IND vs ENG: ಭಾರತ- ಇಂಗ್ಲೆಂಡ್ ಅಂತಿಮ ಟೆಸ್ಟ್​ ರದ್ದು; ಇಸಿಬಿ ಖಜಾನೆಗೆ ಬಿತ್ತು ಭಾರಿ ಮೊತ್ತದ ಬರೆ!

TV9kannada Web Team

TV9kannada Web Team | Edited By: pruthvi Shankar

Updated on: Sep 10, 2021 | 7:59 PM

IND vs ENG: ಇದು ಏಳು-ಅಂಕಿಗಳ ಬಹು-ಮಿಲಿಯನ್ ಪೌಂಡ್ ಒಪ್ಪಂದವಾಗಿತ್ತು. ಈಗ ನಾವು ನಷ್ಟವನ್ನು ಸರಿದೂಗಿಸುವುದರ ಮೇಲೆ ಕೆಲಸ ಮಾಡಬೇಕು ಎಂದಿದ್ದಾರೆ.

IND vs ENG: ಭಾರತ- ಇಂಗ್ಲೆಂಡ್ ಅಂತಿಮ ಟೆಸ್ಟ್​ ರದ್ದು; ಇಸಿಬಿ ಖಜಾನೆಗೆ ಬಿತ್ತು ಭಾರಿ ಮೊತ್ತದ ಬರೆ!
ಮ್ಯಾಂಚೆಸ್ಟರ್ ಟೆಸ್ಟ್

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ಇಂದಿನಿಂದ ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್​ನಲ್ಲಿ ಆರಂಭವಾಗಬೇಕಿತ್ತು. ಆದರೆ ಟೀಂ ಇಂಡಿಯಾದಲ್ಲಿ ಕೋವಿಡ್ ಪ್ರಕರಣಗಳಿಂದಾಗಿ ಅದನ್ನು ರದ್ದುಗೊಳಿಸಲಾಗಿದೆ. ತಂಡದ ಎರಡನೇ ಫಿಸಿಯೋ ಯೋಗೇಶ್ ಪರ್ಮಾರ್ ಅವರ ಕೋವಿಡ್ ಫಲಿತಾಂಶವು ಪಾಸಿಟಿವ್ ಬಂದಿದೆ. ಆದ್ದರಿಂದ ತಂಡದ ಆಟಗಾರರು ಮೈದಾನಕ್ಕಿಳಿಯಲು ನಿರಾಕರಿಸಿದರು. ಇಡೀ ಕ್ರಿಕೆಟ್ ಜಗತ್ತು ಇದರಿಂದ ನಿರಾಶೆಗೊಂಡಿದೆ ಏಕೆಂದರೆ ಈ ಪಂದ್ಯದಿಂದ ಸರಣಿಯನ್ನು ನಿರ್ಧರಿಸಲಾಗುತ್ತಿತ್ತು. ಇದೆಲ್ಲವೂಗಳ ಜೊತೆಗೆ ಪಂದ್ಯವನ್ನು ರದ್ದುಗೊಳಿಸುವುದರಿಂದ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಮೇಲೆ ಆರ್ಥಿಕ ಪರಿಣಾಮ ಬೀರುತ್ತದೆ ಮತ್ತು ಲಂಕಶೈರ್ ಕೌಂಟಿ ಕ್ಲಬ್‌ಗೂ ಸಂಕಷ್ಟ ಎದುರಾಗಿದೆ. ಲಂಕ್ಶೈರ್ ಕೌಂಟಿ ಕ್ರಿಕೆಟ್ ಕ್ಲಬ್ ಸಿಇಒ ಡೇನಿಯಲ್ ಗಿಡ್ನಿ ಶುಕ್ರವಾರ ಇದು ಆರ್ಥಿಕ ಪರಿಣಾಮಗಳ ಬಗ್ಗೆ ಮಾತನಾಡಿದರು.

ಭಾರತ ತಂಡದ ಫಿಸಿಯೊ ಯೋಗೀಶ್ ಪರ್ಮಾರ್ ಗುರುವಾರ ಕೊರೊನಾ ಪಾಸಿಟಿವ್ ಎಂದು ಕಂಡುಬಂದ ನಂತರ ಪಂದ್ಯ ಆರಂಭಕ್ಕೆ ಕೆಲವು ಗಂಟೆಗಳ ಮೊದಲು ಕೊನೆಯ ಟೆಸ್ಟ್ ಅನ್ನು ರದ್ದುಗೊಳಿಸಲಾಯಿತು. ಈ ಬಗ್ಗೆ ಮಾತನಾಡಿದ ಗಿಡ್ನಿ, ಇದು ಖಂಡಿತವಾಗಿಯೂ ಗಂಭೀರವಾದ ಆರ್ಥಿಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಓಲ್ಡ್ ಟ್ರಾಫರ್ಡ್ ನೂರು ವರ್ಷಗಳಿಂದ ಟೆಸ್ಟ್ ಕ್ರಿಕೆಟ್ ಅನ್ನು ಆಯೋಜಿಸುತ್ತಿರುವುದರಿಂದ ವಿಶ್ವಾಸಾರ್ಹತೆಯ ಮೇಲೆ ಪರಿಣಾಮ ಬೀಳಲಿದೆ. ಇದರಿಂದ ನಮಗೆ ದುಃಖ ಮತ್ತು ನಿರಾಶೆಯಾಗಿದೆ.

