Asia Cup 2023: ಏಷ್ಯಾಕಪ್ಗೆ ರಾಹುಲ್- ಶ್ರೇಯಸ್ ಡೌಟ್! ಬಿಸಿಸಿಐಗೆ ತಲೆನೋವಾದ ತಂಡದ ಮಧ್ಯಮ ಕ್ರಮಾಂಕ
Asia Cup 2023: ಏಕದಿನ ಮಾದರಿಯಲ್ಲಿ ಉತ್ತಮ ಬ್ಯಾಟರ್ಸ್ ಎನಿಸಿಕೊಂಡಿರುವ ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಅಲಭ್ಯತೆ ಟೀಂ ಇಂಡಿಯಾಕ್ಕೆ ಹಿನ್ನಡೆಯುಂಟುಮಾಡಿದೆ.
ಏಷ್ಯಾಕಪ್ (Asia Cup 2023) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಏಷ್ಯನ್ ರಾಷ್ಟ್ರಗಳ ಈ ಮಿನಿ ವಿಶ್ವಕಪ್ ಮುಗಿದ ಒಂದು ತಿಂಗಳ ನಂತರ ಐಸಿಸಿ ಏಕದಿನ ವಿಶ್ವಕಪ್ (World Cup 2023) ಆರಂಭವಾಗಲಿದೆ. ಈ ಎರಡೂ ಟೂರ್ನಿಗಳಿಗೆ ಈಗಾಗಲೇ ಟೀಂ ಇಂಡಿಯಾ ತಯಾರಿಯಲ್ಲಿ ನಿರತವಾಗಿದೆ. ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯನ್ನು ಗೆದ್ದು ಮುಗಿಸಿರುವ ಟೀಂ ಇಂಡಿಯಾಕ್ಕೆ (Team India) ಬಿಗ್ ಶಾಕ್ ಎದುರಾಗಿದೆ. ತಂಡದ ಇಬ್ಬರು ಸ್ಟಾರ್ ಆಟಗಾರರಾದ ಕೆಎಲ್ ರಾಹುಲ್ (KL Rahul) ಮತ್ತು ಶ್ರೇಯಸ್ ಅಯ್ಯರ್ (Shreyas Iyer) ಏಷ್ಯಾಕಪ್ನಲ್ಲಿ ಆಡುವುದು ಅನುಮಾನವಾಗಿದೆ. ಈ ಬಾರಿಯ ಏಷ್ಯಾಕಪ್ ಏಕದಿನ ಮಾದರಿಯಲ್ಲಿ ನಡೆಯಲ್ಲಿದ್ದು, ಆಗಸ್ಟ್ 30 ರಿಂದ ಪಾಕಿಸ್ತಾನದಲ್ಲಿ ಆರಂಭವಾಗಲಿದೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಸೆಪ್ಟೆಂಬರ್ 2 ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ಆಡಲಿದೆ. ಆದರೆ ಏಕದಿನ ಮಾದರಿಯಲ್ಲಿ ಉತ್ತಮ ಬ್ಯಾಟರ್ಸ್ ಎನಿಸಿಕೊಂಡಿರುವ ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಅಲಭ್ಯತೆ ಟೀಂ ಇಂಡಿಯಾಕ್ಕೆ ಹಿನ್ನಡೆಯುಂಟುಮಾಡಿದೆ.
