Asia Cup 2023: ಭಾರತದ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಕಿಸ್ತಾನ್ ತಂಡದ ಮಾಸ್ಟರ್​ ಪ್ಲ್ಯಾನ್

| Updated By: ಝಾಹಿರ್ ಯೂಸುಫ್

Updated on: Aug 02, 2023 | 8:34 PM

Asia Cup 2023: ಷ್ಯಾಕಪ್ 2023ರ  ಆಯೋಜನೆಯ ಹಕ್ಕನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಹೊಂದಿದೆ. ಆದರೆ ಪಾಕ್​ನಲ್ಲಿ ಟೂರ್ನಿ ಆಯೋಜಿಸಿದರೆ ಭಾರತ ತಂಡ ಭಾಗವಹಿಸುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿತ್ತು.

Asia Cup 2023: ಭಾರತದ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಕಿಸ್ತಾನ್ ತಂಡದ ಮಾಸ್ಟರ್​ ಪ್ಲ್ಯಾನ್
India vs Pakistan
Follow us on

Asia Cup 2023: ಆಗಸ್ಟ್ 30 ರಿಂದ ಶುರುವಾಗಲಿರುವ ಏಷ್ಯಾಕಪ್​ಗೂ ಮುನ್ನ ಪಾಕಿಸ್ತಾನ್ ತಂಡ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಈ ಬಾರಿಯ ಏಷ್ಯಾಕಪ್ ಪಾಕಿಸ್ತಾನ್ ಹಾಗೂ ಶ್ರೀಲಂಕಾದಲ್ಲಿ ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ್ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗಲಿದೆ. ಹಾಗೆಯೇ ಸೆಪ್ಟೆಂಬರ್ 2 ರಂದು ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಭಾರತ ತಂಡವು ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ನಡೆಯಲಿರುವುದು ಶ್ರೀಲಂಕಾದಲ್ಲಿ ಎಂಬುದು ವಿಶೇಷ.

ಆದರೆ ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನವೇ ಶ್ರೀಲಂಕಾದಲ್ಲೇ ಸರಣಿಯೊಂದನ್ನು ಆಯೋಜಿಸುವಲ್ಲಿ ಪಾಕ್ ಕ್ರಿಕೆಟ್ ಬೋರ್ಡ್​ ಯಶಸ್ವಿಯಾಗಿದೆ. ಅದರಂತೆ ಲಂಕಾದಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಪಾಕಿಸ್ತಾನ್ 3 ಪಂದ್ಯಗಳ ಏಕದಿನ ಸರಣಿ ಆಡಲಿದೆ.

ಈ ಸರಣಿಯು ಆಗಸ್ಟ್ 22 ರಿಂದ ಆಗಸ್ಟ್ 26 ರವರೆಗೆ ನಡೆಯಲಿದೆ. ಅಂದರೆ ಭಾರತದ ವಿರುದ್ಧದ ಪಂದ್ಯಕ್ಕೂ ಒಂದು ವಾರ ಮುಂಚಿತವಾಗಿ ಪಾಕಿಸ್ತಾನ್ ತಂಡ ಶ್ರೀಲಂಕಾದಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಕಣಕ್ಕಿಳಿಯಲಿದೆ. ಈ ಮೂಲಕ ಏಷ್ಯಾಕಪ್​ಗಾಗಿ ಭರ್ಜರಿ ತಯಾರಿ ನಡೆಸಲು ಪಾಕ್ ತಂಡ ಯೋಜನೆ ರೂಪಿಸಿದೆ.

ಹೈಬ್ರಿಡ್ ಮಾದರಿಯಲ್ಲಿ ಏಷ್ಯಾಕಪ್:

ಈ ಬಾರಿಯ ಏಷ್ಯಾ ಕಪ್ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಅಂದರೆ ಒಂದೇ ಟೂರ್ನಿಯನ್ನು ಎರಡು ದೇಶಗಳಲ್ಲಿ ಆಯೋಜಿಸಲಾಗುತ್ತಿದೆ. ಏಷ್ಯಾಕಪ್ 2023ರ  ಆಯೋಜನೆಯ ಹಕ್ಕನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಹೊಂದಿದೆ. ಆದರೆ ಪಾಕ್​ನಲ್ಲಿ ಟೂರ್ನಿ ಆಯೋಜಿಸಿದರೆ ಭಾರತ ತಂಡ ಭಾಗವಹಿಸುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿತ್ತು. ಹೀಗಾಗಿ ಟೂರ್ನಿಯ 4 ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಹಾಗೂ ಉಳಿದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಇಲ್ಲಿ ಭಾರತದ ಎಲ್ಲಾ ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯವಹಿಸಲಿದೆ.

ಇದನ್ನೂ ಓದಿ: Team India: ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ

ಏಷ್ಯಾಕಪ್ ವೇಳಾಪಟ್ಟಿ ಹೀಗಿದೆ:

  1. ಆಗಸ್ಟ್ 30- ಪಾಕಿಸ್ತಾನ್ vs ನೇಪಾಳ (ಮುಲ್ತಾನ್)
  2. ಆಗಸ್ಟ್ 31- ಬಾಂಗ್ಲಾದೇಶ್ vs ಶ್ರೀಲಂಕಾ (ಕ್ಯಾಂಡಿ)
  3. ಸೆಪ್ಟೆಂಬರ್ 2- ಭಾರತ vs ಪಾಕಿಸ್ತಾನ್ (ಕ್ಯಾಂಡಿ)
  4. ಸೆಪ್ಟೆಂಬರ್ 3- ಬಾಂಗ್ಲಾದೇಶ್ vs ಅಫ್ಘಾನಿಸ್ತಾನ್ (ಲಾಹೋರ್)
  5. ಸೆಪ್ಟೆಂಬರ್ 4- ಭಾರತ vs ನೇಪಾಳ (ಕ್ಯಾಂಡಿ)
  6. ಸೆಪ್ಟೆಂಬರ್ 5- ಶ್ರೀಲಂಕಾ vs ಅಫ್ಘಾನಿಸ್ತಾನ್ (ಲಾಹೋರ್)

ಸೂಪರ್-4 ಹಂತದ ವೇಳಾಪಟ್ಟಿ:

  1. ಸೆಪ್ಟೆಂಬರ್ 6- A1 Vs B2 (ಲಾಹೋರ್)
  2. ಸೆಪ್ಟೆಂಬರ್ 9- B1 Vs B2 (ಕೊಲಂಬೊ)
  3. ಸೆಪ್ಟೆಂಬರ್ 10- A1 Vs A2 (ಕೊಲಂಬೊ)
  4. ಸೆಪ್ಟೆಂಬರ್ 12- A2 Vs B1 (ಕೊಲಂಬೊ)
  5. ಸೆಪ್ಟೆಂಬರ್ 14- A1 Vs B1 (ಕೊಲಂಬೊ)
  6. ಸೆಪ್ಟೆಂಬರ್ 15- A2 Vs B2 (ಕೊಲಂಬೊ)
  7. ಸೆಪ್ಟೆಂಬರ್ 17- ಫೈನಲ್ ಪಂದ್ಯ (ಕೊಲಂಬೊ)