ಟಿ20 ವಿಶ್ವಕಪ್ನಲ್ಲಿನ (T20 World Cup) 31ನೇ ಪಂದ್ಯದಲ್ಲಿ ಬಾಬರ್ ಆಜಂ ನಾಯಕತ್ವದ ಪಾಕಿಸ್ತಾನ್ ಮತ್ತು ಗೆರ್ಹಾರ್ಡ್ ಎರಾಸ್ಮಸ್ ನೇತೃತ್ವದ ನಮೀಬಿಯಾ (Pakistan vs Namibia) ವಿರುದ್ದ 45 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ಪಾಕಿಸ್ತಾನ್ ತಂಡವು ಗ್ರೂಪ್-2 ನಿಂದ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಂಡಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಪಾಕಿಸ್ತಾನ್ ನಾಯಕ ಬಾಬರ್ ಆಜಂ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಬಾಬರ್ ಹಾಗೂ ರಿಜ್ವಾನ್ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದ್ದರು. ಬಾಬರ್ 70 ರನ್ ಬಾರಿಸಿ ಔಟಾದರೆ, ರಿಜ್ವಾನ್ ಅಜೇಯ 79 ರನ್ ಸಿಡಿಸಿದರು. ಪರಿಣಾಮ ಪಾಕ್ ತಂಡವು ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 189 ರನ್ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ನಮೀಬಿಯಾ ತಂಡವು 20 ಓವರ್ಗಳಲ್ಲಿ 5 ವಿಕೆ್ಟ್ ಕಳೆದುಕೊಂಡು 144 ರನ್ಗಳಿಸಲಷ್ಟೇ ಶಕ್ತರಾದರು. ಈ ಗೆಲುವಿನೊಂದಿಗೆ ಪಾಕ್ ತಂಡವು ಸೆಮಿಫೈನಲ್ಗೆ ಅರ್ಹತೆ ಪಡೆದಿದೆ.
ಪಾಕಿಸ್ತಾನ (ಪ್ಲೇಯಿಂಗ್ XI): ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್(ನಾಯಕ), ಫಖರ್ ಜಮಾನ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಆಸಿಫ್ ಅಲಿ, ಶಾದಾಬ್ ಖಾನ್, ಇಮಾದ್ ವಾಸಿಂ, ಹಸನ್ ಅಲಿ, ಹ್ಯಾರಿಸ್ ರೌಫ್, ಶಾಹೀನ್ ಅಫ್ರಿದಿ
ನಮೀಬಿಯಾ (ಪ್ಲೇಯಿಂಗ್ XI): ಸ್ಟೀಫನ್ ಬಾರ್ಡ್, ಮೈಕೆಲ್ ವ್ಯಾನ್ ಲಿಂಗೆನ್, ಕ್ರೇಗ್ ವಿಲಿಯಮ್ಸ್, ಗೆರ್ಹಾರ್ಡ್ ಎರಾಸ್ಮಸ್(ನಾಯಕ), ಜಾನ್ ನಿಕೋಲ್ ಲೋಫ್ಟಿ-ಈಟನ್, ಝೇನ್ ಗ್ರೀನ್, ಡೇವಿಡ್ ವೈಸ್, ಜೆಜೆ ಸ್ಮಿಟ್, ಜಾನ್ ಫ್ರಿಲಿಂಕ್, ರೂಬೆನ್ ಟ್ರಂಪೆಲ್ಮನ್, ಬೆನ್ ಶಿಕೊಂಗೊ
ನಮೀಬಿಯಾ ವಿರುದ್ದ 45 ರನ್ಗಳ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದ ಪಾಕಿಸ್ತಾನ್
ಕೊನೆಯ ಓವರ್ನಲ್ಲಿ ಶಾಹೀನ್ ಅಫ್ರಿದಿ ಎಸೆತಗಳಲ್ಲಿ ಸಿಕ್ಸ್, ಫೋರ್ ಸಿಡಿಸಿ ಅಬ್ಬರಿಸಿದ ಡೇವಿಡ್ ವೈಸ್
ರೌಫ್ ಎಸೆತದಲ್ಲಿ ಸೂಪರ್ ಸಿಕ್ಸ್ ಸಿಡಿಸಿದ ವೈಸ್
ಹ್ಯಾರಿಸ್ ರೌಫ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಸ್ಮಿತ್
ಹಸನ್ ಎಸೆತದಲ್ಲಿ ಸ್ಕ್ವೇರ್ ಕಟ್ ಮೂಲಕ ಬೌಂಡರಿ ಬಾರಿಸಿದ ವೈಸ್
