NZ vs SL: ವಿಕೆಟ್ ಚದುರಿದರು ನಾಟೌಟ್ ನೀಡಿದ ಅಂಪೈರ್! ಅಚ್ಚರಿಗೊಂಡ ಬ್ಯಾಟರ್; ಕಾರಣವೇನು?

NZ vs SL: ಮೂರನೇ ಅಂಪೈರ್ ನೀಡಿದ ತೀರ್ಪಿನಿಂದ ಕಿವೀಸ್ ಆಟಗಾರರು ಗೊಂದಲಕ್ಕೊಳಗಾಗಬೇಕಾಯಿತು. ಅಷ್ಟೇ ಅಲ್ಲದೆ ಸ್ವತಃ ಶ್ರೀಲಂಕಾ ಆಟಗಾರನಿಗೂ ಇದು ಶಾಕ್ ನೀಡಿತು.

NZ vs SL: ವಿಕೆಟ್ ಚದುರಿದರು ನಾಟೌಟ್ ನೀಡಿದ ಅಂಪೈರ್! ಅಚ್ಚರಿಗೊಂಡ ಬ್ಯಾಟರ್; ಕಾರಣವೇನು?
ರನೌಟ್ ವಿವಾದ
Follow us
ಪೃಥ್ವಿಶಂಕರ
|

Updated on: Mar 25, 2023 | 4:55 PM

ತವರಿನಲ್ಲಿ ಟೆಸ್ಟ್ ಸರಣಿ ಗೆದ್ದ ನಂತರ ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ (New Zealand vs Sri Lanka) ನಡುವಿನ ಏಕದಿನ ಸರಣಿ ಆರಂಭವಾಗಿದೆ. ಇಂದು ಆಕ್ಲೆಂಡ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾವನ್ನು ಹೀನಾಯವಾಗಿ ಸೋಲಿಸಿರುವ ನ್ಯೂಜಿಲೆಂಡ್ (New Zealand beat Sri Lanka) ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಕಿವೀಸ್ ತಂಡ ನೀಡಿದ 275 ರನ್‌ಗಳ ಗುರಿಗೆ ಉತ್ತರವಾಗಿ ಶ್ರೀಲಂಕಾ ತಂಡ ಕೇವಲ 76 ರನ್‌ಗಳಿಗೆ ಆಲೌಟ್ ಆಗುವುದರೊಂದಿಗೆ 198 ರನ್​ಗಳ ಬೃಹತ್ ಅಂತರದ ಸೋಲು ಕಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 49.3 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 274 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ಕಿವೀಸ್ ದಾಳಿಗೆ ತತ್ತರಿಸಿ, ಕೇವಲ 19.5 ಓವರ್‌ಗಳಲ್ಲಿ 76 ರನ್‌ಗಳಿಗೆ ಆಲೌಟ್ ಆಯಿತು. ಆದರೆ ಈ ಪಂದ್ಯದಲ್ಲಿ ಉಭಯ ತಂಡಗಳ ಇನ್ನಿಂಗ್ಸ್​ನಲ್ಲಿ ನಡೆದ ಘಟನೆಯೊಂದು ಇದೀಗ ಹೊಸ ವಿವಾದವೊಂದನ್ನು ಹುಟ್ಟುಹಾಕಿದೆ.

ವಾಸ್ತವವಾಗಿ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಪರ ತಂಡದ ಆರಂಭಿಕ ಆಟಗಾರ ಫಿನ್ ಅಲೆನ್ ಅರ್ಧಶತಕದ ಇನ್ನಿಂಗ್ಸ್ ಆಡುವುದರೊಂದಿಗೆ ತಂಡಕ್ಕೆ ಉತ್ತಮ ಆರಂಭ ನೀಡಿದರು. ಆದರೆ ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳಬೇಕಾಗಿದ್ದ ಅಲೆನ್, ತಾಂತ್ರಿಕ ದೋಷದಿಂದಾಗಿ ಬದುಕುಳಿಯಬೇಕಾಯಿತು. ಅಷ್ಟಕ್ಕೂ ಅಲೆನ್ ಔಟಾಗದೆ ಬಚ್ಚಾವ್ ಆಗಲು ಪ್ರಮುಖ ಕಾರಣವೆಂದರೆ, ಬೆಲ್ಸ್ ನೆಲಕ್ಕುರುಳದಿರುವುದು. ಶ್ರೀಲಂಕಾ ವೇಗಿ ಎಸೆದ ಈ ಓವರ್​ನಲ್ಲಿ ಚೆಂಡು ವಿಕೆಟ್​ಗೆ ತಾಗಿತ್ತಾದರೂ ಬೆಲ್ಸ್ ಚದುರಲಿಲ್ಲ. ಹೀಗಾಗಿ ಅಲೆನ್ ಔಟಾಗುವುದರಿಂದ ಪಾರಾದರು.

