PAK vs BAN: 3ನೇ ಅಂಪೈರ್ ವಿರುದ್ಧ ತಾಳ್ಮೆ ಕಳೆದುಕೊಂಡ ಪಾಕ್ ನಾಯಕ; ಡಗೌಟ್ನಲ್ಲೂ ತಣ್ಣಗಾಗದ ಕೋಪ
Shan Masood: ಬಾಂಗ್ಲಾ ಬೌಲರ್ ಶೋರಿಫುಲ್ ಇಸ್ಲಾಂ ಅವರ ಎಸೆತವನ್ನು ಶಾನ್ ಮಸೂದ್ ಡಿಫೆಂಡ್ ಮಾಡಲು ಯತ್ನಿಸಿದರು. ಆದರೆ ಚೆಂಡು ಬ್ಯಾಟ್ ಹಾಗೂ ಪ್ಯಾಡ್ ನಡುವೆ ತೀರ ಸನಿಹದಲ್ಲಿ ಹಾದು ಹೋಯಿತು. ಈ ವೇಳೆ ಶಬ್ದವೂ ಬಂತು. ಕೂಡಲೇ ಬಾಂಗ್ಲಾ ಆಟಗಾರರು ಔಟಿಗೆ ಮನವಿ ಮಾಡಿದರು. ಆದರೆ ಶಾನ್ ಮಸೂದ್ ಅವರನ್ನು ಫೀಲ್ಡ್ ಅಂಪೈರ್ ನಾಟೌಟ್ ನೀಡಿದರು. ನಂತರ ಬಾಂಗ್ಲಾದೇಶ ರಿವ್ಯೂ ತೆಗೆದುಕೊಂಡಿತು. ಬಾಂಗ್ಲಾ ಮನವಿಯನ್ನು ಮರು ಪರಿಶೀಲಿಸಿದ ಮೂರನೇ ಅಂಪೈರ್, ಮಸೂದ್ ಔಟೆಂದು ತೀರ್ಪು ನೀಡಿದರು.
ರಾವಲ್ಪಿಂಡಿಯಲ್ಲಿ ಇಂದಿನಿಂದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯ ಆರಂಭವಾಗಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ನಾಯಕ ಶಾನ್ ಮಸೂದ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಅದರಂತೆ ಮೊದಲ ಇನ್ನಿಂಗ್ಸ್ ಆರಂಭಿಸಿದ ಪಾಕ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಕೇವಲ 16 ರನ್ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಅದರಲ್ಲಿ ಒಂದು ವಿಕೆಟ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಈ ವಿವಾದ ಹುಟ್ಟಿಕೊಳ್ಳಲು ಪಾಕ್ ನಾಯಕ ಶಾನ್ ಮಸೂದ್ ವಿರುದ್ಧ ಮೂರನೇ ಅಂಪೈರ್ ನೀಡಿದ ತೀರ್ಮಾನ. ವಾಸ್ತವವಾಗಿ ಬಾಂಗ್ಲಾ ಬೌಲರ್ ಶೋರಿಫುಲ್ ಇಸ್ಲಾಂ ಅವರ ಎಸೆತದಲ್ಲಿ ಶಾನ್ ಮಸೂದ್ ಕೇವಲ 6 ರನ್ ಗಳಿಸಿ ಔಟಾದರು. ಆದರೆ ಮೂರನೇ ಅಂಪೈರ್ ನೀಡಿದ ನಿರ್ಣಯದ ಬಗ್ಗೆ ಪಾಕ್ ನಾಯಕ ತೀರ್ವ ಅಸಮಾಧಾನ ಹೊರಹಾಕಿದ್ದಾರೆ.
ಮೇಲೆ ಹೇಳಿದಂತೆ ಬಾಂಗ್ಲಾ ಬೌಲರ್ ಶೋರಿಫುಲ್ ಇಸ್ಲಾಂ ಅವರ ಎಸೆತವನ್ನು ಶಾನ್ ಮಸೂದ್ ಡಿಫೆಂಡ್ ಮಾಡಲು ಯತ್ನಿಸಿದರು. ಆದರೆ ಚೆಂಡು ಬ್ಯಾಟ್ ಹಾಗೂ ಪ್ಯಾಡ್ ನಡುವೆ ತೀರ ಸನಿಹದಲ್ಲಿ ಹಾದು ಹೋಯಿತು. ಈ ವೇಳೆ ಶಬ್ದವೂ ಬಂತು. ಕೂಡಲೇ ಬಾಂಗ್ಲಾ ಆಟಗಾರರು ಔಟಿಗೆ ಮನವಿ ಮಾಡಿದರು. ಆದರೆ ಶಾನ್ ಮಸೂದ್ ಅವರನ್ನು ಫೀಲ್ಡ್ ಅಂಪೈರ್ ನಾಟೌಟ್ ನೀಡಿದರು. ನಂತರ ಬಾಂಗ್ಲಾದೇಶ ರಿವ್ಯೂ ತೆಗೆದುಕೊಂಡಿತು. ಬಾಂಗ್ಲಾ ಮನವಿಯನ್ನು ಮರು ಪರಿಶೀಲಿಸಿದ ಮೂರನೇ ಅಂಪೈರ್, ಮಸೂದ್ ಔಟೆಂದು ತೀರ್ಪು ನೀಡಿದರು.
