Ranji Trophy Final 2022: ಮುಂಬೈ ವಿರುದ್ಧದ ಫೈನಲ್ ಪಂದ್ಯದಲ್ಲಿ ಈ ಸೀಸನ್ನ 4ನೇ ಶತಕ ಸಿಡಿಸಿದ ಶುಭಂ ಶರ್ಮಾ..!
Ranji Trophy Final 2022: ಇದು ರಣಜಿ ಟ್ರೋಫಿಯ ಈ ಋತುವಿನಲ್ಲಿ ಶುಭಂ ಅವರ ನಾಲ್ಕನೇ ಶತಕವಾಗಿದೆ. ಎಂಪಿ ಮತ್ತು ಮುಂಬೈ ನಡುವೆ ನಡೆಯುತ್ತಿರುವ ಈ ಫೈನಲ್ ಪಂದ್ಯದಲ್ಲಿ ಇದುವರೆಗೆ ಮೂರು ಶತಕಗಳು ದಾಖಲಾಗಿವೆ.
ರಣಜಿ ಟ್ರೋಫಿ 2022 (Ranji Trophy 2022)ರ ಅಂತಿಮ ಪಂದ್ಯ ಬಹಳ ರೋಚಕವಾಗಿ ಸಾಗುತ್ತಿದೆ. ಮುಂಬೈ ಮೊದಲ ಇನ್ನಿಂಗ್ಸ್‌ನಲ್ಲಿ ನೀಡಿದ 374 ರನ್ಗಳಿಗೆ ಉತ್ತರವಾಗಿ ಮಧ್ಯಪ್ರದೇಶ ಪ್ರಬಲ ಆರಂಭವನ್ನು ಮಾಡಿದೆ. ತಂಡದ ಈ ಅದ್ಭುತ ಆರಂಭದಲ್ಲಿ, ಅದರ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಶುಭಂ ಎಸ್ ಶರ್ಮಾ ಪ್ರಮುಖ ಪಾತ್ರ ವಹಿಸಿದ್ದಾರೆ. ಶುಭಂ ನಿರ್ಣಾಯಕ ಪಂದ್ಯದಲ್ಲಿ 116 ರನ್ ಗಳಿಸಿದರು. ಇದು ರಣಜಿ ಟ್ರೋಫಿಯ ಈ ಋತುವಿನಲ್ಲಿ ಶುಭಂ ಅವರ ನಾಲ್ಕನೇ ಶತಕವಾಗಿದೆ. ಎಂಪಿ ಮತ್ತು ಮುಂಬೈ ನಡುವೆ ನಡೆಯುತ್ತಿರುವ ಈ ಫೈನಲ್ ಪಂದ್ಯದಲ್ಲಿ ಇದುವರೆಗೆ ಮೂರು ಶತಕಗಳು ದಾಖಲಾಗಿವೆ. ಶುಭಂ ಶರ್ಮಾ (Shubham Sharma) ಮೊದಲು, ಅವರ ಜೊತೆಗಾರ ಯಶ್ ದುಬೆ ಮತ್ತು ಮುಂಬೈನ ಸರ್ಫರಾಜ್ ಖಾನ್ ಶತಕ ಗಳಿಸಿದ್ದರು.
ಶುಭಂ- ದುಬೆ ಪ್ರಮುಖ ಪಾಲುದಾರಿಕೆ
ಮಧ್ಯಪ್ರದೇಶ ಹಿಮಾಂಶು ಮಂತ್ರಿ ಅವರ ವಿಕೆಟ್ ಅನ್ನು ಬಹಳ ಬೇಗ ಕಳೆದುಕೊಂಡಿತು. ನಂತರ ಬ್ಯಾಟಿಂಗ್‌ಗೆ ಬಂದ ಶುಭಂ ಶರ್ಮಾ ಎರಡನೇ ವಿಕೆಟ್‌ಗೆ ಯಶ್ ದುಬೆ ಅವರೊಂದಿಗೆ 222 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಶುಭಂ 215 ಎಸೆತಗಳಲ್ಲಿ 116 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 15 ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದ್ದರು. ಇವರ ಅದ್ಭುತ ಇನ್ನಿಂಗ್ಸ್ನಿಂದಾಗಿ ಮೂರನೇ ದಿನದ ಟಿ-ಬ್ರೇಕ್‌ನವರೆಗೆ ಎರಡು ವಿಕೆಟ್‌ಗಳ ನಷ್ಟಕ್ಕೆ 301 ರನ್ ಗಳಿಸಿತು. ಈ 28ರ ಹರೆಯದ ಆಲ್ ರೌಂಡರ್ ಈ ಸೀಸನ್ನಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿ ಕಾಣಿಸಿಕೊಂಡಿದ್ದು, ಮಧ್ಯಪ್ರದೇಶವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ಶುಭಂ ಪ್ರಮುಖ ಪಾತ್ರ ವಹಿಸಿದ್ದರು.
