ಪಾಕಿಸ್ತಾನ್ ವಿರುದ್ಧ 11 ವಿಕೆಟ್ ಕಬಳಿಸಿದ ಮುತ್ತುಸಾಮಿ

Pakistan vs South Africa Test: ಪಾಕಿಸ್ತಾನ್ ಹಾಗೂ ಸೌತ್ ಆಫ್ರಿಕಾ ನಡುವಣ ಮೊದಲ ಟೆಸ್ಟ್ ಪಂದ್ಯವು ರೋಚಕಘಟ್ಟದತ್ತ ಸಾಗಿದೆ. ಈ ಪಂದ್ಯದ ಮೊದಲ ಇನಿಂಗ್ಸ್​​ನಲ್ಲಿ 378 ರನ್​ ಬಾರಿಸಿದ್ದ ಪಾಕಿಸ್ತಾನ್ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ ಕೇವಲ 167 ರನ್​​ಗಳಿಗೆ ಆಲೌಟ್ ಆಗಿದೆ. ಇದೀಗ ಮೊದಲ ಇನಿಂಗ್ಸ್​​ನಲ್ಲಿ ಸೌತ್ ಆಫ್ರಿಕಾ ತಂಡವು 277 ರನ್​​ಗಳ ಗುರಿ ಪಡೆದುಕೊಂಡಿದೆ.

ಪಾಕಿಸ್ತಾನ್ ವಿರುದ್ಧ 11 ವಿಕೆಟ್ ಕಬಳಿಸಿದ ಮುತ್ತುಸಾಮಿ
Senuran Muthusamy

Updated on: Oct 15, 2025 | 10:53 AM

ಲಾಹೋರ್​​ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಾಕಿಸ್ತಾನ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಸ್ಪಿನ್ನರ್ ಸೆನುರಾನ್ ಮುತ್ತುಸಾಮಿ 11 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು ಮೊದಲ ಇನಿಂಗ್ಸ್​​ನಲ್ಲಿ 378 ರನ್​​ಗಳಿಸಿ ಆಲೌಟ್ ಆಗಿತ್ತು.

ಹೀಗೆ ಪಾಕಿಸ್ತಾನ್ ತಂಡವು 400 ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಲು ಮುಖ್ಯ ಕಾರಣ ಸೆನುರಾನ್ ಮುತ್ತುಸಾಮಿ. ಲಾಹೋರ್ ಪಿಚ್​​ನಲ್ಲಿ ಸ್ಪಿನ್ ಮೋಡಿ ಮಾಡಿದ್ದ ಮುತ್ತುಸಾಮಿ ಮೊದಲ ಇನಿಂಗ್ಸ್​​ನಲ್ಲಿ 32 ಓವರ್​ಗಳಲ್ಲಿ 117 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು.

ಇದಾದ ಬಳಿಕ ಪ್ರಥಮ ಇನಿಂಗ್ಸ್ ಆಡಿದ ಸೌತ್ ಆಫ್ರಿಕಾ ತಂಡವು ಮೊದಲ ಇನಿಂಗ್ಸ್​​ನಲ್ಲಿ ಕೇವಲ 269 ರನ್​​ಗಳಿಸಿ ಆಲೌಟ್ ಆದರು. ಅದರಂತೆ 109 ರನ್​​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ್ ತಂಡವು ಮತ್ತೊಮ್ಮೆ ಸೆನುರಾನ್ ಮುತ್ತುಸಾಮಿ ಸ್ಪಿನ್ ಮೋಡಿಗೆ ತತ್ತರಿಸಿತು.

ದ್ವಿತೀಯ ಇನಿಂಗ್ಸ್​ನಲ್ಲಿ 17 ಓವರ್​ ಎಸೆದ ಸೆನುರಾನ್ ಮುತ್ತುಸಾಮಿ ಕೇವಲ 57 ರನ್ ನೀಡಿ 5 ವಿಕೆಟ್ ಕಬಳಿಸಿದರು. ಪರಿಣಾಮ ಪಾಕಿಸ್ತಾನ್ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ ಕೇವಲ 167 ರನ್​​ಗಳಿಗೆ ಆಲೌಟ್ ಆಗಿದೆ.

