IND vs WI 1st T20: ಭಾರತ-ವೆಸ್ಟ್ ಇಂಡೀಸ್ ಟಿ20: ಎಷ್ಟು ಗಂಟೆಗೆ ಶುರು? ಯಾವ ಚಾನೆಲ್‌ನಲ್ಲಿ ನೇರ ಪ್ರಸಾರ? ಇಲ್ಲಿದೆ ಮಾಹಿತಿ
IND vs WI 1st T20: ಭಾರತ-ವೆಸ್ಟ್ ಇಂಡೀಸ್ ನಡುವಣ ಟಿ20 ಸರಣಿಯಲ್ಲಿ ಒಟ್ಟು 5 ಪಂದ್ಯಗಳನ್ನು ಆಡಲಾಗುತ್ತದೆ. ಈ ಸರಣಿಯ ಮೊದಲ ಮೂರು ಪಂದ್ಯಗಳು ಕೆರಿಬಿಯನ್ ನಾಡಲ್ಲಿ ನಡೆದರೆ, ಉಳಿದ 2 ಪಂದಯ್ಗಳಿಗೆ ಯುಎಸ್ಎನ ಫ್ಲೋರಿಡಾ ಆತಿಥ್ಯವಹಿಸಲಿದೆ.
IND vs WI 1st T20: ಭಾರತ-ವೆಸ್ಟ್ ಇಂಡೀಸ್ (India vs West Indies) ನಡುವಣ ಏಕದಿನ ಸರಣಿ ಮುಕ್ತಾಯಗೊಂಡಿದೆ. ಮೂರು ಪಂದ್ಯಗಳ ಏಕದಿನ ಸರಣಿಯನ್ನು ಟೀಮ್ ಇಂಡಿಯಾ 2-1 ಅಂತರದಿಂದ ಗೆದ್ದುಕೊಂಡಿದೆ. ಇದೀಗ ಭಾರತ ತಂಡವು ವಿಂಡೀಸ್ ವಿರುದ್ಧದ ಟಿ20 ಸರಣಿಗೆ ಸಜ್ಜಾಗಿದೆ. 5 ಪಂದ್ಯಗಳ ಟಿ20 ಸರಣಿಯು ಗುರುವಾರದಿಂದ ಶುರುವಾಗಲಿದೆ.
ಟ್ರಿನಿಡಾಡ್ನ ಬ್ರಿಯಾನ್ ಲಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದ ಮೂಲಕ ಶುಭಾರಂಭ ಮಾಡುವ ಇರಾದೆಯಲ್ಲಿದೆ ಹಾರ್ದಿಕ್ ಪಾಂಡ್ಯ ಪಡೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಗುರುವಾರ ಆಗಸ್ಟ್ 3 ರಂದು ನಡೆಯಲಿದೆ. ಈ ಸರಣಿ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಮೊದಲ ಟಿ20 ಪಂದ್ಯ ಎಷ್ಟು ಗಂಟೆಗೆ ಪ್ರಾರಂಭವಾಗುತ್ತದೆ?
ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 7.30 ಕ್ಕೆ ಶುರುವಾಗಲಿದೆ.
ಈ ಪಂದ್ಯಗಳನ್ನು ಯಾವ ಟಿವಿ ಚಾನೆಲ್‌ನಲ್ಲಿ ವೀಕ್ಷಿಸಬಹುದು?
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಟಿ20 ಸರಣಿಯು ದೂರದರ್ಶನ ಸ್ಪೋರ್ಟ್ಸ್ (ಡಿಡಿ ಸ್ಪೋರ್ಟ್ಸ್) ಚಾನೆಲ್‌ನಲ್ಲಿ ನೇರ ಪ್ರಸಾರವಾಗಲಿದೆ.
ಯಾವ ಆ್ಯಪ್ ಹಾಗೂ ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು?
ಈ ಸರಣಿಯ ಎಲ್ಲಾ ಪಂದ್ಯಗಳ ಲೈವ್ ಸ್ಟ್ರೀಮಿಂಗ್ FanCode ಮತ್ತು JioCinema ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.
ಭಾರತ-ವೆಸ್ಟ್ ಇಂಡೀಸ್ ಟಿ20 ಸರಣಿ ವೇಳಾಪಟ್ಟಿ:
- ಆಗಸ್ಟ್ 3- ಮೊದಲ ಟಿ20 ಪಂದ್ಯ (ಬ್ರಿಯನ್ ಲಾರಾ ಸ್ಟೇಡಿಯಂ, ಟ್ರಿನಿಡಾಡ್)
- ಆಗಸ್ಟ್ 6- ಎರಡನೇ ಟಿ20 ಪಂದ್ಯ (ಪ್ರೊವಿಡೆನ್ಸ್ ಸ್ಟೇಡಿಯಂ, ಗಯಾನ)
- ಆಗಸ್ಟ್ 8- ಮೂರನೇ ಟಿ20 ಪಂದ್ಯ (ಪ್ರೊವಿಡೆನ್ಸ್ ಸ್ಟೇಡಿಯಂ, ಗಯಾನ)
- ಆಗಸ್ಟ್ 12- ನಾಲ್ಕನೇ ಟಿ20 ಪಂದ್ಯ (ಸೆಂಟ್ರಲ್ ಬ್ರೊವರ್ಡ್ ಪಾರ್ಕ್ ಸ್ಟೇಡಿಯಂ, ಫ್ಲೋರಿಡಾ)
- ಆಗಸ್ಟ್ 13- ಐದನೇ ಟಿ20 ಪಂದ್ಯ (ಸೆಂಟ್ರಲ್ ಬ್ರೊವರ್ಡ್ ಪಾರ್ಕ್ ಸ್ಟೇಡಿಯಂ, ಫ್ಲೋರಿಡಾ)
ಟಿ20 ಸರಣಿಗೆ ಉಭಯ ತಂಡಗಳು ಹೀಗಿವೆ:
ಭಾರತ ಟಿ20 ತಂಡ: ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ಉಪನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ನಾಯಕ), ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಅವೇಶ್ ಖಾನ್, ಮುಖೇಶ್ ಕುಮಾರ್.
ವೆಸ್ಟ್ ಇಂಡೀಸ್ ಟಿ20 ತಂಡ: ರೋವ್‌ಮನ್ ಪೊವೆಲ್ (ನಾಯಕ), ಕೈಲ್ ಮೇಯರ್ಸ್ (ಉಪ ನಾಯಕ), ಜಾನ್ಸನ್ ಚಾರ್ಲ್ಸ್, ರೋಸ್ಟನ್ ಚೇಸ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೇಲ್ ಹೊಸೈನ್, ಅಲ್ಝಾರಿ ಜೋಸೆಫ್, ಬ್ರಾಂಡನ್ ಕಿಂಗ್, ಓಬೆಡ್ ಮೆಕಾಯ್, ನಿಕೋಲಸ್ ಪೂರನ್, ರೊಮಾರಿಯೊ ಶೆಫರ್ಡ್, ಓಡಿಯನ್ ಸ್ಮಿತ್ , ಓಶಾನೆ ಥಾಮಸ್.