Ranji Trophy Final: ಮುಂಬೈ ಎದುರು ಅದ್ಭುತ ಶತಕ ಸಿಡಿಸಿ ಕೆಎಲ್ ರಾಹುಲ್ ನೆನಪಿಸಿದ ಯಶ್ ದುಬೆ..!
Ranji Trophy Final: ಸಾಮಾನ್ಯವಾಗಿ ಕೆಎಲ್ ರಾಹುಲ್ ಶತಕ ಬಾರಿಸಿದ ನಂತರ ಈ ರೀತಿಯ ಸಂಭ್ರಮಾಚರಣೆ ಮಾಡುತ್ತಾರೆ. ಇದು ಅವರ ಟ್ರೇಡ್‌ಮಾರ್ಕ್ ಆಗಿದೆ. ಟೀಕಾಕಾರರ ಮಾತಿಗೆ ಕಿವಿಗೊಡದೆ ರನ್ ಗಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುವುದು ರಾಹುಲ್ ಉದ್ದೇಶ.
ರಣಜಿ ಟ್ರೋಫಿ (Ranji Trophy)ಯ ಫೈನಲ್‌ನಲ್ಲಿ ಮುಂಬೈನ ಉತ್ತಮ ಸ್ಕೋರ್‌ಗೆ ಮಧ್ಯಪ್ರದೇಶ ತಕ್ಕ ಉತ್ತರ ನೀಡಿದೆ. ತಂಡದ ಆರಂಭಿಕ ಬ್ಯಾಟರ್ ಯಶ್ ದುಬೆ (Yash Dubey) ಪಂದ್ಯದ ಎರಡನೇ ದಿನದಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಸರ್ಫರಾಜ್ ಖಾನ್ ಅವರ ಶತಕದ ನೆರವಿನಿಂದ 374 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಮಧ್ಯಪ್ರದೇಶ ಉತ್ತಮ ಆರಂಭವನ್ನು ನೀಡಿದ್ದು, ಇಲ್ಲಿಯವರೆಗಿನ ಅತ್ಯುತ್ತಮ ಆಟ ಪ್ರದರ್ಶಿಸಿದೆ. ಮಧ್ಯಪ್ರದೇಶ ಒಂದು ವಿಕೆಟ್ ಕಳೆದುಕೊಂಡು ದಿನದಾಟ ಆರಂಭಿಸಿತು. ಯಶ್ ತಮ್ಮ ಇನ್ನಿಂಗ್ಸ್ ಅನ್ನು 44 ರನ್‌ಗಳಿಂದ ವಿಸ್ತರಿಸಿ, ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಮುಂಬೈ ಬೌಲರ್‌ಗಳಿಗೆ ಯಶಸ್ಸು ಸಿಗಲು ಬಿಡದೆ ಮೇಲುಗೈ ಸಾಧಿಸಿದರು. ಮಧ್ಯಪ್ರದೇಶ 23 ವರ್ಷಗಳ ನಂತರ ರಣಜಿ ಟ್ರೋಫಿ ಫೈನಲ್‌ನಲ್ಲಿ ಆಡುತ್ತಿದೆ.
ಕೆಎಲ್ ರಾಹುಲ್ ರೀತಿಯಲ್ಲಿ ಸಂಭ್ರಮಾಚರಣೆ
ಶತಕ ಬಾರಿಸಿದ ನಂತರ ಯಶ್ ಅವರು ಕೆಎಲ್ ರಾಹುಲ್ ಅವರನ್ನು ನೆನಪಿಸಿದರು. ಯಶ್ ಶತಕ ಪೂರೈಸಿದ ತಕ್ಷಣ ಹೆಲ್ಮೆಟ್ ಕಳಚಿ ಎರಡು ಕಿವಿಯಲ್ಲಿ ಬೆರಳಿಟ್ಟು ಕಣ್ಣು ಮುಚ್ಚಿ ಸಂಭ್ರಮಿಸಿದರು. ಸಾಮಾನ್ಯವಾಗಿ ಕೆಎಲ್ ರಾಹುಲ್ ಶತಕ ಬಾರಿಸಿದ ನಂತರ ಈ ರೀತಿಯ ಸಂಭ್ರಮಾಚರಣೆ ಮಾಡುತ್ತಾರೆ. ಇದು ಅವರ ಟ್ರೇಡ್‌ಮಾರ್ಕ್ ಆಗಿದೆ. ಟೀಕಾಕಾರರ ಮಾತಿಗೆ ಕಿವಿಗೊಡದೆ ರನ್ ಗಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುವುದು ರಾಹುಲ್ ಉದ್ದೇಶ. ಇದೇ ರೀತಿಯ ಸಂದೇಶವನ್ನು ಯಶ್ ನೀಡಿದ್ದಾರೆ.
