ಏಕದಿನ ವಿಶ್ವಕಪ್ನ 32ನೇ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಸೌತ್ ಆಫ್ರಿಕಾ ಭರ್ಜರಿ ಜಯ ಸಾಧಿಸಿದೆ. ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ಹಂಗಾಮಿ ನಾಯಕ ಟಾಮ್ ಲಾಥಮ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಪರ ಕ್ವಿಂಟನ್ ಡಿಕಾಕ್ (114) ಹಾಗೂ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (133) ಭರ್ಜರಿ ಶತಕ ಸಿಡಿಸಿದ್ದರು. ಈ ಶತಕಗಳ ನೆರವಿನೊಂದಿಗೆ ಸೌತ್ ಆಫ್ರಿಕಾ ತಂಡವು ನಿಗದಿತ 50 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 357 ರನ್ ಕಲೆಹಾಕಿತು.
358 ರನ್ಗಳ ಕಠಿಣ ಗುರಿ ಪಡೆದ ನ್ಯೂಝಿಲೆಂಡ್ ತಂಡವನ್ನು 35.3 ಓವರ್ಗಳಲ್ಲಿ ಕೇವಲ 167 ರನ್ಗಳಿಗೆ ಆಲೌಟ್ ಮಾಡುವಲ್ಲಿ ಸೌತ್ ಆಫ್ರಿಕಾ ಬೌಲರ್ಗಳು ಯಶಸ್ವಿಯಾಗಿದ್ದಾರೆ. ಈ ಮೂಲಕ ಸೌತ್ ಆಫ್ರಿಕಾ ತಂಡ 190 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಗೆಲುವಿನೊಂದಿಗೆ 12 ಅಂಕಗಳೊಂದಿಗೆ ಸೌತ್ ಆಫ್ರಿಕಾ ತಂಡ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ. ಇತ್ತ ಸೋಲಿನ ಹೊರತಾಗಿಯೂ ನ್ಯೂಝಿಲೆಂಡ್ ತಂಡ 8 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.
ಏಕದಿನ ಕ್ರಿಕೆಟ್ನಲ್ಲಿ ನ್ಯೂಝಿಲೆಂಡ್ ಹಾಗೂ ಸೌತ್ ಆಫ್ರಿಕಾ ತಂಡಗಳು ಇದುವರೆಗೆ 72 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ನ್ಯೂಝಿಲೆಂಡ್ 25 ಬಾರಿ ಗೆದ್ದರೆ, ಸೌತ್ ಆಫ್ರಿಕಾ ತಂಡ 42 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ. ಇನ್ನು 5 ಪಂದ್ಯಗಳು ಕಾರಣಾಂತರಗಳಿಂದ ರದ್ದಾಗಿತ್ತು.
ಸೌತ್ ಆಫ್ರಿಕಾ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸೆನ್, ಜೆರಾಲ್ಡ್ ಕೊಯೆಟ್ಝಿ, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್ಗಿಡಿ.
ನ್ಯೂಝಿಲೆಂಡ್ (ಪ್ಲೇಯಿಂಗ್ XI): ಡೆವೊನ್ ಕಾನ್ವೆ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ), ಗ್ಲೆನ್ ಫಿಲಿಪ್ಸ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್.
ಜೆರಾಲ್ಡ್ ಕೊಯಟ್ಝಿ ಎಸೆದ 36ನೇ ಓವರ್ನ 3ನೇ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಗ್ಲೆನ್ ಫಿಲಿಪ್ಸ್ (60).
35.3 ಓವರ್ಗಳಲ್ಲಿ ಕೇವಲ 167 ರನ್ ಬಾರಿಸಿ ಆಲೌಟ್ ಆದ ನ್ಯೂಝಿಲೆಂಡ್ ತಂಡ.
ನ್ಯೂಝಿಲೆಂಡ್ ವಿರುದ್ಧ 190 ರನ್ಗಳ ಭರ್ಜರಿ ಜಯ ಸಾಧಿಸಿದ ಸೌತ್ ಆಫ್ರಿಕಾ.
ಕೇಶವ್ ಮಹಾರಾಜ್ ಎಸೆದ 35ನೇ ಓವರ್ನಲ್ಲಿ ಫೋರ್, ಸಿಕ್ಸ್, ಫೋರ್ ಸಿಡಿಸಿದ ಗ್ಲೆನ್ ಫಿಲಿಪ್ಸ್.
ಈ ಬೌಂಡರಿಗಳೊಂದಿಗೆ ಕೇವಲ 46 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಫಿಲಿಪ್ಸ್.
