ಏಕದಿನ ವಿಶ್ವಕಪ್ನ 41ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ನ್ಯೂಝಿಲೆಂಡ್ ಭರ್ಜರಿ ಜಯ ಸಾಧಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು 46.4 ಓವರ್ಗಳಲ್ಲಿ 171 ರನ್ಗಳಿಗೆ ಆಲೌಟ್ ಆಯಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ 23.2 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ನ್ಯೂಝಿಲೆಂಡ್ ಸೆಮಿಫೈನಲ್ ಆಡುವುದು ಬಹುತೇಕ ಖಚಿತವಾಗಿದೆ.
ಏಕದಿನ ಕ್ರಿಕೆಟ್ನಲ್ಲಿ ನ್ಯೂಝಿಲೆಂಡ್ ಹಾಗೂ ಶ್ರೀಲಂಕಾ ತಂಡಗಳು ಇದುವರೆಗೆ 102 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಈ ವೇಳೆ ನ್ಯೂಝಿಲೆಂಡ್ 52 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಶ್ರೀಲಂಕಾ 41 ಪಂದ್ಯಗಳನ್ನು ಗೆದ್ದುಕೊಂಡಿದೆ. ಇನ್ನು 8 ಪಂದ್ಯಗಳು ಕಾರಣಾಂತರಗಳಿಂದ ರದ್ದಾದರೆ, ಒಂದು ಮ್ಯಾಚ್ನಲ್ಲಿ ಟೈನಲ್ಲಿ ಅಂತ್ಯ ಕಂಡಿತ್ತು.
ನ್ಯೂಝಿಲೆಂಡ್ (ಪ್ಲೇಯಿಂಗ್ XI): ಡೆವೊನ್ ಕಾನ್ವೇ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್ (ನಾಯಕ), ಡೇರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಾಮ್ ಲಾಥಮ್ (ವಿಕೆಟ್ ಕೀಪರ್), ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ಲಾಕಿ ಫರ್ಗುಸನ್.
ಶ್ರೀಲಂಕಾ (ಪ್ಲೇಯಿಂಗ್ XI): ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಕುಸಾಲ್ ಮೆಂಡಿಸ್ (ನಾಯಕ), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಚಮಿಕಾ ಕರುಣರತ್ನೆ, ಮಹೀಶ್ ತೀಕ್ಷಣ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ.
ಶ್ರೀಲಂಕಾ ನೀಡಿದ 171 ರನ್ಗಳ ಗುರಿಯನ್ನು 23.2 ಓವರ್ಗಳಲ್ಲಿ ಚೇಸ್ ಮಾಡಿದ ನ್ಯೂಝಿಲೆಂಡ್.
ನಿರ್ಣಾಯಕ ಪಂದ್ಯದಲ್ಲಿ 5 ವಿಕೆಟ್ಗಳ ಗೆಲುವು ದಾಖಲಿಸಿ ಸೆಮಿಫೈನಲ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡ ನ್ಯೂಝಿಲೆಂಡ್ ತಂಡ.
ಏಂಜೆಲೊ ಮ್ಯಾಥ್ಯೂಸ್ ಎಸೆದ 23ನೇ ಓವರ್ನ 4ನೇ ಎಸೆತದಲ್ಲಿ ಕ್ಯಾಚ್ ನೀಡಿದ ಡೇರಿಲ್ ಮಿಚೆಲ್.
31 ಎಸೆತಗಳಲ್ಲಿ 43 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಡೇರಿಲ್ ಮಿಚೆಲ್.
ಕ್ರೀಸ್ನಲ್ಲಿ ಟಾಮ್ ಲಾಥಮ್ ಹಾಗೂ ಗ್ಲೆನ್ ಫಿಲಿಪ್ಸ್ ಬ್ಯಾಟಿಂಗ್.
