ಕೊನೆಯ ಇನಿಂಗ್ಸ್​ನಲ್ಲಿ ಶತಕ ಸಿಡಿಸಿ ವಿದಾಯ ಹೇಳಿದ ಕ್ರಿಕೆಟಿಗ

| Updated By: ಝಾಹಿರ್ ಯೂಸುಫ್

Updated on: Feb 22, 2022 | 3:57 PM

Anaru Kitchen: ಅನಾರು ಕಿಚನ್ ತಮ್ಮ ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿದರೂ ಸೋಲಿನೊಂದಿಗೆ ವಿದಾಯ ಹೇಳಬೇಕಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಕ್ಲೆಂಡ್ ತಂಡ 50 ಓವರ್ ಗಳಲ್ಲಿ 380 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು.

ಕೊನೆಯ ಇನಿಂಗ್ಸ್​ನಲ್ಲಿ ಶತಕ ಸಿಡಿಸಿ ವಿದಾಯ ಹೇಳಿದ ಕ್ರಿಕೆಟಿಗ
Anaru Kitchen
Follow us on

ಪ್ರತಿಯೊಬ್ಬ ಆಟಗಾರನೂ ತನ್ನ ಕ್ರಿಕೆಟ್ ವೃತ್ತಿಜೀವನಕ್ಕೆ ಸುವರ್ಣ ಅಂತ್ಯವನ್ನು ಬಯಸುತ್ತಾನೆ. ಒಬ್ಬ ಬ್ಯಾಟ್ಸ್‌ಮನ್‌ಗೆ ಕೊನೆಯ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದರೆ ಅದಕ್ಕಿಂತ ವಿಶೇಷದ ಪಂದ್ಯ ಮತ್ತೊಂದಿರಲ್ಲ. ಇದೀಗ ನ್ಯೂಜಿಲೆಂಡ್‌ನ ((New Zealand)) 38 ವರ್ಷದ ಬ್ಯಾಟ್ಸ್‌ಮನ್ ಅನಾರು ಕಿಚನ್‌ (Anaru Kitchen) ಸ್ಮರಣೀಯ ಇನಿಂಗ್ಸ್​ ಮೂಲಕ ಕ್ರಿಕೆಟ್​ ಅಂಗಳಕ್ಕೆ ವಿದಾಯ ಹೇಳಿದ್ದಾರೆ. ಅನಾರು ಅವರು ಅದ್ಭುತ ಶತಕದೊಂದಿಗೆ ತಮ್ಮ 14 ವರ್ಷಗಳ ದೇಶೀಯ ಕ್ರಿಕೆಟ್ ವೃತ್ತಿಜೀವನಕ್ಕೆ ಗುಡ್​ ಬೈ ಹೇಳಿದರು. ನ್ಯೂಜಿಲೆಂಡ್‌ನ ದೇಶೀಯ ಟೂರ್ನಿಯಾದ ಫೋರ್ಡ್ ಟ್ರೋಫಿಯಲ್ಲಿ ಒಟಾಗೊ ವೋಲ್ಟ್ಸ್ ಪರ ಆಡಿದ್ದ ಅನಾರು ಕೇವಲ 89 ಎಸೆತಗಳಲ್ಲಿ ಶತಕ ಪೂರೈಸಿದರು.

ಆಕ್ಲೆಂಡ್ ಏಸಸ್ ವಿರುದ್ಧದ ತಮ್ಮ ಕೊನೆಯ ಇನ್ನಿಂಗ್ಸ್ ಆಡಿದ್ದ ಕೊನೆಯ ಇನ್ನಿಂಗ್ಸ್‌ನಲ್ಲಿ 95 ಎಸೆತಗಳಲ್ಲಿ ಅಜೇಯ 106 ರನ್ ಗಳಿಸಿದರು. ಈ ವೇಳೆ ಅವರು 7 ಸಿಕ್ಸರ್ ಮತ್ತು 2 ಬೌಂಡರಿಗಳನ್ನು ಬಾರಿಸಿದರು. ಇದು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅವರ 5ನೇ ಶತಕವಾಗಿದೆ. ಇದಾಗ್ಯೂ ಈ ಪಂದ್ಯದಲ್ಲಿ ಒಟಾಗೊ ವೋಲ್ಟ್ಸ್​ ತಂಡವು ಸೋಲನುಭವಿಸಿತು. ಅನಾರು ಕಿಚನ್ ಅವರು 2017 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ T20 ಯಲ್ಲಿ ನ್ಯೂಜಿಲೆಂಡ್‌ ಪರ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಕಿವೀಸ್ ಪರ ಒಟ್ಟು 5 ಟಿ20 ಪಂದ್ಯಗಳನ್ನು ಆಡಿರುವ ಕಿಚನ್, 38 ರನ್ ಗಳಿಸಿ 2 ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದರು.

ಶತಕದ ಖುಷಿ-ಸೋಲಿನ ನೋವು:
ಅನಾರು ಕಿಚನ್ ತಮ್ಮ ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿದರೂ ಸೋಲಿನೊಂದಿಗೆ ವಿದಾಯ ಹೇಳಬೇಕಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಕ್ಲೆಂಡ್ ತಂಡ 50 ಓವರ್ ಗಳಲ್ಲಿ 380 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು. ಆಕ್ಲೆಂಡ್ ಪರ ಗುಪ್ಟಿಲ್ 137 ರನ್ ಮತ್ತು ವರ್ಕರ್ 122 ರನ್ ಗಳಿಸಿದರು. ಪ್ರತ್ಯುತ್ತರವಾಗಿ 381 ರನ್‌ಗಳ ಗುರಿಯನ್ನು ಬೆನ್ನಟ್ಟಿದ ವೊಟಾಗೊ ವೋಲ್ಟ್ಸ್ ತಂಡವು ಅನಾರು ಕಿಚನ್ ಅವರ ಅಜೇಯ 106 ರನ್‌ಗಳ ನೆರವಿನಿಂದ 50 ಓವರ್‌ಗಳಲ್ಲಿ 284 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ 96 ರನ್‌ಗಳಿಂದ ಸೋಲನುಭವಿಸಿತು.

ಇದನ್ನೂ ಓದಿ: AB de Villiers: ಸಿಡಿಲಬ್ಬರದ ಸಿಡಿಲಮರಿ ABDಯ ಈ 3 ದಾಖಲೆ ಮುರಿಯುವವರು ಯಾರು?

ಇದನ್ನೂ ಓದಿ: Rohit Sharma: ಬಾಬರ್ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ

ಇದನ್ನೂ ಓದಿ: Sunil narine: ಸಿಡಿಲಬ್ಬರದ ಅರ್ಧಶತಕ ಸಿಡಿಸಿ ದಾಖಲೆ ಬರೆದ ಸುನಿಲ್ ನರೈನ್

(New Zealand batsman ended his career by hitting a century)