35 ಓವರ್ಗಳ ಮುಕ್ತಾಯದ ವೇಳೆಗೆ ನ್ಯೂಝಿಲೆಂಡ್ ತಂಡದ ಸ್ಕೋರ್ 161 ರನ್ಗಳು.
ಕ್ರೀಸ್ನಲ್ಲಿ ಗ್ಲೆನ್ ಫಿಲಿಪ್ಸ್ ಹಾಗೂ ಮ್ಯಾಟ್ ಹೆನ್ರಿ ಬ್ಯಾಟಿಂಗ್.
32 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 134 ರನ್ ಕಲೆಹಾಕಿದ ನ್ಯೂಝಿಲೆಂಡ್.
ಸೌತ್ ಆಫ್ರಿಕಾ ತಂಡದ ಗೆಲುವಿಗೆ ಕೇವಲ 1 ವಿಕೆಟ್ನ ಅಗತ್ಯತೆ.
ಕ್ರೀಸ್ನಲ್ಲಿ ಗ್ಲೆನ್ ಫಿಲಿಪ್ಸ್ ಹಾಗೂ ಮ್ಯಾಟ್ ಹೆನ್ರಿ ಬ್ಯಾಟಿಂಗ್.
ನ್ಯೂಝಿಲೆಂಡ್ಗೆ 358 ರನ್ಗಳ ಗುರಿ ನೀಡಿರುವ ಸೌತ್ ಆಫ್ರಿಕಾ.
ಕೇಶವ್ ಮಹಾರಾಜ್ ಎಸೆದ 27ನೇ ಓವರ್ನ 4ನೇ ಎಸೆತದಲ್ಲಿ ಜಿಮ್ಮಿ ನೀಶಮ್ ಕ್ಲೀನ್ ಬೌಲ್ಡ್.
10 ಎಸೆತಗಳನ್ನು ಎದುರಿಸಿ ಖಾತೆ ತೆರೆಯದೇ ನಿರ್ಗಮಿಸಿದ ಜಿಮ್ಮಿ ನೀಶಮ್.
ಕ್ರೀಸ್ನಲ್ಲಿ ಗ್ಲೆನ್ ಫಿಲಿಪ್ಸ್ ಹಾಗೂ ಟ್ರೆಂಟ್ ಬೌಲ್ಟ್ ಬ್ಯಾಟಿಂಗ್.
ಮಾರ್ಕೊ ಯಾನ್ಸನ್ ಎಸೆದ 26ನೇ ಓವರ್ನ ಮೊದಲ ಎಸೆತದಲ್ಲೇ ಎಲ್ಬಿಡಬ್ಲ್ಯೂ ಆಗಿ ಹೊರ ನಡೆದ ಟಿಮ್ ಸೌಥಿ.
ನ್ಯೂಝಿಲೆಂಡ್ ತಂಡದ 7ನೇ ವಿಕೆಟ್ ಪತನ.
ಕ್ರೀಸ್ನಲ್ಲಿ ಗ್ಲೆನ್ ಫಿಲಿಪ್ಸ್ ಹಾಗೂ ಜಿಮ್ಮಿ ನೀಶಮ್ ಬ್ಯಾಟಿಂಗ್.
25 ಓವರ್ಗಳಲ್ಲಿ 109 ರನ್ ಕಲೆಹಾಕಿದ ನ್ಯೂಝಿಲೆಂಡ್.
6 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ಸೌತ್ ಆಫ್ರಿಕಾ.
ಕ್ರೀಸ್ನಲ್ಲಿ ಗ್ಲೆನ್ ಫಿಲಿಪ್ಸ್ ಹಾಗೂ ಟಿಮ್ ಸೌಥಿ ಬ್ಯಾಟಿಂಗ್.
ಕೇಶವ್ ಮಹಾರಾಜ್ ಎಸೆದ 23ನೇ ಓವರ್ನ 4ನೇ ಎಸೆತದಲ್ಲಿ ಮಿಚೆಲ್ ಸ್ಯಾಂಟ್ನರ್ ಕ್ಲೀನ್ ಬೌಲ್ಡ್.
18 ಎಸೆತಗಳಲ್ಲಿ 7 ರನ್ ಬಾರಿಸಿ ಔಟಾದ ಎಡಗೈ ದಾಂಡಿಗ ಮಿಚೆಲ್ ಸ್ಯಾಂಟ್ನರ್.
