Suryakumar Yadav: ಬಂದ ಪುಟ್ಟ ಹೋದ ಪುಟ್ಟ; ಏಕದಿನ ಮಾದರಿಯಲ್ಲಿ ಸೂರ್ಯನಿಗೆ ಗ್ರಹಣ..!

Suryakumar Yadav: ಟಿ20ಕ್ರಿಕೆಟ್​ನಲ್ಲಿ ಅಬ್ಬರಿಸಿ ಬೊಬ್ಬೆರೆಯುವ ಸೂರ್ಯಕುಮಾರ್ ಯಾದವ್ ಏಕದಿನ ಕ್ರಿಕೆಟ್​ನಲ್ಲಿ ಫ್ಲಾಪ್ ಆಗುತ್ತಿರುವುದು ಬಿಸಿಸಿಐಗೆ ಹೊಸ ತಲೆನೋವು ತಂದ್ದೊಡ್ಡಿದೆ. ಪಂದ್ಯದಿಂದ ಪಂದ್ಯಕ್ಕೆ, ಸರಣಿಯಿಂದ ಸರಣಿಗೆ ಸೂರ್ಯ ಅವರ ಏಕದಿನ ಪ್ರದರ್ಶನ ಕುಸಿಯುತ್ತಿದೆ.

Suryakumar Yadav: ಬಂದ ಪುಟ್ಟ ಹೋದ ಪುಟ್ಟ; ಏಕದಿನ ಮಾದರಿಯಲ್ಲಿ ಸೂರ್ಯನಿಗೆ ಗ್ರಹಣ..!
ಸೂರ್ಯಕುಮಾರ್ ಯಾದವ್
Follow us
TV9 Web
| Updated By: ಪೃಥ್ವಿಶಂಕರ

Updated on:Nov 30, 2022 | 12:35 PM

ನ್ಯೂಜಿಲೆಂಡ್​ನಲ್ಲಿ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ (India Vs New Zealand) ಸರಣಿ ಸೋಲಿನ ಭೀತಿಯಲ್ಲಿದೆ. ಹಾರ್ದಿಕ್ ನಾಯಕತ್ವದಲ್ಲಿ ಟಿ20 ಸರಣಿ ಎತ್ತಿಹಿಡಿದಿದ್ದ ಟೀಂ ಇಂಡಿಯಾ ಇದೀಗ ಧವನ್ ನಾಯಕತ್ವದಲ್ಲಿ ಏಕದಿನ ಸರಣಿಯನ್ನು ಗೆಲ್ಲುವಲ್ಲಿ ವಿಫಲವಾಗಿದೆ. ಇದರೊಂದಿಗೆ ತಂಡದ ಇಬ್ಬರು ಆಟಗಾರರ ಪ್ರದರ್ಶನದ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಸತತ ವೈಫಲ್ಯಗಳ ನಡುವೆಯೂ ರಿಷಬ್ ಪಂತ್​ಗೆ (Rishabh Pant) ಅವಕಾಶ ನೀಡುತ್ತಿರುವುದು ಅಭಿಮಾನಿಗಳು ಕೋಪಗೊಳ್ಳುವಂತೆ ಮಾಡಿದರೆ, ಇನ್ನೊಂದೆಡೆ ಟಿ20 ಕ್ರಿಕೆಟ್​ನಲ್ಲಿ ಅಬ್ಬರಿಸಿ ಬೊಬ್ಬೆರೆಯುವ ಸೂರ್ಯಕುಮಾರ್ ಯಾದವ್ (Suryakumar Yadav) ಏಕದಿನ ಕ್ರಿಕೆಟ್​ನಲ್ಲಿ ಫ್ಲಾಪ್ ಆಗುತ್ತಿರುವುದು ಬಿಸಿಸಿಐಗೆ ಹೊಸ ತಲೆನೋವು ತಂದ್ದೊಡ್ಡಿದೆ. ಪಂದ್ಯದಿಂದ ಪಂದ್ಯಕ್ಕೆ, ಸರಣಿಯಿಂದ ಸರಣಿಗೆ ಸೂರ್ಯ ಅವರ ಏಕದಿನ ಪ್ರದರ್ಶನ ಕುಸಿಯುತ್ತಿದೆ. ಪ್ರಸ್ತುತ ಕಿವೀಸ್ ವಿರುದ್ಧದ ಸರಣಿಯಲ್ಲೂ ಸೂರ್ಯ ಸೈಲೆಂಟ್ ಆಗಿದ್ದು, ಇಡೀ ಸರಣಿಯಲ್ಲಿ ಅವರು 50 ರನ್ ಕೂಡ ಗಳಿಸಲಿಲ್ಲ.

