ಪಾಕ್ ಮಣಿಸಿದ ಆಫ್ರಿಕಾ; ಪಾಯಿಂಟ್ ಪಟ್ಟಿಯಲ್ಲಿ ನಂ.1 ಪಟ್ಟ ಕಳೆದುಕೊಂಡ ಭಾರತ..!

ICC World Cup 2023 Updated Points Table: ಟೂರ್ನಿಯ 5ನೇ ಪಂದ್ಯವನ್ನು ಗೆದ್ದು 10 ಅಂಕ ಗಳಿಸುವ ಮೂಲಕ ದಕ್ಷಿಣ ಆಫ್ರಿಕಾ ಭಾರತ ತಂಡದಿಂದ ನಂಬರ್ ಒನ್ ಕಿರೀಟವನ್ನು ಕಸಿದುಕೊಂಡಿದೆ. ಭಾರತ ಕೂಡ 10 ಅಂಕ ಹೊಂದಿದ್ದರೂ, ನೆಟ್ ರನ್​ರೇಟ್​ನಿಂದಾಗಿ ಭಾರತ ಎರಡನೇ ಸ್ಥಾನಕ್ಕೆ ಕುಸಿದಿದೆ.

ಪಾಕ್ ಮಣಿಸಿದ ಆಫ್ರಿಕಾ; ಪಾಯಿಂಟ್ ಪಟ್ಟಿಯಲ್ಲಿ ನಂ.1 ಪಟ್ಟ ಕಳೆದುಕೊಂಡ ಭಾರತ..!
ದಕ್ಷಿಣ ಆಫ್ರಿಕಾ- ಭಾರತ
Follow us
ಪೃಥ್ವಿಶಂಕರ
|

Updated on: Oct 28, 2023 | 6:36 AM

2023 ರ ವಿಶ್ವಕಪ್​ನಲ್ಲಿ (ICC World Cup 2023) ನಡೆದ 26 ನೇ ಪಂದ್ಯದಲ್ಲಿ ಪಾಕಿಸ್ತಾನವನ್ನು ಒಂದು ವಿಕೆಟ್​ನಿಂದ ಮಣಿಸಿದ ದಕ್ಷಿಣ ಆಫ್ರಿಕಾ (Pakistan vs South Africa) ಟೂರ್ನಿಯಲ್ಲಿ ಐದನೇ ಗೆಲುವನ್ನು ದಾಖಲಿಸಿದೆ. ದಕ್ಷಿಣ ಆಫ್ರಿಕಾದ ಈ ಗೆಲುವಿನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ದೊಡ್ಡ ಬದಲಾವಣೆಯಾಗಿದ್ದು, ಯಾವುದೇ ಪಂದ್ಯವನ್ನಾಡದೆ ಟೀಂ ಇಂಡಿಯಾ (Team India) ತನ್ನ ಸ್ಥಾನವನ್ನು ಕಳೆದುಕೊಂಡಿದ್ದರೆ, ಪಾಕ್ ತಂಡವನ್ನು ಮಣಿಸಿದ ಹರಿಣಗಳು ನಂಬರ್ ಒನ್ ಸ್ಥಾನಕ್ಕೇರಿದ್ದಾರೆ. ಹೀಗಾಗಿ ನಂಬರ್ 1 ಸ್ಥಾನದಲ್ಲಿದ್ದ ರೋಹಿತ್ (Rohit Sharma) ಪಡೆ ಇದೀಗ ಎರಡನೇ ಸ್ಥಾನಕ್ಕೆ ಕುಸಿದಿದೆ. ಇದೇ ವೇಳೆ ಸತತ ನಾಲ್ಕನೇ ಪಂದ್ಯದಲ್ಲಿ ಸೋಲು ಕಂಡಿರುವ ಪಾಕಿಸ್ತಾನ ತಂಡ ವಿಶ್ವಕಪ್​ನಿಂದ ಹೊರಬೀಳುವುದು ಬಹುತೇಕ ಖಚಿತವಾಗಿದೆ.

ಪಾಕಿಸ್ತಾನ ಆರನೇ ಸ್ಥಾನದಲ್ಲಿ

ಟೂರ್ನಿಯ 5ನೇ ಪಂದ್ಯವನ್ನು ಗೆದ್ದು 10 ಅಂಕ ಗಳಿಸುವ ಮೂಲಕ ದಕ್ಷಿಣ ಆಫ್ರಿಕಾ ಭಾರತ ತಂಡದಿಂದ ನಂಬರ್ ಒನ್ ಕಿರೀಟವನ್ನು ಕಸಿದುಕೊಂಡಿದೆ. ಭಾರತ ಕೂಡ 10 ಅಂಕ ಹೊಂದಿದ್ದರೂ, ನೆಟ್ ರನ್​ರೇಟ್​ನಿಂದಾಗಿ ಭಾರತ ಎರಡನೇ ಸ್ಥಾನಕ್ಕೆ ಕುಸಿದಿದೆ. ಆದರೆ ಆಫ್ರಿಕಾ ವಿರುದ್ಧ ಸೋಲು ಕಂಡಿರುವ ಪಾಕಿಸ್ತಾನ ಆರನೇ ಸ್ಥಾನದಲ್ಲಿದ್ದು, ಬಾಬರ್ ಪಡೆ ಸೆಮಿಫೈನಲ್​ಗೇರಬೇಕೆಂದರೆ ಉಳಿದಿರುವ ಮೂರು ಪಂದ್ಯಗಳಲ್ಲಿ ಭಾರಿ ಜಯ ಸಾಧಿಸಬೇಕಿದೆ. ಇದರೊಂದಿಗೆ ಇತರ ತಂಡಗಳ ಫಲಿತಾಂಶದ ಮೇಲೂ ಅವಲಂಬಿತವಾಗಿದೆ.