23 ಓವರ್ಗಳಲ್ಲಿ 100 ರನ್ ಪೂರೈಸಿದ ನ್ಯೂಝಿಲೆಂಡ್.
ಕ್ರೀಸ್ನಲ್ಲಿ ಗ್ಲೆನ್ ಫಿಲಿಪ್ಸ್ ಹಾಗೂ ಟಿಮ್ ಸೌಥಿ ಬ್ಯಾಟಿಂಗ್.
20 ಓವರ್ಗಳ ಮುಕ್ತಾಯದ ವೇಳೆಗೆ 91 ರನ್ ಕಲೆಹಾಕಿದ ನ್ಯೂಝಿಲೆಂಡ್.
ಅಗ್ರ ಕ್ರಮಾಂಕದ ಐದು ವಿಕೆಟ್ ಉರುಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಸೌತ್ ಆಫ್ರಿಕಾ ಬೌಲರ್ಗಳು.
ಕ್ರೀಸ್ನಲ್ಲಿ ಮಿಚೆಲ್ ಸ್ಯಾಂಟ್ನರ್ ಹಾಗೂ ಗ್ಲೆನ್ ಫಿಲಿಪ್ಸ್ ಬ್ಯಾಟಿಂಗ್.
ಕೇಶವ್ ಮಹಾರಾಜ್ ಎಸೆದ 19ನೇ ಓವರ್ನ 3ನೇ ಎಸೆತದಲ್ಲಿ ಲಾಂಗ್ ಆನ್ನತ್ತ ಬಾರಿಸಿದ ಡೇರಿಲ್ ಮಿಚೆಲ್. ಬೌಂಡರಿ ಲೈನ್ನಲ್ಲಿ ಡೇವಿಡ್ ಮಿಲ್ಲರ್ ಉತ್ತಮ ಕ್ಯಾಚ್.
30 ಎಸೆತಗಳಲ್ಲಿ 24 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಡೇರಿಲ್ ಮಿಚೆಲ್.
ಕಗಿಸೊ ರಬಾಡ ಎಸೆದ 18ನೇ ಓವರ್ನ ಮೊದಲ ಎಸೆತದಲ್ಲೇ ಆಕರ್ಕಷ ಕವರ್ ಡ್ರೈವ್ ಫೋರ್ ಬಾರಿಸಿದ ಗ್ಲೆನ್ ಫಿಲಿಪ್ಸ್.
ಕ್ರೀಸ್ನಲ್ಲಿ ಡೇರಿಲ್ ಮಿಚೆಲ್ ಹಾಗೂ ಗ್ಲೆನ್ ಫಿಲಿಪ್ಸ್ ಬ್ಯಾಟಿಂಗ್.
ಕಗಿಸೊ ರಬಾಡ ಎಸೆದ 16ನೇ ಓವರ್ನ 2ನೇ ಎಸೆತದಲ್ಲಿ ಫ್ರಂಟ್ ಫೀಲ್ಡರ್ಗೆ ಸುಲಭ ಕ್ಯಾಚ್ ನೀಡಿದ ಟಾಮ್ ಲಾಥಮ್.
15 ಎಸೆತಗಳಲ್ಲಿ 4 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ನ್ಯೂಝಿಲೆಂಡ್ ತಂಡದ ನಾಯಕ ಲಾಥಮ್.
15 ಓವರ್ಗಳ ಮುಕ್ತಾಯದ ವೇಳೆಗೆ 67 ರನ್ ಕಲೆಹಾಕಿರುವ ನ್ಯೂಝಿಲೆಂಡ್ ತಂಡ.
3 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಸೌತ್ ಆಫ್ರಿಕಾ ಬೌಲರ್ಗಳು.
ಕ್ರೀಸ್ನಲ್ಲಿ ಡೇರಿಲ್ ಮಿಚೆಲ್ ಹಾಗೂ ಟಾಮ್ ಲಾಥಮ್ ಬ್ಯಾಟಿಂಗ್.
ಡೆವೊನ್ ಕಾನ್ವೆ (2), ರಚಿನ್ ರವೀಂದ್ರ (9) ಹಾಗೂ ವಿಲ್ ಯಂಗ್ (33) ಔಟ್.
ಜೆರಾಲ್ಡ್ ಕೊಯಟ್ಝಿ ಎಸೆದ 11ನೇ ಓವರ್ನ 3ನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ವಿಲ್ ಯಂಗ್.
