ಪಾಕಿಸ್ತಾನ ಕ್ರಿಕೆಟ್ ಮಂಡಳಿ (Pakistan Cricket Board) ಶುಕ್ರವಾರ ತನ್ನ ಆಟಗಾರರಿಗೆ ಟೆಸ್ಟ್ ಮತ್ತು ಸೀಮಿತ ಓವರ್‌ಗಳಿಗೆ ಪ್ರತ್ಯೇಕ ಕೇಂದ್ರ ಒಪ್ಪಂದಗಳನ್ನು ಪ್ರಕಟಿಸಿದ್ದು, ಇದರಲ್ಲಿ ಆಟಗಾರರ ವೇತನವನ್ನು ಹೆಚ್ಚಿಸಲಾಗಿದೆ. ಆದಾಗ್ಯೂ, ಪಿಸಿಬಿ ತನ್ನ ಅಗ್ರ ಆಟಗಾರರನ್ನು ವಿದೇಶಿ ಲೀಗ್‌ಗಳಲ್ಲಿ ಆಡದಂತೆ ತಡೆಯಲು ಪ್ರಯತ್ನಿಸುತ್ತಿದ್ದು, ಅದಕ್ಕಾಗಿ ಹೆಚ್ಚುವರಿ ಹಣ ಪಾವತಿಸಲು ಸಹ ಸಿದ್ಧವಾಗಿದೆ. ಬೋರ್ಡ್ ಆಫ್ ಗವರ್ನರ್‌ಗಳ ಸಭೆಯಲ್ಲಿ, 2022-23 ರ ಹಣಕಾಸು ವರ್ಷಕ್ಕೆ 15 ಶತಕೋಟಿ ರೂಪಾಯಿಗಳ ವಾರ್ಷಿಕ ಬಜೆಟ್ ಅನ್ನು ಅನುಮೋದಿಸಲಾಗಿದೆ. ಇದರಲ್ಲಿ 78 ಪ್ರತಿಶತವನ್ನು ಕ್ರಿಕೆಟ್ ಚಟುವಟಿಕೆಗಳಿಗೆ ಮೀಸಲಿಡಲಾಗಿದೆ ಎಂದು ಪಿಸಿಬಿ ಹೇಳಿದೆ. “ನಮ್ಮ ಅಗ್ರ ಕ್ರಿಕೆಟಿಗರನ್ನು ಪ್ರೋತ್ಸಾಹಿಸಲು ಮತ್ತು ಇತರ ದೇಶಗಳ ಆಟಗಾರರಿಗೆ ಹೋಲಿಸಿದರೆ ವೇತನದ ಅಂತರವನ್ನು ಕಡಿಮೆ ಮಾಡಲು ಅದರ ಕಾರ್ಯತಂತ್ರದ ಭಾಗವಾಗಿ, ಪುರುಷರ ಕೇಂದ್ರ ಒಪ್ಪಂದದ ರಚನೆಯಲ್ಲಿ ಬದಲಾವಣೆಗಳನ್ನು ಆಡಳಿತ ಮಂಡಳಿಯು ಅನುಮೋದಿಸಿದೆ ಎಂದು ಪಿಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
ಪಿಸಿಬಿಯ ಕೇಂದ್ರ ಒಪ್ಪಂದದಲ್ಲಿ ಬದಲಾವಣೆಗಳು
ಪಿಸಿಬಿಯ ಕೇಂದ್ರ ಒಪ್ಪಂದದ ಹೊಸ ನೀತಿಯ ಅಡಿಯಲ್ಲಿ, ಜುಲೈ 1 ರಿಂದ ಕೆಂಪು ಚೆಂಡು (ಟೆಸ್ಟ್) ಮತ್ತು ಬಿಳಿ ಚೆಂಡಿನ (ODI ಮತ್ತು T20) ಪ್ರತ್ಯೇಕ ಒಪ್ಪಂದಗಳು ಅನ್ವಯವಾಗಲಿವೆ. ಇದರಡಿಯಲ್ಲಿ ಒಪ್ಪಂದದ ಹಣ ಕೂಡ ಹೆಚ್ಚಾಗುತ್ತದೆ. ಇಷ್ಟೇ ಅಲ್ಲ, ಕೇಂದ್ರೀಯ ಗುತ್ತಿಗೆ ಆಟಗಾರರ ಸಂಖ್ಯೆಯನ್ನು 20 ರಿಂದ 33 ಕ್ಕೆ ಹೆಚ್ಚಿಸಲಾಗಿದೆ. ಇದಲ್ಲದೇ, ಪಿಸಿಬಿ ಎಲ್ಲಾ ಮಾದರಿಗಳಲ್ಲಿ ಪಂದ್ಯ ಶುಲ್ಕದಲ್ಲಿ 10 ಪ್ರತಿಶತ ಹೆಚ್ಚಳ ಮತ್ತು ಸಹಾಯಕ ಸಿಬ್ಬಂದಿ ಸದಸ್ಯರ ಪಂದ್ಯ ಶುಲ್ಕದಲ್ಲಿ 50 ರಿಂದ 70 ರಷ್ಟು ಹೆಚ್ಚಳವನ್ನು ಘೋಷಿಸಿದೆ. ನಾಯಕನ ಹೆಚ್ಚುವರಿ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ನಾಯಕತ್ವ ಭತ್ಯೆಯನ್ನೂ ಆರಂಭಿಸಲಾಗಿದೆ.
➡️ 2022-23 financial budget
➡️ Enhanced central contracts with increase in number of contracted men and women's players
➡️ Creation of Pakistan Cricket Foundation as a charitable trust?: https://t.co/gP1kRgUyGV
?️: https://t.co/ez2Ptn4vnv pic.twitter.com/UAJYksKxa1— Pakistan Cricket (@TheRealPCB) June 24, 2022
ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಆಡುವುದನ್ನು ನಿಲ್ಲಿಸಬೇಕು; ಪಿಸಿಬಿ
ಲಾಹೋರ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಮಾತನಾಡಿ, ವಿದೇಶಿ ಲೀಗ್‌ಗಳಲ್ಲಿ ಆಡಲು ಕೊಡುಗೆಗಳನ್ನು ಪಡೆಯುವ ಪ್ರಸ್ತುತ ಆಟಗಾರರಿಗೆ ಮಂಡಳಿಯು ವಿಶೇಷ ನಿಧಿಯನ್ನು ಸ್ಥಾಪಿಸಿದೆ ಎಂದು ಘೋಷಿಸಿದರು. ನಮ್ಮ ಆಟಗಾರರು ದೇಶದ ಹೊರಗೆ, ವಿದೇಶಿ ಲೀಗ್‌ಗಳಲ್ಲಿ ಆಡುವುದನ್ನು ತಪ್ಪಿಸಲು ನಾವು ಬಯಸುತ್ತೇವೆ. ಜೊತೆಗೆ ಆಟಗಾರರು ಈ ಲೀಗ್‌ಗಳಲ್ಲಿ ಆಡದಿರುವುದು ಉತ್ತಮ ಎಂದು ನಾವು ಭಾವಿಸುತ್ತೇವೆ. ಅಗತ್ಯವಿದ್ದರೆ ಅವರಿಗೆ ಗುತ್ತಿಗೆ ಮೊತ್ತದ ಶೇ.50-60ರಷ್ಟು ಹಣ ನೀಡಲು ಸಿದ್ಧರಿದ್ದೇವೆ ಎಂದಿದ್ದಾರೆ.