Mohammad Rizwan Century: ಭಾರತದಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ ಪಾಕ್ ವಿಕೆಟ್‌ಕೀಪರ್ ಬ್ಯಾಟರ್​..!

Mohammad Rizwan Century: ವಿಶ್ವಕಪ್ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯವನ್ನಾಡುತ್ತಿರುವ ಪಾಕಿಸ್ತಾನ ತಂಡ ಬೃಹತ್ ಮೊತ್ತ ಕಲೆಹಾಕಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡದ ಪರ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಮೊಹಮ್ಮದ್ ರಿಜ್ವಾನ್ ಅದ್ಭುತ ಶತಕ ಬಾರಿಸಿದ್ದಾರೆ.

Mohammad Rizwan Century: ಭಾರತದಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ ಪಾಕ್ ವಿಕೆಟ್‌ಕೀಪರ್ ಬ್ಯಾಟರ್​..!
ಮೊಹಮ್ಮದ್ ರಿಜ್ವಾನ್
Follow us
ಪೃಥ್ವಿಶಂಕರ
|

Updated on:Sep 29, 2023 | 6:46 PM

ವಿಶ್ವಕಪ್ (ODI World Cup) ಆರಂಭಕ್ಕೂ ಮುನ್ನ ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯವನ್ನಾಡುತ್ತಿರುವ ಪಾಕಿಸ್ತಾನ ತಂಡ (New Zealand vs Pakistan) 345 ರನ್​ಗಳ ಬೃಹತ್ ಮೊತ್ತ ಕಲೆಹಾಕಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡದ ಪರ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಮೊಹಮ್ಮದ್ ರಿಜ್ವಾನ್ (Mohammad Rizwan) ಅದ್ಭುತ ಶತಕ ಬಾರಿಸಿದ್ದಾರೆ. ಮೊದಲ ಬಾರಿಗೆ ಭಾರತಕ್ಕೆ ಬಂದಿರುವ ರಿಜ್ವಾನ್, ನ್ಯೂಜಿಲೆಂಡ್ ವಿರುದ್ಧ 92 ಎಸೆತಗಳಲ್ಲಿ ಶತಕ ಪೂರೈಸಿದರು. ವಾಸ್ತವವಾಗಿ ಈ ಪಂದ್ಯಕ್ಕೂ ಮುನ್ನ ರಿಜ್ವಾನ್ ಅವರ ಫಾರ್ಮ್ ತುಂಬಾ ಕೆಟ್ಟದಾಗಿತ್ತು. ಏಷ್ಯಾಕಪ್‌ನಲ್ಲಿಯೂ ರಿಜ್ವಾನ್ ಬ್ಯಾಟ್ ಮಂಕಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ 2023ರ ವಿಶ್ವಕಪ್ ಆರಂಭಕ್ಕೂ ಮುನ್ನ ತಮ್ಮ ಬ್ಯಾಟ್‌ನಿಂದ ಶತಕ ಸಿಡಿಸಿರುವುದು ಅವರಿಗೆ ಹಾಗೂ ಪಾಕಿಸ್ತಾನ ತಂಡಕ್ಕೆ ಸಮಾಧಾನದ ಸುದ್ದಿಯಾಗಿದೆ.

ವಾಸ್ತವವಾಗಿ ರಿಜ್ವಾನ್ ಕ್ರೀಸ್​ಗೆ ಕಾಲಿಟ್ಟಾಗ ಪಾಕಿಸ್ತಾನ ಸಂಕಷ್ಟಕ್ಕೆ ಸಿಲುಕಿತ್ತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಇಮಾದ್ ವಾಸಿಂ ಮತ್ತು ಅಬ್ದುಲ್ಲಾ ಶಫೀಕ್ ಬೇಗ ಪೆವಿಲಿಯನ್ ಸೇರಿಕೊಂಡಿದ್ದರು. ಆದರೆ ಇದರ ನಂತರ ರಿಜ್ವಾನ್, ನಾಯಕ ಬಾಬರ್ ಆಝಂ ಅವರೊಂದಿಗೆ ಇನ್ನಿಂಗ್ಸ್ ನಿರ್ವಹಿಸಿ ಮೂರನೇ ವಿಕೆಟ್‌ಗೆ 114 ರನ್‌ಗಳ ಪಾಲುದಾರಿಕೆಯನ್ನು ಮಾಡುವ ಮೂಲಕ ನ್ಯೂಜಿಲೆಂಡ್‌ಗೆ ತಕ್ಕ ಉತ್ತರ ನೀಡಿದರು. ಎಂದಿನಂತೆ, ನಿದಾನಗತಿಯಲ್ಲಿ ಇನ್ನಿಂಗ್ಸ್ ಆರಂಭಿಸಿದ ರಿಜ್ವಾನ್, ನಂತರ ತಮ್ಮ ಸ್ವೀಪ್ ಹೊಡೆತಗಳ ಸಹಾಯದಿಂದ ಕಿವೀಸ್ ಸ್ಪಿನ್ನರ್‌ಗಳ ಬೆವರಿಳಿಸಿದರು.