20 ಓವರ್ಗಳಲ್ಲಿ 144 ರನ್ ಕಲೆಹಾಕಿದ ನ್ಯೂಝಿಲೆಂಡ್.
3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ಶ್ರೀಲಂಕಾ.
ಕ್ರೀಸ್ನಲ್ಲಿ ಮಾರ್ಕ್ ಚಾಪ್ಮನ್ ಹಾಗೂ ಡೇರಿಲ್ ಮಿಚೆಲ್ ಬ್ಯಾಟಿಂಗ್.
ನ್ಯೂಝಿಲೆಂಡ್ ತಂಡದ ಗೆಲುವಿಗೆ ಕೇವಲ 28 ರನ್ಗಳ ಅವಶ್ಯಕತೆ.
15 ಓವರ್ಗಳ ಮುಕ್ತಾಯದ ವೇಳೆಗೆ 103 ರನ್ ಕಲೆಹಾಕಿದ ನ್ಯೂಝಿಲೆಂಡ್.
2 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದ ಶ್ರೀಲಂಕಾ ತಂಡ.
ಕ್ರೀಸ್ನಲ್ಲಿ ಕೇನ್ ವಿಲಿಯಮ್ಸನ್ ಹಾಗೂ ಡೇರಿಲ್ ಮಿಚೆಲ್ ಬ್ಯಾಟಿಂಗ್.
ಡೆವೊನ್ ಕಾನ್ವೆ ಹಾಗೂ ರಚಿನ್ ರವೀಂದ್ರ ಔಟ್.
ಮಹೀಶ್ ತೀಕ್ಷಣ ಎಸೆದ 14ನೇ ಓವರ್ನ 3ನೇ ಎಸೆತದಲ್ಲಿ ಕ್ಯಾಚ್ ನೀಡಿದ ರಚಿನ್ ರವೀಂದ್ರ.
34 ಎಸೆತಗಳಲ್ಲಿ 42 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಯುವ ಎಡಗೈ ದಾಂಡಿಗ.
ಕ್ರೀಸ್ನಲ್ಲಿ ಕೇನ್ ವಿಲಿಯಮ್ಸನ್ ಹಾಗೂ ಡೇರಿಲ್ ಮಿಚೆಲ್ ಬ್ಯಾಟಿಂಗ್.
ದುಷ್ಮಂತ ಚಮೀರಾ ಎಸೆದ 13ನೇ ಓವರ್ನ 2ನೇ ಎಸೆತದಲ್ಲಿ ಫ್ರಂಟ್ ಫೀಲ್ಡರ್ಗೆ ಕ್ಯಾಚ್ ನೀಡಿದ ಡೆವೊನ್ ಕಾನ್ವೆ.
42 ಎಸೆತಗಳಲ್ಲಿ 45 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಡೆವೊನ್ ಕಾನ್ವೆ.
ಕ್ರೀಸ್ನಲ್ಲಿ ಕೇನ್ ವಿಲಿಯಮ್ಸನ್ ಹಾಗೂ ರಚಿನ್ ರವೀಂದ್ರ ಬ್ಯಾಟಿಂಗ್.
10 ಓವರ್ಗಳ ಮುಕ್ತಾಯದ ವೇಳೆಗೆ 73 ರನ್ ಕಲೆಹಾಕಿದ ನ್ಯೂಝಿಲೆಂಡ್.
ಕ್ರೀಸ್ನಲ್ಲಿ ಡೆವೊನ್ ಕಾನ್ವೆ (44) ಹಾಗೂ ರಚಿನ್ ರವೀಂದ್ರ (29) ಬ್ಯಾಟಿಂಗ್.
ನ್ಯೂಝಿಲೆಂಡ್ಗೆ 171 ರನ್ ಗಳ ಗುರಿ ನೀಡಿರುವ ಶ್ರೀಲಂಕಾ.
