral Video: ವಿಕೆಟ್ ಪಡೆದು ಪುಷ್ಪಾ ಸ್ಟೈಲ್​ನಲ್ಲಿ ಸಂಭ್ರಮಿಸಿದ ಮಹಿಳಾ ಆಟಗಾರ್ತಿ

| Updated By: ಝಾಹಿರ್ ಯೂಸುಫ್

Updated on: May 11, 2022 | 4:04 PM

Sita Rana Viral Video: ಫೇರ್ ಬ್ರೇಕ್ ಇನ್ವಿಟೇಶನಲ್ ಟೂರ್ನಮೆಂಟ್ ಮಹಿಳಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹಲವು ದೇಶಗಳ ಉದಯೋನ್ಮುಖ ಕ್ರಿಕೆಟಿಗರು ಭಾಗವಹಿಸುತ್ತಿದ್ದಾರೆ.

Viral Video: ವಿಕೆಟ್ ಪಡೆದು ಪುಷ್ಪಾ ಸ್ಟೈಲ್​ನಲ್ಲಿ ಸಂಭ್ರಮಿಸಿದ ಮಹಿಳಾ ಆಟಗಾರ್ತಿ
Nepal spinner Sita Rana
Follow us on

ಕ್ರಿಕೆಟ್ ಅಂಗಳದಲ್ಲಿ ಪುಷ್ಪಾ ಸಿನಿಮಾ ಸ್ಟ್ರೈಲ್ ಸಖತ್ ವೈರಲ್ ಆಗಿತ್ತು. ಈ ಬಾರಿಯ ಐಪಿಎಲ್​ನಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ರವೀಂದ್ರ ಜಡೇಜಾ ಮತ್ತು ಒಬೆದ್ ಮೆಕಾಯ್ ಕೂಡ ಮೈದಾನದಲ್ಲಿ ಪುಷ್ಪಾ ಚಿತ್ರದ ಫೈರ್ ಸ್ಟೈಲ್ ತೋರಿಸಿದ್ದರು. ಇದೀಗ ಈ ಕ್ರೇಜ್ ಮಹಿಳಾ ಕ್ರಿಕೆಟಿಗೂ ತಟ್ಟಿದೆ. ದುಬೈನಲ್ಲಿ ನಡೆದ ಫೇರ್ ಬ್ರೇಕ್ ಇನ್ವಿಟೇಶನಲ್ ಟೂರ್ನಮೆಂಟ್ ನಲ್ಲಿ ಮಹಿಳಾ ಆಟಗಾರ್ತಿ ವಿಕೆಟ್ ಪಡೆದು ‘ಪುಷ್ಪಾ’ ಸ್ಟೈಲ್​ನಲ್ಲಿ ಸಂಭ್ರಮಿಸಿದರು. ಈ ವಿಡಿಯೋವನ್ನು ಐಸಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಮೇ 5 ರಂದು ನಡೆದ ಟೊರ್ನಾಡೊ ಮತ್ತು ಸಫೈರ್ ಮಹಿಳಾ ತಂಡಗಳ ನಡುವೆ ಪಂದ್ಯದ ವೇಳೆ ನೇಪಾಳದ ಸೀತಾ ರಾಣಾ ವಿಕೆಟ್ ಪಡೆದು ಪುಷ್ಫಾ ಚಿತ್ರದ ಸ್ಟೈಲ್​ನಲ್ಲಿ ಸಂಭ್ರಮಿಸಿದರು. ಸೀತಾ ರಾಣಾ ವಿಕೆಟ್ ಪಡೆದ ನಂತರ ಅಲ್ಲು ಅರ್ಜುನ್ ಅವರ ಶೈಲಿಯನ್ನು ಅನುಕರಿಸಿದರು. ಈ ವೀಡಿಯೊವನ್ನು ಪೋಸ್ಟ್ ಮಾಡಿದ ಐಸಿಸಿ, ನೇಪಾಳದ ಸೀತಾ ರಾಣಾ ಅತ್ಯಂತ ಜನಪ್ರಿಯ ಸಂಭ್ರಮ ಆಚರಿಸುತ್ತಿದ್ದಾರೆ ಎಂದು ಬರೆದುಕೊಂಡಿದೆ.

ಫೇರ್ ಬ್ರೇಕ್ ಇನ್ವಿಟೇಶನಲ್ ಟೂರ್ನಮೆಂಟ್ ಮಹಿಳಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹಲವು ದೇಶಗಳ ಉದಯೋನ್ಮುಖ ಕ್ರಿಕೆಟಿಗರು ಭಾಗವಹಿಸುತ್ತಿದ್ದಾರೆ. ಈ ಪಂದ್ಯಾವಳಿಯಲ್ಲಿ ಅನೇಕ ಅನುಭವಿ ಮಹಿಳಾ ಕ್ರಿಕೆಟಿಗರು ಸಹ ಭಾಗಿಯಾಗಿದ್ದಾರೆ. ಇಂಗ್ಲೆಂಡ್ ನಾಯಕಿ ಹೀದರ್ ನೈಟ್, ವೆಸ್ಟ್ ಇಂಡೀಸ್ ನಾಯಕಿ ಸ್ಟೆಫನಿ ಟೇಲರ್ ಮತ್ತು ಪಾಕಿಸ್ತಾನದ ಸನಾ ಮಿರ್ ಕೂಡ ಈ ಟೂರ್ನಿಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.