ಟೀಂ ಇಂಡಿಯಾ ಈ 5 ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದಿದ್ದರೆ ವಿಶ್ವಕಪ್ ಗೆಲ್ಲುವುದು ಅಸಾಧ್ಯ..!

ODI World Cup 2023: ವಾಸ್ತವವಾಗಿ ಯಾವುದೇ ತಂಡ ಎಷ್ಟೇ ಬಲಿಷ್ಠವಾಗಿದ್ದರೂ ಅದರಲ್ಲಿ ಕೆಲವು ದೌರ್ಬಲ್ಯ ಖಂಡಿತ ಇರುತ್ತದೆ. ಇದಕ್ಕೆ ಟೀಂ ಇಂಡಿಯಾ ಕೂಡ ಹೊರತಾಗಿಲ್ಲ. ರೋಹಿತ್ ಪಡೆ ಪ್ರಮುಖವಾಗಿ ಈ ಐದು ದೌರ್ಬಲ್ಯಗಳನ್ನು ಸರಿಪಡಿಸಿಕೊಳ್ಳದಿದ್ದರೆ ವಿಶ್ವಕಪ್‌ ಗೆಲ್ಲುವುದು ಬಹಳ ಕಷ್ಟ ಎಂಬುದು ಪರಿಣಿತರ ಅಭಿಪ್ರಾಯವಾಗಿದೆ.

ಟೀಂ ಇಂಡಿಯಾ ಈ 5 ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದಿದ್ದರೆ ವಿಶ್ವಕಪ್ ಗೆಲ್ಲುವುದು ಅಸಾಧ್ಯ..!
ಟೀಂ ಇಂಡಿಯಾ
Follow us
ಪೃಥ್ವಿಶಂಕರ
|

Updated on: Sep 29, 2023 | 4:18 PM

ಅಕ್ಟೋಬರ್ 5 ರಿಂದ ಆರಂಭವಾಗಲಿರುವ ಏಕದಿನ ವಿಶ್ವಕಪ್​ಗಾಗಿ (ODI World Cup 2023) ಎಲ್ಲಾ 10 ತಂಡಗಳು ಸರ್ವ ಸನ್ನದ್ಧವಾಗಿ ಭಾರತಕ್ಕೆ ಕಾಲಿಟ್ಟಿವೆ. ಇತ್ತ ಕೆಲವು ತಿಂಗಳುಗಳ ಹಿಂದೆಯೇ ಈ ಮಹಾ ಸಂಭ್ರಮಕ್ಕೆ ಸಿದ್ದತೆಗಳನ್ನು ಆರಂಭಿಸಿದ ಟೀಂ ಇಂಡಿಯಾ (Team India) ಕೂಡ ವಿಶ್ವಕಪ್ ಗೆಲ್ಲುವ ಭರವಸೆಯೊಂದಿಗೆ ಅಖಾಡಕ್ಕಿಳಿಯುತ್ತಿದೆ. ಟೀಂ ಇಂಡಿಯಾ ಮಾತ್ರವಲ್ಲ ಈ ಬಾರಿಯ ವಿಶ್ವಕಪ್ ಅನ್ನು ಯಾರು ಗೆಲ್ಲುತ್ತಾರೆ? ಯಾವ ತಂಡಗಳ ನಡುವೆ ಫೈನಲ್ ನಡೆಯಲಿದೆ? ಎಂಬ ಪ್ರಶ್ನೆಗಳಿಗೆ ಬಹುಪಾಲು ಜನ ರೋಹಿತ್ (Rohit Sharma) ಪಡೆಯತ್ತ ಬೊಟ್ಟು ಮಾಡಲಾರಂಭಿಸಿದ್ದಾರೆ. ಇದಕ್ಕೆ ಪೂರಕವಾಗಿ ಟೀಂ ಇಂಡಿಯಾ ಕೂಡ ಬಲಿಷ್ಠವಾಗಿದ್ದು, ತಂಡದಲ್ಲಿ ವಿಶ್ವ ದರ್ಜೆಯ ಬ್ಯಾಟ್ಸ್‌ಮನ್‌ಗಳು, ಬೌಲರ್‌ಗಳು ಮತ್ತು ಆಲ್‌ರೌಂಡರ್‌ಗಳೂ ಇದ್ದಾರೆ. ಆದರೆ ತಂಡದಲ್ಲಿರುವ ಈ ಐದು ನ್ಯೂನತೆಗಳು ವಿಶ್ವಕಪ್ ಗೆಲ್ಲುವ ಮಹಾ ಕನಸಿಗೆ ತೊಡಕ್ಕಾಗಿ ನಿಂತಿವೆ.