37 ಎಸೆತಗಳಲ್ಲಿ 33 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ನ್ಯೂಝಿಲೆಂಡ್ ತಂಡದ ಆರಂಭಿಕ ಆಟಗಾರ ವಿಲ್ ಯಂಗ್.
10 ಓವರ್ಗಳ ಮುಕ್ತಾಯದ ವೇಳೆಗೆ 51 ರನ್ ಕಲೆಹಾಕಿದ ನ್ಯೂಝಿಲೆಂಡ್.
ಮೊದಲ ಪವರ್ಪ್ಲೇನಲ್ಲೇ 2 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ಸೌತ್ ಆಫ್ರಿಕಾ.
ಕ್ರೀಸ್ನಲ್ಲಿ ಡೇರಿಲ್ ಮಿಚೆಲ್ ಹಾಗೂ ವಿಲ್ ಯಂಗ್ ಬ್ಯಾಟಿಂಗ್.
ಡೆವೊನ್ ಕಾನ್ವೆ (2) ಹಾಗೂ ರಚಿನ್ ರವೀಂದ್ರ (9) ಔಟ್.
ಮಾರ್ಕೊ ಯಾನ್ಸೆನ್ ಎಸೆದ 9ನೇ ಓವರ್ನ ಕೊನೆಯ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ರಚಿನ್ ರವೀಂದ್ರ.
16 ಎಸೆತಗಳಲ್ಲಿ 9 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಎಡಗೈ ದಾಂಡಿಗ ರಚಿನ್ ರವೀಂದ್ರ.
ಲುಂಗಿ ಎನ್ಗಿಡಿ ಎಸೆದ 8ನೇ ಓವರ್ನ ಮೊದಲ ಎರಡು ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿಗಳನ್ನು ಬಾರಿಸಿದ ವಿಲ್ ಯಂಗ್.
8 ಓವರ್ಗಳ ಮುಕ್ತಾಯದ ವೇಳೆಗೆ ನ್ಯೂಝಿಲೆಂಡ್ ಸ್ಕೋರ್ 38 ರನ್ಗಳು.
ಕ್ರೀಸ್ನಲ್ಲಿ ರಚಿನ್ ರವೀಂದ್ರ ಹಾಗೂ ವಿಲ್ ಯಂಗ್ ಬ್ಯಾಟಿಂಗ್.
ಮಾರ್ಕೊ ಯಾನ್ಸೆನ್ ಎಸೆದ 3ನೇ ಓವರ್ನ ಕೊನೆಯ ಎಸೆತದಲ್ಲಿ ಕ್ಯಾಚ್ ನೀಡಿದ ಔಟಾದ ಡೆವೊನ್ ಕಾನ್ವೆ.
6 ಎಸೆತಗಳಲ್ಲಿ 2 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಕಾನ್ವೆ.
ಸೌತ್ ಆಫ್ರಿಕಾ ತಂಡಕ್ಕೆ ಮೊದಲ ಯಶಸ್ಸು.
ಮಾರ್ಕೊ ಯಾನ್ಸೆನ್ ಎಸೆದ ಮೊದಲ ಓವರ್ನ 3ನೇ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ವಿಲ್ ಯಂಗ್.
ಇದು ನ್ಯೂಝಿಲೆಂಡ್ ಇನಿಂಗ್ಸ್ನ ಮೊದಲ ಬೌಂಡರಿ.
ಕ್ರೀಸ್ನಲ್ಲಿ ವಿಲ್ ಯಂಗ್ ಹಾಗೂ ಡೆವೊನ್ ಕಾನ್ವೆ ಬ್ಯಾಟಿಂಗ್.
ಕೊನೆಯ ಓವರ್ನಲ್ಲಿ 18 ರನ್ ನೀಡಿ ಡೇವಿಡ್ ಮಿಲ್ಲರ್ (53) ವಿಕೆಟ್ ಪಡೆದ ಜೇಮ್ಸ್ ನೀಶಮ್.
50 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 357 ರನ್ ಕಲೆಹಾಕಿದ ಸೌತ್ ಆಫ್ರಿಕಾ.
ನ್ಯೂಝಿಲೆಂಡ್ ತಂಡಕ್ಕೆ ಗೆಲ್ಲಲು 358 ರನ್ಗಳ ಕಠಿಣ ಗುರಿ ನೀಡಿದ ಸೌತ್ ಆಫ್ರಿಕಾ.
ಟ್ರೆಂಟ್ ಬೌಲ್ಟ್ ಎಸೆದ 49ನೇ ಓವರ್ನ ಕೊನೆಯ ಎಸೆತದಲ್ಲಿ ಲಾಂಗ್ ಆಫ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಹೆನ್ರಿಕ್ ಕ್ಲಾಸೆನ್.