That 1⃣0⃣0⃣ Feeling! ? ?
What a fine ? this has been by Yash Dubey in the @Paytm #RanjiTrophy #Final! ? ? #MPvMUM
Follow the match ▶️ https://t.co/xwAZ13U3pP pic.twitter.com/3eqSSmbDfm
— BCCI Domestic (@BCCIdomestic) June 24, 2022
ಇದನ್ನೂ ಓದಿ: Ranji Trophy: 47ನೇ ಬಾರಿ ರಣಜಿ ಫೈನಲ್‌ಗೆ ಲಗ್ಗೆ ಇಟ್ಟ ಮುಂಬೈ! ಮಧ್ಯಪ್ರದೇಶ ಫೈನಲ್ ಎದುರಾಳಿ
ಶುಭಂ ಶರ್ಮಾ ಫಾರ್ಮ್ನಲ್ಲಿ
ಪಂದ್ಯದ ಎರಡನೇ ದಿನ ಮಧ್ಯಪ್ರದೇಶ ಹಿನ್ನಡೆ ಅನುಭವಿಸಿತ್ತು. ತಂಡದ ಆರಂಭಿಕ ಆಟಗಾರ ಮತ್ತು ಯಶ್ ಜೊತೆಗಾರ ಹಿಮಾಂಶು ಮಂತ್ರಿ 31 ರನ್ ಗಳಿಸಿ ಔಟಾದರು. ಆದರೆ ಇದಾದ ಬಳಿಕ ಯಶ್ ಕಾಲಿಟ್ಟು ಮುಂಬೈನ ಬೌಲರ್‌ಗಳನ್ನು ಬೆನ್ನು ಹತ್ತಿದರು. ಶುಭಂ ಶರ್ಮಾ ಅವರಿಗೆ ಉತ್ತಮ ಬೆಂಬಲ ನೀಡಿದರು ಮತ್ತು ಇಬ್ಬರೂ ಉತ್ತಮ ಶತಕದ ಜೊತೆಯಾಟವನ್ನು ಮಾಡಿದರು. ಈ ಜೊತೆಯಾಟದ ಆಧಾರದ ಮೇಲೆ ಇಬ್ಬರೂ ತಮ್ಮ ತಂಡವನ್ನು ಬಲಿಷ್ಠ ಸ್ಥಾನಕ್ಕೆ ತಂದು ನಿಲ್ಲಿಸಿದ್ದಾರೆ.
ಸರ್ಫರಾಜ್ ಅದ್ಭುತ ಇನ್ನಿಂಗ್ಸ್
ಈ ಪಂದ್ಯದಲ್ಲಿ ಯಶ್ ಮೊದಲು ಮುಂಬೈ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ ಶತಕ ಬಾರಿಸಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಸರ್ಫರಾಜ್ 134 ರನ್ ಗಳಿಸಿದ್ದರು. ಅವರ ಇನ್ನಿಂಗ್ಸ್‌ನಲ್ಲಿ, ಸರ್ಫರಾಜ್ 243 ಎಸೆತಗಳನ್ನು ಎದುರಿಸಿ, 13 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಇವರಲ್ಲದೆ ಮುಂಬೈ ಪರ ಯಶಸ್ವಿ ಜೈಸ್ವಾಲ್ 78 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ, ಏಳು ಬೌಂಡರಿ ಮತ್ತು ಒಂದು ಸಿಕ್ಸರ್ ಕೂಡ ಹೊಡೆದರು. ನಾಯಕ ಪೃಥ್ವಿ ಶಾ 47 ರನ್ ಗಳಿಸಿ ಅರ್ಧಶತಕ ಗಳಿಸಲು ಸಾಧ್ಯವಾಗದೆ ಔಟಾದರು.
Published On - 1:46 pm, Fri, 24 June 22