ವಾಸ್ತವವಾಗಿ ಯಾವುದೇ ತಂಡ ಎಷ್ಟೇ ಬಲಿಷ್ಠವಾಗಿದ್ದರೂ ಅದರಲ್ಲಿ ಕೆಲವು ದೌರ್ಬಲ್ಯ ಖಂಡಿತ ಇರುತ್ತದೆ. ಇದಕ್ಕೆ ಟೀಂ ಇಂಡಿಯಾ ಕೂಡ ಹೊರತಾಗಿಲ್ಲ. ರೋಹಿತ್ ಪಡೆ ಪ್ರಮುಖವಾಗಿ ಈ ಐದು ದೌರ್ಬಲ್ಯಗಳನ್ನು ಸರಿಪಡಿಸಿಕೊಳ್ಳದಿದ್ದರೆ ವಿಶ್ವಕಪ್‌ ಗೆಲ್ಲುವುದು ಬಹಳ ಕಷ್ಟ ಎಂಬುದು ಪರಿಣಿತರ ಅಭಿಪ್ರಾಯವಾಗಿದೆ.

‘ನಂ.1 ಪಟ್ಟ ಮುಖ್ಯವಲ್ಲ’; ವಿಶ್ವಕಪ್​​ಗೂ ಮುನ್ನ ಟೀಂ ಇಂಡಿಯಾಕ್ಕೆ ಬುದ್ಧಿಮಾತು ಹೇಳಿದ ಗಂಭೀರ್

ಪದೇಪದೇ ಕ್ಯಾಚ್ ಡ್ರಾಪ್

ಟೀಂ ಇಂಡಿಯಾದ ದೊಡ್ಡ ಸಮಸ್ಯೆಯೆಂದರೆ ಅದರ ಫೀಲ್ಡಿಂಗ್. ಆದರೂ ಟೀಂ ಇಂಡಿಯಾದ ಆಟಗಾರರ ಫಿಟ್ನೆಸ್ ಮಟ್ಟ ಉನ್ನತ ಮಟ್ಟದಲ್ಲಿದೆ. ಆದರೆ ಮೈದಾನದಲ್ಲಿ ಕ್ಯಾಚಿಂಗ್ ವಿಷಯದಲ್ಲಿ ಆಟಗಾರರು ಸತತವಾಗಿ ವಿಫಲರಾಗುತ್ತಿದ್ದಾರೆ. ಕಳೆದ ವಿಶ್ವಕಪ್‌ನಿಂದ ಸೆಪ್ಟೆಂಬರ್ 10 ರವರೆಗಿನ ಅಂಕಿಅಂಶಗಳನ್ನು ಗಮನಿಸಿದರೆ, ಕ್ಯಾಚ್‌ಗಳನ್ನು ಬಿಡುವುದರಲ್ಲಿ ಟೀಂ ಇಂಡಿಯಾ ಅಗ್ರಸ್ಥಾನದಲ್ಲಿದೆ. ವಿಶ್ವಕಪ್ 2019 ರಿಂದ, ಟೀಂ ಇಂಡಿಯಾ ಒಟ್ಟು 89 ಕ್ಯಾಚ್‌ಗಳನ್ನು ಕೈಬಿಟ್ಟಿದೆ. ನಂತರದ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ 79 ಕ್ಯಾಚ್‌ಗಳನ್ನು ಕೈಬಿಟ್ಟಿದ್ದರೆ, ಬಾಂಗ್ಲಾದೇಶ 65 ಮತ್ತು ದಕ್ಷಿಣ ಆಫ್ರಿಕಾ 54 ಕ್ಯಾಚ್‌ಗಳನ್ನು ಕೈಬಿಟ್ಟಿವೆ. ಕ್ರಿಕೆಟ್‌ನಲ್ಲಿ ಕ್ಯಾಚನ್ ವಿನ್ಸ್ ಮ್ಯಾಚಸ್ ಎಂಬ ಮಾತಿದೆ. ಹೀಗಾಗಿ ಈ ಬಾರಿಯ ವಿಶ್ವಕಪ್‌ ಗೆಲ್ಲಬೇಕೆಂದರೆ ಟೀಂ ಇಂಡಿಯಾ ಕ್ಯಾಚ್‌ಗಳನ್ನು ಕೈಬಿಡುವ ಚಾಲಿಯನ್ನು ಕೈಬಿಡಬೇಕಿದೆ. ಇದು ಸಾಧ್ಯವಾಗದಿದ್ದರೆ, ಟೀಂ ಇಂಡಿಯಾ ಗೆಲುವು ಸಾಧಿಸುವುದು ತುಂಬಾ ಕಷ್ಟ.

