ವಿಶ್ವದ ನಂ.1 ಟೆಸ್ಟ್ ಆಲ್ ರೌಂಡರ್ ವೆಸ್ಟ್ ಇಂಡೀಸ್ನ ಜೇಸನ್ ಹೋಲ್ಡರ್ ಸಾರ್ವಕಾಲಿಕ ಟೆಸ್ಟ್ ಇಲೆವೆನ್ ಅನ್ನು ಪ್ರಕಟಿಸಿದ್ದಾರೆ. ನ್ಯೂಸ್ 9 ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಹೋಲ್ಡರ್, ತಮ್ಮ ಆಲ್ಟೈಮ್ ಟೆಸ್ಟ್ ಇಲೆವೆನ್ ಅನ್ನು ಹೆಸರಿಸಿದರು. ಈ ಪೈಕಿ ಭಾರತದ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂಬುದು ವಿಶೇಷ. ಇದಾಗ್ಯೂ ವೀರೇಂದ್ರ ಸೆಹ್ವಾಗ್ ಅವರಿಗೆ ತಂಡದಲ್ಲಿ ಸ್ಥಾನ ನೀಡಿ ಅಚ್ಚರಿ ಮೂಡಿಸಿದ್ದಾರೆ. ಇಲ್ಲಿ ರಾಹುಲ್ ದ್ರಾವಿಡ್ ಹಾಗೂ ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್ನ ಸರ್ವ ಶ್ರೇಷ್ಠ ಆಟಗಾರರು ಎನಿಸಿಕೊಂಡರೂ, ಅವರನ್ನು ಜೇಸನ್ ಹೋಲ್ಡರ್ ಕೈಬಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ.
ತಮ್ಮ ಆಲ್ಟೈಮ್ ಟೆಸ್ಟ್ ಇಲೆವೆನ್ನಲ್ಲಿ ವೀರೇಂದ್ರ ಸೆಹ್ವಾಗ್ ಮತ್ತು ಕ್ರಿಸ್ ಗೇಲ್ ಅವರನ್ನು ಆರಂಭಿಕರಾಗಿ ಆಯ್ಕೆ ಮಾಡಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ರಿಕಿ ಪಾಂಟಿಂಗ್, ಬ್ರಿಯಾನ್ ಲಾರಾ, ವಿವ್ ರಿಚರ್ಡ್ಸ್ ಮತ್ತು ಸರ್ ಗಾರ್ಫೀಲ್ಡ್ ಸೋಬರ್ಸ್ ಅವರನ್ನು ಆರಿಸಿದ್ದಾರೆ. ಅದೇ ರೀತಿ ವಿಕೆಟ್ ಕೀಪರ್ ಆಗಿ ಆ್ಯಡಂ ಗಿಲ್‌ಕ್ರಿಸ್ಟ್ ವಿಕೆಟ್ ತಂಡದಲ್ಲಿದ್ದಾರೆ. ಇನ್ನು ತಂಡದಲ್ಲಿರುವ ಏಕೈಕ ಸ್ಪಿನ್ನರ್ ಎಂದರೆ ಶೇನ್ ವಾರ್ನ್.
ಅದೇ ರೀತಿ ವೇಗಿಗಳಾಗಿ ಮೂವರನ್ನು ಆಯ್ಕೆ ಮಾಡಿದ್ದಾರೆ. ಅದರಂತೆ ಜೇಸನ್ ಹೋಲ್ಡರ್ ಅವರ ಸಾರ್ವಕಾಲಿಕ ಟೆಸ್ಟ್ ಇಲೆವೆನ್ನಲ್ಲಿ ಕರ್ಟ್ಲಿ ಆಂಬ್ರೋಸ್, ಮಾಲ್ಕಮ್ ಮಾರ್ಷಲ್ ಮತ್ತು ವಾಸಿಮ್ ಅಕ್ರಮ್ ಸ್ಥಾನ ಪಡೆದಿದ್ದಾರೆ. ಇದರ ಹೊರತಾಗಿ ಗ್ಲೆನ್ ಮೆಕ್‌ಗ್ರಾತ್, ಕುಮಾರ್ ಸಂಗಕ್ಕಾರ, ಜಾಕ್ ಕಾಲಿಸ್, ಡೇಲ್ ಸ್ಟೇನ್ ಮತ್ತು ಮುತ್ತಯ್ಯ ಮುರಳೀಧರನ್ ಅವರನ್ನೂ ಕೂಡ ಜೇಸನ್ ಹೋಲ್ಡರ್ ವಿಶೇಷವಾಗಿ ಉಲ್ಲೇಖಿಸಿದ್ದಾರೆ. ಇದಾಗ್ಯೂ ಟೆಸ್ಟ್ ಕ್ರಿಕೆಟ್ನ ಗೋಡೆ ಎಂದೇ ಖ್ಯಾತರಾಗಿರುವ ರಾಹುಲ್ ದ್ರಾವಿಡ್ ಅವರನ್ನು ಆಯ್ಕೆ ಮಾಡದೇ ಜೇಸನ್ ಹೋಲ್ಡರ್ ಅಚ್ಚರಿ ಮೂಡಿಸಿದ್ದಾರೆ.
ಜೇಸನ್ ಹೋಲ್ಡರ್ ಸಾರ್ವಕಾಲಿಕ ಟೆಸ್ಟ್ XI ಹೀಗಿದೆ: ಕ್ರಿಸ್ ಗೇಲ್, ವೀರೇಂದ್ರ ಸೆಹ್ವಾಗ್, ರಿಕಿ ಪಾಂಟಿಂಗ್, ಬ್ರಿಯಾನ್ ಲಾರಾ, ವಿವ್ ರಿಚರ್ಡ್ಸ್, ಗಾರ್ಫೀಲ್ಡ್ ಸೋಬರ್ಸ್, ಆ್ಯಡಂ ಗಿಲ್‌ಕ್ರಿಸ್ಟ್ (ವಿಕೆಟ್ ಕೀಪರ್), ಶೇನ್ ವಾರ್ನ್, ಕರ್ಟ್ಲಿ ಆಂಬ್ರೋಸ್, ಮಾಲ್ಕಮ್ ಮಾರ್ಷಲ್, ವಾಸಿಮ್ ಅಕ್ರಮ್.
ಇದನ್ನೂ ಓದಿ: Syed Mushtaq Ali Trophy 2021: ರೋಚಕ ಜಯದೊಂದಿಗೆ ಫೈನಲ್ಗೆ ಲಗ್ಗೆಯಿಟ್ಟ ಕರ್ನಾಟಕ
ಇದನ್ನೂ ಓದಿ: Rohit Sharma: ಶಾಹಿದ್ ಅಫ್ರಿದಿ ವಿಶ್ವ ದಾಖಲೆ ಮುರಿದ ಹಿಟ್ಮ್ಯಾನ್ ರೋಹಿತ್ ಶರ್ಮಾ