ನನ್ನ ಮಗಳಿಗಾಗಿ ಎಲ್ಲರೂ ಪ್ರಾರ್ಥಿಸಿ: ಭಾವನಾತ್ಮಕ ಪೋಸ್ಟ್​ ಮೂಲಕ ಪಾಕ್​ ಕ್ರಿಕೆಟಿಗನ ಮನವಿ

ಮಗಳ ಚಿಕಿತ್ಸೆಯತ್ತ ಗಮನಹರಿಸಿರುವ ಆಸಿಫ್ ಅಫ್ರಿದಿ ಪಾಕಿಸ್ತಾನ್ ತಂಡದ ಭಾಗವಾಗಿಲ್ಲ. ಪಾಕ್ ತಂಡವು ವೆಸ್ಟ್ ಇಂಡೀಸ್ ವಿರುದ್ದ ಮೂರು ಪಂದ್ಯಗಳ ಏಕದಿನ ಸರಣಿ ಆಡುತ್ತಿದೆ.

ನನ್ನ ಮಗಳಿಗಾಗಿ ಎಲ್ಲರೂ ಪ್ರಾರ್ಥಿಸಿ: ಭಾವನಾತ್ಮಕ ಪೋಸ್ಟ್​ ಮೂಲಕ ಪಾಕ್​ ಕ್ರಿಕೆಟಿಗನ ಮನವಿ
Asif Afridi
TV9kannada Web Team

| Edited By: Zahir PY

Jun 08, 2022 | 2:23 PM

ಪಾಕಿಸ್ತಾನ ಕ್ರಿಕೆಟಿಗ ಆಸಿಫ್ ಅಫ್ರಿದಿ (Asif Afridi) ಅವರ ಮುಗ್ಧ ಮಗಳು ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಕೆಲ ದಿನಗಳ ಹಿಂದೆ ಈ ಸುದ್ದಿ ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಆಸಿಫ್ ಅಫ್ರಿದಿ ಮಗಳ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಎಲ್ಲರೂ ನನ್ನ ಮಗಳ ಗುಣಮುಖವಾಗಲು ಪ್ರಾರ್ಥಿಸಬೇಕೆಂದು ಮನವಿ ಮಾಡಿದ್ದಾರೆ. ಈ ಪೋಸ್ಟ್​ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಗಳು ಶೀಘ್ರ ಗುಣಮುಖರಾಗಲಿ ಎಂದು ವಿಶ್ವದೆಲ್ಲೆಡೆಯಿಂದ ಅನೇಕರು ಹಾರೈಸಿದ್ದಾರೆ.

ಬೌಲಿಂಗ್-ಆಲ್-ರೌಂಡರ್ ಆಗಿರುವ ಆಸಿಫ್ ಅಫ್ರಿದಿ ಪಾಕಿಸ್ತಾನ್ ಸೂಪರ್ ಲೀಗ್ 2022 ರಲ್ಲಿ ಮುಲ್ತಾನ್ ಸುಲ್ತಾನ್ ತಂಡದ ಭಾಗವಾಗಿದ್ದರು. ಆ ಸೀಸನ್​ನಲ್ಲಿ5 ಪಂದ್ಯಗಳಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದ ಆಸಿಫ್ 8 ವಿಕೆಟ್​ಗಳನ್ನು ಪಡೆದಿದ್ದರು. ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಅವರನ್ನು ಪಾಕಿಸ್ತಾನ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಪ್ಲೇಯಿಂಗ್ ಇಲೆವೆನ್​ನ ಭಾಗವಾಗಲು ಸಾಧ್ಯವಾಗಿರಲಿಲ್ಲ.

ಇದೀಗ ಆಸಿಫ್ ಅಫ್ರಿದಿ ಅವರು ತಮ್ಮ ಮಗಳು ಆಸ್ಪತ್ರೆಯಲ್ಲಿ ದಾಖಲಾಗಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಭಾವುಕರಾಗಿ ಟ್ವೀಟ್ ಮಾಡಿರುವ ಅವರು, ನನ್ನ ಮಗಳು ಶೀಘ್ರ ಗುಣಮುಖಳಾಗಲಿ ಎಂದು ನೀವೆಲ್ಲರೂ ಪ್ರಾರ್ಥಿಸಿ ಎಂದು ಮನವಿ ಮಾಡಿದ್ದಾರೆ. ಈ ಟ್ವೀಟ್​ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರಾದ ಉಮರ್ ಗುಲ್ ಮತ್ತು ಸಲ್ಮಾನ್ ಬಟ್ ಪ್ರತಿಕ್ರಿಯಿಸಿದ್ದು, ಈ ಇಬ್ಬರೂ ಮಾಜಿ ಪಾಕಿಸ್ತಾನಿ ಕ್ರಿಕೆಟಿಗರು ತಮ್ಮ ಮಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.

ಸದ್ಯ ಮಗಳ ಚಿಕಿತ್ಸೆಯತ್ತ ಗಮನಹರಿಸಿರುವ ಆಸಿಫ್ ಅಫ್ರಿದಿ ಪಾಕಿಸ್ತಾನ್ ತಂಡದ ಭಾಗವಾಗಿಲ್ಲ. ಪಾಕ್ ತಂಡವು ವೆಸ್ಟ್ ಇಂಡೀಸ್ ವಿರುದ್ದ ಮೂರು ಪಂದ್ಯಗಳ ಏಕದಿನ ಸರಣಿ ಆಡುತ್ತಿದೆ. ಈ ಸರಣಿಯ ಮೊದಲ ಪಂದ್ಯ ಜೂನ್ 8 ರಂದು ಮುಲ್ತಾನ್‌ನಲ್ಲಿ ನಡೆಯಲಿದೆ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada