ಟಿ20 ಯಲ್ಲಿ ದೇಶಕ್ಕಾಗಿ ಮೊದಲ ಹ್ಯಾಟ್ರಿಕ್.. 4 ವಿಶ್ವಕಪ್‌ ಆಡಿದ ಖ್ಯಾತ ಬೌಲರ್ ಕ್ರಿಕೆಟ್​ಗೆ ವಿದಾಯ

ಅನ್ನಾ ತಮ್ಮ ಒಂಬತ್ತು ವರ್ಷಗಳ ವೃತ್ತಿ ಜೀವನದಲ್ಲಿ 32 ಏಕದಿನ ಮತ್ತು 33 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಅವರು ಒಂದು ಐಸಿಸಿ ಕ್ರಿಕೆಟ್ ವಿಶ್ವಕಪ್ ಮತ್ತು ಮೂರು ಟಿ 20 ವಿಶ್ವಕಪ್ ಆಡಿದ್ದಾರೆ.

ಟಿ20 ಯಲ್ಲಿ ದೇಶಕ್ಕಾಗಿ ಮೊದಲ ಹ್ಯಾಟ್ರಿಕ್.. 4 ವಿಶ್ವಕಪ್‌ ಆಡಿದ ಖ್ಯಾತ ಬೌಲರ್ ಕ್ರಿಕೆಟ್​ಗೆ ವಿದಾಯ
ಅನ್ನಾ ಪೀಟರ್ಸನ್

ನ್ಯೂಜಿಲೆಂಡ್ ಆಲ್ ರೌಂಡರ್ ಅನ್ನಾ ಪೀಟರ್ಸನ್ ಮಂಗಳವಾರ ಒಂಬತ್ತು ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದಿಂದ ನಿವೃತ್ತಿ ಘೋಷಿಸಿದ್ದಾರೆ. ಅನ್ನಾ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಟಿ 20 ಯಲ್ಲಿ ತನ್ನ ದೇಶಕ್ಕಾಗಿ ಹ್ಯಾಟ್ರಿಕ್ ಪಡೆದ ಮೊದಲ ಬೌಲರ್ ಎಂದೇ ಖ್ಯಾತಿ ಪಡೆದಿದ್ದಾರೆ. ಅವರು ಕಳೆದ ಒಂದು ವರ್ಷದಿಂದ ತಂಡದಿಂದ ಹೊರಗುಳಿದಿದ್ದರೆ. ಅನ್ನಾ ತಮ್ಮ ಒಂಬತ್ತು ವರ್ಷಗಳ ವೃತ್ತಿ ಜೀವನದಲ್ಲಿ 32 ಏಕದಿನ ಮತ್ತು 33 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಅವರು ಒಂದು ಐಸಿಸಿ ಕ್ರಿಕೆಟ್ ವಿಶ್ವಕಪ್ ಮತ್ತು ಮೂರು ಟಿ 20 ವಿಶ್ವಕಪ್ ಆಡಿದ್ದಾರೆ.

ತಮ್ಮ ನಿವೃತ್ತಿಯ ಬಗ್ಗೆ ಮಾಹಿತಿ ನೀಡಿದ ಅನ್ನಾ, ಅಭಿಮಾನಿಗಳ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದರು. ಅವರ ಹೇಳಿಕೆಯಲ್ಲಿ, ವೈಟ್ ಫರ್ನ್ಸ್ ಪರ ಆಡುವ ಮತ್ತು ನ್ಯೂಜಿಲ್ಯಾಂಡ್ ಅನ್ನು ಪ್ರತಿನಿಧಿಸುವ ಪ್ರತಿ ನಿಮಿಷವನ್ನೂ ನಾನು ಪ್ರೀತಿಸುತ್ತೇನೆ. ನನ್ನ ಕುಟುಂಬ, ಸ್ನೇಹಿತರು, ತರಬೇತುದಾರರು, ಸಹ ಆಟಗಾರರು ಮತ್ತು ನನ್ನ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ನನಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.

ಕ್ರಿಕೆಟ್ ಜೊತೆಗೆ ರಗ್ಬಿ
“ವೈಟ್ ಫರ್ನ್ಸ್ ಒಂದು ವಿಶೇಷ ತಂಡದ ಸಂಸ್ಕೃತಿಯನ್ನು ಹೊಂದಿದೆ ಮತ್ತು ನಾನು ತಂಡದ ಜೊತೆ ಕೆಲವು ಆಜೀವ ಸಂಬಂಧಗಳನ್ನು ಮಾಡುವ ಸವಲತ್ತನ್ನು ಹೊಂದಿದ್ದೇನೆ. ಆದರೆ ಪ್ರಪಂಚದಾದ್ಯಂತದ ಆಟಗಾರರನ್ನು ಭೇಟಿಯಾಗಲು ಮತ್ತು ಸ್ಪರ್ಧಿಸಲು ನನಗೆ ಸಂತೋಷವಾಯಿತು ಎಂದು ಅವರು ಹೇಳಿದರು. ಆದಾಗ್ಯೂ, ಅನ್ನಾ ಪೀಟರ್ಸನ್ ಆಕ್ಲೆಂಡ್ ಹಾರ್ಟ್ಸ್ ಪ್ರತಿನಿಧಿಸುವ ದೇಶೀಯ ಕ್ರಿಕೆಟ್ ಆಡುವುದನ್ನು ಮುಂದುವರಿಸುತ್ತಾರೆ. ಅವರು ನಾರ್ತ್ ಹಾರ್ಬರ್ ರಗ್ಬಿಯಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಲಿದ್ದಾರೆ. ತಂಡದ ತರಬೇತುದಾರ ಬಾಬ್ ಕಾರ್ಟರ್ ನಿವೃತ್ತಿಯ ನಂತರ ಅನ್ನಾ ಅವರ ಸೇವೆಗೆ ಧನ್ಯವಾದ ಸಲ್ಲಿಸಿದರು. ಅಲ್ಲದೆ, ಅವರು ಈ ಆಲ್ ರೌಂಡರ್ ಆಟವನ್ನು ಹೊಗಳಿದರು.

2012 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ
ಸುಮಾರು ಒಂದು ದಶಕದ ಹಿಂದೆ ಪೀಟರ್ಸನ್ ಇಂಗ್ಲೆಂಡ್ ವಿರುದ್ಧ ಏಕದಿನಕ್ಕೆ ಪಾದಾರ್ಪಣೆ ಮಾಡಿದರು ಮತ್ತು ಅವರ ಮೊದಲ ಪಂದ್ಯದಲ್ಲಿ 33 ರನ್ ಗಳಿಸಿದರು. ಕಳೆದ ವರ್ಷ ಟಿ 20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ರಾಷ್ಟ್ರೀಯ ತಂಡಕ್ಕೆ ಅವರ ಕೊನೆಯ ಪಂದ್ಯವಾಗಿತ್ತು. 31 ವರ್ಷದ ಪೀಟರ್ಸನ್ ಅವರ ಸ್ಮರಣೀಯ ಪ್ರದರ್ಶನ 2017 ರಲ್ಲಿ ಟಿ 20 ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ಪಡೆದ ನ್ಯೂಜಿಲ್ಯಾಂಡ್​ನ ಮೊದಲ ಮಹಿಳಾ ಕ್ರಿಕೆಟಿಗರಾದರು.

Read Full Article

Click on your DTH Provider to Add TV9 Kannada