AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND VS NZ Match Report: ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಸೋತ ಭಾರತ..!

India vs New Zealand Match Report: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ 3ನೇ ಹಾಗೂ ಕೊನೆಯ ಏಕದಿನ ಪಂದ್ಯ ಮಳೆಗೆ ಆಹುತಿಯಾಗಿದೆ. ಈ ಮೂಲಕ ಕಿವೀಸ್ ಪಡೆ ಏಕದಿನ ಸರಣಿಯನ್ನು 1-0 ಅಂತರದಿಂದ ತಮ್ಮದಾಗಿಸಿಕೊಂಡಿದೆ.

IND VS NZ Match Report: ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಸೋತ ಭಾರತ..!
India vs New Zealand
TV9 Web
| Edited By: |

Updated on:Nov 30, 2022 | 3:14 PM

Share

ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಡುವೆ ನಡೆದ 3ನೇ ಹಾಗೂ ಕೊನೆಯ ಏಕದಿನ ಪಂದ್ಯ ಮಳೆಗೆ ಆಹುತಿಯಾಗಿದೆ. ಈ ಮೂಲಕ ಕಿವೀಸ್ ಪಡೆ ಏಕದಿನ ಸರಣಿಯನ್ನು 1-0 ಅಂತರದಿಂದ ತಮ್ಮದಾಗಿಸಿಕೊಂಡಿದೆ. ಈ ಸರಣಿಗೂ ಮುನ್ನ ನಡೆದ ಟಿ20 ಸರಣಿಯನ್ನು ನ್ಯೂಜಿಲೆಂಡ್ ತಂಡ ಕಳೆದುಕೊಂಡಿತ್ತು. ಆದರೆ ಏಕದಿನ ಸರಣಿಯಲ್ಲಿ ಸಿಕ್ಕ ಮೊದಲ ಗೆಲುವು ಕೇನ್ (Kane Williamson) ಪಡೆಯನ್ನು ಸರಣಿ ಗೆಲ್ಲುವಂತೆ ಮಾಡಿತು. 3ನೇ ಏಕದಿನ ಪಂದ್ಯದಲ್ಲೂ ಟೀಂ ಇಂಡಿಯಾದ (Team India) ಸೋಲು ಖಚಿತವಾಗಿತ್ತು. ಆದರೆ ಈ ಪಂದ್ಯಕ್ಕೆ ಅಡ್ಡಿಪಡಿಸಿದ ವರುಣ ಧವನ್ ಪಡೆಯ ಸರಣಿ ಸೋಲಿನ ತೀವ್ರತೆಯನ್ನು ಕೊಂಚ ಕಡಿತಗೊಳಿಸಿದ. ಈ ಪಂದ್ಯದಲ್ಲಿ ಮೊದಲಯ ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 50 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 219 ರನ್​ಗಳಿಸಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಕಿವೀಸ್ ಪಡೆ ನೀರು ಕುಡಿದಷ್ಟು ಸುಲಭವಾಗಿ ಟಾರ್ಗೆಟ್ ಬೆನ್ನಟ್ಟಿತ್ತು. ಆದರೆ ಕಿವೀಸ್ ಇನ್ನಿಂಗ್ಸ್​ನ 18ನೇ ಓವರ್​ನಲ್ಲಿ ಎಂಟ್ರಿಕೊಟ್ಟ ವರುಣ ಪಂದ್ಯವನ್ನು ನಿಲ್ಲಿಸುವಲ್ಲಿ ಯಶಸ್ವಿಯಾದ.

ಈ ಸರಣಿಯುದ್ದಕ್ಕೂ ಟಾಸ್ ಗೆಲ್ಲುವಲ್ಲಿ ವಿಫಲರಾದ ನಾಯಕ ಧವನ್ ಕೊನೆಯ ಪಂದ್ಯದಲ್ಲೂ ಟಾಸ್ ಸೋತರು. ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಎಂದಿನಂತೆ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಮೊದಲೆರಡು ಪಂದ್ಯಗಳಲ್ಲಿ ಟಾಸ್ ಸೋತರು ಉತ್ತಮ ಆರಂಭ ಮಾಡಿದ್ದ ಟೀಂ ಇಂಡಿಯಾ ಈ ಪಂದ್ಯದಲ್ಲಿ ಎಡವಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಗಿಲ್ ಹಾಗೂ ಧವನ್ ರನ್ ಗಳಿಸಲು ಪರದಾಡಿದರು. ಅದರಲ್ಲೂ ಉತ್ತಮ ಫಾರ್ಮ್​ನಲ್ಲಿದ್ದ ಗಿಲ್​ಗೆ ಮೊದಲ 6 ಓವರ್​ಗಳಲ್ಲಿ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿದ ಭಾರತ ಒಂದರ ಹಿಂದೆ ಒಂದರಂತೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು.

