NZ vs IND: ನಾಲ್ಕು ಬ್ಯಾಟರ್​ಗಳ ಶೂನ್ಯ ಸಾಧನೆ! 4ನೇ ಪಂದ್ಯದಲ್ಲೂ ಸೋತ ಭಾರತ ವನಿತಾ ತಂಡ

NZ vs IND: ಭಾರತ ಮಹಿಳಾ ತಂಡದ 4 ಬ್ಯಾಟರ್​ಗಳಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಜೊತೆಗೆ 8 ಬ್ಯಾಟರ್​ಗಳಿಗೆ ಎರಡಂಕಿ ತಲುಪುವುದು ಕಷ್ಟಕರವಾಯಿತು. ಹೇಯ್ಲಿ ಜಾನ್ಸನ್ 3 ವಿಕೆಟ್ ಪಡೆಯುವ ಮೂಲಕ ನ್ಯೂಜಿಲೆಂಡ್ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು.

NZ vs IND: ನಾಲ್ಕು ಬ್ಯಾಟರ್​ಗಳ ಶೂನ್ಯ ಸಾಧನೆ! 4ನೇ ಪಂದ್ಯದಲ್ಲೂ ಸೋತ ಭಾರತ ವನಿತಾ ತಂಡ
ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲೂ ಭಾರತ ಮಹಿಳಾ ತಂಡ ಸೋತಿದೆ
Follow us
TV9 Web
| Updated By: ಪೃಥ್ವಿಶಂಕರ

Updated on: Feb 22, 2022 | 3:24 PM

ವಿಶ್ವಕಪ್‌ (World Cup)ಗೂ ಮುನ್ನ ನ್ಯೂಜಿಲೆಂಡ್‌ ಎದುರು ಏಕದಿನ ಸರಣಿಯನ್ನು ಆಡುತ್ತಿರುವ ಭಾರತ ಮಹಿಳಾ ತಂಡ (Indian women’s team)ವು ಸತತ ನಾಲ್ಕು ಸೋಲುಗಳನ್ನು ಅನುಭವಿಸಿದೆ. 5 ಏಕದಿನ ಸರಣಿಯ 4 ಪಂದ್ಯಗಳನ್ನು ಆಡಲಾಗಿದೆ ಆದರೆ ಇಲ್ಲಿಯವರೆಗೆ ಭಾರತ ತಂಡ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. 5 ಏಕದಿನ ಪಂದ್ಯಗಳ ಸರಣಿಯಲ್ಲಿ 0-4ರಲ್ಲಿ ಹಿನ್ನಡೆಯಲ್ಲಿದೆ. ಅಂದರೆ ಸರಣಿಯನ್ನೂ ಈಗಾಗಲೇ ಟೀಂ ಇಂಡಿಯಾ ಕಳೆದುಕೊಂಡಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ನಾಲ್ಕನೇ ಏಕದಿನ ಪಂದ್ಯವೂ ಕ್ವೀನ್‌ಸ್ಟೌನ್‌ನಲ್ಲಿ ನಡೆಯಿತು. ನಾಲ್ಕನೇ ಏಕದಿನ ಪಂದ್ಯದಲ್ಲಿ ಮಳೆ ವಿಲನ್ ಆಗಿ ಕಾಣಿಸಿಕೊಂಡಿತ್ತು. ಉಭಯ ತಂಡಗಳ ನಡುವಿನ ನಾಲ್ಕನೇ ಏಕದಿನ ಪಂದ್ಯ 20-20 ಓವರ್‌ಗಳ ಟಿ20 ಶೈಲಿಯಲ್ಲಿ ನಡೆಯಿತು. ಮಳೆ ಪೀಡಿತ ಈ ಪಂದ್ಯದಲ್ಲಿ ನ್ಯೂಜಿಲೆಂಡ್ 63 ರನ್‌ಗಳಿಂದ ಭಾರತೀಯ ಮಹಿಳೆಯರನ್ನು ಸೋಲಿಸಿತು.

