AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಬ್ಬರಿಗೂ 5 ವಿಕೆಟ್​: ಚೆಂಡು ಕತ್ತರಿಸಿ ಹಂಚಿಕೊಂಡ ಬೌಲರ್​ಗಳು!

England vs Pakistan, 1st Test: ಪಾಕಿಸ್ತಾನ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡ ಪ್ರಥಮ ಇನಿಂಗ್ಸ್​ನಲ್ಲಿ ಕೇವಲ 171 ರನ್​ಗಳಿಸಿ ಆಲೌಟ್ ಆಗಿದೆ. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ಮೊದಲ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 112 ರನ್​ ಕಲೆಹಾಕಿದೆ.

ಇಬ್ಬರಿಗೂ 5 ವಿಕೆಟ್​: ಚೆಂಡು ಕತ್ತರಿಸಿ ಹಂಚಿಕೊಂಡ ಬೌಲರ್​ಗಳು!
Half BallImage Credit source: ECB
ಝಾಹಿರ್ ಯೂಸುಫ್
|

Updated on: Aug 20, 2026 | 9:51 AM

Share

ಕ್ರಿಕೆಟ್ ಇತಿಹಾಸದಲ್ಲಿ 5 ವಿಕೆಟ್ ಪಡೆದ ಬೌಲರ್‌ಗಳು ಪಂದ್ಯದ ಚೆಂಡನ್ನು ಸ್ಮರಣಿಕೆಯಾಗಿ ಮನೆಗೆ ಕೊಂಡೊಯ್ಯುವುದು ತಲತಲಾಂತರದಿಂದ ನಡೆದುಬಂದಿರುವ ಸಂಪ್ರದಾಯವಾಗಿದೆ. ಆದರೆ, ಇಂಗ್ಲೆಂಡ್ ಮತ್ತು ಪಾಕಿಸ್ತಾನ್ ನಡುವಿನ ಪ್ರಸ್ತುತ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇಬ್ಬರು ಬೌಲರ್‌ಗಳು ತಲಾ 5 ವಿಕೆಟ್ ಕಬಳಿಸಿ ಮಿಂಚಿದ್ದರು. ಈ ಅಪರೂಪದ ವಿದ್ಯಮಾನದಿಂದಾಗಿ, ಚೆಂಡನ್ನು ಯಾರು ಮನೆಗೆ ಕೊಂಡೊಯ್ಯಬೇಕು ಎಂಬ ಕುತೂಹಲಕಾರಿ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು. ಈ ಗೊಂದಲಕ್ಕೆ ಉಭಯ ಆಟಗಾರರು ಕಂಡುಕೊಂಡ ವಿಶಿಷ್ಟ ಪರಿಹಾರವೇ ಈಗ ವೈರಲ್ ಆಗಿದೆ.

ಇಂಗ್ಲೆಂಡ್ ವೇಗಿಗಳ ಕರಾರುವಾಕ್ ದಾಳಿ:

ಹೆಡಿಂಗ್ಲಿ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ್ ತಂಡ, ಇಂಗ್ಲೆಂಡ್ ವೇಗಿಗಳ ಮಾರಕ ದಾಳಿಗೆ ನಲುಗಿ ಕೇವಲ 171 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಘಾತಕ ಬೌಲಿಂಗ್ ಪ್ರದರ್ಶಿಸಿದ ಜೋಶ್ ಟಾಂಗ್ 46 ರನ್ ನೀಡಿ 5 ವಿಕೆಟ್ ಉರುಳಿಸಿದರೆ, ಉತ್ತಮ ಸಾಥ್ ನೀಡಿದ ಓಲಿ ರಾಬಿನ್ಸನ್ 51 ರನ್ ನೀಡಿ 5 ವಿಕೆಟ್ ಪಡೆದರು. ಇವರಿಬ್ಬರ ಜಂಟಿ ದಾಳಿಗೆ ಪಾಕ್ ಪಡೆ ಸಂಪೂರ್ಣ ಶರಣಾಯಿತು.

ರಾಬಿನ್ಸನ್ ಐಡಿಯಾ, ಚೆಂಡು ಅರ್ಧ!