ಧನಂಜಯ ಡಿಸಿಲ್ವಾ ಎಸೆದ 8ನೇ ಓವರ್ನ 3ನೇ ಎಸೆತದಲ್ಲಿ ಎಕ್ಸ್ಟ್ರಾ ಕವರ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ರಚಿನ್ ರವೀಂದ್ರ.
ಕ್ರೀಸ್ನಲ್ಲಿ ಡೆವೊನ್ ಕಾನ್ವೆ ಹಾಗೂ ರಚಿನ್ ರವೀಂದ್ರ ಬ್ಯಾಟಿಂಗ್.
ದಿಲ್ಶನ್ ಮಧುಶಂಕ ಎಸೆದ 7ನೇ ಓವರ್ನ 2ನೇ ಮತ್ತು 3ನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ಗಳನ್ನು ಬಾರಿಸಿದ ಡೆವೊನ್ ಕಾನ್ವೆ,
ಈ ಫೋರ್ಗಳೊಂದಿಗೆ ಅರ್ಧಶತಕ ಪೂರೈಸಿದ ನ್ಯೂಝಿಲೆಂಡ್ ತಂಡ.
ಕ್ರೀಸ್ನಲ್ಲಿ ಡೆವೊನ್ ಕಾನ್ವೆ ಹಾಗೂ ರಚಿನ್ ರವೀಂದ್ರ ಬ್ಯಾಟಿಂಗ್.
ಎಡಗೈ ವೇಗಿ ದಿಲ್ಶನ್ ಮಧುಶಂಕ ಎಸೆದ 5ನೇ ಓವರ್ನಲ್ಲಿ ಮೂರು ಫೋರ್ಗಳನ್ನು ಬಾರಿಸಿದ ಡೆವೊನ್ ಕಾನ್ವೆ.
5 ಓವರ್ಗಳ ಮುಕ್ತಾಯದ ವೇಳೆಗೆ 32 ರನ್ ಕಲೆಹಾಕಿದ ನ್ಯೂಝಿಲೆಂಡ್.
ಕ್ರೀಸ್ನಲ್ಲಿ ಡೆವೊನ್ ಕಾನ್ವೆ ಹಾಗೂ ರಚಿನ್ ರವೀಂದ್ರ ಬ್ಯಾಟಿಂಗ್.
ಮಹೀಶ್ ತೀಕ್ಷಣ ಎಸೆದ 2ನೇ ಓವರ್ನ ಕೊನೆಯ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ಎಡಗೈ ದಾಂಡಿಗ ರಚಿನ್ ರವೀಂದ್ರ.
ಕ್ರೀಸ್ನಲ್ಲಿ ಡೆವೊನ್ ಕಾನ್ವೆ ಹಾಗೂ ರಚಿನ್ ರವೀಂದ್ರ ಬ್ಯಾಟಿಂಗ್.
ದಿಲ್ಶನ್ ಮಧುಶಂಕ ಎಸೆದ ಮೊದಲ ಓವರ್ನ 5ನೇ ಎಸೆತದಲ್ಲಿ ಲಾಂಗ್ ಆನ್ನತ್ತ ಫೋರ್ ಬಾರಿಸಿದ ಡೆವೊನ್ ಕಾನ್ವೆ.
ಇದು ನ್ಯೂಝಿಲೆಂಡ್ ಇನಿಂಗ್ಸ್ನ ಮೊದಲ ಬೌಂಡರಿ.
ಕ್ರೀಸ್ನಲ್ಲಿ ಡೆವೊನ್ ಕಾನ್ವೆ ಹಾಗೂ ರಚಿನ್ ರವೀಂದ್ರ ಬ್ಯಾಟಿಂಗ್.
46.4 ಓವರ್ಗಳಲ್ಲಿ 171 ರನ್ಗಳಿಗೆ ಆಲೌಟ್ ಆದ ಶ್ರೀಲಂಕಾ.
