AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿರಾಟ್ ಕೊಹ್ಲಿ, ರೋಹಿತ್​​ಗೆ ಕೊನೆಯ ಸರಣಿ…. ಬಿಸಿಸಿಐ ಕಡೆಯಿಂದ ಸಿಕ್ತು ಸ್ಪಷ್ಟನೆ

India vs Australia: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಸರಣಿಯು ಅಕ್ಟೋಬರ್ 19 ರಿಂದ ಶುರುವಾಗಲಿದೆ. ಕಾಂಗರೂ ನಾಡಿನಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಒಟ್ಟು 8 ಪಂದ್ಯಗಳನ್ನಾಡಲಾಗುತ್ತದೆ. ಮೊದಲಿಗೆ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಇದಾದ ಬಳಿಕ ಟಿ20 ಸರಣಿ ಜರುಗಲಿದೆ.

ವಿರಾಟ್ ಕೊಹ್ಲಿ, ರೋಹಿತ್​​ಗೆ ಕೊನೆಯ ಸರಣಿ.... ಬಿಸಿಸಿಐ ಕಡೆಯಿಂದ ಸಿಕ್ತು ಸ್ಪಷ್ಟನೆ
Rohit Sharma - Virat Kohli
ಝಾಹಿರ್ ಯೂಸುಫ್
|

Updated on: Oct 15, 2025 | 8:30 AM

Share

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿಯು ಅಕ್ಟೋಬರ್ 19 ರಿಂದ ಶುರುವಾಗಲಿದೆ. ಈ ಸರಣಿಯ ಮೂಲಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕಂಬ್ಯಾಕ್ ಮಾಡಲಿದ್ದಾರೆ. ಅಂದರೆ ಚಾಂಪಿಯನ್ಸ್ ಟ್ರೋಫಿಯ ಬಳಿಕ ರೋಕೊ ಜೋಡಿ ಟೀಮ್ ಇಂಡಿಯಾ ಪರ ಒಂದೇ ಒಂದು ಪಂದ್ಯವಾಡಿಲ್ಲ. ಇದೀಗ ಆಸೀಸ್ ಸರಣಿಯ ಮೂಲಕ ಮತ್ತೆ ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲು ಕೊಹ್ಲಿ ಹಾಗೂ ರೋಹಿತ್ ಸಜ್ಜಾಗಿದ್ದಾರೆ. ಈ ಸಜ್ಜಾಗುವಿಕೆಯ ಬೆನ್ನಲ್ಲೇ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಇದುವೇ ಕೊನೆಯ ಸರಣಿ ಎಂಬ ಸುದ್ದಿಗಳು ಹರಿದಾಡಿದ್ದವು. ಈ ಬಗ್ಗೆ ಇದೀಗ ಬಿಸಿಸಿಐ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ.

ಆಸ್ಟ್ರೇಲಿಯಾ ಸರಣಿಯು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ‘ಕೊನೆಯ’ ಸರಣಿಯಾಗಲಿದೆ ಎಂಬ ಹೇಳಿಕೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿರಸ್ಕರಿಸಿದ್ದಾರೆ. ಕೊಹ್ಲಿ ಮತ್ತು ರೋಹಿತ್ ಅವರ ಉಪಸ್ಥಿತಿಯು ತಂಡಕ್ಕೆ ‘ಪ್ರಯೋಜನ’ ನೀಡುತ್ತದೆ ಮತ್ತು ಆಸ್ಟ್ರೇಲಿಯಾವನ್ನು ಸೋಲಿಸಲು ಸಹಾಯ ಮಾಡುತ್ತದೆ. ನಿವೃತ್ತಿ ಯಾವಾಗಲೂ ಆಟಗಾರರ ಆಯ್ಕೆಯಾಗಿರುತ್ತದೆ, ಮಂಡಳಿಯ ಆಯ್ಕೆಯಲ್ಲ ಎಂದು ಶುಕ್ಲಾ ಸ್ಪಷ್ಟಪಡಿಸಿದ್ದಾರೆ.

