ಪಾಕ್ ವಿರುದ್ಧ ಜಯ ಸಾಧಿಸಿದ ಬಳಿಕ ಜೈ ಶ್ರೀ ಹನುಮಾನ್ ಎಂದ ಆಫ್ರಿಕಾ ಆಟಗಾರ ಕೇಶವ್ ಮಹರಾಜ್
Keshav Maharaj's Jai Shree Hanuman Post: ಕೇಶವ್ ಮಹರಾಜ್ ಅವರು ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ರೋಚಕ ಜಯ ಸಾಧಿಸಿದ ಬಳಿಕ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಪೋಸ್ಟ್ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಅವರು ಜೈ ಶ್ರೀ ಹನುಮಾನ್ ಎಂದು ಬರೆದುಕೊಂಡಿದ್ದಾರೆ.
ಶುಕ್ರವಾರ ಐಸಿಸಿ ಏಕದಿನ ವಿಶ್ವಕಪ್ 2023ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ಆಟಗಾರ ಕೇಶವ್ ಮಹರಾಜ್ (Keshav Maharaj) ಹೀರೋ ಆದರು. 9 ವಿಕೆಟ್ ಕಳೆದುಕೊಂಡು ಸೋಲಿನ ಅಂಚಿನಲ್ಲಿದ್ದ ಆಫ್ರಿಕಾ ತಂಡಕ್ಕೆ ಮಹರಾಜ್ ರೋಚಕ ಜಯ ತಂದು ಕೊಟ್ಟರು. ಇವರು ಗಳಿಸಿದ್ದು 21 ಎಸೆತಗಳಲ್ಲಿ 7 ರನ್ ಆಗಿದ್ದರೂ, ಇದು ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿತು. ಪಾಕಿಸ್ತಾನ 46.4 ಓವರ್ಗಳಲ್ಲಿ 270 ರನ್ ಗಳಿಸಿದರೆ, ಆಫ್ರಿಕಾ 47.2 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 271 ರನ್ ಗಳಿಸಿ ಜಯ ಸಾಧಿಸಿತು.
ಮೂಲತಃ ಭಾರತ ಮೂಲದವರಾದ ಕೇಶವ್ ಮಹರಾಜ್ ಅವರು ಪಾಕ್ ವಿರುದ್ಧ ರೋಚಕ ಜಯ ಸಾಧಿಸಿದ ಬಳಿಕ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಪೋಸ್ಟ್ ಒಂದು ವೈರಲ್ ಆಗುತ್ತಿದೆ. ವಿಶೇಷ ಎಂದರೆ ಈ ಪೋಸ್ಟ್ನಲ್ಲಿ ಅವರು ಜೈ ಶ್ರೀ ಹನುಮಾನ್ ಎಂದು ಬರೆದುಕೊಂಡಿದ್ದಾರೆ. ”ದೇವರನ್ನು ನಾನು ನಂಬುತ್ತೇನೆ. ನಮ್ಮ ಹುಡುಗರ ಶಂಸಿ ಮತ್ತು ಮರ್ಕ್ರಮ್ ಪ್ರದರ್ಶನ ಅದ್ಭುತವಾಗಿತ್ತು. ಇದು ವಿಶೇಷವಾದ ಜಯ ಆಗಿದೆ. ಜೈ ಶ್ರೀ ಹನುಮಾನ್,” ಎಂದು ಮಹರಾಜ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕೇಶವ್ ಮಹರಾಜ್ ಇನ್ಸ್ಟಾಗ್ರಾಮ್ ಪೋಸ್ಟ್ ಇಲ್ಲಿದೆ ನೋಡಿ:
View this post on Instagram