Out or not out❓
Shan Masood is dismissed by Shoriful Islam.#PAKvBAN | #TestOnHai pic.twitter.com/8OgkgQKHPa
— Pakistan Cricket (@TheRealPCB) August 21, 2024
ಕೋಪಗೊಂಡ ಶಾನ್ ಮಸೂದ್
ಆದರೆ ಥರ್ಡ್ ಅಂಪೈರ್ ನಿರ್ಧಾರ ಬಂದ ತಕ್ಷಣ ಶಾನ್ ಮಸೂದ್ ಶಾಕ್ ಆಗಿದ್ದು, ಕೂಡಲೇ ಮೈದಾನದ ಅಂಪೈರ್ಗಳೊಂದಿಗೆ ವಾಗ್ವಾದಕ್ಕಿಳಿದರು. ಶಾನ್ ಮಸೂದ್ ಅವರ ವಾದವೆಂದರೆ ಚೆಂಡು ತನ್ನ ತೊಡೆಯ ಪ್ಯಾಡ್‌ಗೆ ಬಡಿದಿದೆ. ಅಲ್ಲದೆ ರಿವ್ಯೂವ್ನಲ್ಲೂ ಚೆಂಡು ಬ್ಯಾಟ್ಗೆ ಬಡಿದಿದೆಯೋ ಅಥವಾ ಪ್ಯಾಡಿಗೆ ಬಡಿದಿದೆಯೋ ಎಂಬುದು ಅಸ್ಪಷ್ಟವಾಗಿತ್ತು. ಹೀಗಾಗಿ ಫೀಲ್ಡ್ ಅಂಪೈರ್ ನಾಟೌಟ್ ನೀಡಿರುವ ಕಾರಣ, ಡೌಟ್ ಆಫ್ ಬೆನಿಫಿಟ್ ಆದಾರದ ಮೇಲೆ ಮೂರನೇ ಅಂಪೈರ್ ನಿರ್ಣಯ ಬ್ಯಾಟರ್ ಪರ ಬರಬೇಕಿತ್ತು. ಆದರೆ ಮೂರನೇ ಅಂಪೈರ್ ಶಾನ್ ಮಸೂದ್ ಔಟೆಂದು ತೀರ್ಪು ನೀಡಿದರು.
ಹೀಗಾಗಿ ಅಂಪೈರ್‌ನ ನಿರ್ಧಾರದಿಂದ ಮಸೂದ್ ಅತೃಪ್ತರಾಗಿದ್ದಲ್ಲದೆ, ಡ್ರೆಸ್ಸಿಂಗ್ ರೂಮ್‌ನಲ್ಲಿಯೂ ತಮ್ಮ ಕೋಪವನ್ನು ಹೊರಹಾಕಿದರು. ಮಸೂದ್ ತನ್ನ ಕೋಚ್‌ಗೆ ಮಾನಿಟರ್‌ನಲ್ಲಿ ರಿಪ್ಲೇ ತೋರಿಸಿ ಇದು ನಾಟೌಟ್ ಎಂಬುದನ್ನು ಮನವರಿಕೆ ಮಾಡಲು ಯತ್ನಿಸಿದರು. ಇತ್ತ ಪಾಕಿಸ್ತಾನದ ಸಹಾಯಕ ಸಿಬ್ಬಂದಿ ಕೂಡ ಅಂಪೈರ್ ಅವರ ನಿರ್ಧಾರದಿಂದ ಕೋಪಗೊಂಡರು.
Shan Masood cannot believe he was given out. Look at his reaction 🇵🇰💔💔
Was it the right decision? ☹️ #PAKvBAN #tapmad #HojaoADFree pic.twitter.com/OclzyZN4RD
— Farid Khan (@_FaridKhan) August 21, 2024
ಪಾಕಿಸ್ತಾನಕ್ಕೆ ಕೆಟ್ಟ ಆರಂಭ
ಮೊದಲ ಇನ್ನಿಂಗ್ಸ್ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಆರಂಭ ಅತ್ಯಂತ ಕಳಪೆಯಾಗಿತ್ತು. ನಾಲ್ಕನೇ ಓವರ್‌ನಲ್ಲಿ ಅಬ್ದುಲ್ಲಾ ಶಫೀಕ್ ಕೇವಲ 2 ರನ್ ಗಳಿಸಿ ಔಟಾದರು. 7ನೇ ಓವರ್‌ನಲ್ಲಿ ನಾಯಕ ಶಾನ್ ಮಸೂದ್ 11 ರನ್ ಗಳಿಸಿ ಔಟಾದರೆ, 9ನೇ ಓವರ್‌ನಲ್ಲಿ ಬಾಬರ್ ಆಝಂ ಖಾತೆ ತೆರೆಯದೆ ಔಟಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:02 pm, Wed, 21 August 24