ಶ್ರೀಲಂಕಾ ಪರ ಕುಸಾಲ್ ಪೆರೇರಾ (51) ಗರಿಷ್ಠ ಸ್ಕೋರರ್.
ನ್ಯೂಝಿಲೆಂಡ್ ಪರ 10 ಓವರ್ಗಳಲ್ಲಿ 37 ರನ್ ನೀಡಿದ 3 ವಿಕೆಟ್ ಪಡೆದು ಮಿಂಚಿದ ಟ್ರೆಂಟ್ ಬೌಲ್ಟ್.
ನ್ಯೂಝಿಲೆಂಡ್ ತಂಡಕ್ಕೆ 172 ರನ್ಗಳ ಸುಲಭ ಗುರಿ ನೀಡಿದ ಶ್ರೀಲಂಕಾ.
32 ಓವರ್ಗಳ ಮುಕ್ತಾಯದ ವೇಳೆಗೆ 128 ರನ್ ಕಲೆಹಾಕಿದ ಶ್ರೀಲಂಕಾ ತಂಡ.
8 ವಿಕೆಟ್ ಕಬಳಿಸಿರುವ ನ್ಯೂಝಿಲೆಂಡ್ ತಂಡದ ಬೌಲರ್ಗಳು.
ಕ್ರೀಸ್ನಲ್ಲಿ ಮಹೀಶ್ ತೀಕ್ಷಣ ಹಾಗೂ ದುಷ್ಮಂತ ಚಮೀರಾ ಬ್ಯಾಟಿಂಗ್.
25 ಓವರ್ಗಳ ಮುಕ್ತಾಯದ ವೇಳೆಗೆ 114 ರನ್ ಕಲೆಹಾಕಿದ ಶ್ರೀಲಂಕಾ.
8 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ನ್ಯೂಝಿಲೆಂಡ್ ಬೌಲರ್ಗಳು.
ಕ್ರೀಸ್ನಲ್ಲಿ ಮಹೀಶ್ ತೀಕ್ಷಣ ಹಾಗೂ ದುಷ್ಮಂತ ಚಮೀರಾ ಬ್ಯಾಟಿಂಗ್.
ಪಾತುಮ್ ನಿಸ್ಸಂಕಾ, ಕುಸಾಲ್ ಮೆಂಡಿಸ್, ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿಸಿಲ್ವಾ, ಕುಸಾಲ್ ಪೆರೇರಾ ಹಾಗೂ ಚಮಿಕಾ ಕರುಣರತ್ನೆ ಔಟ್.
ಲಾಕಿ ಫರ್ಗುಸನ್ ಎಸೆದ 24ನೇ ಓವರ್ನ 3ನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಚಮಿಕಾ ಕರುಣರತ್ನೆ.
ಶ್ರೀಲಂಕಾ ತಂಡದ 8ನೇ ವಿಕೆಟ್ ಪತನ.
ಕ್ರೀಸ್ನಲ್ಲಿ ಮಹೀಶ್ ತೀಕ್ಷಣ ಹಾಗೂ ದುಷ್ಮಂತ ಚಮೀರಾ ಬ್ಯಾಟಿಂಗ್.
20 ಓವರ್ಗಳ ಮುಕ್ತಾಯದ ವೇಳೆಗೆ 111 ರನ್ ಕಲೆಹಾಕಿದ ಶ್ರೀಲಂಕಾ ತಂಡ.
ಈಗಾಗಲೇ 7 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ನ್ಯೂಝಿಲೆಂಡ್ ಬೌಲರ್ಗಳು.
ಕ್ರೀಸ್ನಲ್ಲಿ ಮಹೀಶ್ ತೀಕ್ಷಣ ಹಾಗೂ ಚಮಿಕಾ ಕರುಣರತ್ನೆ ಬ್ಯಾಟಿಂಗ್.
