ಮುಲ್ತಾನ್ ಮೈದಾನದಲ್ಲಿ ನಡೆಯುತ್ತಿರುವ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದೆ. ಪ್ರವಾಸಿ ಇಂಗ್ಲೆಂಡ್ ತಂಡ ಗೆಲುವಿನ ಸನಿಹದಲ್ಲಿದೆ. ಮೊದಲ ಇನ್ನಿಂಗ್ಸ್ನಲ್ಲಿ ಪಾಕ್ ನೀಡಿದ್ದ 556 ರನ್ಗಳಿಗೆ ಉತ್ತರವಾಗಿ ಇಂಗ್ಲೆಂಡ್ ತಂಡ ಬರೋಬ್ಬರಿ 823 ರನ್ ಕಲೆಹಾಕಿತು. ಆಂಗ್ಲರು ಇಷ್ಟು ಬೃಹತ್ ಮೊತ್ತ ಕಲೆಹಾಕಲು ಹ್ಯಾರಿ ಬ್ರೂಕ್ ಮತ್ತು ಜೋ ರೂಟ್ ನಡೆಸಿದ ದಾಖಲೆಯ ಜೊತೆಯಾಟವೇ ಕಾರಣ. ಈ ವೇಳೆ ಬ್ರೂಕ್ ತ್ರಿಶತಕ ಗಳಿಸಿದರೆ, ರೂಟ್ 262 ರನ್ ಬಾರಿಸಿದರು. ಒಂದೆಡೆ ಮೈದಾನದಲ್ಲಿ ಪಾಕ್ ಬೌಲರ್ಗಳನ್ನು ಹೈರಾಣಾಗಿಸಲು ಸಾಕಷ್ಟು ಬೆವರು ಹರಿಸಿದ್ದ ರೂಟ್, ಆ ಬಳಿಕ ತಮ್ಮ ಬಟ್ಟೆಗಳನ್ನು ಬಹಿರಂಗವಾಗಿಯೇ ಮೈದಾನದಲ್ಲಿ ಒಣಗಲು ಹಾಕಿದ್ದರು. ಅದರ ಫೋಟೋ ಈಗ ಎಲ್ಲೆಡೆ ವೈರಲ್ ಆಗಿದೆ.
ಹ್ಯಾರಿ ಬ್ರೂಕ್ ಜೊತೆಗೂಡಿ ದಾಖಲೆಯ 454 ರನ್ಗಳ ಜೊತೆಯಾಟ ನಡೆಸಿದ್ದ ಜೋ ರೂಟ್ ತಮ್ಮ ಇನ್ನಿಂಗ್ಸ್ನಲ್ಲಿ 375 ಎಸೆತಗಳನ್ನು ಎದುರಿಸಿ 17 ಬೌಂಡರಿಗಳ ಸಹಿತ 262 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ದಿನವೀಡಿ ಕ್ರೀಸ್ನಲ್ಲಿ ನಿಂತು ಸಾಕಷ್ಟು ಬೆವರು ಹರಿಸಿದ್ದ ರೂಟ್ ಔಟಾದ ಬಳಿಕ ಬೆವರಿನಿಂದ ಒದ್ದೆಯಾಗಿದ್ದ ತಮ್ಮ ಬಟ್ಟೆಯನ್ನು ಮುಲ್ತಾನ್ ಮೈದಾನದ ಬೌಂಡರಿ ಬಳಿ ಒಣಗಿಸಲು ಹಾಕಿದ್ದರು. ರೂಟ್ ಕೇವಲ ತಮ್ಮ ಜರ್ಸಿಯನ್ನು ಒಣಹಾಕಿದ್ದರೆ ಅದು ಇಷ್ಟು ಚರ್ಚೆಯಾಗುತ್ತಿರಲಿಲ್ಲ. ಆದರೆ ರೂಟ್, ತಮ್ಮ ಜರ್ಸಿಯ ಜೊತೆಗೆ ಪ್ಯಾಂಟ್ ಹಾಗೂ ಅವರ ಒಳ ಉಡುಪುಗಳನ್ನು ಒಣ ಹಾಕಿದ್ದರು.
Wondering how exhausted Joe Root must be after his mammoth stint in the middle?
He’s currently drying his soaking wet kit in the baking Multan sun 😂#PAKvENG pic.twitter.com/GWEJDjSmA8
— England’s Barmy Army 🏴🎺 (@TheBarmyArmy) October 10, 2024
ಪಾಕಿಸ್ತಾನದ ವಿರುದ್ಧ ಜೋ ರೂಟ್ ಸಿಡಿಸಿದ ಈ ದ್ವಿಶತಕ ಅವರ ವೃತ್ತಿ ಬದುಕಿನ ವಿಶೇಷ ಮೈಲಿಗಲ್ಲಾಗಿದೆ. ಈ ದ್ವಿಶತಕದೊಂದಿಗೆ ರೂಟ್, ಪಾಕಿಸ್ತಾನ, ಶ್ರೀಲಂಕಾ ಮತ್ತು ಭಾರತದಲ್ಲಿ ದ್ವಿಶತಕಗಳನ್ನು ಗಳಿಸಿದ ಮೊದಲ ಏಷ್ಯನ್ ಅಲ್ಲದ ಬ್ಯಾಟ್ಸ್‌ಮನ್ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ರೂಟ್ ಅವರನ್ನು ಇಂಗ್ಲೆಂಡ್‌ನಲ್ಲಿ ರನ್-ಸ್ಕೋರಿಂಗ್ ಬ್ಯಾಟ್ಸ್‌ಮನ್ ಎಂದು ಕರೆಯಲಾಗುತ್ತದೆ ಆದರೆ ಈ ಆಟಗಾರ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಶ್ರೀಲಂಕಾ, ಯುಎಇ, ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನದಲ್ಲಿ 50 ಕ್ಕಿಂತ ಹೆಚ್ಚು ಸರಾಸರಿ ಹೊಂದಿದ್ದಾರೆ. ಭಾರತದಲ್ಲಿ ಅವರು 45 ಕ್ಕಿಂತ ಹೆಚ್ಚು ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:28 pm, Thu, 10 October 24