Hardik Pandya: ಸಚಿನ್, ಸೆಹ್ವಾಗ್, ಧೋನಿ ಅಲ್ಲ: ಪಾಂಡ್ಯರ ನೆಚ್ಚಿನ ಕ್ರಿಕೆಟಿಗ ಯಾರು ಗೊತ್ತಾ?

| Updated By: ಝಾಹಿರ್ ಯೂಸುಫ್

Updated on: Jun 08, 2022 | 12:07 PM

Hardik Pandya: ಈ ಬಾರಿಯ ಐಪಿಎಲ್​ ಮೂಲಕ ಹಾರ್ದಿಕ್ ಪಾಂಡ್ಯ ಕೂಡ ಭರ್ಜರಿ ಫಾರ್ಮ್​ ಪ್ರದರ್ಶಿಸಿರುವುದು ವಿಶೇಷ. 17 ಪಂದ್ಯಗಳನ್ನಾಡಿದ್ದ ಪಾಂಡ್ಯ ಒಟ್ಟು 487 ರನ್​ ಕಲೆಹಾಕಿದ್ದರು.

Hardik Pandya: ಸಚಿನ್, ಸೆಹ್ವಾಗ್, ಧೋನಿ ಅಲ್ಲ: ಪಾಂಡ್ಯರ ನೆಚ್ಚಿನ ಕ್ರಿಕೆಟಿಗ ಯಾರು ಗೊತ್ತಾ?
Hardik Pandya
Follow us on

ಐಪಿಎಲ್ ಸೀಸನ್ 15 ರಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ತಂಡದ ನಾಯಕನಾಗಿ ಪದಾರ್ಪಣೆ ಮಾಡಿದ್ದ ಹಾರ್ದಿಕ್ ಪಾಂಡ್ಯ (Hardik Pandya) ಚೊಚ್ಚಲ ಸೀಸನ್​ನಲ್ಲೇ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಅಷ್ಟೇ ಅಲ್ಲದೆ ಭರ್ಜರಿ ಪ್ರದರ್ಶನ ನೀಡುವ ಮೂಲಕ ಟಿ20 ವಿಶ್ವಕಪ್​ ಬಳಿಕ ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಇದೀಗ ಸೌತ್ ಆಫ್ರಿಕಾ ವಿರುದ್ದದ ಸರಣಿಗೆ ಸಜ್ಜಾಗಿರುವ ಪಾಂಡ್ಯ ಸಂದರ್ಶನವೊಂದರಲ್ಲಿ ತಮ್ಮ ನೆಚ್ಚಿನ ಕ್ರಿಕೆಟಿಗ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಹಾರ್ದಿಕ್ ಪಾಂಡ್ಯ, ‘ನನಗೆ ಜಾಕ್ವೆಸ್ ಕಾಲಿಸ್, ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಇಷ್ಟ. ಹೀಗೆ ಅನೇಕ ಶ್ರೇಷ್ಠ ಕ್ರಿಕೆಟಿಗರಿದ್ದಾರೆ. ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಕಷ್ಟ. ನಿಜವಾಗಿ ನನ್ನ ನೆಚ್ಚಿನ ಕ್ರಿಕೆಟಿಗ ಎಂದರೆ ವಾಸಿಂ ಜಾಫರ್. ಅವರು ಬ್ಯಾಟ್ ಮಾಡುವುದನ್ನು ನೋಡುವುದೇ ನನಗೆ ಖುಷಿ. ನಾನು ಅವರನ್ನು ಯಾವಾಗಲೂ ಇತರ ಶ್ರೇಷ್ಠ ಆಟಗಾರರಿಗಿಂತ ಮೇಲಿರಿಸಿದ್ದೇನೆ. ನಾನು ಅವರ ಬ್ಯಾಟಿಂಗ್ ನಕಲು ಮಾಡುತ್ತಿದ್ದೆ. ಆದರೆ ಅವರಂತೆ ಬ್ಯಾಟಿಂಗ್ ಮಾಡಲು ನನಗೆ ಸಾಧ್ಯವಾಗಿಲ್ಲ ಎಂದು ಪಾಂಡ್ಯ ತಿಳಿಸಿದ್ದಾರೆ.