ತಾಜಾ ಸುದ್ದಿ

ಟಿಕೆಟ್ ಹಣವನ್ನು ಹಿಂತಿರುಗಿಸಲಾಗುತ್ತದೆ ಈ ಪಂದ್ಯಕ್ಕಾಗಿ ಟಿಕೆಟ್ ಖರೀದಿಸಿದವರಿಗೆ ಅವರ ಹಣವನ್ನು ಹಿಂತಿರುಗಿಸಲಾಗುವುದು ಎಂದು ಗಿಡ್ನಿ ಹೇಳಿದ್ದಾರೆ. ನನ್ನ ಸಿಬ್ಬಂದಿ, ಪೂರೈಕೆದಾರರು, ಷೇರುದಾರರು, ಪಾಲುದಾರರು ಮತ್ತು ಪ್ರಾಯೋಜಕರು ಹಾಗೂ ಪ್ರೇಕ್ಷಕರ ಬಗ್ಗೆ ನನಗೆ ಕರುಣೆ ಇದೆ. ಅವರು ಕೊರೊನಾ ಸಾಂಕ್ರಾಮಿಕದ ನಡುವೆ ಟಿಕೆಟ್ಗಳಿಗಾಗಿ ಹಣವನ್ನು ಖರ್ಚು ಮಾಡಿದರು ಮತ್ತು ಪಂದ್ಯವನ್ನು ವೀಕ್ಷಿಸಲು ಬಯಸಿದ್ದರು. ಲಂಕಶೈರ್ ಕ್ರಿಕೆಟ್ ಕ್ಲಬ್ ಪರವಾಗಿ ನಾನು ಅವರಲ್ಲಿ ಕ್ಷಮೆಯಾಚಿಸುತ್ತೇನೆ. ಎಲ್ಲಾ ಪ್ರೇಕ್ಷಕರು ಟಿಕೆಟ್ ಹಣವನ್ನು ಮರಳಿ ಪಡೆಯುತ್ತಾರೆ. ನಾವು ಈ ಬಗ್ಗೆ ಇಸಿಬಿಯೊಂದಿಗೆ ಮಾತನಾಡುತ್ತಿದ್ದೇವೆ ಎಂದಿದ್ದಾರೆ.

ತುಂಬಾ ನಷ್ಟ ಅದೇ ಸಮಯದಲ್ಲಿ, ಆಂಗ್ಲ ಪತ್ರಿಕೆ ಟೆಲಿಗ್ರಾಫ್ ಗಿಡ್ನಿಯವರನ್ನು ಉಲ್ಲೇಖಿಸಿ, ಈ ಕ್ಲಬ್ ದೊಡ್ಡ ನಷ್ಟವನ್ನು ಅನುಭವಿಸಿದೆ, ಅದಕ್ಕೆ ಸಹಾಯದ ಅಗತ್ಯವಿದೆ. ಇದು ಏಳು-ಅಂಕಿಗಳ ಬಹು-ಮಿಲಿಯನ್ ಪೌಂಡ್ ಒಪ್ಪಂದವಾಗಿತ್ತು. ಈಗ ನಾವು ನಷ್ಟವನ್ನು ಸರಿದೂಗಿಸುವುದರ ಮೇಲೆ ಕೆಲಸ ಮಾಡಬೇಕು ಎಂದಿದ್ದಾರೆ.

ಇಸಿಬಿ ಸಿಇಒ ಹೇಳಿದ್ದಿದು ಒಂದು ವೇಳೆ ಭಾರತ ಈ ಪಂದ್ಯವನ್ನು ಸೋತಿದ್ದರೆ, ಇಸಿಬಿಯು ಅದಕ್ಕೆ ವಿಮೆಯನ್ನು ಹೊಂದಿತ್ತು. ಇದರ ಹೊರತಾಗಿ, ರಾಜಕಾರಣಿ ಅಥವಾ ಭಯೋತ್ಪಾದಕ ದಾಳಿಯಿಂದಾಗಿ ಈ ಪಂದ್ಯವನ್ನು ರದ್ದುಗೊಳಿಸಿದರೆ, ಅದನ್ನು ಇಸಿಬಿಯೊಂದಿಗೆ ವಿಮೆ ಮಾಡಲಾಗಿತ್ತು. ಆದರೆ ಕೋವಿಡ್‌ನಿಂದ ಪಂದ್ಯವನ್ನು ರದ್ದುಗೊಳಿಸಲು ಇಸಿಬಿಗೆ ವಿಮೆ ಇರಲಿಲ್ಲ, ಇದು ಬಹಳಷ್ಟು ನಷ್ಟವನ್ನು ಉಂಟುಮಾಡುತ್ತದೆ. ಇಸಿಬಿಯ ಸಿಇಒ ಟಾಮ್ ಹ್ಯಾರಿಸನ್ ರನ್ನು ಉಲ್ಲೇಖಿಸಿದ ಟೆಲಿಗ್ರಾಫ್, ನಾವು ವಿವಿಧ ರೀತಿಯ ವಿಮೆಯನ್ನು ಹೊಂದಿದ್ದೇವೆ ಮತ್ತು ಇದು ಕಠಿಣ ಪರಿಸ್ಥಿತಿಯಾಗಿದೆ. ಜೊತೆಗೆ ಹಣಕಾಸಿನ ಪರಿಣಾಮಗಳನ್ನು ಹೊಂದಿದೆ, ಆದರೆ ನಾವು ಅದನ್ನು ಸರಿದೂಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada