PAK vs NZ: ಲೈವ್ ಮ್ಯಾಚ್​ನಲ್ಲೇ ಪಾಕ್ ಜೆರ್ಸಿಯನ್ನು ನೆಲಕ್ಕೆ ಎಸೆದ ಅಂಪೈರ್! ಕಾಲು ಹಿಡಿದ ನಸೀಮ್ ಶಾ; ವಿಡಿಯೋ

| Updated By: ಪೃಥ್ವಿಶಂಕರ

Updated on: Jan 12, 2023 | 11:38 AM

PAK vs NZ: ನ್ಯೂಜಿಲೆಂಡ್‌ನ ಬ್ಯಾಟಿಂಗ್‌ ಸಮಯದಲ್ಲಿ ಆನ್‌-ಫೀಲ್ಡ್ ಅಂಪೈರ್ ಅಲೀಂ ದಾರ್‌ ಕಾಲಿಗೆ ಚೆಂಡು ಬಡಿದಿದೆ. ಚೆಂಡು ಬಿದ್ದ ಕೂಡಲೇ ನೋವಿನಿಂದ ನರಳಲಾರಂಭಿಸಿದ ಅಲೀಂ ದಾರ್ ಕೋಪಗೊಂಡು ಪಾಕಿಸ್ತಾನಿ ಆಟಗಾರನ ಜೆರ್ಸಿಯನ್ನು ಬಿಸಾಡಿದ್ದಾರೆ.

PAK vs NZ: ಲೈವ್ ಮ್ಯಾಚ್​ನಲ್ಲೇ ಪಾಕ್ ಜೆರ್ಸಿಯನ್ನು ನೆಲಕ್ಕೆ ಎಸೆದ ಅಂಪೈರ್! ಕಾಲು ಹಿಡಿದ ನಸೀಮ್ ಶಾ; ವಿಡಿಯೋ
ಆನ್‌-ಫೀಲ್ಡ್ ಅಂಪೈರ್ ಅಲೀಂ ದಾರ್‌ ಕಾಲಿಗೆ ಬಡಿದ ಚೆಂಡು
Follow us on

ಕ್ರಿಕೆಟ್ ಮೈದಾನದಲ್ಲಿ ಆಟಗಾರರು ಆಗಾಗ್ಗೆ ಗಾಯಗೊಳ್ಳುವುದನ್ನು ನಾವು ನೋಡುತ್ತಲೇ ಇರುತ್ತೇವೆ. ಅಂಪೈರ್‌ಗಳು ಕೂಡ ಒಮ್ಮೊಮ್ಮೆ ಇಂಜುರಿಗೆ ಒಳಗಾಗುವುದು ಕೂಡ ಸಹಜ. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ (Pakistan and New Zealand) ನಡುವಿನ ಎರಡನೇ ಏಕದಿನ ಪಂದ್ಯದಲ್ಲೂ ಇದೇ ರೀತಿಯ ಘಟನೆ ನಡೆದಿದೆ. ಈ ಪಂದ್ಯದಲ್ಲಿ, ನ್ಯೂಜಿಲೆಂಡ್‌ನ ಬ್ಯಾಟಿಂಗ್‌ ಸಮಯದಲ್ಲಿ ಆನ್‌-ಫೀಲ್ಡ್ ಅಂಪೈರ್ ಅಲೀಂ ದಾರ್‌ (Aleem Dar) ಕಾಲಿಗೆ ಚೆಂಡು ಬಡಿದಿದೆ. ಚೆಂಡು ಬಿದ್ದ ಕೂಡಲೇ ನೋವಿನಿಂದ ನರಳಲಾರಂಭಿಸಿದ ಅಲೀಂ ದಾರ್ ಕೋಪಗೊಂಡು ಪಾಕಿಸ್ತಾನಿ ಆಟಗಾರನ ಜೆರ್ಸಿಯನ್ನು ಬಿಸಾಡಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ವಾಸ್ತವವಾಗಿ ನ್ಯೂಜಿಲೆಂಡ್ ಇನ್ನಿಂಗ್ಸ್​ನ 36ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿತು. ಈ ವೇಳೆ ಪಾಕ್ ಪರ ಹ್ಯಾರಿಸ್ ರೌಫ್ ಬೌಲಿಂಗ್ ಮಾಡುತ್ತಿದ್ದರು. ರೌಪ್ ನಾಲ್ಕನೇ ಎಸೆತವನ್ನು ಕಿವೀಸ್​ನ ಗ್ಲೆನ್ ಫಿಲಿಪ್ಸ್ ಮಿಡ್ ವಿಕೆಟ್‌ ಕಡೆ ಆಡಿದರು. ಬಳಿಕ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳು 2 ರನ್ ಕದಿಯಲು ಬಯಸಿದ್ದರು ಆದರೆ ಪಾಕಿಸ್ತಾನದ ಆಟಗಾರ ಮೊಹಮ್ಮದ್ ವಾಸಿಮ್ ಬೇಗನೆ ಚೆಂಡನ್ನು ಹಿಡಿದು ನಾನ್ ಸ್ಟ್ರೈಕ್ ಎಂಡ್‌ಗೆ ಎಸೆದರು. ಈ ವೇಳೆ ಅಲ್ಲಿಯೇ ನಿಂತಿದ್ದ ಅಂಪೈರ್ ಅಲೀಂ ದಾರ್ ಕಾಲಿಗೆ ಚೆಂಡು ನೇರವಾಗಿ ಬಿದ್ದಿದೆ. ಚೆಂಡು ಬಡಿದ ತಕ್ಷಣ ಅಲೀಂ ದಾರ್ ನೋವಿನಿಂದ ನರಳುತ್ತಾ ತನ್ನ ಕೈಯಲ್ಲಿದ್ದ ಹಾರಿಸ್ ರೌಫ್ ಅವರ ಜೆರ್ಸಿಯನ್ನು ನೆಲದ ಮೇಲೆ ಬಿಸಾಡಿದ್ದಾರೆ.

Ranji Trophy: ಮಾರಕ ಬೌಲಿಂಗ್, ಬಲಿಷ್ಠ ಬ್ಯಾಟಿಂಗ್​ಗೆ ತತ್ತರಿಸಿದ ರಾಜಸ್ಥಾನ್; ಕರ್ನಾಟಕಕ್ಕೆ 316 ರನ್​ಗಳ ಬೃಹತ್ ಮುನ್ನಡೆ

ಅಲೀಂ ನೆರವಿಗೆ ದಾವಿಸಿದ ಪಾಕ್ ವೇಗಿ

ಬಳಿಕ ಅಲೀಂ ದಾರ್ ನೋವಿನಿಂದ ಬಳಲುತ್ತಿರುವುದನ್ನು ನೋಡಿದ ವೇಗದ ಬೌಲರ್ ನಸೀಮ್ ಶಾ, ಅಲೀಂ ಕಾಲಿಗೆ ಸ್ವಲ್ಪ ಸಮಯ ಮಸಾಜ್ ಮಾಡಿದರು. ಇದಾದ ಬಳಿಕ ಅಲೀಂ ದಾರ್ ಅವರ ಕಾಲಿಗೆ ಸ್ಪ್ರೇ ಹಾಕಲಾಯಿತು. ಈ ಸಂದರ್ಭದಲ್ಲಿ ಬಾಬರ್ ಆಜಂ ನಗುತ್ತಿದ್ದರಾದರೂ, ಬಳಿಕ ಅಲೀಂ ದಾರ್ ಕಾಲಿಗೆ ಬಾಲು ಜೋರಾಗಿ ಬಡಿದಿದ್ದನ್ನು ಕಂಡ ಬಾಬರ್ ಮುಖದಲ್ಲೂ ನೋವು ಕಾಣಿಸಿಕೊಂಡಿತ್ತು.

ಕಿವೀಸ್​ಗೆ 79 ರನ್ ಜಯ

ಪಂದ್ಯದ ಕುರಿತು ಮಾತನಾಡುವುದಾದರೆ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ನ್ಯೂಜಿಲೆಂಡ್ 2 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು ಆದರೆ ಅದರ ನಂತರ ಕಾನ್ವೆ ಮತ್ತು ವಿಲಿಯಮ್ಸನ್ 181 ರನ್ ಜೊತೆಯಾಟವನ್ನು ಹಂಚಿಕೊಳ್ಳುವ ಮೂಲಕ ನ್ಯೂಜಿಲೆಂಡ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಕಾನ್ವೆ ಅದ್ಭುತ ಶತಕ ಸಿಡಿಸಿ ಮಿಂಚಿದರು. ಆದರೆ ಈ ಜೋಡಿಯ ವಿಕೆಟ್ ಪತನದೊಂದಿಗೆ ನ್ಯೂಜಿಲೆಂಡ್ ಇನ್ನಿಂಗ್ಸ್ ಹಾದಿ ತಪ್ಪಿತು. ಕೇನ್ ವಿಲಿಯಮ್ಸನ್ ಕೂಡ ಶತಕ ವಂಚಿತರಾಗಿ ನವಾಜ್ ಎಸೆತದಲ್ಲಿ 85 ರನ್ ಗಳಿಸಿ ಔಟಾದರು. ಇದಾದ ಬಳಿಕ ನ್ಯೂಜಿಲೆಂಡ್‌ನ ಮಧ್ಯಮ ಕ್ರಮಾಂಕ ಇಸ್ಪೀಟೆಲೆಯಂತೆ ಕುಸಿಯಿತು. ಅಂತಿಮವಾಗಿ ಕಿವೀಸ್ ತಂಡ 261 ರನ್​ಗಳಿಗೆ ಆಲೌಟ್ ಆಯಿತು. ಆದರೆ ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ಕೇವಲ 182 ರನ್​ಗಳಿಗೆ ಆಲೌಟ್ ಆಗುವುದರೊಂದಿಗೆ 79 ರನ್​ಗಳ ಹೀನಾಯ ಸೋಲು ಕಂಡಿತು. ಈ ಮೂಲಕ ಸರಣಿಯಲ್ಲಿ ಎರಡೂ ತಂಡಗಳು ತಲಾ 1-1ರಿಂದ ಸಮಬಲ ಸಾಧಿಸಿವೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:36 am, Thu, 12 January 23