Virat Kohli: ಕಿಂಗ್ ಕೊಹ್ಲಿ 18ನೇ ನಂಬರ್ ಜೆರ್ಸಿ ತೊಡುವುದ್ಯಾಕೆ? ಇದರ ಹಿಂದಿದೆ ನೋವಿನ ಕಥೆ

ರನೌಟ್ ಆದರು ಬದುಕುಳಿದ ಲಂಕಾ ಬ್ಯಾಟರ್

ಆ ಬಳಿಕ ಇಂತಹದ್ದೇ ಘಟನೆ ಲಂಕಾ ಇನ್ನಿಂಗ್ಸ್​ನಲ್ಲೂ ನಡೆಯಿತು. ಶ್ರೀಲಂಕಾ ಇನಿಂಗ್ಸ್‌ನ 18ನೇ ಓವರ್‌ನಲ್ಲಿ ಟಿಕ್ನರ್ ಅವರ ಲೆಂಗ್ತ್ ಎಸೆತವನ್ನು ಕರುಣಾರತ್ನೆ ಮಿಡ್-ವಿಕೆಟ್​ ಕಡೆಗೆ ಫ್ಲಿಕ್ ಮಾಡಿ ರನ್ ಕದಿಯಲು ಓಡಿದರು. ಮೊದಲನೇ ರನ್​ ಅನ್ನು ಆರಾಮಾಗಿ ಪೂರ್ಣಗೊಳಿಸಿದ ಕರುಣಾರತ್ನೆ ಎರಡನೇ ರನ್​ಗಾಗಿ ಓಡಲಾರಂಭಿಸಿದರು. ಅಷ್ಟರಲ್ಲಿ ಚೆಂಡನ್ನು ಹಿಡಿದ ಕಿವೀಸ್ ಫೀಲ್ಡರ್, ಬೌಲರ್ ಟಿಕ್ನರ್​ ಕಡೆಗೆ ಎಸೆದರು. ಕೂಡಲೇ ಚೆಂಡನ್ನು ಹಿಡಿದ ಟಿಕ್ನರ್ ರನೌಟ್ ಮಾಡಿದರು. ಆದರೆ ಔಟ್ ನಿರ್ಧಾರದ ಬಗ್ಗೆ ಸ್ಪಷ್ಟತೆ ಸಿಗದ ಫೀಲ್ಡ್ ಅಂಪೈರ್ ಮೂರನೇ ಅಂಪೈರ್​ಗೆ ಮೇಲ್ಮನವಿ ಸಲ್ಲಿಸಿದರು. ಟಿಕ್ನರ್ ಚೆಂಡನ್ನು ವಿಕೆಟ್​ಗೆ ತಾಗಿಸಿದಾಗ ಲಂಕಾ ಬ್ಯಾಟರ್ ಕ್ರೀಸ್​ನಿಂದ ದೂರವಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆದರೆ ಮೂರನೇ ಅಂಪೈರ್ ಇದನ್ನು ನಾಟೌಟ್ ಎಂದು ತೀರ್ಪು ನೀಡಿದರು.

