ವೆಸ್ಟ್ ಇಂಡೀಸ್ ವಿರುದ್ಧ ಕರಾಚಿಯಲ್ಲಿ ಗುರುವಾರ ನಡೆದ ಅಂತಿಮ ಮೂರನೇ ಟಿ20 ಪಂದ್ಯದಲ್ಲೂ ಪಾಕಿಸ್ತಾನ (Pakistan vs West Indies 3rd T20I) ತಂಡ ಭರ್ಜರಿ ಗೆಲುವು ಸಾಧಿಸಿ ಸರಣಿ ಕ್ಲೀನ್ ಮಾಡಿದ ಸಾಧನೆ ಗೈದಿದೆ. 200ಕ್ಕೂ ಅಧಿಕ ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಬಾಬರ್ ಅಜಾಮ್ (Babar Azam) ಪಡೆ ಟಿ20 ಕ್ರಿಕೆಟ್ (T20I Cricket) ಇತಿಹಾಸದಲ್ಲಿ ನೂತನ ದಾಖಲೆ ಬರೆದು ಮರೆದಿದೆ. ಆದರೆ, ಸರಣಿ ಕ್ಲೀನ್ ಸ್ವೀಪ್, ಟಿ20 ಕ್ರಿಕೆಟ್ ಸಾಧನೆ ನಡುವೆ ಪಾಕಿಸ್ತಾನ ಕ್ರಿಕೆಟ್ ತಂಡ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ (Troll) ಆಗುತ್ತಿದೆ. ಇದಕ್ಕೆ ಕಾರಣ. ಕಳಪೆ ಫೀಲ್ಡಿಂಗ್. ಅಂದಿನಿಂದಲೂ ಪಾಕಿಸ್ತಾನ ತಂಡ ಫೀಲ್ಡಿಂಗ್ ವಿಚಾರದಲ್ಲಿ ಟ್ರೋಲ್ ಆಗುತ್ತಲೇ ಇದೆ. ಅದು ಈ ಬಾರಿ ಕೂಡ ಕ್ಯಾಚ್ ಡ್ರಾಪ್ ಮಾಡುವ ಮೂಲಕ ಮುಂದುವರೆದಿದೆ. ವಿಶೇಷ ಎಂದರೆ ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ವೈರಲ್ ಆದ ಸಯೀದ್ ಅಜ್ಮಲ್ (Saeed Ajmal) ಹಾಗೂ ಶೋಯೆಬ್ ಮಲೀಕ್ (Shoaib Malik ) ಅವರ ಐಕಾನಿಕ್ ಕ್ಯಾಚ್ ಡ್ರಾಪ್ ರೀತಿಯಲ್ಲೇ ಈ ಬಾರಿ ಕೂಡ ಮರುಕಳಿಸಿದೆ.
ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪಾಕ್ ಬೌಲರ್ಗಳನ್ನು ಬೆಂಡೆತ್ತುತ್ತಿದ್ದನಲ್ಲಿ ಶಾಮರಾ ಬ್ರೂಕ್ಸ್ 8ನೇ ಓವರ್ ಮೊಹಮದ್ ನವಾಜ್ ಬೌಲಿಂಗ್ನಲ್ಲಿ ಲಾಂಗ್ ಆನ್ ಹಾಗೂ ಡೀಪ್ ಮಿಡ್ ವಿಕೆಟ್ ನತ್ತ ಬಾರಿಸಿದ್ದರು. ಶಾಟ್ ಬಾರಿಸಿದ ಟೈಮಿಂಗ್ ಸರಿಯಾಗಿಲ್ಲದ ಕಾರಣ, ಹಸ್ನಾಯಿನ್ ಹಾಗೂ ಇಫ್ತಿಕಾರ್ ಅಹ್ಮದ್ಗೆ ಅದು ಕ್ಯಾಚ್ ಆಗುವ ಹಾದಿಯಲ್ಲಿತ್ತು. ಕ್ಯಾಚ್ ಪಡೆಯಲು ಲಾಂಗ್ ಆನ್ ನಿಂದ ಓಡಿ ಬಂದಿದ್ದ ಹಸ್ನಾಯಿನ್ ಇನ್ನೇನು ಚೆಂಡಿನ ಸಮೀಪ ಬರುವ ವೇಳೆಗೆ ಡೀಪ್ ಮಿಡ್ ವಿಕೆಟ್ ನಿಂದ ಓಡಿ ಬರುತ್ತಿದ್ದ ಇಫ್ತಿಕಾರ್ ಎದುರಾದರು. ಇಬ್ಬರೂ ಫೀಲ್ಡರ್ ಗಳೂ “ಆತ ಕ್ಯಾಚ್ ಹಿಡಿಯುತ್ತಾನೆ” ಎಂದು ಮನಸ್ಸಿನಲ್ಲೇ ಅಂದುಕೊಂಡು ಕ್ಯಾಚ್ ಅನ್ನು ಕೈಚೆಲ್ಲಿದರು.