ಸೂರ್ಯಕುಮಾರ್ ಯಾದವ್ ನ್ಯೂಜಿಲೆಂಡ್‌ನಲ್ಲಿ ಆಡಿದ 3 ಏಕದಿನ ಪಂದ್ಯಗಳ 3 ಇನ್ನಿಂಗ್ಸ್‌ಗಳಲ್ಲಿ ಕೇವಲ 48 ರನ್ ಗಳಿಸಿದರು. ಇದರಲ್ಲಿ ನೇಪಿಯರ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಅವರ ಬ್ಯಾಟ್‌ನಿಂದ 6 ರನ್‌ಗಳು ಹೊರಬಿದ್ದವು. ಮಳೆಯಲ್ಲಿ ಕೊಚ್ಚಿಹೋದ ಹ್ಯಾಮಿಲ್ಟನ್ ಏಕದಿನ ಪಂದ್ಯದಲ್ಲಿ ಅವರು ತಮ್ಮ ಬ್ಯಾಟಿಂಗ್‌ನಿಂದ 34 ರನ್ ಗಳಿಸಿದ್ದರು. ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಸೂರ್ಯ ಕೇವಲ 4 ರನ್ ಗಳಿಸಲಷ್ಟೇ ಶಕ್ತರರಾದರು

ಕೊನೆಯ 7 ಏಕದಿನ ಇನ್ನಿಂಗ್ಸ್‌ಗಳಲ್ಲಿ 10 ರೊಳಗೆ 4 ಬಾರಿ ಔಟ್

ಏಕದಿನ ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ಯಾದವ್ ವೈಫಲ್ಯದ ಕಾರಣ ಕಳೆದ 7 ಇನ್ನಿಂಗ್ಸ್‌ಗಳಲ್ಲಿ 4 ಬಾರಿ ಸಿಂಗಲ್ ಡಿಜಿಟ್‌ಗೆ ಔಟಾಗಿರುವುದು.

ಇದನ್ನೂ ಓದಿ: Roger Binny: ವಿವಾದದಲ್ಲಿ ರೋಜರ್ ಬಿನ್ನಿ; ಸೊಸೆ ವೃತ್ತಿಯ ಕಾರಣಕ್ಕೆ ನೂತನ ಅಧ್ಯಕ್ಷರಿಗೆ ಬಿಸಿಸಿಐ ನೊಟೀಸ್

ಮೊದಲ 7 ಇನ್ನಿಂಗ್ಸ್‌ಗಳಲ್ಲಿ ಹಿಟ್, ನಂತರ 8 ಇನ್ನಿಂಗ್ಸ್‌ಗಳಲ್ಲಿ ಫ್ಲಾಪ್

ಸೂರ್ಯಕುಮಾರ್ ಇಲ್ಲಿಯವರೆಗೆ 15 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 34.36 ರ ಸರಾಸರಿಯಲ್ಲಿ 378 ರನ್ ಗಳಿಸಿರುವ ಸೂರ್ಯ 2 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಇದರಲ್ಲಿ ಸೂರ್ಯಕುಮಾರ್ ಯಾದವ್ ತಮ್ಮ ವೃತ್ತಿಜೀವನದ ಮೊದಲ 7 ಏಕದಿನ ಪಂದ್ಯಗಳಲ್ಲಿ 53.4 ರ ಸರಾಸರಿಯಲ್ಲಿ 267 ರನ್ ಗಳಿಸಿದರು. ಅಲ್ಲದೆ ಅವರ ಏಕದಿನ ವೃತ್ತಿಜೀವನದ 2 ಅರ್ಧ ಶತಕಗಳು ಕೂಡ ಈ 7 ಪಂದ್ಯಗಳಲ್ಲಿಯೇ ಬಂದಿದ್ದವು. ಆದರೆ ನಂತರದ 8 ಏಕದಿನ ಪಂದ್ಯಗಳಲ್ಲಿ ಸೂರ್ಯಕುಮಾರ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಈ 8 ಇನ್ನಿಂಗ್ಸ್​ಗಳಲ್ಲಿ 16.7 ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಅವರು ಕೇವಲ 117 ರನ್ ಗಳಿಸಿದ್ದಾರೆ.

ಇದೇ ಪ್ರದರ್ಶನ ಮುಂದುವರೆದರೆ ಏಕದಿನ ವಿಶ್ವಕಪ್ ಕತೆ ಏನು?

ಟಿ20 ಕ್ರಿಕೆಟ್​ನಲ್ಲಿ ರನ್ ಮಳೆ ಹರಿಸುತ್ತಿರುವ ಸೂರ್ಯಕುಮಾರ್ ಯಾದವ್ ಅವರ ಸ್ಟ್ರೈಕ್ ರೇಟ್ ಕೂಡ ಪಂದ್ಯದಿಂದ ಪಂದ್ಯಕ್ಕೆ ಗಗನಕ್ಕೇರುತ್ತಿದೆ. ಈ ಮಾದರಿಯಲ್ಲಿ ಅವರ ಬ್ಯಾಟ್ ಸತತವಾಗಿ ಅರ್ಧಶತಕ ಹಾಗೂ ಶತಕ ಬಾರಿಸುತ್ತಿದೆ. ಆದರೆ ಏಕದಿನ ಕ್ರಿಕೆಟ್‌ನಲ್ಲಿ ಕತೆ ಪೂರ್ಣ ಬದಲಾಗಿದೆ. ಈ ಮಾದರಿಯ ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ಅವರ ಪ್ರದರ್ಶನ ಕಳವಳಕಾರಿಯಾಗಿದ್ದು, ಈ ಕಳಪೆ ಪ್ರದರ್ಶನ ಹೀಗೆ ಮುಂದುವರೆದರೆ ಮುಂದಿನ ವರ್ಷ ಭಾರತದಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್​ನಲ್ಲಿ ಸೂರ್ಯನಿಗೆ ಸ್ಥಾನ ಸಿಗುವುದು ಅನುಮಾನವಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:28 pm, Wed, 30 November 22