ಕೊಹ್ಲಿ ಮತ್ತು ರೋಹಿತ್ ಟೆಸ್ಟ್ ಮತ್ತು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾಗಿದ್ದಾರೆ. ಇದಾಗ್ಯೂ 2027 ರ ವಿಶ್ವಕಪ್‌ನಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಲ್ಲಿದ್ದಾರೆ. ಈ ವೇಳೆ ರೋಹಿತ್ ಶರ್ಮಾ ಅವರ ವಯಸ್ಸು 40 ವರ್ಷ ಆಗಿರಲಿದೆ. ಹೀಗಾಗಿಯೇ ಇತ್ತೀಚೆಗೆ ಏಕದಿನ ತಂಡದ ನಾಯಕತ್ವವನ್ನು ಶುಭ್​​ಮನ್ ಗಿಲ್​ಗೆ ನೀಡಲಾಗಿದೆ.

ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ಸರಣಿಯ ಬಳಿಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ಏಕದಿನ ತಂಡದಿಂದ ಕೈ ಬಿಡಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬಂದಿದ್ದವು. ಇದೀಗ ಅಂತಹ ಯಾವುದೇ ಆಲೋಚನೆಗಳಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ರಾಜೀವ್ ಶುಕ್ಲಾ ಹೇಳಿದ್ದಾರೆ.

ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟ್ಸ್‌ಮನ್‌ಗಳು. ಅವರನ್ನು ತಂಡದಲ್ಲಿಟ್ಟುಕೊಂಡು ನಾವು ಆಸ್ಟ್ರೇಲಿಯಾವನ್ನು ಸೋಲಿಸುವಲ್ಲಿ ಯಶಸ್ವಿಯಾಗುತ್ತೇವೆ. ಇದು ಅವರ ಕೊನೆಯ ಏಕದಿನ ಸರಣಿ ಎಂದು ಹೇಳುವುದು ಸಂಪೂರ್ಣವಾಗಿ ತಪ್ಪು. ಅವರು ಯಾವಾಗ ನಿವೃತ್ತರಾಗಬೇಕು ಎಂಬುದು ಅವರ ಮೇಲೆ ಅವಲಂಬಿತವಾಗಿರುತ್ತದೆ.

ಆಸ್ಟ್ರೇಲಿಯಾ ಸರಣಿಯು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಲಾಸ್ಟ್ ಸಿರೀಸ್ ಎಂಬುದೆಲ್ಲಾ ಕೇವಲ ವದಂತಿ. ನಿವೃತ್ತಿ ಎಂಬುದು ಆಟಗಾರರಿಗೆ ಬಿಟ್ಟಂತಹ ವಿಷಯ.  ಇದರಲ್ಲಿ ಭಾರತೀಯ ಕ್ರಿಕೆಟ್ ಮಂಡಳಿಯ ಪಾತ್ರವಿರುವುದಿಲ್ಲ ಎಂದು ರಾಜೀವ್ ಶುಕ್ಲಾ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಅಶ್ವಿನ್ ವಿಶ್ವ ದಾಖಲೆ ಅಳಿಸಿ ಹಾಕಿದ ನೊಮಾನ್ ಅಲಿ