ಪಾತುಮ್ ನಿಸ್ಸಂಕಾ, ಕುಸಾಲ್ ಮೆಂಡಿಸ್, ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿಸಿಲ್ವಾ ಹಾಗೂ ಕುಸಾಲ್ ಪೆರೇರಾ ಔಟ್.
ಮಿಚೆಲ್ ಸ್ಯಾಂಟ್ನರ್ ಎಸೆದ 19ನೇ ಓವರ್ನ 3ನೇ ಎಸೆತದಲ್ಲಿ ಸ್ಲಿಪ್ನಲ್ಲಿ ಕ್ಯಾಚ್ ನೀಡಿದ ಧನಂಜಯ ಡಿಸಿಲ್ವಾ.
24 ಎಸೆತಗಳಲ್ಲಿ 19 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಧನಂಜಯ ಡಿಸಿಲ್ವಾ.
ಕ್ರೀಸ್ನಲ್ಲಿ ಮಹೀಶ್ ತೀಕ್ಷಣ ಹಾಗೂ ಚಮಿಕಾ ಕರುಣರತ್ನೆ ಬ್ಯಾಟಿಂಗ್.
ಮಿಚೆಲ್ ಸ್ಯಾಂಟ್ನರ್ ಎಸೆದ 17ನೇ ಓವರ್ನ 4ನೇ ಎಸೆತದಲ್ಲಿ ಸ್ಲಿಪ್ನಲ್ಲಿ ಕ್ಯಾಚ್ ನೀಡಿದ ಏಂಜೆಲೊ ಮ್ಯಾಥ್ಯೂಸ್.
27 ಎಸೆತಗಳಲ್ಲಿ 16 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಮ್ಯಾಥ್ಯೂಸ್.
ಕ್ರೀಸ್ನಲ್ಲಿ ಧನಂಜಯ ಡಿಸಿಲ್ವಾ ಹಾಗೂ ಚಮಿಕಾ ಕರುಣರತ್ನೆ ಬ್ಯಾಟಿಂಗ್.
ಟಿಮ್ ಸೌಥಿ ಎಸೆದ 16ನೇ ಓವರ್ನ ಕೊನೆಯ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಧನಂಜಯ ಡಿಸಿಲ್ವಾ.
ಈ ಸಿಕ್ಸ್ನೊಂದಿಗೆ ಶತಕ ಪೂರೈಸಿದ ಶ್ರೀಲಂಕಾ ತಂಡ.
ಕ್ರೀಸ್ನಲ್ಲಿ ಏಂಜೆಲೊ ಮ್ಯಾಥ್ಯೂಸ್ ಹಾಗೂ ಧನಂಜಯ ಡಿಸಿಲ್ವಾ ಬ್ಯಾಟಿಂಗ್.
15 ಓವರ್ಗಳಲ್ಲಿ 95 ರನ್ ಕಲೆಹಾಕಿದ ಶ್ರೀಲಂಕಾ ತಂಡ.
ಪವರ್ಪ್ಲೇನಲ್ಲೇ 5 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ನ್ಯೂಝಿಲೆಂಡ್ ಬೌಲರ್ಗಳು.
ಕ್ರೀಸ್ನಲ್ಲಿ ಏಂಜೆಲೊ ಮ್ಯಾಥ್ಯೂಸ್ ಹಾಗೂ ಧನಂಜಯ ಡಿಸಿಲ್ವಾ ಬ್ಯಾಟಿಂಗ್.
ಪಾತುಮ್ ನಿಸ್ಸಂಕಾ, ಕುಸಾಲ್ ಮೆಂಡಿಸ್, ಸದೀರ ಸಮರವಿಕ್ರಮ, ಚರಿತ್ ಅಸಲಂಕಾ ಹಾಗೂ ಕುಸಾಲ್ ಪೆರೇರಾ ಔಟ್.
ಕೇವಲ 85 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾ ತಂಡ.
ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ನ್ಯೂಝಿಲೆಂಡ್ ಬೌಲರ್ಗಳು.