ಇಬ್ಬರೂ ತಲಾ 5 ವಿಕೆಟ್ ಪಡೆದಿದ್ದರಿಂದ ಪಂದ್ಯದ ಅಧಿಕೃತ ಚೆಂಡು ಯಾರಿಗೆ ಸಿಗಬೇಕು ಎಂಬ ಗೊಂದಲ ಇಂಗ್ಲೆಂಡ್ ಡ್ರೆಸ್ಸಿಂಗ್ ರೂಮ್​ನಲ್ಲಿ ಮೂಡಿತು. ಆಗ ಓಲಿ ರಾಬಿನ್ಸನ್ ವಿಶಿಷ್ಟ ಉಪಾಯವೊಂದನ್ನು ಮುಂದಿಟ್ಟರು. “ನಾವು ಚೆಂಡನ್ನು ಅರ್ಧಕ್ಕೆ ಕತ್ತರಿಸಿ ಹಂಚಿಕೊಳ್ಳೋಣ, ಇದು ನಮ್ಮಿಬ್ಬರಿಗೂ ಎಂದಿಗೂ ಮರೆಯಲಾಗದ ಅಪರೂಪದ ನೆನಪಾಗಿ ಉಳಿಯುತ್ತದೆ” ಎಂದು ರಾಬಿನ್ಸನ್ ಪ್ರಸ್ತಾಪಿಸಿದರು.

ಇಂಗ್ಲೆಂಡ್ ತಂಡದ ಮ್ಯಾನೇಜರ್ ವೇಯ್ನ್ ಬೆಂಟ್ಲಿ ತಕ್ಷಣವೇ ಆ ಚೆಂಡನ್ನು ಹೆಡಿಂಗ್ಲಿ ಮೈದಾನದ ಸಿಬ್ಬಂದಿ ಕೈಗೆ ನೀಡಿದರು. ಸಿಬ್ಬಂದಿಗಳು ಕೇವಲ ಐದು ನಿಮಿಷಗಳಲ್ಲಿ ವಿಶೇಷ ಕಟಿಂಗ್ ಉಪಕರಣ ಬಳಸಿ, ಚೆಂಡಿನ ಸೀಮ್ ಮೂಲಕವೇ ನಿಖರವಾಗಿ ಅರ್ಧಕ್ಕೆ ಕತ್ತರಿಸಿ ಇಬ್ಬರು ಬೌಲರ್‌ಗಳ ಕೈಗಿಟ್ಟರು. ಇದೀಗ ಇಂಗ್ಲೆಂಡ್ ವೇಗಿಗಳು ಹಂಚಿಕೊಂಡ ಅರ್ಧ ಚೆಂಡಿನ ಫೋಟೋಗಳು ವೈರಲ್ ಆಗಿದೆ.

ಮರುಕಳಿಸಿದ ಅಪರೂಪದ ದಾಖಲೆ:

ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಇಬ್ಬರು ಬೌಲರ್‌ಗಳು ತಲಾ ಐದು ವಿಕೆಟ್ ಸಾಧನೆ ಮಾಡಿದ್ದು ಅತ್ಯಂತ ಅಪರೂಪ. ಇದಕ್ಕೂ ಮುನ್ನ 2006ರಲ್ಲಿ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಟೆಸ್ಟ್ ಪಂದ್ಯದಲ್ಲೇ ಸ್ಟೀವ್ ಹರ್ಮಿಸನ್ ಮತ್ತು ಮಾಂಟಿ ಪಣೇಸರ್ ಈ ಜಂಟಿ ಸಾಧನೆ ಮಾಡಿದ್ದರು.

ಇದನ್ನೂ ಓದಿ: WTC ಫೈನಲ್​ಗೇರಲು ಟೀಮ್ ಇಂಡಿಯಾ ಇನ್ನೆಷ್ಟು ಪಂದ್ಯ ಗೆಲ್ಲಬೇಕು?

ಇದೀಗ ಬರೋಬ್ಬರಿ ಎರಡು ದಶಕಗಳ ಬಳಿಕ ಟಾಂಗ್ ಮತ್ತು ರಾಬಿನ್ಸನ್ ಜೋಡಿ ಈ ಐತಿಹಾಸಿಕ ಸಾಧನೆಯನ್ನು ಪುನರಾವರ್ತಿಸಿದೆ. ಆದರೆ, ಈ ಬಾರಿ ಇಂಗ್ಲೆಂಡ್ ಬೌಲರ್‌ಗಳು ಪಂದ್ಯದ ಚೆಂಡನ್ನು ನಿಖರವಾಗಿ ಅರ್ಧಕ್ಕೆ ಕತ್ತರಿಸಿ ಹಂಚಿಕೊಳ್ಳುವ ಮೂಲಕ, ತಮ್ಮ ಭರ್ಜರಿ ಪ್ರದರ್ಶನವನ್ನು ವಿಭಿನ್ನವಾಗಿ ಸಂಭ್ರಮಿಸಿದ್ದು ವಿಶೇಷವಾಗಿ ಗಮನ ಸೆಳೆದಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