ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ (ODI World Cup 2023) ಎಲ್ಲಾ ತಂಡಗಳು ಆಗಮಿಸಲಾರಂಭಿಸಿವೆ. ಹಾಲಿ ವಿಜೇತ ಇಂಗ್ಲೆಂಡ್ ಕೂಡ ಗುರುವಾರ ಭಾರತಕ್ಕೆ ಬಂದಿಳಿದಿದ್ದು, ಈ ತಂಡವು ಶನಿವಾರ ಗುವಾಹಟಿಯಲ್ಲಿ ಭಾರತದ ವಿರುದ್ಧ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಆಡಬೇಕಾಗಿದೆ. ಹೀಗಾಗಿ ಈ ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡ ಗುವಾಹಟಿ ತಲುಪಿದೆ. ಇಂಗ್ಲೆಂಡ್ ತಂಡ (England Cricket Team) ಹಾಲಿ ಚಾಂಪಿಯನ್ ಆಗಿರುವ ಕಾರಣ ಈ ವಿಶ್ವಕಪ್‌ನ ಆರಂಭಿಕ ಪಂದ್ಯವನ್ನು ಆಡಬೇಕಾಗಿದೆ. ಅಕ್ಟೋಬರ್ 5 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲ್ಲಿರುವ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಕಳೆದ ಬಾರಿಯ ರನ್ನರ್ ಅಪ್ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಆದರೆ ಅದಕ್ಕೂ ಮುನ್ನ ಇಂಗ್ಲೆಂಡ್ ಆಟಗಾರರ ಸಹನೆಯ ಕಟ್ಟೆ ಹೊಡೆದಿದ್ದು, ಭಾರತಕ್ಕೆ ಕಾಲಿಡುತ್ತಿದ್ದಂತೆ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋ (Jonny Bairstow) ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ವಾಸ್ತವವಾಗಿ ಇಂಗ್ಲೆಂಡ್‌ನ ಸ್ಟಾರ್ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್ ಅವರ ಅಸಮಾಧಾನಕ್ಕೆ ಭಾರತ ಯಾವ ರೀತಿಯಲ್ಲೂ ಕಾರಣವಾಗಿಲ್ಲ. ಬದಲಿಗೆ ಇಂಗ್ಲೆಂಡ್ನಿಂದ ಭಾರತಕ್ಕೆ ಬರುವ ಪ್ರಯಾಣವೇ ಇಂಗ್ಲೆಂಡ್ ಆಟಗಾರನ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ 38 ಗಂಟೆಗಳಿಗೂ ಸುದೀರ್ಘವಾದ ಈ ಪ್ರಯಾಣದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಬೈರ್‌ಸ್ಟೋವ್, ಇದು ತುಂಬಾ ಗೊಂದಲದ ಪ್ರಯಾಣ ಎಂದಿದ್ದಾರೆ. ಬೈರ್‌ಸ್ಟೋವ್ ತನ್ನ ಇನ್‌ಸ್ಟಾ ಸ್ಟೋರಿಯಲ್ಲಿ ವಿಮಾನದ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮಾರ್ಕ್ ವುಡ್ ಮತ್ತು ನಾಯಕ ಜೋಸ್ ಬಟ್ಲರ್ ಅವರನ್ನು ಕಾಣಬಹುದಾಗಿದೆ. ಈ ಫೋಟೋದ ಕೊನೆಯಲ್ಲಿ ಬೈರ್‌ಸ್ಟೋವ್, 38 ಗಂಟೆಗಳು ಕಳೆದಿವೆ. ಆದರೂ ಪ್ರಯಾಣ ಇನ್ನೂ ಬಾಕಿ ಉಳಿದಿದೆ ಎಂದು ಬರೆದುಕೊಂಡಿದ್ದಾರೆ.
Ashes 2023: ನಿರ್ಣಾಯಕ ಪಂದ್ಯದಲ್ಲೂ ಮುಗ್ಗರಿಸಿದ ಆಂಗ್ಲರು; ಮೊದಲ ದಿನ ಆಸೀಸ್ ಮೇಲುಗೈ
ಇದರಲ್ಲಿ ಅರ್ಥವಾಗುವುದೆನೆಂದರೆ ಬೈರ್‌ಸ್ಟೋವ್ ಅವರು ಸುದೀರ್ಘ ಪ್ರಯಾಣದ ಬಗ್ಗೆ ತುಂಬಾ ನಿರಾಶೆಗೊಂಡಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ . ಅದೇ ಸಮಯದಲ್ಲಿ ವಿಮಾನದಲ್ಲಿ ಕೆಲವು ಅಸಮರ್ಪಕ ನಿರ್ವಹಣೆಯು ಇಂಗ್ಲೆಂಡ್ ತಂಡಕ್ಕೆ ತೊಂದರೆ ಉಂಟುಮಾಡಿದೆ ಎಂದು ತೋರುತ್ತದೆ.
Jonny Bairstow’s Instagram story.
England team reached Guwahati in an economy class of a flight. pic.twitter.com/r3Uf3Klchz
— Mufaddal Vohra (@mufaddal_vohra) September 29, 2023
ಈ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಸಾಕಷ್ಟು ಪ್ರಯಾಣಿಸಬೇಕಾಗಬಹುದು. ಇಂಗ್ಲೆಂಡ್ ತಂಡ ತನ್ನ ಎಂಟು ಪಂದ್ಯಗಳನ್ನು ವಿವಿಧ ಮೈದಾನಗಳಲ್ಲಿ ಆಡಬೇಕಿದೆ. ಲಕ್ನೋ, ಧರ್ಮಶಾಲಾ, ದೆಹಲಿ, ಮುಂಬೈ, ಬೆಂಗಳೂರು, ಅಹಮದಾಬಾದ್, ಪುಣೆ ಮತ್ತು ಕೋಲ್ಕತ್ತಾದಲ್ಲಿ ಇಂಗ್ಲೆಂಡ್ ಪಂದ್ಯಗಳನ್ನು ಆಡಬೇಕಿದೆ. ಈ ಬಗ್ಗೆ ತಂಡದ ಕೋಚ್ ಮ್ಯಾಥ್ಯೂ ಮೋಟ್, ಆಟಗಾರರು ಇದಕ್ಕೆ ಹೇಗೆ ಹೊಂದಿಕೊಳ್ಳುತ್ತಾರೆ ಎಂಬುದು ನನಗೆ ತಿಳಿದಿಲ್ಲ ಎಂದು ಹೇಳಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