ತಂಡದ ಆಯ್ಕೆ ಬಹಳ ಮುಖ್ಯ

ಕಳೆದ ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್ ತಲುಪಿತ್ತು. ಆ ಸಮಯದಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವ ಹೊಸ್ತಿಲಿನಲ್ಲಿತ್ತು. ಆದರೆ ಪ್ಲೇಯಿಂಗ್ ಇಲೆವೆನ್​ನಲ್ಲಿನ ಆಯ್ಕೆಯ ಕೊರತೆಯಿಂದಾಗಿ ಕೊನೆಯ ಹಂತದಲ್ಲಿ ಎಡವಿತ್ತು. ಈ ಬಾರಿಯೂ ಇಂತಹ ಘಟನೆ ನಡೆಯಬಾರದು. ಟೀಂ ಇಂಡಿಯಾ ಪ್ರತಿಯೊಂದು ಸನ್ನಿವೇಶದಲ್ಲೂ ಸರಿಯಾದ ಪ್ಲೇಯಿಂಗ್ ಇಲೆವೆನ್ ಸಂಯೋಜನೆಯೊಂದಿಗೆ ಕಣಕ್ಕಿಳಿಯಬೇಕಾಗುತ್ತದೆ. ನಿಸ್ಸಂಶಯವಾಗಿ, ಟೀಂ ಇಂಡಿಯಾ ಪಿಚ್‌ಗೆ ಅನುಗುಣವಾಗಿ ತಂಡವನ್ನು ಆಯ್ಕೆ ಮಾಡುತ್ತದೆ. ಆದರೆ ಅದು ತನ್ನ ಅತ್ಯುತ್ತಮ ಸ್ಪೆಷಲಿಸ್ಟ್ ಆಟಗಾರರಿಗೆ ಮಾತ್ರ ಅವಕಾಶ ನೀಡಬೇಕು. ಟೀಂ ಇಂಡಿಯಾ ಇತ್ತೀಚೆಗೆ ಶಮಿಗಿಂತ ಶಾರ್ದೂಲ್ ಠಾಕೂರ್‌ಗೆ ಆದ್ಯತೆ ನೀಡಿದೆ. ಶಾರ್ದೂಲ್ ಬ್ಯಾಟಿಂಗ್ ಮಾಡುವ ಸಾಮಥ್ಯ್ರ ಹೊಂದಿದ್ದಾರೆ. ಆದರೆ ಅವರ ಬೌಲಿಂಗ್ ತುಂಬಾ ದುಬಾರಿಯಾಗಿದೆ. ಭಾರತದಲ್ಲಿ ಬ್ಯಾಟಿಂಗ್‌ಗೆ ಸೂಕ್ತವಾದ ಫ್ಲಾಟ್ ವಿಕೆಟ್‌ಗಳಿವೆ. ಇಲ್ಲಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ಸ್ಪೆಷಲಿಸ್ಟ್ ಬೌಲರ್‌ಗಳಿಗೆ ಹೆಚ್ಚಿನ ಆಧ್ಯತೆ ನೀಡಬೇಕಿದೆ.