ಈ ಮೂಲಕ ತಮ್ಮ ನೆಚ್ಚಿನ ಆಟಗಾರ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಎಂಬುದನ್ನು ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ​. ಈ ಹಿಂದೆ ಟೀಮ್ ಇಂಡಿಯಾ ಪರ ಟೆಸ್ಟ್​ ಕ್ರಿಕೆಟ್​ನಲ್ಲಿ ಖಾಯಂ ಸ್ಥಾನ ಅಲಂಕರಿಸಿದ್ದ ಜಾಫರ್​ ಅವರನ್ನು ದೇಶೀಯ ಕ್ರಿಕೆಟ್​ನ ಸಚಿನ್ ತೆಂಡೂಲ್ಕರ್ ಎಂದು ವರ್ಣಿಸಲಾಗುತ್ತದೆ. ಇದಕ್ಕೆ ಕಾರಣ ವಾಸಿಂ ಜಾಫರ್​ ಅವರ ದಾಖಲೆಗಳು.

ಇದನ್ನೂ ಓದಿ
India vs South Africa T20: ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿ ವೇಳಾಪಟ್ಟಿ ಪ್ರಕಟ
Ashish Nehra: ಎಳನೀರು, ಪೆನ್ನು ಪೇಪರ್​ನಲ್ಲೇ 9 ತಂಡಗಳನ್ನ ಮುಗಿಸಿಬಿಟ್ರು..!
IPL 2022: RCB ತಂಡಕ್ಕೆ ಸಿಡಿಲಮರಿ ABD ರಿ-ಎಂಟ್ರಿ​..!
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಮೆರೆದಿರುವ ವಾಸಿಂ ಜಾಫರ್​, ದೇಶೀಯ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಎಂಬ ಗುರುತಿಸಿಕೊಂಡಿದ್ದಾರೆ. 260 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿರುವ ಅವರು ಒಟ್ಟು 19,410 ರನ್ ಗಳಿಸಿದ್ದಾರೆ. ಇಷ್ಟೇ ಅಲ್ಲದೆ, ವಾಸಿಂ ಜಾಫರ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 31 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರು 2000 ರಿಂದ 2008 ರವರೆಗೆ ಭಾರತ ತಂಡದ ಭಾಗವಾಗಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಹೆಸರಿನಲ್ಲಿ 1944 ರನ್‌ಗಳಿವೆ. ಟೆಸ್ಟ್​ ಕ್ರಿಕೆಟ್​ನಲ್ಲಿ 5 ಶತಕಗಳು ಮತ್ತು 11 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಇದಲ್ಲದೇ ಭಾರತ ಪರ 2 ಏಕದಿನ ಪಂದ್ಯಗಳನ್ನೂ ಆಡಿದ್ದಾರೆ. ಹೀಗೆ ದೇಶೀಯ ಅಂಗಳದಲ್ಲಿ 19 ಸಾವಿರಕ್ಕೂ ಅಧಿಕ ರನ್​ ಕಲೆಹಾಕಿರುವ ವಾಸಿಂ ಜಾಫರ್​ ಅವರನ್ನು ನಾನು ಇತರ ಶ್ರೇಷ್ಠ ಆಟಗಾರರಿಗಿಂತ ಮೇಲಿರಿಸಿದ್ದೇನೆ ಎಂದು ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ.

ಈ ಬಾರಿಯ ಐಪಿಎಲ್​ ಮೂಲಕ ಹಾರ್ದಿಕ್ ಪಾಂಡ್ಯ ಕೂಡ ಭರ್ಜರಿ ಫಾರ್ಮ್​ ಪ್ರದರ್ಶಿಸಿರುವುದು ವಿಶೇಷ. 17 ಪಂದ್ಯಗಳನ್ನಾಡಿದ್ದ ಪಾಂಡ್ಯ ಒಟ್ಟು 487 ರನ್​ ಕಲೆಹಾಕಿದ್ದರು. ಅಷ್ಟೇ 8 ವಿಕೆಟ್ ಕಬಳಿಸುವ ಮೂಲಕ ಆಲ್​ರೌಂಡರ್ ಪ್ರದರ್ಶನವನ್ನೂ ಕೂಡ ನೀಡಿದ್ದರು. ಇನ್ನು ನಾಯಕನಾಗಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಪಾಂಡ್ಯ ಫೈನಲ್​ನಲ್ಲಿ 3 ವಿಕೆಟ್ ಮತ್ತು 34 ರನ್‌ಗಳಿಸುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ಈ ಭರ್ಜರಿ ಆಲ್​ರೌಂಡರ್​ ಪ್ರದರ್ಶನದ ಫಲವಾಗಿ ಇದೀಗ ಹಾರ್ದಿಕ್ ಪಾಂಡ್ಯಗೆ ಟೀಮ್ ಇಂಡಿಯಾದಲ್ಲಿ ಮತ್ತೆ ಚಾನ್ಸ್ ಸಿಕ್ಕಿದೆ.

 

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:07 pm, Wed, 8 June 22