ಮುತ್ತುಸಾಮಿ ದಾಖಲೆ:

ಲಾಹೋರ್ ಪಿಚ್​​​ನಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ಕೇವಲ ಇಬ್ಬರು ವಿದೇಶಿ ಬೌಲರ್​​ಗಳು ಮಾತ್ರ 11 ವಿಕೆಟ್ ಕಬಳಿಸಿದ್ದಾರೆ. ಈ ಸಾಧನೆ ಮಾಡಿದ ಮೊದಲ ಬೌಲರ್ ಇಂಗ್ಲೆಂಡ್​ನ ನಿಕ್ ಕುಕ್. 1984 ರಲ್ಲಿ ಕುಕ್ ಮೊದಲ ಇನಿಂಗ್ಸ್​​ನಲ್ಲಿ 6 ಹಾಗೂ ದ್ವಿತೀಯ ಇನಿಂಗ್ಸ್​​ನಲ್ಲಿ 5 ವಿಕೆಟ್ ಕಬಳಿಸಿದ್ದರು.

ಇದೀಗ ಈ ದಾಖಲೆಯನ್ನು ಸರಿಗಟ್ಟುವಲ್ಲಿ ಸೆನುರಾನ್ ಮುತ್ತುಸಾಮಿ ಯಶಸ್ವಿಯಾಗಿದ್ದಾರೆ. ಪಾಕ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಮುತ್ತುಸಾಮಿ 6 ವಿಕೆಟ್ ಪಡೆದರೆ, ದ್ವಿತೀಯ ಇನಿಂಗ್ಸ್​ನಲ್ಲಿ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ಪಾಕಿಸ್ತಾನ್ ಪ್ಲೇಯಿಂಗ್ 11: ಇಮಾಮ್-ಉಲ್-ಹಕ್ , ಅಬ್ದುಲ್ಲಾ ಶಫೀಕ್ , ಶಾನ್ ಮಸೂದ್ (ನಾಯಕ) , ಬಾಬರ್ ಆಝಂ , ಸೌದ್ ಶಕೀಲ್ , ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್) , ಸಲ್ಮಾನ್ ಅಲಿ ಅಘಾ , ಹಸನ್ ಅಲಿ , ಶಾಹೀನ್ ಅಫ್ರಿದಿ , ನೊಮಾನ್ ಅಲಿ , ಸಾಜಿದ್ ಖಾನ್.

ಇದನ್ನೂ ಓದಿ: ಅಶ್ವಿನ್ ವಿಶ್ವ ದಾಖಲೆ ಅಳಿಸಿ ಹಾಕಿದ ನೊಮಾನ್ ಅಲಿ

ಸೌತ್ ಆಫ್ರಿಕಾ ಪ್ಲೇಯಿಂಗ್ 11: ಟೋನಿ ಡಿ ಝೋರ್ಝಿ , ರಯಾನ್ ರಿಕೆಲ್ಟನ್ , ವಿಯಾನ್ ಮುಲ್ಡರ್ , ಐಡೆನ್ ಮಾರ್ಕ್ರಾಮ್ (ನಾಯಕ) , ಟ್ರಿಸ್ಟನ್ ಸ್ಟಬ್ಸ್ , ಡೆವಾಲ್ಡ್ ಬ್ರೆವಿಸ್ , ಕೈಲ್ ವೆರ್ರಿನ್ನೆ (ವಿಕೆಟ್ ಕೀಪರ್) , ಸೆನುರಾನ್ ಮುತ್ತುಸಾಮಿ , ಪ್ರೆನೆಲನ್ ಸುಬ್ರಾಯೆನ್ , ಕಗಿಸೊ ರಬಾಡ , ಸೈಮನ್ ಹಾರ್ಮರ್.