17 ವರ್ಷಗಳ ಬಳಿಕ ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ಪಾಕ್ ನೆಲಕ್ಕೆ ಕಾಲಿಟ್ಟಿರುವ ಇಂಗ್ಲೆಂಡ್ ತಂಡದ (England cricket team) ಮೇಲೆ ವೈರಸ್ ದಾಳಿ ಮಾಡಿದೆ. ಹೀಗಾಗಿ ರಾವಲ್ಪಿಂಡಿಯಲ್ಲಿ ಆರಂಭವಾಗಬೇಕಿರುವ ಮೊದಲ ಟೆಸ್ಟ್‌ಗೂ ಮುನ್ನ ಇಂಗ್ಲೆಂಡ್ ತಂಡದ 14 ಆಟಗಾರರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ಮಾಧ್ಯಮ ವರದಿಗಳ ಪ್ರಕಾರ ಬೆನ್ ಸ್ಟೋಕ್ಸ್, ಲಿಯಾಮ್ ಲಿವಿಂಗ್ಸ್ಟನ್, ಮೊಯಿನ್ ಅಲಿಯಂತಹ (Ben Stokes, Liam Livingston, Moin Ali) ದಿಗ್ಗಜ ಆಟಗಾರರ ಆರೋಗ್ಯ ಹಠಾತ್ ಹದಗೆಟ್ಟಿದ್ದು, ಈ ಆಟಗಾರರು ಆಡುವ ಸ್ಥಿತಿಯಲ್ಲಿಲ್ಲ ಎಂದು ವರದಿಯಾಗಿದೆ. ಅಲ್ಲದೆ ಪಾಕ್ ಪ್ರವಾಸ ಮಾಡಿರುವ ಒಟ್ಟು ತಂಡದಲ್ಲಿ ಕೇವಲ 5 ಆಟಗಾರರು ಮಾತ್ರ ಆರೋಗ್ಯವಾಗಿದ್ದು, ಹ್ಯಾರಿ ಬ್ರೂಕ್, ಜ್ಯಾಕ್ ಕ್ರೌಲಿ, ಕೀಟನ್ ಜೆನ್ನಿಂಗ್ಸ್, ಆಲಿ ಪೋಪ್ ಮತ್ತು ಜೋ ರೂಟ್ ಕ್ಷೇಮವಾಗಿದ್ದಾರೆ ಎಂದು ವರದಿಯಾಗಿದೆ.
ಮೊದಲ ಟೆಸ್ಟ್ಗಾಗಿ ಇಂಗ್ಲೆಂಡ್ ಮಂಡಳಿ ಮಂಗಳವಾರವೇ ತನ್ನ ತಂಡವನ್ನು ಪ್ರಕಟಿಸಿತ್ತು. ಆದರೆ ಪ್ರಕಟಿಸಿದ 11 ಆಟಗಾರರ ತಂಡದಲ್ಲಿ ಬರೋಬ್ಬರಿ 7 ಆಟಗಾರರು ಈಗ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದಿದ್ದ ಬೆನ್ ಡಕೆಟ್, ಬೆನ್ ಸ್ಟೋಕ್ಸ್, ಲಿಯಾಮ್ ಲಿವಿಂಗ್ಸ್ಟನ್, ಬೆನ್ ಫಾಕ್ಸ್, ಆಲಿ ರಾಬಿನ್ಸನ್, ಜ್ಯಾಕ್ ಲೀಚ್ ಮತ್ತು ಜೇಮ್ಸ್ ಆಂಡರ್ಸನ್ ಅವರ ಆರೋಗ್ಯ ಹದಗೆಟ್ಟಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Suryakumar Yadav: ಬಂದ ಪುಟ್ಟ ಹೋದ ಪುಟ್ಟ; ಏಕದಿನ ಮಾದರಿಯಲ್ಲಿ ಸೂರ್ಯನಿಗೆ ಗ್ರಹಣ..!
ರಾವಲ್ಪಿಂಡಿ ಟೆಸ್ಟ್ ನಡೆಯುವುದು ಅನುಮಾನ?