ಫಾರ್ಮ್​ಗೆ ಮರಳಬೇಕಿದೆ ಜಡೇಜಾ

ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ತನ್ನ ಬ್ಯಾಟಿಂಗ್ ಬಲವನ್ನು ಹೆಚ್ಚಿಸಿಕೊಂಡಿದೆ. ಆದರೆ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಫಾರ್ಮ್ ಕೆಟ್ಟದಾಗಿದೆ. ಕಳೆದ 12 ಇನ್ನಿಂಗ್ಸ್‌ಗಳಲ್ಲಿ ಅವರು ಒಂದೇ ಒಂದು ಅರ್ಧಶತಕವನ್ನು ಗಳಿಸಿಲ್ಲ ಮತ್ತು ಅವರ ಸ್ಟ್ರೈಕ್ ರೇಟ್ ಕೂಡ ಕಳವಳಕಾರಿಯಾಗಿದೆ.

ಬ್ಯಾಟಿಂಗ್​ನಲ್ಲಿ ಶಾರ್ದೂಲ್ ಮಂಕು

ಬೌಲಿಂಗ್ ಆಲ್ ರೌಂಡರ್ ಹೆಸರಿನಲ್ಲಿ ಟೀಂ ಇಂಡಿಯಾ ಶಾರ್ದೂಲ್ ಠಾಕೂರ್​ಗೆ ತಂಡದಲ್ಲಿ ಅವಕಾಶಗಳನ್ನು ನೀಡುತ್ತಿದೆ. ಆದರೆ ಕಳೆದ 6 ಏಕದಿನ ಇನ್ನಿಂಗ್ಸ್​ನಲ್ಲಿ ಶಾರ್ದೂಲ್ ಗಳಿಸಿದ್ದು ಕೇವಲ 59 ರನ್.

ಹಾರ್ದಿಕ್ ಪಾಂಡ್ಯಗೆ ಹೆಚ್ಚು ವಿಶ್ರಾಂತಿ

ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ ಟ್ರಂಪ್ ಕಾರ್ಡ್. ಆದರೆ ಈ ಆಟಗಾರನಿಗೆ ಹೆಚ್ಚು ಪಂದ್ಯಗಳನ್ನು ಆಡಲು ಅವಕಾಶ ಸಿಕ್ಕಿಲ್ಲ. ಟೀಂ ಇಂಡಿಯಾ ಆಡಿರುವ ಕಳೆದ 8 ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ 4 ಪಂದ್ಯಗಳಲ್ಲಿ ಆಡಿಲ್ಲ. ಮತ್ತು ಮೂರು ಪಂದ್ಯಗಳಲ್ಲಿ ಅವರಿಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿಲ್ಲ. ಪ್ರಸ್ತುತ ಪಾಂಡ್ಯ ಅಭ್ಯಾಸ ಪಂದ್ಯಗಳನ್ನು ಹೊಂದಿದ್ದರೂ, ಇನ್ನೂ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮಾಡುವ ಪೂರ್ವಸಿದ್ಧತೆಯ ಕೊರತೆಯನ್ನು ತುಂಬಲಾಗಿಲ್ಲ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!