ಇತ್ತ ಬಿಸಿಸಿಐ ಕಾರ್ಯದರ್ಶಿ ಅವರ ಈ ಹೇಳಿಕೆಯ ಹೊರತಾಗಿಯೂ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಬೇಕಿದೆ. ಒಂದು ವೇಳೆ ಕಳಪೆ ಪ್ರದರ್ಶನ ನೀಡಿದರೆ ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆ ಮಾಡುವುದು ಅನುಮಾನ. ಹೀಗಾಗಿಯೇ ಆಸ್ಟ್ರೇಲಿಯಾ ಸರಣಿಯು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಏಕದಿನ ಭವಿಷ್ಯ ನಿರ್ಧರಿಸಲಿದೆ ಎನ್ನಲಾಗುತ್ತಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಓಂಪ್ರಕಾಶ್ ರಾವ್ ನನ್ನ ಗುರುಗಳು: ‘ಪ್ರೇಮದ ಊರಲಿ’ ಡೈರೆಕ್ಟರ್ ಹೆಮ್ಮೆಯ ಮಾತು
ಓಂಪ್ರಕಾಶ್ ರಾವ್ ನನ್ನ ಗುರುಗಳು: ‘ಪ್ರೇಮದ ಊರಲಿ’ ಡೈರೆಕ್ಟರ್ ಹೆಮ್ಮೆಯ ಮಾತು
ಇ-ಕೆವೈಸಿ ನೆಪದಲ್ಲಿ ಹಣ ವಸೂಲಿ
ಇ-ಕೆವೈಸಿ ನೆಪದಲ್ಲಿ ಹಣ ವಸೂಲಿ
ಹನೂರಿನ ಇಂಡಿಗನತ್ತ-ಮೆಂದಾರೆ ಗ್ರಾಮಸ್ಥರ ನರಕಯಾತನೆ
ಹನೂರಿನ ಇಂಡಿಗನತ್ತ-ಮೆಂದಾರೆ ಗ್ರಾಮಸ್ಥರ ನರಕಯಾತನೆ
‘ಪ್ರೇಮದ ಊರಲಿ’ ನಟಿಯರಿಗೆ ಕನ್ನಡದ ಬಗ್ಗೆ ಸಂಕಲ್ಪ ಮಾಡಿಸಿದ ರಂಗಾಯಣ ರಘು
‘ಪ್ರೇಮದ ಊರಲಿ’ ನಟಿಯರಿಗೆ ಕನ್ನಡದ ಬಗ್ಗೆ ಸಂಕಲ್ಪ ಮಾಡಿಸಿದ ರಂಗಾಯಣ ರಘು
ಕೊನೆಗೂ ತಾಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಮುಹೂರ್ತ ಫಿಕ್ಸ್
ಕೊನೆಗೂ ತಾಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಮುಹೂರ್ತ ಫಿಕ್ಸ್
ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪೊಲೀಸ್ ಕಮಿಷನರೇಟ್‌ಗಳಿಗೆ ಸಂಪುಟ ಅನುಮೋದನೆ
ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪೊಲೀಸ್ ಕಮಿಷನರೇಟ್‌ಗಳಿಗೆ ಸಂಪುಟ ಅನುಮೋದನೆ
ದಸರಾ, ದೀಪಾವಳಿ ಹೊತ್ತಲ್ಲೇ ಬೆಲೆ ಏರಿಕೆ ಶಾಕ್: ಹಾಲಿನ ದರ 8 ರೂ. ಹೆಚ್ಚಳ
ದಸರಾ, ದೀಪಾವಳಿ ಹೊತ್ತಲ್ಲೇ ಬೆಲೆ ಏರಿಕೆ ಶಾಕ್: ಹಾಲಿನ ದರ 8 ರೂ. ಹೆಚ್ಚಳ
ಕೆಪಿಎಸ್​ಸಿ ಅಕ್ರಮ: ಮಾಜಿ ಅಧ್ಯಕ್ಷ ಶಿವಶಂಕರಪ್ಪ,ಸದಸ್ಯೆ ಗೀತಾ ಇಡಿ ವಶಕ್ಕೆ
ಕೆಪಿಎಸ್​ಸಿ ಅಕ್ರಮ: ಮಾಜಿ ಅಧ್ಯಕ್ಷ ಶಿವಶಂಕರಪ್ಪ,ಸದಸ್ಯೆ ಗೀತಾ ಇಡಿ ವಶಕ್ಕೆ
ಬಿಗ್​​ಬಾಸ್ ಕನ್ನಡ: ‘ಅಯ್ಯೋ ಉರಿ’ ಕಣ್ಣೀರು ಹಾಕಿದ ಕಿರಣ್ ಶಾಸ್ತ್ರಿ
ಬಿಗ್​​ಬಾಸ್ ಕನ್ನಡ: ‘ಅಯ್ಯೋ ಉರಿ’ ಕಣ್ಣೀರು ಹಾಕಿದ ಕಿರಣ್ ಶಾಸ್ತ್ರಿ
ನಮ್ಮ್ ಸಿಎಂ ಫೋನ್‌ಗೆ ಸಿಗಲ್ಲ ಎಂದ ಲಕ್ಷ್ಮಿ ಹೆಬ್ಬಾಳ್ಕರ್
ನಮ್ಮ್ ಸಿಎಂ ಫೋನ್‌ಗೆ ಸಿಗಲ್ಲ ಎಂದ ಲಕ್ಷ್ಮಿ ಹೆಬ್ಬಾಳ್ಕರ್