ಭಾರತದ ಭವ್ಯ ಸ್ವಾಗತಕ್ಕೆ ಬೆರಗಾದ ಪಾಕ್ ಕ್ರಿಕೆಟಿಗರು; ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದೇನು ಗೊತ್ತಾ?

ಫಾರ್ಮ್​ ಕಂಡುಕೊಂಡ ಬಾಬರ್-ರಿಜ್ವಾನ್

ಬಾಬರ್ ಮತ್ತು ರಿಜ್ವಾನ್ ಕೇವಲ 59 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟ ಪೂರ್ಣಗೊಳಿಸಿದರು. ಬಳಿಕ ಅವರ ಜೊತೆಯಾಟ 97 ಎಸೆತಗಳಲ್ಲಿ 100 ರ ಗಡಿಯನ್ನು ಮುಟ್ಟಿತು. ಅಂದಹಾಗೆ, ಈ ಜೊತೆಯಾಟದಲ್ಲಿ ಬಾಬರ್ ಕೂಡ ಅದ್ಭುತ ಬ್ಯಾಟಿಂಗ್ ಮಾಡಿ 80 ರನ್​ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ಆದರೆ ಬಾಬರ್ ಶತಕ ಗಳಿಸುವ ಅವಕಾಶವನ್ನು ಕಳೆದುಕೊಂಡರೆ, ರಿಜ್ವಾನ್ ಮಾತ್ರ ಶತಕದ ಸಾಧನೆ ಮಾಡಿದರು. ರಿಜ್ವಾನ್ ಶತಕ ಸಿಡಿಸಿದ ಬಳಿಕ ಗಾಯಗೊಂಡು ನಿವೃತ್ತಿಯಾದರು. ಅಭ್ಯಾಸ ಪಂದ್ಯದಲ್ಲಿ, ಇತರ ಬ್ಯಾಟ್ಸ್‌ಮನ್‌ಗಳಿಗೆ ಅವಕಾಶ ನೀಡಲು ರಿಜ್ವಾನ್ ಆಟ ನಿಲ್ಲಿಸಿ ಪೆವಿಲಿಯನ್​ಗೆ ತೆರಳಿದರು.

ತಂಡದ ಸಮಸ್ಯೆಗೆ ಪರಿಹಾರ ಸಿಗಲಿಲ್ಲ

ರಿಜ್ವಾನ್ ಮತ್ತು ಬಾಬರ್ ಎಂದಿನಂತೆ ರನ್ ಗಳಿಸಿದರಾದರೂ ಪಾಕಿಸ್ತಾನ ತಂಡದ ಅದೊಂದು ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ವಾಸ್ತವವಾಗಿ, ಪಾಕ್ ತಂಡದ ಆರಂಭಿಕರು ಬಹಳ ಸಮಯದಿಂದ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದಾರೆ. ಫಖರ್ ಜಮಾನ್ ಆರಂಭಿಕರಾಗಿ ನಿರಂತರವಾಗಿ ವಿಫಲವಾಗುತ್ತಿದ್ದರಿಂದ ಅಬ್ದುಲ್ಲಾ ಶಫೀಕ್ ಅವರನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲಾಯಿತು. ಆದರೆ ಅಭ್ಯಾಸ ಪಂದ್ಯದಲ್ಲೂ ಅವರು ವಿಫಲರಾದರು. ಇಮಾಮ್ ಉಲ್ ಹಕ್ ಕೂಡ ಎಂದಿನಂತೆ ಗುಣಮಟ್ಟದ ಬೌಲಿಂಗ್​ಗೆ ಶರಣಾಗುತ್ತಿರುವುದು ಕಂಡುಬಂದಿತು. ಪರಿಸ್ಥಿತಿ ಹೀಗೇ ಮುಂದುವರಿದರೆ ವಿಶ್ವಕಪ್ ವೇಳೆ ಬಾಬರ್ ಮತ್ತು ರಿಜ್ವಾನ್ ಇಬ್ಬರ ಮೇಲೂ ಹೆಚ್ಚಿನ ಒತ್ತಡ ಬೀಳಲಿದೆ, ಹೀಗಾಗಿ ವಿಶ್ವಕಪ್ ಆರಂಭಕ್ಕೂ ಮುನ್ನ ಪಾಕ್ ತಂಡ ತನ್ನ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:35 pm, Fri, 29 September 23

ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!