ಕ್ರೀಸ್ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ಡೇವಿಡ್ ಮಿಲ್ಲರ್ ಬ್ಯಾಟಿಂಗ್.
ಟಿಮ್ ಸೌಥಿ ಎಸೆದ 48ನೇ ಓವರ್ನ ಮೊದಲ ಎಸೆತದಲ್ಲಿ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಕ್ಲೀನ್ ಬೌಲ್ಡ್.
118 ಎಸೆತಗಳಲ್ಲಿ 133 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್.
ಕ್ರೀಸ್ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ಡೇವಿಡ್ ಮಿಲ್ಲರ್ ಬ್ಯಾಟಿಂಗ್.
47 ಓವರ್ಗಳ ಮುಕ್ತಾಯದ ವೇಳೆಗೆ 316 ರನ್ ಕಲೆಹಾಕಿದ ಸೌತ್ ಆಫ್ರಿಕಾ ತಂಡ.
ಕೊನೆಯ 18 ಎಸೆತಗಳು ಮಾತ್ರ ಬಾಕಿ. ಬೃಹತ್ ಮೊತ್ತದತ್ತ ಸೌತ್ ಆಫ್ರಿಕಾ.
ಕ್ರೀಸ್ನಲ್ಲಿ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಹಾಗೂ ಡೇವಿಡ್ ಮಿಲ್ಲರ್ ಬ್ಯಾಟಿಂಗ್.
45 ಓವರ್ಗಳಲ್ಲಿ 290 ರನ್ ಕಲೆಹಾಕಿದ ಸೌತ್ ಆಫ್ರಿಕಾ.
ಕೊನೆಯ 5 ಓವರ್ಗಳು ಮಾತ್ರ ಬಾಕಿ.
ಕ್ರೀಸ್ನಲ್ಲಿ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಹಾಗೂ ಡೇವಿಡ್ ಮಿಲ್ಲರ್ ಬ್ಯಾಟಿಂಗ್.
ಟೆಂಬಾ ಬವುಮಾ (24) ಹಾಗೂ ಕ್ವಿಂಟನ್ ಡಿಕಾಕ್ (114) ಔಟ್.
ಜಿಮ್ಮಿ ನೀಶಮ್ ಎಸೆದ 42ನೇ ಓವರ್ನ 5ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್.
ಈ ಫೋರ್ನೊಂದಿಗೆ 101 ಎಸೆತಗಳಲ್ಲಿ ಶತಕ ಪೂರೈಸಿದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್.
ಕ್ರೀಸ್ನಲ್ಲಿ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಹಾಗೂ ಡೇವಿಡ್ ಮಿಲ್ಲರ್ ಬ್ಯಾಟಿಂಗ್.
ಟಿಮ್ ಸೌಥಿ ಎಸೆದ 40ನೇ ಓವರ್ನ ಕೊನೆಯ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದ ಕ್ವಿಂಟನ್ ಡಿಕಾಕ್.
116 ಎಸೆತಗಳಲ್ಲಿ 114 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಸೌತ್ ಆಫ್ರಿಕಾ ತಂಡದ ಆರಂಭಿಕ ಆಟಗಾರ.
ಕ್ರೀಸ್ನಲ್ಲಿ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಹಾಗೂ ಡೇವಿಡ್ ಮಿಲ್ಲರ್ ಬ್ಯಾಟಿಂಗ್.
ಜಿಮ್ಮಿ ನೀಶಮ್ ಎಸೆದ 36ನೇ ಓವರ್ನ ಕೊನೆಯ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಕ್ವಿಂಟನ್ ಡಿಕಾಕ್.
ಈ ಸಿಕ್ಸ್ನೊಂದಿಗೆ 103 ಎಸೆತಗಳಲ್ಲಿ ಶತಕ ಪೂರೈಸಿದ ಸೌತ್ ಆಫ್ರಿಕಾ ತಂಡದ ಎಡಗೈ ದಾಂಡಿಗ ಡಿಕಾಕ್.
ಈ ಬಾರಿಯ ವಿಶ್ವಕಪ್ನಲ್ಲಿ ಇದು ಕ್ವಿಂಟನ್ ಡಿಕಾಕ್ ಅವರ 4ನೇ ಶತಕ ಎಂಬುದು ವಿಶೇಷ.
