ಸ್ಪಿನ್ನರ್​ಗಳೊಂದಿಗೆ ಇತಿಹಾಸ ಬರೆದ ಪಾಕಿಸ್ತಾನ್

PAK vs ENG: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಪಂದ್ಯವನ್ನು ಪಾಕಿಸ್ತಾನ 9 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಈ ಗೆಲುವಿನಲ್ಲಿ ಅವರ ಸ್ಪಿನ್ನರ್‌ಗಳು ಪ್ರಮುಖ ಕೊಡುಗೆ ನೀಡಿದರು. ಈ ಪಂದ್ಯದಲ್ಲಿ ಇಂಗ್ಲೆಂಡ್‌ನ 20 ವಿಕೆಟ್‌ಗಳಲ್ಲಿ 20 ವಿಕೆಟ್‌ಗಳನ್ನು ಪಾಕಿಸ್ತಾನದ ಸ್ಪಿನ್ನರ್‌ಗಳು ಪಡೆದಿರುವುದು ವಿಶೇಷ.

ಸ್ಪಿನ್ನರ್​ಗಳೊಂದಿಗೆ ಇತಿಹಾಸ ಬರೆದ ಪಾಕಿಸ್ತಾನ್
Noman - Sajid
Follow us
|

Updated on: Oct 27, 2024 | 1:15 PM

ಪಾಕಿಸ್ತಾನ್ ತಂಡ ಕೊನೆಗೂ ಗೆಲುವಿನ ಹಾದಿಗೆ ಮರಳಿದೆ. ಸತತ ಕಳಪೆ ಪ್ರದರ್ಶನದಿಂದ ಟೀಕೆ ಎದುರಿಸುತ್ತಿದ್ದ ಪಾಕ್ ತಂಡ ಇದೀಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಸರಣಿ ಗೆಲುವು ಕೂಡ ಪಾಕಿಸ್ತಾನ್ ತಂಡಕ್ಕೆ ಅತ್ಯಂತ ಮಹತ್ವದ್ದಾಗಿತ್ತು. ಏಕೆಂದರೆ ಪಾಕಿಸ್ತಾನ್ ತಂಡ ಸುಮಾರು 4 ವರ್ಷಗಳ ನಂತರ ತವರಿನಲ್ಲಿ ಟೆಸ್ಟ್ ಸರಣಿ ಗೆದ್ದಿದೆ. ಈ ಸರಣಿ ಗೆಲ್ಲಲು ಪಾಕಿಸ್ತಾನ್ ಮೊರೆ ಹೋಗಿದ್ದು ಸ್ಪಿನ್ನರ್​ಗಳನ್ನ ಎಂಬುದು ವಿಶೇಷ. ಅಂದರೆ ವೇಗಿಗಳ ತವರೂರು ಎಂದು ಕರೆಸಿಕೊಳ್ಳುವ ಪಾಕಿಸ್ತಾನ್ ತಂಡವು ಈ ಬಾರಿ ಸ್ಪಿನ್ನರ್​ಗಳೊಂದಿಗೆ ರಣತಂತ್ರ ರೂಪಿಸಿ ಯಶಸ್ವಿಯಾಗಿದ್ದಾರೆ. ಹೀಗೆ ಸ್ಪಿನ್ನರ್​ಗಳನ್ನು ಬಳಸಿ ರಾವಲ್ಪಿಂಡಿಯಲ್ಲಿ ಪಾಕಿಸ್ತಾನ್ ತಂಡವು ಟೆಸ್ಟ್ ಕ್ರಿಕೆಟ್ ಹೊಸ ಇತಿಹಾಸವನ್ನೂ ಸಹ ಬರೆದಿದೆ.

ಸ್ಪಿನ್ ಪ್ಲ್ಯಾನ್:

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಪಂದ್ಯವನ್ನು ಪಾಕಿಸ್ತಾನ 9 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಈ ಗೆಲುವಿನಲ್ಲಿ ಅವರ ಸ್ಪಿನ್ನರ್‌ಗಳು ಪ್ರಮುಖ ಕೊಡುಗೆ ನೀಡಿದರು. ಈ ಪಂದ್ಯದಲ್ಲಿ ಇಂಗ್ಲೆಂಡ್‌ನ 20 ವಿಕೆಟ್‌ಗಳಲ್ಲಿ 20 ವಿಕೆಟ್‌ಗಳನ್ನು ಪಾಕಿಸ್ತಾನದ ಸ್ಪಿನ್ನರ್‌ಗಳು ಪಡೆದಿರುವುದು ವಿಶೇಷ.

ಅದರಲ್ಲೂ ವಿಶೇಷವೆಂದರೆ ಈ ಟೆಸ್ಟ್ ಪಂದ್ಯಗಳಲ್ಲಿ ಪಾಕ್ ತಂಡದ ನಾಯಕ ಶಾನ್ ಮಸೂದ್ ಒಬ್ಬನೇ ಒಬ್ಬ ವೇಗದ ಬೌಲರ್​ಗೂ ಬೌಲಿಂಗ್ ನೀಡಲಿಲ್ಲ ಎಂಬುದು. ಅಂದರೆ ಪಾಕಿಸ್ತಾನದ ಎರಡೂ ಪಂದ್ಯಗಳಲ್ಲಿ ಸ್ಪಿನ್ನರ್‌ಗಳನ್ನು ಮಾತ್ರ ಬಳಸಿದ್ದರು.