Hasnain Paying a Tribute to Ajmal’s Famous Catch ?????? pic.twitter.com/aJHFolGjDm
— Taimoor Zaman (@taimoorze) December 16, 2021
ಚೆಂಡಿಗಾಗಿ ಕೈ ಮುಂದೆ ಮಾಡಿದ್ದ ಇಫ್ತಿಕಾರ್, ಕ್ಯಾಚ್ ಬಿಟ್ಟ ಬಳಿಕ ಹಸ್ನಾಯಿನ್ ರನ್ನು ನೋಡಿ ಬೇಸರ ವ್ಯಕ್ತಪಡಿಸಿದರು. ಈ ಹಿಂದೆ ಸಯೀದ್ ಅಜ್ಮಲ್ ಹಾಗೂ ಶೋಯೆಬ್ ಮಲೀಕ್ ಕೂಡ ಇದೇರೀತಿ ಕ್ಯಾಚ್ ಬಿಟ್ಟಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಿದೆ. ಹಸ್ನಾಯಿನ್ ಹಾಗೂ ಇಫ್ತಿಕಾರ್ ಅಹ್ಮದ್ ಹಿಂದಿನ ಇತಿಹಾಸವನ್ನು ಮರುಕಳಿಸಿದ್ದಾರೆ ಎಂದು ಅನೇಕರು ಟ್ರೋಲ್ ಮಾಡುತ್ತಿದ್ದಾರೆ.
Hasnain & ifti ? Malik & ajmal
On both occasions opponent was west indies ??❤️ #PAKvWI pic.twitter.com/YQj12liy5P— Saad Irfan ?? (@SaadIrfan967) December 16, 2021
ಈ ಪಂದ್ಯದಲ್ಲಿ ನಾಯಕ ನಿಕೋಲಸ್ ಪೂರನ್ (64 ರನ್, 37 ಎಸೆತ, 2 ಬೌಂಡರಿ, 6 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನಿರ್ವಹಣೆಯ ನಡುವೆಯೂ ವೆಸ್ಟ್ ಇಂಡೀಸ್ ತಂಡ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 7 ವಿಕೆಟ್‌ಗಳಿಂದ ಮಣಿದಿದೆ. ಇದರಿಂದ ಪಾಕ್ 3-0ಯಿಂದ ಸರಣಿ ಕ್ಲೀನ್‌ಸ್ವೀಪ್ ಸಾಧಿಸಿತು. ವಿಂಡೀಸ್ 20 ಓವರ್ಗೆ 3 ವಿಕೆಟ್‌ಗೆ 207 ರನ್ ಪೇರಿಸಿತು. ಪ್ರತಿಯಾಗಿ ಪಾಕ್, ಮೊಹಮದ್ ರಿಜ್ವಾನ್ (87 ರನ್, 45 ಎಸೆತ, 10 ಬೌಂಡರಿ, 3 ಸಿಕ್ಸರ್) ಮತ್ತು ನಾಯಕ ಬಾಬರ್ ಅಜಮ್ (79ರನ್, 53 ಎಸೆತ, 9 ಬೌಂಡರಿ, 2 ಸಿಕ್ಸರ್) ಹಾಕಿಕೊಟ್ಟ ಭದ್ರ ಬುನಾದಿಯಿಂದ 18.5 ಓವರ್‌ಗಳಲ್ಲಿ 3 ವಿಕೆಟ್‌ಗೆ 208 ರನ್ ಪೇರಿಸಿ ಜಯಿಸಿತು.
Virat Kohli: ವಿರಾಟ್ ಕೊಹ್ಲಿಗೆ ಮತ್ತೊಂದು ಶಾಕ್ ನೀಡಲು ಮುಂದಾದ ಬಿಸಿಸಿಐ?: ಏನು ಗೊತ್ತೇ?
Virat Kohli: ಸದ್ಯದಲ್ಲೇ ಬಿಸಿಸಿಐಯಿಂದ ಮತ್ತೊಂದು ಮಹತ್ವದ ಘೋಷಣೆ: ವಿರಾಟ್ ಕೊಹ್ಲಿಗೆ ಬೆಂಬಿಡದ ಸಂಕಷ್ಟ
(PAK vs WI 3rd T20I Mohammad Hasnain and Iftikhar dropping catch and trolled similar catch like Ajmal and Shoaib Malik)