PAK vs SA: ಪಾಕಿಸ್ತಾನಕ್ಕೆ ಸತತ 4ನೇ ಸೋಲು; ಬಾಬರ್ ಪಡೆಗೆ ಸೆಮೀಸ್​ ಹಾದಿ ಇನ್ನಷ್ಟು ಕಠಿಣ..!

ನಂ.1 ಸ್ಥಾನದಿಂದ ಜಾರಿದ ಭಾರತ

ವಿಜಯದ ನಂತರ, ದಕ್ಷಿಣ ಆಫ್ರಿಕಾ ಪಾಯಿಂಟ್ ಪಟ್ಟಿಯಲ್ಲಿ ಬದಲಾವಣೆಗಳನ್ನು ಮಾಡಿದ್ದು, ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ. ನಂತರದ ಸ್ಥಾನದಲ್ಲಿ ಅಂದರೆ ಎರಡನೇ ಸ್ಥಾನಕ್ಕೆ ಟೀಂ ಇಂಡಿಯಾ ಕುಸಿದಿದ್ದರೆ, ನ್ಯೂಜಿಲೆಂಡ್ ಮೂರನೇ ಸ್ಥಾನಕ್ಕೆ ಜಾರಿದೆ. ಹಾಗೆಯೇ ಆಸ್ಟ್ರೇಲಿಯಾ ಎಂದಿನಂತೆ ತನ್ನ ನಾಲ್ಕನೇ ಸ್ಥಾನವನ್ನು ಉಳಿಸಿಕೊಂಡಿದೆ. ಆದರೆ, ವಿಶ್ವಕಪ್​ನಲ್ಲಿ ಇಲ್ಲಿಯವರೆಗೆ ಯಾವುದೇ ಪಂದ್ಯವನ್ನು ಸೋತಿಲ್ಲದ ಏಕೈಕ ತಂಡವಾದ ಟೀಂ ಇಂಡಿಯಾ ತನ್ನ ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದರೆ ಮತ್ತೊಮ್ಮೆ ಅಗ್ರಸ್ಥಾನಕ್ಕೆ ಬರಲಿದೆ.

ಇದು ಇತರ ತಂಡಗಳ ಸ್ಥಿತಿ

ಅಗ್ರ-4ರ ರೇಸ್​ನಲ್ಲಿ ಉಳಿದಿರುವ ತಂಡಗಳ ಪೈಕಿ ಶ್ರೀಲಂಕಾ -0.205 ನೆಟ್ ರನ್​ರೇಟ್​ನೊಂದಿಗೆ 4 ಅಂಕ ಸಂಪಾದಿಸಿ ಐದನೇ ಸ್ಥಾನದಲ್ಲಿದೆ. ಪಾಕಿಸ್ತಾನ ಕೂಡ 4 ಅಂಕ ಸಂಪಾದಿಸಿದೆ. ಆದರೆ ಅದರ ನೆಟ್​ ರನ್​ರೇಟ್ -0.387 ಆಗಿರುವುದರಿಂದ 6ನೇ ಸ್ಥಾನದಲ್ಲಿದೆ. ಅಫ್ಘಾನಿಸ್ತಾನ ಕೂಡ -0.969 ನೆಟ್ ರನ್​ರೇಟ್ ಹಾಗೂ 4 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ. ಇನ್ನುಳಿದಂತೆ ಬಾಂಗ್ಲಾದೇಶವು 2 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದ್ದರೆ ಅದರ ನೆಟ್​ ರನ್​ರೇಟ್ -1.253 ಆಗಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಹಾಲಿ ಚಾಂಪಿಯನ್ ಇಂಗ್ಲೆಂಡ್ 2 ಅಂಕ ಹಾಗೂ -1.634 ನೆಟ್​ ರನ್​ರೇಟ್​ನೊಂದಿಗೆ ಒಂಬತ್ತನೇ ಸ್ಥಾನದಲ್ಲಿದ್ದರೆ, ನೆದರ್ಲ್ಯಾಂಡ್ಸ್ ತಂಡ 2 ಅಂಕ ಹಾಗೂ -1.902 ನೆಟ್ ರನ್ರೇಟ್ನೊಂದಿಗೆ 10 ನೇ ಸ್ಥಾನದಲ್ಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್