ಕ್ರಿಕೆಟ್ ವೆಬ್‌ಸೈಟ್ ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗುವ ಪಂದ್ಯಾವಳಿಯಲ್ಲಿ ಈ ಇಬ್ಬರು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಆಡುವುದು ತುಂಬಾ ಕಷ್ಟ ಎಂದು ಹೇಳಲಾಗಿದೆ. ಇದಕ್ಕೆ ಕಾರಣ, ಇಬ್ಬರೂ ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ ಎಂಬುದಾಗಿದೆ. ಶ್ರೇಯಸ್ ಅಯ್ಯರ್ ಮಾರ್ಚ್‌ನಿಂದ ಕ್ರಿಕೆಟ್ ಮೈದಾನದಿಂದ ಹೊರಗುಳಿದಿದ್ದರೆ, ಮೇನಲ್ಲಿ ನಡೆದ ಐಪಿಎಲ್‌ನಲ್ಲಿ ಗಾಯಗೊಂಡ ರಾಹುಲ್ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಪ್ರಸ್ತುತ ಎನ್ಸಿಎನಲ್ಲಿ ರಿಹ್ಯಾಬ್ನಲ್ಲಿದ್ದಾರೆ. ಆದರೆ, ಇತ್ತೀಚಿಗೆ ವರದಿಯಾಗಿರುವ ಪ್ರಕಾರ ಇವರಿಬ್ಬರೂ ಏಷ್ಯಾಕಪ್ ವೇಳೆಗೆ ಫಿಟ್ ಆಗುವುದು ಕಷ್ಟ ಎಂದು ತಿಳಿದುಬಂದಿದೆ.
Asia Cup: 1984 ರಿಂದ ಆರಂಭವಾದ ಏಷ್ಯಾಕಪ್ನಲ್ಲಿ ಭಾರತ ಎಷ್ಟು ಬಾರಿ ಚಾಂಪಿಯನ್ ಆಗಿದೆ ಗೊತ್ತಾ?
ಫಿಟ್ನೆಸ್ ಅಪ್ಡೇಟ್ ನೀಡಿದ ಬಿಸಿಸಿಐ
ಸುಮಾರು ಎರಡು ವಾರಗಳ ಹಿಂದೆ (ಜುಲೈ 21), ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ತನ್ನ ಕೆಲವು ಆಟಗಾರರ ಬಗ್ಗೆ ಹೆಲ್ತ್ ಅಪ್ಡೇಟ್ ನೀಡಿತ್ತು. ಇದರಲ್ಲಿ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಬಗ್ಗೆಯೂ ಮಾಹಿತಿ ನೀಡಲಾಗಿತ್ತು. ಬಿಸಿಸಿಐ ನೀಡಿದ ಮಾಹಿತಿ ಪ್ರಕಾರ ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಬ್ಯಾಟಿಂಗ್ ಅಭ್ಯಾಸವನ್ನು ಪ್ರಾರಂಭಿಸಿದ್ದು, ಫಿಟ್‌ನೆಸ್ ಡ್ರಿಲ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಎನ್‌ಸಿಎಯ ವೈದ್ಯಕೀಯ ತಂಡ ಇಬ್ಬರ ಚೇತರಿಕೆಯ ವೇಗದಿಂದ ತೃಪ್ತವಾಗಿದೆ ಎಂದು ಮಂಡಳಿ ತಿಳಿಸಿತ್ತು.
ಬಿಸಿಸಿಐ ಮಾತ್ರವಲ್ಲದೆ, ಶ್ರೇಯಸ್ ಮತ್ತು ರಾಹುಲ್ ಕೂಡ ತಮ್ಮ ಫಿಟ್‌ನೆಸ್ ಡ್ರಿಲ್‌ಗಳು ಮತ್ತು ಬ್ಯಾಟಿಂಗ್ ಅಭ್ಯಾಸದ ಫೋಟೋಗಳು ಮತ್ತು ವೀಡಿಯೊಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಆಗಸ್ಟ್ 2 ರ ಬುಧವಾರದಂದು ರಾಹುಲ್ ವೀಡಿಯೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಅವರು ಬ್ಯಾಟಿಂಗ್ ಹೊರತಾಗಿ, ಕೀಪಿಂಗ್ ಮಾಡುತ್ತಿರುವುದು ಕೂಡ ಕಂಡುಬಂದಿದೆ.
ವಿಶ್ವಕಪ್‌ನಲ್ಲಿ ಅವಕಾಶ?
