ಭಾರತದಲ್ಲಿ ಅಕ್ಟೋಬರ್ 5 ರಿಂದ ಆರಂಭವಾಗಲಿರುವ ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ (ICC ODI World Cup 2023) ಟೂರ್ನಿಗೆ 15 ಸದಸ್ಯರ ನ್ಯೂಝಿಲೆಂಡ್ ತಂಡ ಪ್ರಕಟವಾಗಿದೆ. ವಿಶೇಷ ಎಂದರೆ, ಇಂಜುರಿಯಿಂದ ಬಳಲುತ್ತಿರುವ ಸ್ಟಾರ್ ಬ್ಯಾಟರ್ ಕೇನ್ ವಿಲಿಯಮ್ಸನ್ ಸೇರ್ಪಡೆಯಾಗಿದ್ದು, ನಾಯಕನನ್ನಾಗಿ ಆರಿಸಲಾಗಿದೆ. ಇವರ ಜೊತೆಗೆ 2019 ರ ವಿಶ್ವಕಪ್‌ನ ರೋಚಕ ಫೈನಲ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಲ್‌ರೌಂಡರ್ ಜಿಮ್ಮಿ ನೀಶಮ್ ಸ್ಥಾನ ಪಡೆದುಕೊಂಡಿದ್ದಾರೆ.
ಕೇನ್ ವಿಲಿಯಮ್ಸನ್ ಅವರು ಕಳೆದ ಏಪ್ರಿಲ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆಡುವ ವೇಳೆ ಉಂಟಾದ ಗಂಭೀರ ಮೊಣಕಾಲಿನ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಿದ್ದರೂ ನ್ಯೂಝಿಲೆಂಡ್ ತಂಡದ ನಾಯಕರಾಗಿ ಹೆಸರಿಸಲಾಗಿದೆ. ವಿಲಿಯಮ್ಸನ್ ಯಾವಾಗ ಆಡಲು ಫಿಟ್ ಆಗುತ್ತಾರೆ ಎಂಬುದು ಇನ್ನೂ ತಿಳಿದಿಲ್ಲ. ವಿಲಿಯಮ್ಸನ್ಗೆ ಇದು ನಾಲ್ಕನೆ ವಿಶ್ವಕಪ್ ಆಗಿರುವುದರಿಂದ ಈ ಬಾರಿ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ. ಹೀಗಾಗಿ ಇವರನ್ನು ತಂಡಕ್ಕೆ ಸೇರಿಸಿರಬಹುದು.
ರೋಹಿತ್ ಶರ್ಮಾ ಅಬ್ಬರಕ್ಕೆ ಸಚಿನ್ ತೆಂಡೂಲ್ಕರ್ ದಾಖಲೆ ಧೂಳೀಪಟ
ಇನ್ನು ವೇಗದ ಬೌಲರ್ ಟಿಮ್ ಸೌಥಿ ಕೂಡ ಸ್ಥಾನ ಪಡೆದುಕೊಂಡಿದ್ದು, ಇದು ಕೂಡ ಇವರ ನಾಲ್ಕನೇ ವಿಶ್ವಕಪ್ ಆಗಿದೆ. ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ರಚಿನ್ ರವೀಂದ್ರ, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್ ಮತ್ತು ವಿಲ್ ಯಂಗ್ ಇದೇ ಮೊದಲ ಬಾರಿಗೆ 50 ಓವರ್‌ಗಳ ವಿಶ್ವಕಪ್‌ನಲ್ಲಿ ಆಡಲಿದ್ದಾರೆ.
ಉಪನಾಯಕನಾಗಿ ಟಾಮ್ ಲ್ಯಾಥಮ್ ಅವರನ್ನು ಹೆಸರಿಸಲಾಗಿದೆ. ಟ್ರೆಂಟ್ ಬೌಲ್ಟ್ ಮತ್ತು ಮ್ಯಾಟ್ ಹೆನ್ರಿ ಸ್ಥಾನ ಪಡೆದುಕೊಂಡಿದ್ದಾರೆ. ಲಾಕಿ ಫರ್ಗುಸನ್, ಜಿಮ್ಮಿ ನೀಶಮ್, ಮಿಚೆಲ್ ಸ್ಯಾಂಟ್ನರ್ ಮತ್ತು ಇಶ್ ಸೋಧಿ ಕೂಡ ಇದ್ದಾರೆ. ವಿಶೇಷ ಎಂದರೆ ನೀಶಮ್ ಮತ್ತು ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಕೇಂದ್ರೀಯ ಒಪ್ಪಂದದ ಆಟಗಾರರ ಪಟ್ಟಿಯಲ್ಲಿ ಇಲ್ಲದಿದ್ದರೂ ನ್ಯೂಝಿಲೆಂಡ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಅಕ್ಟೋಬರ್ 5 ರಂದು ಆರಂಭವಾಗಲಿರುವ ಟೂರ್ನಿಗೂ ಮುನ್ನ ನ್ಯೂಝಿಲೆಂಡ್ ಸೆ. 29 ರಂದು ಹೈದರಾಬಾದ್‌ನಲ್ಲಿ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ.
ಕೇನ್ ವಿಲಿಯಮ್ಸನ್ (ನಾಯಕ), ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೆ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್, ಡೇರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ವಿಲ್ ಯಂಗ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