35 ಓವರ್ಗಳ ಮುಕ್ತಾಯದ ವೇಳೆಗೆ ಸೌತ್ ಆಫ್ರಿಕಾ ತಂಡದ ಸ್ಕೋರ್ 194 ರನ್ಗಳು.
ಶತಕದತ್ತ ಮುನ್ನುಗ್ಗುತ್ತಿರುವ ಎಡಗೈ ದಾಂಡಿಗ ಕ್ವಿಂಟನ್ ಡಿಕಾಕ್.
ಕ್ರೀಸ್ನಲ್ಲಿ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (68) ಹಾಗೂ ಕ್ವಿಂಟನ್ ಡಿಕಾಕ್ (94) ಬ್ಯಾಟಿಂಗ್.
ಮಿಚೆಲ್ ಸ್ಯಾಂಟ್ನರ್ ಎಸೆದ 33ನೇ ಓವರ್ನ 4ನೇ ಎಸೆತದಲ್ಲಿ ರಿವರ್ಸ್ ಸ್ವೀಪ್ ಫೋರ್ ಬಾರಿಸಿದ ಕ್ವಿಂಟನ್ ಡಿಕಾಕ್.
ಕ್ರೀಸ್ನಲ್ಲಿ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಹಾಗೂ ಕ್ವಿಂಟನ್ ಡಿಕಾಕ್ ಬ್ಯಾಟಿಂಗ್.
30 ಓವರ್ಗಳ ಮುಕ್ತಾಯದ ವೇಳೆಗೆ 155 ರನ್ ಕಲೆಹಾಕಿದ ಸೌತ್ ಆಫ್ರಿಕಾ ತಂಡ.
2ನೇ ವಿಕೆಟ್ಗೆ 129 ಎಸೆತಗಳಲ್ಲಿ 117 ರನ್ಗಳ ಜೊತೆಯಾಟವಾಡಿರುವ ಡಿಕಾಕ್-ಡಸ್ಸೆನ್.
ಟೆಂಬಾ ಬವುಮಾ (24) ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿರುವ ನ್ಯೂಝಿಲೆಂಡ್.
ಕ್ರೀಸ್ನಲ್ಲಿ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (72) ಹಾಗೂ ಕ್ವಿಂಟನ್ ಡಿಕಾಕ್ (52) ಬ್ಯಾಟಿಂಗ್.
25 ಓವರ್ಗಳಲ್ಲಿ 124 ರನ್ ಬಾರಿಸಿರುವ ಸೌತ್ ಆಫ್ರಿಕಾ ಬ್ಯಾಟರ್ಗಳು.
ಟೆಂಬಾ ಬವುಮಾ ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿರುವ ನ್ಯೂಝಿಲೆಂಡ್.
ಕ್ರೀಸ್ನಲ್ಲಿ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (36) ಹಾಗೂ ಕ್ವಿಂಟನ್ ಡಿಕಾಕ್ (57) ಬ್ಯಾಟಿಂಗ್.
ರಚಿನ್ ರವೀಂದ್ರ ಎಸೆದ 21ನೇ ಓವರ್ನ ಮೊದಲ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್.
4ನೇ ಎಸೆತದಲ್ಲಿ ಫೋರ್ ಬಾರಿಸಿದ ಡಿಕಾಕ್.
ಈ ಫೋರ್ನೊಂದಿಗೆ 62 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಕ್ವಿಂಟನ್ ಡಿಕಾಕ್.
ಕ್ರೀಸ್ನಲ್ಲಿ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಹಾಗೂ ಕ್ವಿಂಟನ್ ಡಿಕಾಕ್ ಬ್ಯಾಟಿಂಗ್.
20 ಓವರ್ಗಳ ಮುಕ್ತಾಯದ ವೇಳೆಗೆ ಸೌತ್ ಆಫ್ರಿಕಾ ತಂಡದ ಸ್ಕೋರ್ 94 ರನ್ಗಳು.
ಟೆಂಬಾ ಬವುಮಾ (24) ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿರುವ ನ್ಯೂಝಿಲೆಂಡ್.
ಕ್ರೀಸ್ನಲ್ಲಿ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಹಾಗೂ ಕ್ವಿಂಟನ್ ಡಿಕಾಕ್ ಬ್ಯಾಟಿಂಗ್.
ಗ್ಲೆನ್ ಫಿಲಿಪ್ಸ್ ಎಸೆದ 18ನೇ ಓವರ್ನ ಕೊನೆಯ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್
ಕ್ರೀಸ್ನಲ್ಲಿ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಹಾಗೂ ಕ್ವಿಂಟನ್ ಡಿಕಾಕ್ ಬ್ಯಾಟಿಂಗ್.