ಎಚ್ಚರಿಕೆಯ ಬ್ಯಾಟಿಂಗ್ಗೆ ಒತ್ತು ನೀಡಿರುವ ಲಂಕಾ ತಂಡದ ಬ್ಯಾಟರ್ಗಳು.
ಕ್ರೀಸ್ನಲ್ಲಿ ಏಂಜೆಲೊ ಮ್ಯಾಥ್ಯೂಸ್ ಹಾಗೂ ಧನಂಜಯ ಡಿಸಿಲ್ವಾ ಬ್ಯಾಟಿಂಗ್.
ಲಾಕಿ ಫರ್ಗುಸನ್ ಎಸೆದ 10ನೇ ಓವರ್ನ 3ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಫ್ರಂಟ್ ಫೀಲ್ಡರ್ಗೆ ಕ್ಯಾಚ್ ನೀಡಿದ ಕುಸಾಲ್ ಪೆರೇರಾ.
28 ಎಸೆತಗಳಲ್ಲಿ 51 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಕುಸಾಲ್ ಪೆರೇರಾ.
10 ಓವರ್ಗಳ ಮುಕ್ತಾಯದ ವೇಳೆಗೆ 5 ವಿಕೆಟ್ ಕಳೆದುಕೊಂಡು 74 ರನ್ ಕಲೆಹಾಕಿದ ಶ್ರೀಲಂಕಾ.
ಟ್ರೆಂಟ್ ಬೌಲ್ಟ್ ಎಸೆದ 9ನೇ ಓವರ್ನ 2ನೇ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ನಿರ್ಗಮಿಸಿದ ಚರಿತ್ ಅಸಲಂಕಾ.
8 ಎಸೆತಗಳಲ್ಲಿ 8 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಎಡಗೈ ದಾಂಡಿಗ ಚರಿತ್ ಅಸಲಂಕಾ.
ಕ್ರೀಸ್ನಲ್ಲಿ ಏಂಜೆಲೊ ಮ್ಯಾಥ್ಯೂಸ್ ಹಾಗೂ ಕುಸಾಲ್ ಪೆರೇರಾ ಬ್ಯಾಟಿಂಗ್.
ಲಾಕಿ ಫರ್ಗುಸನ್ ಎಸೆದ 8ನೇ ಓವರ್ನ ಮೂರನೇ ಎಸೆತದಲ್ಲಿ ಎಕ್ಸ್ಟ್ರಾ ಕವರ್ನತ್ತ ಫೋರ್ ಬಾರಿಸಿದ ಕುಸಾಲ್ ಪೆರೇರಾ.
ಈ ಫೋರ್ನೊಂದಿಗೆ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪೆರೇರಾ.
ಕ್ರೀಸ್ನಲ್ಲಿ ಚರಿತ್ ಅಸಲಂಕಾ ಹಾಗೂ ಕುಸಾಲ್ ಪೆರೇರಾ ಬ್ಯಾಟಿಂಗ್.
ಟಿಮ್ ಸೌಥಿ ಎಸೆದ 6ನೇ ಓವರ್ನಲ್ಲಿ 1 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 18 ರನ್ ಚಚ್ಚಿದ ಕುಸಾಲ್ ಪೆರೇರಾ.
17 ಎಸೆತಗಳಲ್ಲಿ 39 ರನ್ ಬಾರಿಸಿ ಭರ್ಜರಿ ಬ್ಯಾಟಿಂಗ್ ಮುಂದುವರೆಸಿರುವ ಪೆರೇರಾ.
ಕ್ರೀಸ್ನಲ್ಲಿ ಚರಿತ್ ಅಸಲಂಕಾ ಹಾಗೂ ಕುಸಾಲ್ ಪೆರೇರಾ ಬ್ಯಾಟಿಂಗ್.