ಮೂರನೇ ಅಂಪೈರ್ ನೀಡಿದ ತೀರ್ಪಿನಿಂದ ಕಿವೀಸ್ ಆಟಗಾರರು ಗೊಂದಲಕ್ಕೊಳಗಾಗಬೇಕಾಯಿತು. ಅಷ್ಟೇ ಅಲ್ಲದೆ ಸ್ವತಃ ಶ್ರೀಲಂಕಾ ಆಟಗಾರನಿಗೂ ಇದು ಶಾಕ್ ನೀಡಿತು. ಕಿವೀಸ್ ಆಟಗಾರರು ಕೂಡಲೇ ಫೀಲ್ಡ್ ಅಂಪೈರ್ ಬಳಿ ಈ ಬಗ್ಗೆ ಪ್ರಶ್ನಿಸಿದಾಗ ಗೊತ್ತಾಗಿದ್ದೇನೆಂದರೆ, ಟಿಕ್ನರ್ ಚೆಂಡನ್ನು ವಿಕೆಟ್​ ತಾಗಿಸಿದಾಗ ಬೆಲ್ಸ್​ನಲ್ಲಿ ತಕ್ಷಣವೇ ಲೈಟ್ಸ್ ಹೊತ್ತಿಕೊಂಡಿಲ್ಲ. ಟಿಕ್ನರ್ ಚೆಂಡನ್ನು ಬೆಲ್ಸ್​ಗೆ ತಾಗಿಸಿದಾಗ ಲಂಕಾ ಬ್ಯಾಟರ್ ಕ್ರೀಸ್​ನಿಂದ ದೂರವಿದ್ದರು. ಆದರೆ ಬೆಲ್ಸ್​ನಲ್ಲಿ ಲೈಟ್ಸ್ ಆನ್​ ಆಗುವುದು ಕೊಂಚ ತಡವಾಗಿದೆ. ಅಷ್ಟರಲ್ಲಿ ಲಂಕಾ ಬ್ಯಾಟರ್ ಕ್ರೀಸ್​ ಒಳಗೆ ಬರುವುದರಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಮೂರನೇ ಅಂಪೈರ್ ಇದನ್ನು ನಾಟೌಟ್ ಎಂದು ತೀರ್ಪು ನೀಡಿದ್ದಾರೆ.

ಇಂತಹ ರನೌಟ್ ಪ್ರಕರಣ ಮಾತ್ರ ತೀರ ಅಪರೂಪ

ಕ್ರಿಕೆಟ್​ನಲ್ಲಿ ರನೌಟ್ ಸಂದರ್ಭಗಳಲ್ಲಿ ಮೂರನೇ ಅಂಪೈರ್ ಸ್ಪಷ್ಟ ತೀರ್ಮಾನಕ್ಕೆ ಬರಲು ಈ ಎಲ್ಇಡಿ ಬೆಲ್ಸ್​ಗಳನ್ನು ಬಳಸಲಾಗುತ್ತದೆ. ಆದರೆ ಚೆಂಡು ವಿಕೆಟ್‌ಗೆ ಹೊಡೆದಾಗ ಬೆಲ್ಸ್​ನಲ್ಲಿ ದೀಪ ಬೆಳಗುವುದರೊಂದಿಗೆ ಬೆಲ್ಸ್​ಗಳು ಕೂಡ ನೆಲಕ್ಕೆ ಬೀಳಬೇಕಾಗುತ್ತದೆ. ಒಮ್ಮೊಮ್ಮೆ ಚೆಂಡು ವಿಕೆಟ್​ಗೆ ತಾಗದಿದ್ದರೂ, ಬೆಲ್ಸ್​ನಲ್ಲಿ ಲೈಟ್ಸ್ ಹತ್ತಿಕೊಳ್ಳುವುದನ್ನು ನಾವು ನೋಡಿದ್ದೇವೆ. ಅಲ್ಲದೆ ಸಾಕಷ್ಟು ಪ್ರಕರಣಗಳಲ್ಲಿ, ಲೈಟ್ ಆನ್ ಆಗಿದ್ದರೂ ಬೆಲ್ಸ್ ನೆಲಕ್ಕೆ ಬೀಳದ ಕಾರಣ ಅಂಪೈರ್ ಔಟ್ ನೀಡದಿರುವುದನ್ನು ನಾವು ನೋಡಿದ್ದೇವೆ. ಆದರೆ ಚಾಮಿಕಾ ಕರುಣರತ್ನೆ ರನೌಟ್ ಪ್ರಕರಣ ಮಾತ್ರ ತೀರ ಅಪರೂಪವಾಗಿದ್ದು, ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