IND vs SA: ವಿವಾದಗಳ ಸುಳಿಯಲ್ಲಿರುವ ಕೊಹ್ಲಿಗೆ ಆಫ್ರಿಕಾ ಪ್ರವಾಸದಲ್ಲಿ ಸಚಿನ್ ದಾಖಲೆ ಸರಿಗಟ್ಟುವ ಅವಕಾಶ!
IND vs SA: ಸಚಿನ್ ತೆಂಡೂಲ್ಕರ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು, ಅಣದರೆ 20 ಬಾರಿ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ವಿರಾಟ್ ಕೊಹ್ಲಿ 19 ಬಾರಿ ಗೆದ್ದು ಸಚಿನ್ ಹಿಂದೆ ಇದ್ದಾರೆ.
ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಗಮಿಸಿದೆ. ಈ ಪ್ರವಾಸದಲ್ಲಿ 3 ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ. ಮೊದಲ ಟೆಸ್ಟ್ ಡಿಸೆಂಬರ್ 26 ರಿಂದ ಸೆಂಚುರಿಯನ್ನಲ್ಲಿ ನಡೆಯಲಿದೆ. ಭಾರತದ ಹಲವು ನಾಯಕರು ಮೊದಲ ಬಾಕ್ಸಿಂಗ್ ಡೇ ಟೆಸ್ಟ್ ಗೆದ್ದಿದ್ದಾರೆ. ಈ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಕೂಡ ಭಾಗಿಯಾಗಿದ್ದಾರೆ. ಆದರೆ, ಈ ಬಾರಿ ಅವರಿಗೆ ವಿಭಿನ್ನವಾಗಿ ಸಾಧನೆ ಮಾಡುವ ಅವಕಾಶ ಸಿಗಲಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದರೆ, ಎರಡು ಬಾಕ್ಸಿಂಗ್ ಡೇ ಟೆಸ್ಟ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಆದರೆ, ಮೊದಲ ಟೆಸ್ಟ್ ಗೆದ್ದಂತೆ ಸರಣಿ ಗೆದ್ದಂತೆ ಅರ್ಥವಲ್ಲ, ಮೊದಲ ಟೆಸ್ಟ್ ಪಂದ್ಯ ಶ್ರೇಷ್ಠ ಎಂದಲ್ಲ.
ಭಾರತ ಇದುವರೆಗೆ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಈ ಸಾಧನೆ ಮಾಡಿದ ಏಷ್ಯಾದ ಏಕೈಕ ತಂಡ ಶ್ರೀಲಂಕಾ. ಆ ಸಾಧನೆ ಮಾಡಲು ಟೀಂ ಇಂಡಿಯಾಕ್ಕೂ ಅವಕಾಶವಿದೆ. ಈ ವರ್ಷ ಇಂಗ್ಲೆಂಡ್‌ನಲ್ಲಿ ತಂಡ ಉತ್ತಮ ಪ್ರದರ್ಶನ ನೀಡಿದೆ. ಈ ಇಡೀ ವರ್ಷ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿದೆ. ಭಾರತ ಈ ವರ್ಷ ಇದುವರೆಗೆ 13 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 7 ಗೆದ್ದು 3 ಸೋತಿದೆ. ಜೊತೆಗೆ 3 ಟೆಸ್ಟ್‌ಗಳು ಡ್ರಾ ಆಗಿವೆ. ಇದೀಗ ದಕ್ಷಿಣ ಆಫ್ರಿಕಾದಲ್ಲಿಯೂ ಭಾರತ ತಂಡದಿಂದ ಇದೇ ರೀತಿಯ ಪ್ರದರ್ಶನವನ್ನು ನಿರೀಕ್ಷಿಸಲಾಗಿದೆ.
ಸಚಿನ್ಗೆ ಸರಿಸಾಟಿಯಾಗಲಿದ್ದಾರೆ ವಿರಾಟ್! ದಕ್ಷಿಣ ಆಫ್ರಿಕಾದಲ್ಲಿ ಉತ್ತಮ ಪ್ರದರ್ಶನ ನೀಡಲು, ಇಡೀ ತಂಡವು ಉತ್ತಮವಾಗಿ ಆಡುವುದು ಅವಶ್ಯಕ. ಆದರೆ, ಸರಣಿಯ ಸ್ಥಿತಿ ಮತ್ತು ದಿಕ್ಕನ್ನು ನಿರ್ಧರಿಸುವ ಒಬ್ಬ ಆಟಗಾರನ ಹೆಸರು ವಿರಾಟ್ ಕೊಹ್ಲಿ. ಕಳೆದ 2 ವರ್ಷಗಳಿಂದ ಶತಕಕ್ಕಾಗಿ ಕಾಯುತ್ತಿರುವ ವಿರಾಟ್ ಆಫ್ರಿಕನ್ ನೆಲದಲ್ಲಿ ತಮ್ಮ ಕಾಯುವಿಕೆ ಕೊನೆಗೊಳಿಸಿ, ಉತ್ತಮ ಪ್ರದರ್ಶನ ನೀಡಿ, ಈ ಮೂಲಕ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಿದರೆ, ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆಲ್ಲುವ ಕನಸು ನನಸಾಗಲಿದೆ.
ಈ ಸಾಧನೆ ಕೊಹ್ಲಿ ಪಾಲಾಗಲಿದೆ ಸಚಿನ್ ತೆಂಡೂಲ್ಕರ್ ಅವರ ಯಾವ ದಾಖಲೆಯನ್ನು ಸರಿಗಟ್ಟುವ ಮೂಲಕ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಕನಸು ನನಸಾಗಬಹುದು ಎಂದು ಈಗ ನೀವು ಯೋಚಿಸುತ್ತಿರಬೇಕು. ಆ ದಾಖಲೆ ಬೇರೆನೂ ಅಲ್ಲ. ವಾಸ್ತವವಾಗಿ, ಸಚಿನ್ ತೆಂಡೂಲ್ಕರ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು, ಅಣದರೆ 20 ಬಾರಿ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ವಿರಾಟ್ ಕೊಹ್ಲಿ 19 ಬಾರಿ ಗೆದ್ದು ಸಚಿನ್ ಹಿಂದೆ ಇದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸಚಿನ್ ದಾಖಲೆಯನ್ನು ಸರಿಗಟ್ಟುವ ಅವಕಾಶ ಕೊಹ್ಲಿಗಿದೆ.
ಇದನ್ನೂ ಓದಿ:ಗಂಗೂಲಿ-ಚಾಪೆಲ್, ಕೊಹ್ಲಿ-ಕುಂಬ್ಳೆ, ಧೋನಿ-ಸೆಹ್ವಾಗ್; ಟೀಂ ಇಂಡಿಯಾದಲ್ಲಿ ಸಖತ್ ಸದ್ದು ಮಾಡಿದ ವಿವಾದಗಳಿವು!