ಐಪಿಎಲ್‌ಗಾಗಿ ನಾಲ್ಕು ಪಟ್ಟು ಹಣ ಚೆಲ್ಲಿದ ಬಿಸಿಸಿಐ; ಪಾಕ್​ ಕ್ರಿಕೆಟ್​ಗೆ ಈ ತಂತ್ರಜ್ಞಾನದ ಆಪರೇಟರ್‌ಗಳೇ ಸಿಗುತ್ತಿಲ್ಲ!

ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ಸರಣಿಗಳಲ್ಲಿ ಡಿಆರ್‌ಎಸ್ ಅನ್ನು ಬಳಸದಿರುವ ಸಾಧ್ಯತೆಯಿದೆ. ಏಕೆಂದರೆ ಬಿಸಿಸಿಐ ಐಪಿಎಲ್‌ಗಾಗಿ ಡಿಆರ್‌ಎಸ್ ಕಾರ್ಯಾಚರಣಾ ಆಪರೇಟರ್‌ಗಳನ್ನು ನೇಮಿಸಿಕೊಂಡಿದೆ. ಅದೂ ಪಿಸಿಬಿಯ ನಾಲ್ಕು ಪಟ್ಟು ವೆಚ್ಚವನ್ನು ಪಾವತಿಸುವ ಮೂಲಕ.

ಐಪಿಎಲ್‌ಗಾಗಿ ನಾಲ್ಕು ಪಟ್ಟು ಹಣ ಚೆಲ್ಲಿದ ಬಿಸಿಸಿಐ; ಪಾಕ್​ ಕ್ರಿಕೆಟ್​ಗೆ ಈ ತಂತ್ರಜ್ಞಾನದ ಆಪರೇಟರ್‌ಗಳೇ ಸಿಗುತ್ತಿಲ್ಲ!
ಇಂಡಿಯಾ ಮತ್ತು ಪಾಕಿಸ್ತಾನ ತಂಡ
Edited By:

Updated on: Sep 10, 2021 | 10:50 PM

ಪಾಕಿಸ್ತಾನವು ಈ ತಿಂಗಳು ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡಕ್ಕೆ ಆತಿಥ್ಯ ವಹಿಸಲಿದೆ. ಪಾಕಿಸ್ತಾನದ ಈ ಪ್ರವಾಸದಲ್ಲಿ, ನ್ಯೂಜಿಲೆಂಡ್ ತಂಡವು ಮೂರು ಏಕದಿನ ಪಂದ್ಯಗಳ ಜೊತೆಗೆ ಐದು ಪಂದ್ಯಗಳ ಟಿ 20 ಸರಣಿಯನ್ನು ಆಡಲಿದೆ. ಪಾಕಿಸ್ತಾನದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಅನ್ನು ಬಹಳ ಕಷ್ಟದಿಂದ ಪುನಃಸ್ಥಾಪಿಸಲಾಗಿದೆ. ನ್ಯೂಜಿಲ್ಯಾಂಡ್ ಸರಣಿಯ ಯಶಸ್ವಿ ಸಂಘಟನೆಯು ಪಾಕಿಸ್ತಾನದ ಭವಿಷ್ಯಕ್ಕೆ ಒಳ್ಳೆಯದು. ಆದರೆ ಸರಣಿ ಆರಂಭಕ್ಕೂ ಮೊದಲು, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ದೊಡ್ಡ ಹಿನ್ನಡೆ ಅನುಭವಿಸಿದೆ. ಪಾಕಿಸ್ತಾನದ ವೆಬ್‌ಸೈಟ್ ಜಿಯೋ ನ್ಯೂಸ್‌ನ ವರದಿಯ ಪ್ರಕಾರ, ಪಿಸಿಬಿಗೆ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಡಿಆರ್‌ಎಸ್ ವ್ಯವಸ್ಥೆ ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಬಿಸಿಸಿಐ ಐಪಿಎಲ್‌ಗಾಗಿ ಸಿಸ್ಟಮ್ ಆಪರೇಟರ್‌ಗಳನ್ನು ಬಳಸಿಕೊಂಡಿದೆ. ಹೀಗಾಗಿ ಪಿಸಿಬಿಗೆ ಡಿಆರ್‌ಎಸ್ ಆಪರೇಟರ್‌ಗಳು ಸಿಗುತ್ತಿಲ್ಲ.

ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ಸರಣಿಗಳಲ್ಲಿ ಡಿಆರ್‌ಎಸ್ ಅನ್ನು ಬಳಸದಿರುವ ಸಾಧ್ಯತೆಯಿದೆ. ಏಕೆಂದರೆ ಬಿಸಿಸಿಐ ಐಪಿಎಲ್‌ಗಾಗಿ ಡಿಆರ್‌ಎಸ್ ಕಾರ್ಯಾಚರಣಾ ಆಪರೇಟರ್‌ಗಳನ್ನು ನೇಮಿಸಿಕೊಂಡಿದೆ. ಅದೂ ಪಿಸಿಬಿಯ ನಾಲ್ಕು ಪಟ್ಟು ವೆಚ್ಚವನ್ನು ಪಾವತಿಸುವ ಮೂಲಕ. ಐಪಿಎಲ್‌ಗಾಗಿ ಬಿಸಿಸಿಐ ಮೂವರು ಡಿಆರ್‌ಎಸ್ ಸಿಬ್ಬಂದಿಯನ್ನು ನೇಮಿಸಿಕೊಂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಜಿಯೋ ನ್ಯೂಸ್ ವರದಿ ಮಾಡಿದೆ. ಉಭಯ ದೇಶಗಳ ಸರಣಿಯು ಸೆಪ್ಟೆಂಬರ್ 17 ರಿಂದ ಆರಂಭವಾಗಲಿದ್ದು, ಅದೇ ಸಮಯದಲ್ಲಿ ಯುಎಇಯಲ್ಲಿ ಸೆಪ್ಟೆಂಬರ್ 19 ರಿಂದ ಐಪಿಎಲ್ ಆರಂಭವಾಗಲಿದೆ.

ಪಾಕಿಸ್ತಾನಕ್ಕೆ ಸಿಬ್ಬಂದಿ ಸಿಗುತ್ತಿಲ್ಲ
ಮತ್ತೊಂದೆಡೆ, ಪಾಕಿಸ್ತಾನವು ನ್ಯೂಜಿಲ್ಯಾಂಡ್ ಸರಣಿಗೆ ಆಸ್ಟ್ರೇಲಿಯಾ ಮತ್ತು ಇತರ ದೇಶಗಳಿಂದ DRS ಸಿಬ್ಬಂದಿಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆದಾಗ್ಯೂ, ಮುಂದಿನ ತಿಂಗಳು ಇಂಗ್ಲೆಂಡ್‌ನಿಂದ ಆರಂಭವಾಗುವ ಸರಣಿಯಲ್ಲಿ ಡಿಆರ್‌ಎಸ್ ಆಪರೇಟರ್ ಅನ್ನು ಏರ್ಪಡಿಸಬಹುದೆಂಬ ಭರವಸೆಯನ್ನು ಪಾಕ್ ಮಂಡಳಿ ಹೊಂದಿದೆ. ಆದರೆ ಇದು ಕೂಡ ಕಡಿಮೆ ಸಾಧ್ಯತೆ ಎಂದು ಮೂಲಗಳು ಹೇಳಿವೆ. ಹೀಗಾಗಿ ಪಿಸಿಬಿ ಸರಣಿಯಿಂದ ಡಿಆರ್​ಎಸ್ ಅನ್ನು ತೆಗೆದುಹಾಕಿದೆ.

ಸರಣಿ ವೇಳಾಪಟ್ಟಿ ಹೀಗಿದೆ
ನ್ಯೂಜಿಲೆಂಡ್ ಏಕದಿನ ಸರಣಿಯೊಂದಿಗೆ ಪಾಕಿಸ್ತಾನ ಪ್ರವಾಸ ಆರಂಭಿಸಲಿದೆ. ಈ ಸರಣಿಯ ಮೊದಲ ಪಂದ್ಯವು ಸೆಪ್ಟೆಂಬರ್ 17 ರಂದು ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡನೇ ಪಂದ್ಯವು ಇದೇ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 19 ರಂದು ನಡೆಯಲಿದೆ. ಸೆಪ್ಟೆಂಬರ್ 21 ರಂದು, ಈ ಕ್ರೀಡಾಂಗಣದಲ್ಲಿ ಮೂರನೇ ಪಂದ್ಯ ನಡೆಯಲಿದೆ. ಇದರ ನಂತರ ಟಿ 20 ಸರಣಿಯನ್ನು ಆಯೋಜಿಸಲಾಗುವುದು. ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 25 ರಂದು ಮೊದಲ ಟಿ 20 ಪಂದ್ಯ ನಡೆಯಲಿದೆ. ಎರಡನೇ ಟಿ 20 ಪಂದ್ಯ ಸೆಪ್ಟೆಂಬರ್ 26 ರಂದು ನಡೆಯಲಿದೆ. ಮೂರನೇ ಟಿ 20 ಸೆಪ್ಟೆಂಬರ್ 29 ರಂದು ನಡೆಯಲಿದೆ. ಅಕ್ಟೋಬರ್ 1 ರಂದು ನಾಲ್ಕನೇ ಟಿ 20 ಪಂದ್ಯ ಮತ್ತು ಅಕ್ಟೋಬರ್ 3 ರಂದು ಐದನೇ ಟಿ 20 ಪಂದ್ಯ ನಡೆಯಲಿದೆ.