ಭಾರತಕ್ಕೆ 192 ರನ್​ಗಳ ಗುರಿ ನೀಡಿದ ನ್ಯೂಜಿಲೆಂಡ್

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಮಹಿಳಾ ತಂಡ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು. ಈ ಪಂದ್ಯ ಏಕದಿನ ಪಂದ್ಯವಾಗಿದ್ದು, ಮಳೆಯಿಂದಾಗಿ 20-20 ಓವರ್‌ಗಳನ್ನು ಮಾಡಬೇಕಾಗಿತ್ತು. ಆದರೆ, ಕಿವೀಸ್ ಮಹಿಳೆಯರ ಸ್ಕೋರ್ ಬೋರ್ಡ್‌ನಲ್ಲಿ ತೂಗಾಡಿರುವ ರನ್‌ಗಳ ಸಂಖ್ಯೆ ನ್ಯೂಜಿಲೆಂಡ್ ನೆಲದಲ್ಲಿ ಯಾವುದೇ ಟಿ 20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ದಾಖಲಾಗಿಲ್ಲ.

ನ್ಯೂಜಿಲೆಂಡ್ ಪರ ಅಮೆಲಿಯಾ ಕೆರ್ 33 ಎಸೆತಗಳಲ್ಲಿ 68 ರನ್, ಆಮಿ ಸೆಡರ್ವೈಟ್ 16 ಎಸೆತಗಳಲ್ಲಿ 32 ರನ್ ಮತ್ತು ಸುಜಿ ಬೇಟ್ಸ್ 26 ಎಸೆತಗಳಲ್ಲಿ 41 ರನ್ ಗಳಿಸಿದರು. ಅದೇ ವೇಳೆ ರೇಣುಕಾ ಸಿಂಗ್ 2 ವಿಕೆಟ್ ಪಡೆಯುವ ಮೂಲಕ ಭಾರತದ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು. ಇವರಲ್ಲದೆ ದೀಪ್ತಿ, ಮೇಘನಾ ಮತ್ತು ರಾಜೇಶ್ವರಿ 1-1 ವಿಕೆಟ್ ಪಡೆದರು.

19 ರನ್​ಗಳಿಗೆ 4 ವಿಕೆಟ್ ಪತನವಾಗಿದ್ದು ಭಾರತದ ಸೋಲಿಗೆ ಬಹುದೊಡ್ಡ ಕಾರಣ

ಇದೀಗ ಭಾರತ ಮಹಿಳಾ ತಂಡದ ಮುಂದೆ 192 ರನ್‌ಗಳ ಗುರಿ ಇತ್ತು. ಆದರೆ ಈ ಗುರಿಯನ್ನು ಬೆನ್ನಟ್ಟಿದ ತಂಡ ಕೇವಲ 19 ರನ್‌ಗಳಿಗೆ ತಮ್ಮ ಅಗ್ರ ಕ್ರಮಾಂಕದ 4 ವಿಕೆಟ್‌ಗಳನ್ನು ಕಳೆದುಕೊಂಡಿದ್ದು ಸೋಲಿಗೆ ದೊಡ್ಡ ಕಾರಣವಾಯಿತು. ಮಧ್ಯಮ ಕ್ರಮಾಂಕದಲ್ಲಿ, ರಿಚಾ ಘೋಷ್ ವೇಗದ ಇನ್ನಿಂಗ್ಸ್ ಆಡಿ 28 ಎಸೆತಗಳಲ್ಲಿ 52 ರನ್ ಗಳಿಸಿದರು, ಆದರೆ ಅದು ತಂಡದ ಗೆಲುವಿಗೆ ಸಾಕಾಗಲಿಲ್ಲ ಎಂದು ಸಾಬೀತಾಯಿತು.

ಭಾರತ ಮಹಿಳಾ ತಂಡದ 4 ಬ್ಯಾಟರ್​ಗಳಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಜೊತೆಗೆ 8 ಬ್ಯಾಟರ್​ಗಳಿಗೆ ಎರಡಂಕಿ ತಲುಪುವುದು ಕಷ್ಟಕರವಾಯಿತು. ಹೇಯ್ಲಿ ಜಾನ್ಸನ್ 3 ವಿಕೆಟ್ ಪಡೆಯುವ ಮೂಲಕ ನ್ಯೂಜಿಲೆಂಡ್ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು.

ಇದನ್ನೂ ಓದಿ:GT, IPL 2022 Auction: ಚೊಚ್ಚಲ ಐಪಿಎಲ್ ಆಡುತ್ತಿರುವ ಗುಜರಾತ್ ಕಟ್ಟಿರುವ ಅದ್ಭುತ ತಂಡ ಹೇಗಿದೆ ಗೊತ್ತಾ?

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