ಟ್ರೆಂಟ್ ಬೌಲ್ಟ್ ಎಸೆದ 5ನೇ ಓವರ್ನ ಮೊದಲ ಎಸೆತದಲ್ಲೇ ರಚಿನ್ ರವೀಂದ್ರಗೆ ಕ್ಯಾಚ್ ನೀಡಿದ ಕುಸಾಲ್ ಮೆಂಡಿಸ್.
7 ಎಸೆತಗಳಲ್ಲಿ 6 ರನ್ಗಳಿಸಿ ವಿಕೆಟ್ ಒಪ್ಪಿಸಿದ ಶ್ರೀಲಂಕಾ ತಂಡದ ನಾಯಕ ಕುಸಾಲ್ ಮೆಂಡಿಸ್.
4ನೇ ಎಸೆತದಲ್ಲಿ ಸ್ಲಿಪ್ನಲ್ಲಿ ಕ್ಯಾಚ್ ನೀಡಿ ಹೊರ ನಡೆದ ಸದೀರ ಸಮರವಿಕ್ರಮ (1).
ಕ್ರೀಸ್ನಲ್ಲಿ ಚರಿತ್ ಅಸಲಂಕಾ ಹಾಗೂ ಕುಸಾಲ್ ಪೆರೇರಾ ಬ್ಯಾಟಿಂಗ್.
ಟಿಮ್ ಸೌಥಿ ಎಸೆದ 4ನೇ ಓವರ್ನ 4ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಭರ್ಜರಿ ಸಿಕ್ಸ್ ಸಿಡಿಸಿದ ಕುಸಾಲ್ ಪೆರೇರಾ.
5ನೇ ಎಸೆತದಲ್ಲಿ ಪೆರೇರಾ ಬ್ಯಾಟ್ನಿಂದ ಮತ್ತೊಂದು ಫೋರ್.
ಕ್ರೀಸ್ನಲ್ಲಿ ಕುಸಾಲ್ ಮೆಂಡಿಸ್ ಹಾಗೂ ಕುಸಾಲ್ ಪೆರೇರಾ ಬ್ಯಾಟಿಂಗ್.
ಟ್ರೆಂಟ್ ಬೌಲ್ಟ್ ಎಸೆದ 3ನೇ ಓವರ್ನ ಮೊದಲ ಎಸೆತದಲ್ಲೇ ಆಫ್ ಸೈಡ್ನತ್ತ ಫೋರ್ ಬಾರಿಸಿದ ಎಡಗೈ ದಾಂಡಿಗ ಕುಸಾಲ್ ಪೆರೇರಾ.
ಇದು ಶ್ರೀಲಂಕಾ ಇನಿಂಗ್ಸ್ನ ಮೊದಲ ಬೌಂಡರಿ.
ಕ್ರೀಸ್ನಲ್ಲಿ ಕುಸಾಲ್ ಮೆಂಡಿಸ್ ಹಾಗೂ ಕುಸಾಲ್ ಪೆರೇರಾ ಬ್ಯಾಟಿಂಗ್.
ಟಿಮ್ ಸೌಥಿ ಎಸೆದ 2ನೇ ಓವರ್ನ 5ನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಪಾತುಮ್ ನಿಸ್ಸಂಕಾ.
8 ಎಸೆತಗಳಲ್ಲಿ 2 ರನ್ಗಳಿಸಿ ವಿಕೆಟ್ ಒಪ್ಪಿಸಿದ ಶ್ರೀಲಂಕಾ ತಂಡದ ಆರಂಭಿಕ ಆಟಗಾರ.
ನ್ಯೂಝಿಲೆಂಡ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟ ಅನುಭವಿ ಬೌಲರ್ ಟಿಮ್ ಸೌಥಿ.
