ಭಾರತ-ಇಂಗ್ಲೆಂಡ್ (India vs England Test) ನಡುವಣ ಟೆಸ್ಟ್ ಸರಣಿಯು ರೋಚಕತೆ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ಪಂದ್ಯದಲ್ಲೇ ಭರ್ಜರಿ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ (Team India) ಗೆಲುವಿಗೆ ಮಳೆ ಅಡ್ಡಿಯಾಗಿತ್ತು. ಇದುವೇ ಇಂಗ್ಲೆಂಡ್ (England) ಪಾಲಿಗೆ ವರದಾನವಾಯಿತು. ಲಾರ್ಡ್ಸ್ (Lord’s) ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನದ ಮೂಲಕ ವಿರಾಟ್ ಕೊಹ್ಲಿ (Virat Kohli) ಪಡೆ ಐತಿಹಾಸಿಕ ಜಯ ಸಾಧಿಸಿತು. ಈ ಜಯದೊಂದಿಗೆ ಇದೀಗ ಭಾರತ ತಂಡ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಅತ್ತ ಎರಡು ಪಂದ್ಯಗಳಲ್ಲೂ ಹಿನ್ನಡೆ ಅನುಭವಿಸಿರುವ ಆತಿಥೇಯರಿಗೆ ಬ್ಯಾಟ್ಸ್ ಮನ್ಗಳ ವೈಫಲ್ಯ ಹೊಸ ಚಿಂತೆಯನ್ನುಂಟು ಮಾಡಿದೆ. ಅದರಲ್ಲೂ ಆರಂಭಿಕ ಆಟಗಾರರು ಟೀಮ್ ಇಂಡಿಯಾ ವೇಗಿಗಳ ಮುಂದೆ ರನ್ಗಳಿಸುವುದಿರಲಿ, ಕ್ರೀಸ್ ಕಚ್ಚಿ ನಿಲ್ಲಲು ಪರದಾಡುತ್ತಿದೆ. ರೋರಿ ಬರ್ನ್ಸ್ (rory burns) ಮತ್ತು ಡೊಮ್ ಸಿಬ್ಲೆ (dom sibley) ಇಬ್ಬರೂ ಸತತ ವಿಫಲರಾಗುತ್ತಿರುವುದು ನಾಯಕ ಜೋ ರೂಟ್ ಚಿಂತೆಯನ್ನು ಹೆಚ್ಚಿಸಿದೆ.
ಲಾರ್ಡ್ಸ್ ಟೆಸ್ಟ್ ಪಂದ್ಯದ ವೇಳೆ ಇಂಗ್ಲೆಂಡ್ ಆಟಗಾರರು ಏಳು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಭಾರತದ ವಿರುದ್ಧ ಇಂಗ್ಲೆಂಡ್ ತಂಡದ ಅತ್ಯಂತ ಕೆಟ್ಟ ಪ್ರದರ್ಶನ ಇದು. ಈ ಹಿಂದೆ 2004 ರಲ್ಲಿ ಬಾಂಗ್ಲಾದೇಶದ ಚಿತ್ತಗಾವ್ ಟೆಸ್ಟ್ ಮತ್ತು 2008 ರಲ್ಲಿ ಗಾಲೆ ಟೆಸ್ಟ್ ನಲ್ಲಿ ಆರು ಶ್ರೀಲಂಕಾ ಬ್ಯಾಟ್ಸ್ ಮನ್ ಗಳು ಖಾತೆ ತೆರೆಯಲು ಸಾಧ್ಯವಾಗಿರಲಿಲ್ಲ. ಇದೀಗ ಈ ದಾಖಲೆಯನ್ನು ಇಂಗ್ಲೆಂಡ್ ಮುರಿದಿದೆ. ಅದರಲ್ಲೂ ಈ ಕೆಟ್ಟ ದಾಖಲೆ ಬರೆದ ಆಟಗಾರರ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡದ ಇಬ್ಬರು ಓಪನರ್‌ಗಳೂ ಇದ್ದಾರೆ. ರೋರಿ ಬರ್ನ್ಸ್ ಮತ್ತು ಡೊಮ್ ಸಿಬ್ಲಿ ಇಬ್ಬರೂ ಭಾರತದ ವಿರುದ್ಧ ಲಾರ್ಡ್ಸ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಖಾತೆ ತೆರೆಯುವ ಮುನ್ನ ವಿಕೆಟ್ ಒಪ್ಪಿಸಿದ್ದರು.