17 ಓವರ್ಗಳಲ್ಲಿ 76 ರನ್ ಕಲೆಹಾಕಿರುವ ಸೌತ್ ಆಫ್ರಿಕಾ ಬ್ಯಾಟರ್ಗಳು.
ಪ್ರತಿ ಓವರ್ಗೆ 4.47 ಸರಾಸರಿಯಲ್ಲಿ ಮಾತ್ರ ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿರುವ ಸೌತ್ ಆಫ್ರಿಕಾ.
ಕ್ರೀಸ್ನಲ್ಲಿ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಹಾಗೂ ಕ್ವಿಂಟನ್ ಡಿಕಾಕ್ ಬ್ಯಾಟಿಂಗ್.
15 ಓವರ್ಗಳ ಮುಕ್ತಾಯದ ವೇಳೆಗೆ ಸೌತ್ ಆಫ್ರಿಕಾ ತಂಡದ ಸ್ಕೋರ್ 61 ರನ್ಗಳು.
ನ್ಯೂಝಿಲೆಂಡ್ ತಂಡದಿಂದ ಉತ್ತಮ ಬೌಲಿಂಗ್.
ಇದುವರೆಗೆ ಕೇವಲ 7 ಬೌಂಡರಿ ಮಾತ್ರ ಬಾರಿಸುವಲ್ಲಿ ಯಶಸ್ವಿಯಾಗಿರುವ ಸೌತ್ ಆಫ್ರಿಕಾ.
ಕ್ರೀಸ್ನಲ್ಲಿ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (12) ಹಾಗೂ ಕ್ವಿಂಟನ್ ಡಿಕಾಕ್ (22) ಬ್ಯಾಟಿಂಗ್.
13 ಓವರ್ಗಳಲ್ಲಿ ಅರ್ಧಶತಕ ಪೂರೈಸಿರುವ ಸೌತ್ ಆಫ್ರಿಕಾ ತಂಡ.
ನ್ಯೂಝಿಲೆಂಡ್ ತಂಡದಿಂದ ಉತ್ತಮ ಬೌಲಿಂಗ್.
ಕ್ರೀಸ್ನಲ್ಲಿ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಹಾಗೂ ಕ್ವಿಂಟನ್ ಡಿಕಾಕ್ ಬ್ಯಾಟಿಂಗ್.
10 ಓವರ್ಗಳಲ್ಲಿ 43 ರನ್ ಕಲೆಹಾಕಿದ ಸೌತ್ ಆಫ್ರಿಕಾ ತಂಡ.
ಕ್ರೀಸ್ನಲ್ಲಿ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಹಾಗೂ ಕ್ವಿಂಟನ್ ಡಿಕಾಕ್ ಬ್ಯಾಟಿಂಗ್.
24 ರನ್ ಬಾರಿಸಿ ವಿಕೆಟ್ ಒಪ್ಪಿಸಿರುವ ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ.
ಟ್ರೆಂಟ್ ಬೌಲ್ಟ್ ಎಸೆದ 9ನೇ ಓವರ್ನ 3ನೇ ಎಸೆತದಲ್ಲಿ ಫಸ್ಟ್ ಸ್ಲಿಪ್ನಲ್ಲಿ ಡೇರಿಲ್ ಮಿಚೆಲ್ಗೆ ಕ್ಯಾಚ್ ನೀಡಿದ ಟೆಂಬಾ ಬವುಮಾ.
28 ಎಸೆತಗಳಲ್ಲಿ 24 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಟೆಂಬಾ ಬವುಮಾ.
ಕ್ರೀಸ್ನಲ್ಲಿ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಹಾಗೂ ಕ್ವಿಂಟನ್ ಡಿಕಾಕ್ ಬ್ಯಾಟಿಂಗ್.
ಮ್ಯಾಟ್ ಹೆನ್ರಿ ಎಸೆದ 8ನೇ ಓವರ್ನ ಮೊದಲ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಟೆಂಬಾ ಬವುಮಾ.
ಐದನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಮತ್ತೊಂದು ಫೋರ್.
ಕ್ರೀಸ್ನಲ್ಲಿ ಟೆಂಬಾ ಬವುಮಾ ಹಾಗೂ ಕ್ವಿಂಟನ್ ಡಿಕಾಕ್ ಬ್ಯಾಟಿಂಗ್.
