Pakistan Team Jersey: ಪಾಕ್ ತಂಡದ ಹೊಸ ಜೆರ್ಸಿ: ಕಲ್ಲಂಗಡಿ ವಿನ್ಯಾಸ ಎಂದು ಫುಲ್ ಟ್ರೋಲ್

| Updated By: ಝಾಹಿರ್ ಯೂಸುಫ್

Updated on: Sep 19, 2022 | 12:05 PM

Pakistan Cricket Team's New Jersey: ಹೊಸ ಕಿಟ್ ಕುರಿತು ಪಾಕಿಸ್ತಾನ್ ಕ್ರಿಕೆಟ್​ ಮಂಡಳಿಯಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಹೀಗಾಗಿ ಜೆರ್ಸಿಯ ವಿನ್ಯಾಸ ಬದಲಾದರೂ ಅಚ್ಚರಿಪಡಬೇಕಿಲ್ಲ.

Pakistan Team Jersey: ಪಾಕ್ ತಂಡದ ಹೊಸ ಜೆರ್ಸಿ: ಕಲ್ಲಂಗಡಿ ವಿನ್ಯಾಸ ಎಂದು ಫುಲ್ ಟ್ರೋಲ್
Pakistan Team's New Jersey
Follow us on

ಮುಂಬರುವ ಐಸಿಸಿ ಟಿ20 ವಿಶ್ವಕಪ್ 2022 ಗಾಗಿ ಹಲವು ತಂಡಗಳು ಈಗಾಗಲೇ ತಮ್ಮ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ. ಭಾನುವಾರ ಟೀಮ್ ಇಂಡಿಯಾ ಕೂಡ ತನ್ನ ವಿಶ್ವಕಪ್ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಹೊಸ ವಿನ್ಯಾಸದಿಂದ ಕೂಡಿರುವ ನೂತನ ಜೆರ್ಸಿಗೆ ಟೀಮ್ ಇಂಡಿಯಾ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಆದರೆ ಮತ್ತೊಂದೆಡೆ ಪಾಕಿಸ್ತಾನ್ ತಂಡದ ಹೊಸ ಜೆರ್ಸಿಯ ವಿನ್ಯಾಸ ಇದೀಗ ನಗೆಪಾಟಲಿಗೀಡಾಗಿದೆ.

ಪಾಕಿಸ್ತಾನ್ ತಂಡದ ಟಿ20 ವಿಶ್ವಕಪ್ ಜೆರ್ಸಿಯ ವಿನ್ಯಾಸ ಎನ್ನಲಾಗಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಜಂ ನೂತನ ಜೆರ್ಸಿ ಧರಿಸಿ ಫೋಟೋಶೂಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ಈ ಜೆರ್ಸಿಯ ವಿನ್ಯಾಸವು ಕಳಪೆ ಮಟ್ಟದಲ್ಲಿದ್ದು, ಹೀಗಾಗಿ ಅಭಿಮಾನಿಗಳು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ ಅನ್ನು ಟ್ರೋಲ್ ಮಾಡಲಾರಂಭಿಸಿದ್ದಾರೆ.

ಅದರಲ್ಲೂ ಜೆರ್ಸಿಯಲ್ಲಿ ನೀಡಲಾಗಿರುವ ವಿನ್ಯಾಸವು ಕಲ್ಲಂಗಡಿಯನ್ನು ಹೋಲುತ್ತಿದೆ ಎಂದು ಅನೇಕರು ಕಮೆಂಟಿಸಿದ್ದಾರೆ. ಹೀಗಾಗಿ ಕಲ್ಲಂಗಡಿಯಿಂದ ಪ್ರೇರಣೆ ಪಡೆದು ಪಾಕಿಸ್ತಾನ್ ತಂಡ ಟಿ20 ವಿಶ್ವಕಪ್​ ಜೆರ್ಸಿಯನ್ನು ರೂಪಿಸಿದೆ ಎಂದು ಟ್ರೋಲ್ ಮಾಡಲಾಗುತ್ತಿರುವುದು ವಿಶೇಷ.

ಇನ್ನು ಕೆಲವರು ಸೆಂಟರ್​ಫ್ರೆಶ್​ ಬಬಲ್​ಗಮ್​ನ ರ್ಯಾಪರ್​ ಥರ ಇದೆ ಎಂದು ಕಿಚಾಯಿಸಿದ್ದಾರೆ. ಇದೀಗ ಭಾರತ ಹಾಗೂ ಪಾಕಿಸ್ತಾನ್ ತಂಡಗಳ ಜೆರ್ಸಿಯನ್ನು ಹೋಲಿಕೆ ಮಾಡಲಾಗುತ್ತಿದ್ದು, ಈ ಮೂಲಕ ಪಾಕ್ ತಂಡದ ನೂತನ ಜೆರ್ಸಿಯ ವಿನ್ಯಾಸ ಹಾಗೂ ಬಣ್ಣಗಳ ಆಯ್ಕೆಯನ್ನು ವ್ಯಂಗ್ಯವಾಡಲಾಗುತ್ತಿದೆ. ಆದಾಗ್ಯೂ, ಹೊಸ ಕಿಟ್ ಕುರಿತು ಪಾಕಿಸ್ತಾನ್ ಕ್ರಿಕೆಟ್​ ಮಂಡಳಿಯಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಹೀಗಾಗಿ ಜೆರ್ಸಿಯ ವಿನ್ಯಾಸ ಬದಲಾದರೂ ಅಚ್ಚರಿಪಡಬೇಕಿಲ್ಲ.

ಪಾಕಿಸ್ತಾನ್ ಟಿ20 ವಿಶ್ವಕಪ್ ತಂಡ ಹೀಗಿದೆ:

ಬಾಬರ್ ಆಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ಹಸ್ನೇನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ, ನಸೀಮ್ ಶಾ, ಶಾಹಿನ್ ಅಫ್ರಿದಿ , ಶಾನ್ ಮಸೂದ್, ಉಸ್ಮಾನ್ ಖಾದಿರ್

ಮೀಸಲು: ಫಖರ್ ಝಮಾನ್, ಮೊಹಮ್ಮದ್ ಹ್ಯಾರಿಸ್, ಶಹನವಾಜ್ ದಹಾನಿ