ಇದರೊಂದಿಗೆ, ಬರ್ನ್ಸ್ 2021 ರಲ್ಲಿ ಐದನೇ ಬಾರಿಗೆ ಖಾತೆ ತೆರೆಯಲು ವಿಫಲರಾಗಿದ್ದಾರೆ. ರೋರಿ ಬರ್ನ್ಸ್ ಈ ವರ್ಷದವರಗೆ ಆರು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 363 ರನ್ ಗಳಿಸಿದ್ದಾರೆ. ಇನ್ನು ಜನವರಿ-ಫೆಬ್ರವರಿಯಲ್ಲಿ ಭಾರತ ಪ್ರವಾಸದ ವೇಳೆ ಕೂಡ ಎರಡು ಬಾರಿ ಖಾತೆ ತೆರೆಯದೇ ವಿಕೆಟ್ ಒಪ್ಪಿಸಿದ್ದರು. ಶ್ರೀಲಂಕಾ ಪ್ರವಾಸದಲ್ಲೂ ಇನ್ನಿಂಗ್ಸ್‌ನಲ್ಲಿ ರನ್ಗಳಿಸದೇ ಔಟಾಗಿದ್ದರು. ಭಾರತದ ವಿರುದ್ಧ ನಾಟಿಂಗ್ ಹ್ಯಾಮ್ ಟೆಸ್ಟ್ನಲ್ಲೂ ಶೂನ್ಯಕ್ಕೆ ವಿಕೆಟ್ ಕೈ ಚೆಲ್ಲಿದ್ದರು. ಇದೀಗ ಮೂರನೇ ಟೆಸ್ಟ್ನಲ್ಲಿ ಬರ್ನ್ಸ್ಗೆ ಸ್ಥಾನ ಸಿಗಲಿದೆಯಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಇನ್ನೋರ್ವ ಆರಂಭಿಕ ಡೊಮ್ ಸಿಬ್ಲಿ ಕಥೆ ಕೂಡ ಅದೇ. ಈ ವರ್ಷ ನಾಲ್ಕು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಅದರಲ್ಲಿ ಭಾರತದ ವಿರುದ್ಧ ಎರಡು ಬಾರಿ, ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧ ಒಂದು ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಇನ್ನು ಭಾರತ ಪ್ರವಾಸದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 87 ರನ್ ಗಳಿಸಿದ್ದು ಬಿಟ್ಟರೆ ಉಳಿಯ ಯಾವುದೇ ಪಂದ್ಯದಲ್ಲೂ ಮಿಂಚಿಲ್ಲ. ಕೊನೆಯ 11 ಇನಿಂಗ್ಸ್ಗಳನ್ನು ತೆಗೆದುಕೊಂಡರೆ ಡೊಮ್ ಸಿಬ್ಲಿ ಕಲೆಹಾಕಿದ ಸ್ಕೋರ್ 16, 16, 3, 0, 7, 2, 3, 18, 28, 11, 0. ಹೀಗಾಗಿ ಭಾರತದ ವಿರುದ್ದದ ಮೂರನೇ ಟೆಸ್ಟ್ ನಲ್ಲಿ ಸಿಬ್ಲಿ ಹೊರಬೀಳುವ ಸಾಧ್ಯತೆಯಿದೆ.
ಟೀಮ್ ಇಂಡಿಯಾ ವೇಗಿಗಳ ಕರಾರುವಾಕ್ ದಾಳಿ ಮುಂದೆ ಕ್ರೀಸ್ ಕಚ್ಚಿ ನಿಲ್ಲಲು ಇಂಗ್ಲೆಂಡ್ ಆರಂಭಿಕರು ಪರದಾಡುತ್ತಿದ್ದಾರೆ. ಇದೀಗ ಇಬ್ಬರನ್ನು ಬದಲಿಸಬೇಕಾದ ಅನಿವಾರ್ಯತೆ ಎದುರಾಗಿರುವುದು ನಾಯಕ ಜೋ ರೂಟ್ ಚಿಂತೆಯನ್ನು ಹೆಚ್ಚಿಸಿದೆ. ಇತ್ತ ಟೀಮ್ ಇಂಡಿಯಾ ಬೌಲರುಗಳು ಒಂದಾರ್ಥದಲ್ಲಿ ಡೊಮ್ ಸಿಬ್ಲಿ ಹಾಗೂ ರೋರಿ ಬರ್ನ್ಸ್ ಕ್ರಿಕೆಟ್ ಕೆರಿಯರ್ ಅನ್ನೇ ಅಂತ್ಯಗೊಳಿಸುವತ್ತ ಸಾಗಿದ್ದಾರೆ.
ಇದನ್ನೂ ಓದಿ: T20 World Cup: ಕೊಹ್ಲಿ ಹುಟ್ಟುಹಬ್ಬದಂದು ಟಿ20 ವಿಶ್ವಕಪ್‌ನಲ್ಲಿ ಭಾರತದ ಎದುರಾಳಿ ಯಾರು?
ಇದನ್ನೂ ಓದಿ: WTC Points Table: 12 ಅಂಕಗಳಿಸಿದ ತಂಡಕ್ಕೆ ಅಗ್ರಸ್ಥಾನ: 14 ಅಂಕ ಪಡೆದರೂ ಟೀಮ್ ಇಂಡಿಯಾಗಿಲ್ಲ ಪ್ರಥಮ ಸ್ಥಾನ
ಇದನ್ನೂ ಓದಿ: T20 World Cup 2021: ಟಿ20 ವಿಶ್ವಕಪ್ಗೆ ಅಫ್ಘಾನಿಸ್ತಾನ್ ತಂಡ ಅನುಮಾನ
(openers rory burns dom sibley form big worry for england in india test series)