ಬೆಂಗಳೂರಿನ ಜಯನಗರದಲ್ಲಿ ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ವೇಳೆ ಹೃದಯಾಘಾತದಿಂದ ವ್ಯಾಪಾರಿ ಕೃಷ್ಣ(49) ಮೃತಪಟ್ಟಿದ್ದಾರೆ. ಜಯನಗರದಲ್ಲಿ ಕಳೆದ 25 ವರ್ಷಗಳಿಂದ ತಾಯಿ ರತ್ನಮ್ಮ ಜೊತೆ ವ್ಯಾಪಾರಕ್ಕೆ ಸಹಾಯ ಮಾಡ್ತಿದ್ದ ಕೃಷ್ಣ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೊದಲ ಓವರ್ನಲ್ಲಿ ಕೇವಲ 1 ರನ್ ನೀಡಿದ ಎಡಗೈ ವೇಗಿ ಟ್ರೆಂಟ್ ಬೌಲ್ಟ್.
ಕ್ರೀಸ್ನಲ್ಲಿ ಪಾತುಮ್ ನಿಸ್ಸಂಕಾ ಹಾಗೂ ಕುಸಾಲ್ ಪೆರೇರಾ ಬ್ಯಾಟಿಂಗ್.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಮಾಡುತ್ತಿರುವ ನ್ಯೂಝಿಲೆಂಡ್ ತಂಡ.
ಕೆಇಎ ಪರೀಕ್ಷೆ ಅಕ್ರಮದ ಆರೋಪಿ R.D.ಪಾಟೀಲ್ ನಾಪತ್ತೆ ಪ್ರಕರಣ ಸಂಬಂಧ ಪಾಟೀಲ್ ಬಂಧನದಲ್ಲಿ ಎಡವಟ್ಟು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಗೃಹ ಇಲಾಖೆ ಮುಂದಾಗಿದೆ. ಅಫಜಲಪುರ ಸಿಪಿಐ ಪಂಡಿತ್ ಸಗರಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. R.D.ಪಾಟೀಲ್ ಬಂಧನಕ್ಕೆ ತೆರಳಿದ್ದ ಅಫಜಲಪುರ ಸಿಪಿಐ ಪಂಡಿತ್ ಸಗರ ಅವರು ಬಂಧಿಸಲು ತೆರಳಿದ್ದ ವೇಳೆಯಲ್ಲೇ ಆರೋಪಿ ಎಸ್ಕೇಪ್ ಆಗಿದ್ದ. ಪಾರ್ಟ್‌ಮೆಂಟ್ ಗೋಡೆ ಹಾರಿ ಎಸ್ಕೇಪ್ ಆಗಿದ್ದ. ಪಂಡಿತ್ಗೆ 10.30ಕ್ಕೆ ಮಾಹಿತಿ ನೀಡಿದ್ರೂ ಆರೋಪಿ ಹಿಡಿಯಲು ತಡವಾಗಿ ಸ್ಥಳಕ್ಕೆ ಆಗಮಿಸಿದ್ದರು. ಹೀಗಾಗಿ ಕಾರಣ ಹೇಳಿ ನೋಟಿಸ್ ಜಾರಿ ಮಾಡಲಾಗಿದೆ.
ಶ್ರೀಲಂಕಾ (ಪ್ಲೇಯಿಂಗ್ XI): ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಕುಸಾಲ್ ಮೆಂಡಿಸ್ (ನಾಯಕ), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಚಮಿಕಾ ಕರುಣರತ್ನೆ, ಮಹೀಶ್ ತೀಕ್ಷಣ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ.
ನ್ಯೂಝಿಲೆಂಡ್ (ಪ್ಲೇಯಿಂಗ್ XI): ಡೆವೊನ್ ಕಾನ್ವೇ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್ (ನಾಯಕ), ಡೇರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಾಮ್ ಲಾಥಮ್ (ವಿಕೆಟ್ ಕೀಪರ್), ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ಲಾಕಿ ಫರ್ಗುಸನ್.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ನ್ಯೂಝಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
Published On - 1:33 pm, Thu, 9 November 23