ಇದನ್ನೂ ಓದಿ: Breaking News: ಪಾಕ್ ಪ್ರವಾಸದಲ್ಲಿರುವ ಇಂಗ್ಲೆಂಡ್ ತಂಡದ 14 ಆಟಗಾರರ ಆರೋಗ್ಯದಲ್ಲಿ ಏರುಪೇರು..!

ಭಾರತದ ಕಳಪೆ ಆರಂಭ

ಈ ಪಂದ್ಯದಲ್ಲಿ ಬರೋಬ್ಬರಿ 22 ಎಸೆತಗಳನ್ನು ಎದುರಿಸಿದ ಗಿಲ್ ಕೇವಲ 13 ರನ್ ಗಳಿಸಲಷ್ಟೇ ಶಕ್ತರಾದರು. ಗಿಲ್ ವಿಕೆಟ್ ಬಳಿಕ ನಾಯಕ ಧವನ್ ಕೂಡ ಕ್ರೀಸ್​ನಲ್ಲಿ ನಿಂತಿದ್ದು ಸಾಕೆನಿಸಿ 45 ಎಸೆತಗಳಲ್ಲಿ 28 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು. ಆದರೆ ಏಕದಿನ ಸರಣಿಯಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಶ್ರೇಯಸ್ ಅಯ್ಯರ್ ಮಾತ್ರ ಈ ಪಂದ್ಯದಲ್ಲೂ ತಮ್ಮ ಎಂದಿನ ಆಟವನ್ನು ಮುಂದುವರೆಸಿದರು. ಪಂತ್ ಜೊತೆಗೂಡಿ ನಿದಾನವಾಗಿ ಟೀಂ ಇಂಡಿಯಾ ಇನ್ನಿಂಗ್ಸ್ ಕಟ್ಟಿದರು. ಆದರೆ ಸತತ ಅವಕಾಶಗಳ ಹೊರತಾಗಿಯೂ ಉಪನಾಯಕ ಪಂತ್ ರನ್ ಗಳಿಸುವಲ್ಲಿ ಎಡವಿದರು. ಈ ಸರಣಿಯುದ್ದಕ್ಕೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದ ಪಂತ್ ಈ ಪಂದ್ಯದಲ್ಲೂ ಕೇವಲ 10 ರನ್​ಗಳಿಗೆ ಸುಸ್ತಾದರು. ಆ ಬಳಿಕ ಬಂದ ಸೂರ್ಯಕುಮಾರ್ ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.

ಸುಂದರ್ ಅರ್ಧಶತಕ

ಅಯ್ಯರ್ ಕೂಡ ಅರ್ಧಶತಕದಂಚಿನಲ್ಲಿ ಎಡವಿ 49 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಮೊದಲ ಏಕದಿನ ಪಂದ್ಯದಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡಿದ ವಾಷಿಂಗ್ಟನ್ ಸುಂದರ್, ಈ ಪಂದ್ಯದಲ್ಲೂ ಸಮಯೋಜಿನ ಇನ್ನಿಂಗ್ಸ್ ಆಡಿದರು. ಒಂದೆಡೆ ವಿಕೆಟ್ ಉರುಳುತ್ತಿದ್ದರು ಬಾಲಗೊಂಚಿಗಳ ಜೊತೆಗೂಡಿ ಅದ್ಭುತ ಅರ್ಧಶತಕ ಸಿಡಿಸಿ ಮಿಂಚಿದರು. ತಂಡದ ಪರ ಸುಂದರ್ ಹಾಗೂ ಶ್ರೇಯಸ್ ಬಿಟ್ಟರೆ ಮತ್ತ್ಯಾವ ಆಟಗಾರನು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಅಂತಿಮವಾಗಿ ಟೀಂ ಇಂಡಿಯಾ ತನ್ನೇಲ್ಲ ವಿಕೆಟ್ ಕಳೆದುಕೊಂಡು 219 ರನ್ ಗಳಿಸಲಷ್ಟೇ ಶಕ್ತವಾಯಿತು.

ಕಿವೀಸ್ ಉತ್ತಮ ಆರಂಭ

ಭಾರತ ನೀಡಿದ 219 ರನ್​ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಕಿವೀಸ್ ಪಡೆ ಉತ್ತಮ ಆರಂಭವನ್ನೇ ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಕಾನ್ವೇ ಹಾಗೂ ಅಲೆನ್ ತಂಡಕ್ಕೆ 97 ರನ್​ಗಳ ಅದ್ಭುತ ಜೊತೆಯಾಟ ತಂದುಕೊಟ್ಟರು. ಆರಂಭದಲ್ಲಿ ರನ್ ಗಳಿಸಲು ಪರದಾಡಿದ ಈ ಜೋಡಿ ನಂತರ ಲಯಕ್ಕೆ ಮರಳಿ ಭಾರತದ ಬೌಲರ್​ಗಳ ಮೇಲೆ ಸವಾರಿ ಮಾಡಿದರು. ಈ ವೇಳೆ ಅರ್ಧಶತಕ ಸಿಡಿಸಿದ ಅಲೆನ್ ಉಮ್ರಾನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಅಷ್ಟರಲ್ಲಾಗಲೇ ಎಂಟ್ರಿಕೊಟ್ಟ ವರುಣ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸುವಂತೆ ಮಾಡಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:54 pm, Wed, 30 November 22

