ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಐಸಿಸಿ ಪುರುಷರ ಏಕದಿನ ವಿಶ್ವಕಪ್ 2023 ರ ತನ್ನ ಆರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನ (Pakistan vs South Africa) ಒಂದು ವಿಕೆಟ್‌ನಿಂದ ಹೃದಯ ವಿದ್ರಾವಕ ಸೋಲು ಕಂಡಿತು. ಕೊನೆಯ ಅಂತದ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿದ್ದ ಪಂದ್ಯದಲ್ಲಿ, ಪಾಕಿಸ್ತಾನ 270 ರನ್‌ಗಳನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾಗಿ ಹರಿಣಗಳ ವಿರುದ್ಧ ಸೋಲುಂಡರು. ಇದು 2023 ರ ಏಕದಿನ ವಿಶ್ವಕಪ್‌ನಲ್ಲಿ ಇದುವರೆಗೆ ಆಡಿದ ಆರು ಪಂದ್ಯಗಳಲ್ಲಿ ಪಾಕಿಸ್ತಾನದ ನಾಲ್ಕನೇ ಸೋಲು. ಒಟ್ಟು ನಾಲ್ಕು ಅಂಕಗಳೊಂದಿಗೆ ಬಾಬರ್ ಪಡೆ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
ಪ್ರೋಟೀಸ್ ವಿರುದ್ಧ ಸೋತ ನಂತರ, ಪಾಕಿಸ್ತಾನ ಏಕದಿನ ವಿಶ್ವಕಪ್ 2023ರಲ್ಲಿ ಸೆಮಿ ಫೈನಲ್ ಹಂತ ತಲುಪುವ ಸಾಧ್ಯತೆಗಳು ಈಗ ಬಹುತೇಕ ಕಮರಿ ಹೋಗಿದೆ. ಆದರೆ ಲೆಕ್ಕಚಾರದ ಪ್ರಕಾರ, ಪಾಕ್ ಇನ್ನೂ ಜೀವಂತವಾಗಿದೆ. ತಮ್ಮ ಮುಂದಿನ ಮೂರು ಉಳಿದಿರುವ ಲೀಗ್ ಹಂತದ ಪಂದ್ಯಗಳನ್ನು ಗೆದ್ದರೆ ಮತ್ತು ಇತರ ಪಂದ್ಯಗಳ ಒಂದೆರಡು ಫಲಿತಾಂಶಗಳು ಪಾಕ್ ಪರವಾಗಿ ಆದರೆ, ಸೆಮಿ ಫೈನಲ್ಗೇರಬಹುದು.
IND vs ENG: ಇಂಗ್ಲೆಂಡ್ ವಿರುದ್ಧ ಕ್ರಿಕೆಟ್ ದೇವರ ದಾಖಲೆ ಮುರಿಯುವ ಹೊಸ್ತಿಲಿನಲ್ಲಿ ಕಿಂಗ್ ಕೊಹ್ಲಿ..!
ಬಾಂಗ್ಲಾದೇಶ (ಅಕ್ಟೋಬರ್ 31), ನ್ಯೂಝಿಲೆಂಡ್ (ನವೆಂಬರ್ 4), ಮತ್ತು ಇಂಗ್ಲೆಂಡ್ (ನವೆಂಬರ್ 11) ವಿರುದ್ಧ ನಿಗದಿಯಾಗಿರುವ ಮುಂದಿನ ಮೂರು ಪಂದ್ಯಗಳಲ್ಲಿ ಪಾಕ್ ಗೆಲ್ಲಲೇ ಬೇಕು. ಆಗ 10 ಅಂಕಗಳು ಪಾಕ್ ಖಾತೆಗೆ ಸೇರುತ್ತದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ಈಗಾಗಲೇ 10 ಅಂಕಗಳನ್ನು ಹೊಂದಿದೆ. ಹೀಗಾಗಿ ಈ ಎರಡು ತಂಡಗಳನ್ನು ಮುಟ್ಟಲು ಪಾಕ್ಗೆ ಸಾಧ್ಯವಿಲ್ಲ. ಪಾಕ್ ಮೂರು ಅಥವಾ ನಾಲ್ಕನೇ ಸ್ಥಾನದ ಮೇಲೆ ಕಣ್ಣಿಡಬೇಕು. ಅದು ಸಾಧ್ಯವಾಗಬೇಕಾದರೆ ಈ ಕೆಳಗಿನ ರೀತಿ ನಡೆಯಬೇಕು.
ಈ ಫಲಿತಾಂಶಗಳು ಸಾಕಾರಗೊಂಡರೆ, ಭಾರತ 18 ಅಂಕಗಳೊಂದಿಗೆ, ನ್ಯೂಜಿಲೆಂಡ್ 14, ದಕ್ಷಿಣ ಆಫ್ರಿಕಾ 12 ಮತ್ತು ಪಾಕಿಸ್ತಾನ 10 ಅಂಕಗಳೊಂದಿಗೆ ಆಸ್ಟ್ರೇಲಿಯ ಮತ್ತು ಶ್ರೀಲಂಕಾವನ್ನು ಹಿಂದಿಕ್ಕಿ ಸೆಮಿ ಫೈನಲ್ಗೇರುವ ಅವಕಾಶ ಹೊಂದಿದೆ. ಆದಾಗ್ಯೂ, ಬಾಂಗ್ಲಾದೇಶದ ವಿರುದ್ಧ ಆಸ್ಟ್ರೇಲಿಯಾ ಗೆಲುವು ಸಾಧಿಸಲು ಯಶಸ್ವಿಯಾದರೆ, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಲಾ 10 ಅಂಕಗಳೊಂದಿಗೆ ಸಮನಾಗಿರುತ್ತವೆ. ಆಗ ರನ್ರೇಟ್ ಆಧಾರದ ಮೇಲೆ ನಿರ್ಧಾರ ಮಾಡಬೇಕು. ಒಟ್ಟಾರೆ ಪಾಕಿಸ್ತಾನಕ್ಕೆ ಸೆಮಿಫೈನಲ್ ಹಾದಿಯು ಇತರೆ ತಂಡಗಳ ಫಲಿತಾಂಶಗಳ ಮೇಲೆ ಅವಲಂಬಿತವಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