17 ವರ್ಷಗಳ ಬಳಿಕ ಟೆಸ್ಟ್ ಸರಣಿ ಆಡುವ ಸಲುವಾಗಿ ಇಂಗ್ಲೆಂಡ್ ತಂಡ ಪಾಕ್ ನೆಲಕ್ಕೆ ಕಾಲಿಟ್ಟಿದೆ. ನಿಗದಿಯಂತೆ ಗುರುವಾರದಿಂದ ರಾವಲ್ಪಿಂಡಿಯಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಬೇಕು. ಆದರೆ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ಆಟಗಾರರು ಅನಾರೋಗ್ಯಕ್ಕೆ ತುತ್ತಾಗಿರುವುದು ಈ ಪಂದ್ಯಕ್ಕೆ ದೊಡ್ಡ ಹಿನ್ನಡೆಯುಂಟು ಮಾಡಿದೆ. ವರದಿಗಳ ಪ್ರಕಾರ, ವೈರಸ್ಗೆ ತುತ್ತಾಗಿರುವ ಇಂಗ್ಲೆಂಡ್ ಆಟಗಾರರಿಗೆ ಅಭ್ಯಾಸ ಮಾಡಲು ಸಹ ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.
BREAKING:
14 members of England’s touring party including captain @benstokes38 are unwell as a virus sweeps through the camp.
Only Harry Brook, Zak Crawley, Keaton Jennings, Ollie Pope and Joe Root are at the ground ahead of the Test tomorrow. #bbccricket #PAKvENG pic.twitter.com/pw0yLSxRes
— Test Match Special (@bbctms) November 30, 2022
ಪಾಕ್ ಊಟ ಹಿಡಿಸಲಿಲ್ಲ ಎಂದಿದ್ದ ಇಂಗ್ಲೆಂಡ್ ಆಟಗಾರರು
ಯಾವ ಕಾರಣಕ್ಕಾಗಿ ಇಂಗ್ಲೆಂಡ್ ಆಟಗಾರರು ಈ ವೈರಸ್ಗೆ ತುತ್ತಾಗಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ ಟಿ20 ವಿಶ್ವಕಪ್ಗೂ ಮುನ್ನ ಟಿ20 ಸರಣಿಗಾಗಿ ಪಾಕ್ ಪ್ರವಾಸ ಮಾಡಿದ್ದ ಇಂಗ್ಲೆಂಡ್ ತಂಡದ ಆಟಗಾರರು ಪಾಕ್ ಮಂಡಳಿ ನೀಡಿದ್ದ ಊಟೋಪಚಾರದ ಬಗ್ಗೆ ಅಪಸ್ವರ ಎತ್ತಿದ್ದರು. ತಂಡದ ಆಲ್ರೌಂಡರ್ ಮೊಯಿನ್ ಅಲಿ ನನಗೆ ಲಾಹೋರ್ನಲ್ಲಿ ನೀಡಿದ್ದ ಊಟ ಇಷ್ಟವಾಗಲಿಲ್ಲ ಎಂಬ ಬಹಿರಂಗ ಹೇಳಿಕೆ ನೀಡಿದ್ದರು. ಈ ಕಾರಣಕ್ಕಾಗಿಯೇ ಈ ಬಾರಿ ಟೆಸ್ಟ್ ಸರಣಿಗಾಗಿ ಪಾಕ್ ಪ್ರವಾಸ ಮಾಡಿರುವ ಇಂಗ್ಲೆಂಡ್ ತಂಡ ತಮ್ಮ ತಂಡದೊಂದಿಗೆ ಬಾಣಸಿಗರನ್ನು ಕರೆತಂದಿದೆ. ಆದರೆ ಇದರ ಹೊರತಾಗಿಯೂ ತಂಡದ ಆಟಗಾರರ ಆರೋಗ್ಯವು ಹದಗೆಟ್ಟಿರವುದು ಮಂಡಳಿಯನ್ನು ಚಿಂತೆಗೀಡುಮಾಡಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:17 pm, Wed, 30 November 22