ಇದನ್ನೂ ಓದಿ: Ranji Trophy: 47ನೇ ಬಾರಿ ರಣಜಿ ಫೈನಲ್‌ಗೆ ಲಗ್ಗೆ ಇಟ್ಟ ಮುಂಬೈ! ಮಧ್ಯಪ್ರದೇಶ ಫೈನಲ್ ಎದುರಾಳಿ
1⃣0⃣2⃣ in the Quarterfinal ?
1⃣0⃣0⃣ up & going strong in the #Final ?
This has been an impressive show by Madhya Pradesh’s Shubham Sharma. ? ?
He & Yash Dubey also complete a 200-run stand. ? ?
Follow the match ▶️ https://t.co/xwAZ13D0nP@Paytm | #RanjiTrophy | #MPvMUM pic.twitter.com/LnzUHhViXi
— BCCI Domestic (@BCCIdomestic) June 24, 2022
ಈ ಸೀಸನ್ನಲ್ಲಿ ಶುಭಂ ಅಬ್ಬರ
ಈ ಹಿಂದೆ ಪಂಜಾಬ್ ವಿರುದ್ಧದ ಕ್ವಾರ್ಟರ್ ಫೈನಲ್‌ನಲ್ಲಿ ಶುಭಂ 102 ರನ್ ಗಳಿಸಿದ್ದರು. ಇದಲ್ಲದೆ, ಅವರು ಮೇಘಾಲಯ ವಿರುದ್ಧ 111 ಮತ್ತು ಗುಜರಾತ್ ವಿರುದ್ಧ ಔಟಾಗದೆ 103 ಇನ್ನಿಂಗ್ಸ್ ಆಡಿದರು. ಫೈನಲ್‌ನಲ್ಲಿ ಅವರು ಈ ಸೀಸನ್ನ ನಾಲ್ಕನೇ ಶತಕ ಗಳಿಸಿದ್ದಾರೆ. ಇದಲ್ಲದೆ ಐದು ಅರ್ಧಶತಕಗಳನ್ನು ಕೂಡ ಗಳಿಸಿದ್ದಾರೆ. ಈ 28 ವರ್ಷದ ಆಟಗಾರ 2013 ರಲ್ಲಿ ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಿದರು. ಕಳೆದ ಒಂಬತ್ತು ವರ್ಷಗಳಲ್ಲಿ ಅವರು ಕೇವಲ ಎರಡು ಶತಕಗಳನ್ನು ಗಳಿಸಿದರೂ, ಆದರೆ ಈ ಸೀಸನ್ ಒಂದರಲ್ಲೇ ನಾಲ್ಕು ಶತಕಗಳನ್ನು ಗಳಿಸಿದ್ದಾರೆ.
ಸರ್ಫರಾಜ್ ಖಾನ್ ಕೂಡ ಶತಕ
ಪಂದ್ಯದ ಎರಡನೇ ದಿನ ಯಶ್ ದುಬೆ ಭರ್ಜರಿ ಶತಕ ಸಿಡಿಸಿದ್ದಾರೆ. ಯಶ್ ತಮ್ಮ ಇನ್ನಿಂಗ್ಸ್ ಅನ್ನು 44 ರನ್‌ಗಳಿಂದ ವಿಸ್ತರಿಸಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. 303 ಎಸೆತಗಳಲ್ಲಿ 120 ರನ್ ಗಳಿಸಿ ಯಶ್ ಔಟಾದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 12 ಬೌಂಡರಿಗಳನ್ನು ಹೊಡೆದರು. ಇದಕ್ಕೂ ಮೊದಲು ಸರ್ಫರಾಜ್ ಖಾನ್ ಅವರ ಶತಕದ ಆಧಾರದ ಮೇಲೆ ಮುಂಬೈ ಮೊದಲ ಇನಿಂಗ್ಸ್‌ನಲ್ಲಿ 374 ರನ್ ಗಳಿಸಿತ್ತು. ಸರ್ಫರಾಜ್ 243 ಎಸೆತಗಳಲ್ಲಿ 134 ರನ್ ಗಳಿಸಿದರು. ಈ ವೇಳೆ ಅವರ ಬ್ಯಾಟ್‌ನಿಂದ 13 ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳು ಸಿಡಿದವು.
Published On - 3:11 pm, Fri, 24 June 22