Follow Us
TV9 Web
TV9 Web

TV9 Kannada

Read More
ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ದಿನಾಂಕ ನಿಗದಿ, ರಜನೀಕಾಂತ್ ಅತಿಥಿ?
ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ದಿನಾಂಕ ನಿಗದಿ, ರಜನೀಕಾಂತ್ ಅತಿಥಿ?
‘ಪ್ರೇಮದ ಊರಲಿ ಪಾರ್ಟ್ 2’ ಬರುತ್ತ? ನೇರವಾಗಿ ಉತ್ತರ ನೀಡಿದ ನಿರ್ದೇಶಕ ಮನೋಜ್
‘ಪ್ರೇಮದ ಊರಲಿ ಪಾರ್ಟ್ 2’ ಬರುತ್ತ? ನೇರವಾಗಿ ಉತ್ತರ ನೀಡಿದ ನಿರ್ದೇಶಕ ಮನೋಜ್
AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಅಶೋಕ್​​ ಸವಾಲು
AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಅಶೋಕ್​​ ಸವಾಲು
‘ಕೆಲಸ ಮಾಡಲ್ಲ ಅಂದ್ರೆ ಮಾಡಲ್ಲ’: ಸೌಂದರ್ಯಾ ಜೊತೆ ಗಗನ್ ಜಗಳ
‘ಕೆಲಸ ಮಾಡಲ್ಲ ಅಂದ್ರೆ ಮಾಡಲ್ಲ’: ಸೌಂದರ್ಯಾ ಜೊತೆ ಗಗನ್ ಜಗಳ
ಬಿಗ್ ಬಾಸ್ ಮನೆಯಲ್ಲಿ ಸೋನಿಕಾ, ತಾಂಡವ್, ಗಗನ್ ಮದುವೆ ಮಾತುಕತೆ
ಬಿಗ್ ಬಾಸ್ ಮನೆಯಲ್ಲಿ ಸೋನಿಕಾ, ತಾಂಡವ್, ಗಗನ್ ಮದುವೆ ಮಾತುಕತೆ
ಹಾಸನಾಂಬೆ ದರ್ಶನಕ್ಕೆ ಭಕ್ತ ಸಾಗರ: ಪೊಲೀಸರ ಜೊತೆಗೆ ಫೀಲ್ಡಿಗಿಳಿದ ಸಚಿವ
ಹಾಸನಾಂಬೆ ದರ್ಶನಕ್ಕೆ ಭಕ್ತ ಸಾಗರ: ಪೊಲೀಸರ ಜೊತೆಗೆ ಫೀಲ್ಡಿಗಿಳಿದ ಸಚಿವ
​​ಸ್ಟಿಂಗ್ ಆಪರೇಷನ್​ ಕೇಸಿಗೆ ಸ್ಫೋಟಕ ತಿರುವು:ಕುತೂಹಲ ಮೂಡಿಸಿದ ಸಿಸಿಬಿ ನಡೆ
​​ಸ್ಟಿಂಗ್ ಆಪರೇಷನ್​ ಕೇಸಿಗೆ ಸ್ಫೋಟಕ ತಿರುವು:ಕುತೂಹಲ ಮೂಡಿಸಿದ ಸಿಸಿಬಿ ನಡೆ
ಸಿಎಂಗೆ ಮಹತ್ವದ ಮನವಿ ಮಾಡಿಕೊಂಡ ತನ್ವೀರ್ ಸೇಠ್
ಸಿಎಂಗೆ ಮಹತ್ವದ ಮನವಿ ಮಾಡಿಕೊಂಡ ತನ್ವೀರ್ ಸೇಠ್
ವಾಟಾಳ್ ನಾಗರಾಜ್​ಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕು ಎಂದು ನನಗೆ ಆಸೆ: ಸಿಎಂ
ವಾಟಾಳ್ ನಾಗರಾಜ್​ಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕು ಎಂದು ನನಗೆ ಆಸೆ: ಸಿಎಂ
ದಾವಣಗೆರೆ: ಮನೆ ಮುಂದೆ ನಿಲ್ಲಿಸಿದ್ದ ಇನೋವಾ ಕಾರು ಕಳ್ಳತನ
ದಾವಣಗೆರೆ: ಮನೆ ಮುಂದೆ ನಿಲ್ಲಿಸಿದ್ದ ಇನೋವಾ ಕಾರು ಕಳ್ಳತನ