ಭಾರತೀಯ ಮೂಲದವರಾಗಿರುವ ಕೇಶವ್ ಮಹಾರಾಜ್ ಫೆಬ್ರವರಿ 7, 1990 ರಂದು ಡರ್ಬನ್‌ನಲ್ಲಿ ಜನಿಸಿದರು. ಹನುಮಂತನ ಪರಮ ಭಕ್ತರಾಗಿರುವ ಇವರು, ತಮ್ಮ ಇನ್ಸ್ಟಾದಲ್ಲಿ ಭಕ್ತಿಯನ್ನು ತೋರ್ಪಡಿಸುತ್ತಾ ಇರುತ್ತಾರೆ. ಇವರ ಇನ್ಸ್ಟಾ ಬಯೋದಲ್ಲಿ ಜೈ ಶ್ರೀಮ್, ಜೈ ಶ್ರೀ ಹನುಮಾನ್ ಎಂದು ಬರೆದಿಕೊಂಡಿದ್ದಾರೆ. ಅಲ್ಲದೆ ಅನೇಕ ಹನುಮಾ ದೇವಾಲಯಕ್ಕೆ ಇವರು ಭೇಟಿ ನೀಡಿರುವ ಫೋಟೋಗಳಿವೆ. ಐಸಿಸಿ ಏಕದಿನ ವಿಶ್ವಕಪ್ 2023 ಆರಂಭಕ್ಕೂ ಮುನ್ನ ಇವರು ತಿರುವನಂತರಪುರಂನ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಕೇಶವ್ ಮಹಾರಾಜ್ 2016 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಆಡುವ ಮೂಲಕ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಮೊದಲ ಪಂದ್ಯದಲ್ಲೇ 4 ವಿಕೆಟ್ ಕಿತ್ತು ಮಿಂಚಿದ್ದರು. 2017 ರಲ್ಲಿ ಇಂಗ್ಲೆಂಡ್ ವಿರುದ್ಧ ಆಡುವ ಮೂಲಕ ಏಕದಿನಕ್ಕೂ ಕಾಲಿಟ್ಟರು. ಇದೀಗ ಇವರು ಆಫ್ರಿಕಾ ತಂಡದ ಪ್ರಮುಖ ಆಟಗಾರನಾಗಿದ್ದಾರೆ.
IND vs ENG: ಇಂಗ್ಲೆಂಡ್ ವಿರುದ್ಧ ಕ್ರಿಕೆಟ್ ದೇವರ ದಾಖಲೆ ಮುರಿಯುವ ಹೊಸ್ತಿಲಿನಲ್ಲಿ ಕಿಂಗ್ ಕೊಹ್ಲಿ..!
ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ಪರ ನಾಯಕ ಬಾಬರ್ ಅಝಂ 65 ಎಸೆತಗಳಲ್ಲಿ 50 ರನ್ ಗಳಿಸಿದರೆ, ರಿಜ್ವಾನ್ 31 ರನ್ ಕಲೆಹಾಕಿದರು. ಶಕೀಲ್ 52 ರನ್, ಶಾದಾಬ್ ಖಾನ್ 43 ರನ್ ಗಳಿಸಿದರು. ಪಾಕ್ 46.4 ಓವರ್ಗಳಲ್ಲಿ 270 ರನ್ಗಳಿಗೆ ಆಲೌಟ್ ಆಯಿತು. ಆಫ್ರಿಕಾ ಪರ ತಬ್ರೇಜ್ ಶಮ್ಸಿ 4, ಜಾನ್ಸೆನ್ 3, ಜೆರಾಲ್ಡ್ 2ವಿಕೆಟ್ ಪಡೆದರು.
ಟಾರ್ಗೆಟ್ ಬೆನ್ನಟ್ಟಿದ ಆಫ್ರಿಕಾ ಪರ ಏಕಾಂಗಿ ಹೋರಾಟ ನಡೆಸಿದ ಏಡೆನ್ ಮಾರ್ಕ್ರಾಮ್ 93 ಎಸೆತಗಳಲ್ಲಿ 91 ರನ್ ಗಳಿಸಿ 9 ರನ್ಗಳಿಂದ ಶತಕ ವಂಚಿತರಾದರು. ಈ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್‌ಗಳು ಸೇರಿದ್ದವು. ಡೇವಿಡ್ ಮಿಲ್ಲರ್ ಕೂಡ ಮಾರ್ಕ್ರಾಮ್ ಜೊತೆ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಆದರೆ ಈ ಇಬ್ಬರ ವಿಕೆಟ್ ಪತನದ ಬಳಿಕ ಆಫ್ರಿಕಾ ಸೋಲಿನ ಸುಳಿಗೆ ಸಿಲುಕಿತು. ಅಂತಿಮ ಹಂತದಲ್ಲಿ ಕೇಶವ್ ಮಹರಾಜ್ ಬೌಂಡರಿ ಬಾರಿಸಿ ತಂಡಕ್ಕೆ ರೋಚಕಯ ಜಯ ತಂದು ಕೊಟ್ಟರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