ಪಾಕಿಸ್ತಾನ್ ಕ್ರಿಕೆಟ್ ಇತಿಹಾಸದಲ್ಲಿ ಇಂತಹದೊಂದು ತಂತ್ರ ನಡೆದಿರುವುದು ಇದೇ ಮೊದಲ ಬಾರಿಗೆ. ಎರಡು ಟೆಸ್ಟ್ ಪಂದ್ಯಗಳಲ್ಲಿ ವೇಗದ ಬೌಲರ್​ಗಳನ್ನು ಬದಿಗಿಟ್ಟು ಪಾಕ್ ತಂಡವು ಸ್ಪಿನ್ನರ್​ಗಳೊಂದಿಗೆ ಇಡೀ ಪಂದ್ಯ ಮುಗಿಸಿದ್ದಾರೆ. ಶಾನ್ ಮಸೂದ್ ಅವರ ಈ ನಿರ್ಧಾರವು ಪಾಕಿಸ್ತಾನದ ಸೋಲಿನ ಸರಣಿಯನ್ನು ಮುರಿಯುವಲ್ಲಿ ಯಶಸ್ವಿಯಾಗಿದೆ.

ಹೊಸ ದಾಖಲೆ:

ಈ ಸರಣಿಯಲ್ಲಿ ಉಭಯ ತಂಡಗಳ ಸ್ಪಿನ್ನರ್‌ಗಳು ಒಟ್ಟಾಗಿ 73 ವಿಕೆಟ್‌ಗಳನ್ನು ಕಬಳಿಸಿದ್ದು, ಇದು ಕೂಡ ದಾಖಲೆಯಾಗಿದೆ. ಇದಕ್ಕೂ ಮೊದಲು ಪಾಕಿಸ್ತಾನದಲ್ಲಿ ನಡೆದ ಯಾವುದೇ ಟೆಸ್ಟ್ ಸರಣಿಯಲ್ಲಿ ಸ್ಪಿನ್ನರ್‌ಗಳು ಇಷ್ಟು ವಿಕೆಟ್‌ಗಳನ್ನು ಪಡೆದಿರಲಿಲ್ಲ.

ಇದಕ್ಕೂ ಮುನ್ನ 1969/70ರಲ್ಲಿ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಸ್ಪಿನ್ನರ್‌ಗಳು ಒಟ್ಟು 71 ವಿಕೆಟ್‌ಗಳನ್ನು ಕಬಳಿಸಿದ್ದರು. ಇನ್ನು ಈ ಸರಣಿ ಗೆಲುವಿನ ರೂವಾರಿಗಳೆಂದರೆ ಪಾಕಿಸ್ತಾನದ ಸ್ಪಿನ್ನರ್‌ಗಳಾದ ಸಾಜಿದ್ ಖಾನ್ ಮತ್ತು ನೋಮಾನ್ ಅಲಿ. ಈ ಇಬ್ಬರೂ ಬೌಲರ್‌ಗಳು ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ.

ಆದರೆ ಉಳಿದೆರಡು ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಂಡ ನೊಮಾನ್ ಅಲಿ ಒಟ್ಟು 20 ವಿಕೆಟ್‌ಗಳನ್ನು ಪಡೆದರೆ, ಸಾಜಿದ್ ಖಾನ್ 2 ಪಂದ್ಯಗಳ 4 ಇನ್ನಿಂಗ್ಸ್‌ಗಳಲ್ಲಿ ಒಟ್ಟು 19 ಬ್ಯಾಟ್ಸ್‌ಮನ್‌ಗಳನ್ನು ಬಲಿಪಶು ಮಾಡಿದರು. ಹಾಗೆಯೇ ಇಂಗ್ಲೆಂಡ್ ಸ್ಪಿನ್ನರ್ ಈ ಸರಣಿಯಲ್ಲಿ ಒಟ್ಟು 16 ವಿಕೆಟ್​ಗಳನ್ನು ಕಬಳಿಸಿದರು.

ಇದನ್ನೂ ಓದಿ: 4 ಓವರ್​ಗಳಲ್ಲಿ 93 ರನ್​ಗಳು… 7 ರನ್​ಗಳಿಂದ ಬೌಲರ್​ಗೆ ಶತಕ ಮಿಸ್..!

ಅಂದರೆ ರಾವಲ್ಪಿಂಡಿ ಪಿಚ್ ಅನ್ನು ಸ್ಪಿನ್ ಸ್ನೇಹಿಯಾಗಿ ಪರಿವರ್ತಿಸಿದ ಪಾಕಿಸ್ತಾನ್ ತಂಡವು ಭರ್ಜರಿ ರಣತಂತ್ರದೊಂದಿಗೆ ಬಾಝ್ ಬಾಲ್ ಪಡೆ ಇಂಗ್ಲೆಂಡ್ ತಂಡವನ್ನು 9 ವಿಕೆಟ್​ಗಳಿಂದ ಮಣಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಪಾಕಿಸ್ತಾನ್ ತಂಡ ಗೆದ್ದುಕೊಂಡಿದೆ.