ಮ್ಯಾಟ್ ಹೆನ್ರಿ ಎಸೆದ 6ನೇ ಓವರ್ನ 2ನೇ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಸಿಕ್ಸ್ ಸಿಡಿಸಿದ ಟೆಂಬಾ ಬವುಮಾ.
6 ಓವರ್ಗಳ ಮುಕ್ತಾಯದ ವೇಳೆಗೆ ಸೌತ್ ಆಫ್ರಿಕಾ ತಂಡದ ಸ್ಕೋರ್ 22 ರನ್ಗಳು.
ಕ್ರೀಸ್ನಲ್ಲಿ ಟೆಂಬಾ ಬವುಮಾ ಹಾಗೂ ಕ್ವಿಂಟನ್ ಡಿಕಾಕ್ ಬ್ಯಾಟಿಂಗ್.
ಮ್ಯಾಟ್ ಹೆನ್ರಿ ಎಸೆದ 4ನೇ ಓವರ್ನ 2ನೇ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಟೆಂಬಾ ಬವುಮಾ.
4ನೇ ಎಸೆತದಲ್ಲಿ ಬವುಮಾ ಬ್ಯಾಟ್ನಿಂದ ಮತ್ತೊಂದು ಆಫ್ ಸೈಡ್ ಫೋರ್.
ಕ್ರೀಸ್ನಲ್ಲಿ ಟೆಂಬಾ ಬವುಮಾ ಹಾಗೂ ಕ್ವಿಂಟನ್ ಡಿಕಾಕ್ ಬ್ಯಾಟಿಂಗ್.
2ನೇ ಓವರ್ನಲ್ಲಿ ಕೇವಲ 1 ರನ್ ನೀಡಿದ ಬಲಗೈ ವೇಗಿ ಮ್ಯಾಟ್ ಹೆನ್ರಿ.
ಮೊದಲ ಓವರ್ನಲ್ಲಿ 2 ರನ್ ನೀಡಿರುವ ಟ್ರೆಂಟ್ ಬೌಲ್ಟ್.
ಕ್ರೀಸ್ನಲ್ಲಿ ಟೆಂಬಾ ಬವುಮಾ ಹಾಗೂ ಕ್ವಿಂಟನ್ ಡಿಕಾಕ್ ಬ್ಯಾಟಿಂಗ್.
ಮೊದಲ ಓವರ್ನಲ್ಲಿ ಕೇವಲ 2 ರನ್ ನೀಡಿದ ಎಡಗೈ ವೇಗಿ ಟ್ರೆಂಟ್ ಬೌಲ್ಟ್.
ನ್ಯೂಝಿಲೆಂಡ್ ತಂಡದಿಂದ ಉತ್ತಮ ಬೌಲಿಂಗ್.
ಕ್ರೀಸ್ನಲ್ಲಿ ಟೆಂಬಾ ಬವುಮಾ ಹಾಗೂ ಕ್ವಿಂಟನ್ ಡಿಕಾಕ್ ಬ್ಯಾಟಿಂಗ್.
ಬೆಂಗಳೂರು: 68ನೇ ಕನ್ನಡ ರಾಜ್ಯೋತ್ಸವ ಆಚರಣೆ ಹಿನ್ನೆಯಲ್ಲಿ ಶಾಸಕರ ಭವನದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಧ್ವಜಾರೋಹಣ ನೆರವೇರಿಸಿದರು. ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್, ವಿಧಾನಸಭೆ ಕಾರ್ಯದರ್ಶಿ ಕೆ.ಎ. ವಿಶಾಲಾಕ್ಷಿ ಮತ್ತು ವಿಧಾನ ಪರಿಷತ್ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮೀ ಮತ್ತು ಸಚಿವಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದಾರೆ.
ನ್ಯೂಝಿಲೆಂಡ್ (ಪ್ಲೇಯಿಂಗ್ XI): ಡೆವೊನ್ ಕಾನ್ವೆ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ), ಗ್ಲೆನ್ ಫಿಲಿಪ್ಸ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್.
ಸೌತ್ ಆಫ್ರಿಕಾ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸೆನ್, ಜೆರಾಲ್ಡ್ ಕೊಯೆಟ್ಝಿ, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್ಗಿಡಿ.
ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ನ್ಯೂಝಿಲೆಂಡ್ ತಂಡದ ಹಂಗಾಮಿ ನಾಯಕ ಟಾಮ್ ಲಾಥಮ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
Published On - 1:33 pm, Wed, 1 November 23