ಆದರೆ, ಈ ನಡುವೆಯೂ ಇಬ್ಬರ ಫಿಟ್‌ನೆಸ್ ಅನುಮಾನವಾಗಿದ್ದು, ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಇಬ್ಬರನ್ನೂ ಮರಳಿ ಕರೆತರಲು ದುಡುಕುವುದು ಸರಿಯಲ್ಲ ಎಂಬ ಅಭಿಪ್ರಾಯ ಮಂಡಳಿಯೊಳಗಿದೆ. ಇಂತಹ ಪರಿಸ್ಥಿತಿಯಲ್ಲಿ ಇವರಿಬ್ಬರು ಏಷ್ಯಾಕಪ್ನಲ್ಲಿ ಆಡುವುದು ಬಹುತೇಕ ಅಸಾಧ್ಯ ಎನಿಸುತ್ತಿದೆ. ಎರಡು ದಿನಗಳ ಹಿಂದೆ, ಮಂಡಳಿಯು ಐರ್ಲೆಂಡ್ ಪ್ರವಾಸಕ್ಕಾಗಿ ಟಿ20 ತಂಡವನ್ನು ಘೋಷಿಸಿತು. ಅದರಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ತಂಡಕ್ಕೆ ರೀ ಎಂಟ್ರಿಯಾಗಿದ್ದರೆ, ರಾಹುಲ್ ಮತ್ತು ಶ್ರೇಯಸ್ ಸ್ಥಾನವನ್ನು ಕಂಡುಕೊಳ್ಳಲಿಲ್ಲ. ಆದಾಗ್ಯೂ, ಪ್ರಸ್ತುತ ಪರಿಸ್ಥಿತಿಯ ಹೊರತಾಗಿಯೂ, ಇಬ್ಬರೂ ಬ್ಯಾಟ್ಸ್‌ಮನ್‌ಗಳು ವಿಶ್ವಕಪ್ ಯೋಜನೆಯ ಭಾಗವಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮಧ್ಯಮ ಕ್ರಮಾಂಕವನ್ನು ಯಾರು ನಿಭಾಯಿಸುತ್ತಾರೆ?
ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಆರಂಭವಾಗಲಿದ್ದು, ಭಾರತದ ಮೊದಲ ಪಂದ್ಯ ಅಕ್ಟೋಬರ್ 8 ರಂದು ನಡೆಯಲಿದೆ. ಟೀಂ ಇಂಡಿಯಾಗೆ ಈ ಇಬ್ಬರ ಉಪಸ್ಥಿತಿ ತುಂಬಾ ಅಗತ್ಯವಾಗಿದೆ. ಏಕೆಂದರೆ ಇಬ್ಬರೂ ಏಕದಿನ ಸ್ವರೂಪದಲ್ಲಿ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಜೀವಾಳವಾಗಿದ್ದಾರೆ. ಗಾಯಗೊಳ್ಳುವ ಮೊದಲು, ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಮತ್ತು ರಾಹುಲ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು. ರಾಹುಲ್ ಕೂಡ ವಿಕೆಟ್ ಕೀಪಿಂಗ್ ಮಾಡುತ್ತಿದ್ದು, ಉತ್ತಮ ಫಾರ್ಮ್‌ನಲ್ಲಿದ್ದರು.
ಇದೀಗ ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾದ ಯೋಜನೆಗಳಿಗೆ ದೊಡ್ಡ ಪೆಟ್ಟು ಬಿದ್ದಂತಾಗಿದ್ದು, ಮಧ್ಯಮ ಕ್ರಮಾಂಕದಲ್ಲಿಯೇ ತಂಡ ಕೊಂಚ ವೀಕ್ ಕಾಣುತ್ತಿದೆ. ಅಲ್ಲದೆ, ಈ ಇಬ್ಬರ ಅಲಭ್ಯತೆಯಿಂದಾಗಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಮಾಡಿದ ಪ್ರಯೋಗವನ್ನೇ ಟೀಂ ಇಂಡಿಯಾ ಏಷ್ಯಾಕಪ್ನಲ್ಲೂ ಅಳವಡಿಸಿಕೊಳ್ಳಬೇಕಿದೆ ಎಂಬುದು ಸ್ಪಷ್ಟವಾಗಿದೆ. ಅಂದರೆ, ನಾಲ್ಕು ಮತ್ತು ಐದನೇ ಸ್ಥಾನಕ್ಕಾಗಿ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ನಡುವೆ ಹೋರಾಟ ನಡೆಯಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:15 am, Thu, 3 August 23