ಇಮಾದ್ ವಾಸಿಂ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ನಿರ್ಗಮಿಸಿದ ಗೆರ್ಹಾಡ್
ಶಾದಾಬ್ ಖಾನ್ ಎಸೆತಗಳಲ್ಲಿ ಸಿಕ್ಸ್ ಹಾಗೂ ಭರ್ಜರಿ ಬೌಂಡರಿ ಬಾರಿಸಿದ ಗೆರ್ಹಾಡ್
ಹ್ಯಾರಿಸ್ ರೌಫ್ ಉತ್ತಮ ಫೀಲ್ಡಿಂಗ್…ರನೌಟ್ ಆಗಿ ಹೊರನಡೆದ ಸ್ಟೀಫನ್ ಬಾರ್ಡ್
ಹಫೀಜ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಕ್ರೇಗ್
ಕ್ರೀಸ್ ಕಚ್ಚಿ ನಿಂತಿರುವ ಗ್ರೇಗ್ ಹಾಗೂ ಬಾರ್ಡ್
ಬೌಂಡರಿಯೊಂದಿಗೆ ಖಾತೆ ತೆರೆದ ಮೈಕೆಲ್ ವಾನ್
ಸ್ಮಿತ್ ಎಸೆದ ಕೊನೆಯ ಓವರ್ನಲ್ಲಿ 24 ರನ್ ಸಿಡಿಸಿದ ರಿಜ್ವಾನ್
ಸ್ಮಿತ್ 3ನೇ ಹಾಗೂ 4ನೇ ಎಸೆತಗಳಲ್ಲೂ ಬೌಂಡರಿ ಬಾರಿಸಿದ ರಿಜ್ವಾನ್
ಸ್ಮಿತ್ ಮೊದಲೆರಡು ಎಸೆತಗಳಲ್ಲಿ ಫೋರ್ ಹಾಗೂ ಭರ್ಜರಿ ಸಿಕ್ಸ್ ಸಿಡಿಸಿದ ರಿಜ್ವಾನ್
ಕ್ರೀಸ್ನಲ್ಲಿ ರಿಜ್ವಾನ್-ಹಫೀಜ್ ಬ್ಯಾಟಿಂಗ್
ವೈಸ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ 42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಮೊಹಮ್ಮದ್ ರಿಜ್ವಾನ್
ರುಬೆನ್ ಎಸೆತಗಳಲ್ಲಿ ಹಫೀಜ್ ಭರ್ಜರಿ ಬ್ಯಾಟಿಂಗ್- ಬ್ಯಾಕ್ ಟು ಬ್ಯಾಕ್ ಬೌಂಡರಿ
ಸ್ಮಿತ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಹಫೀಜ್
ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ಖಾತೆ ತೆರೆದ ಮೊಹಮ್ಮದ್ ಹಫೀಜ್
ಫ್ರೈಲಿಂಕ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ ಫಖರ್ ಝಮಾನ್ (5)
ವೈಸ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದ ಬಾಬರ್ ಆಜಂ (70)
ಈಟನ್ ಸ್ಪಿನ್ ಎಸೆತಕ್ಕೆ ಮುನ್ನುಗ್ಗಿ ಬಂದು ಭರ್ಜರಿ ಸಿಕ್ಸ್ ಸಿಡಿಸಿದ ರಿಜ್ವಾನ್
39 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಬಾಬರ್ ಆಜಂ
ರುಬೆನ್ ಎಸೆತದಲ್ಲಿ ಮೊಹಮ್ಮದ್ ರಿಜ್ವಾನ್ ಭರ್ಜರಿ ಹೊಡೆತ…ಸಿಕ್ಸರ್
ಬೆನ್ ಕೊನೆಯ ಎಸೆತದಲ್ಲಿ ಫೋರ್ ಬಾರಿಸಿದ ಬಾಬರ್ ಆಜಂ
ಬೆನ್ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ರಿಜ್ವಾನ್
9 ಓವರ್ನಲ್ಲಿ 50 ರನ್ ಪೂರೈಸಿದ ಪಾಕಿಸ್ತಾನ್
ಸ್ಮಿತ್ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ರಿಜ್ವಾನ್
ಡೇವಿಡ್ ವೈಸ್ ಎಸೆತದಲ್ಲಿ ಮೊದಲ ಬೌಂಡರಿ ಬಾರಿಸಿದ ಬಾಬರ್
PAK 4/0 (2)
ಮೊದಲ ಓವರ್ ಮೇಡನ್ ಎಸೆದ ರೂಬೆನ್ ಟ್ರಂಪೆಲ್ಮನ್
PAK 0/0 (1)
ನಮೀಬಿಯಾ (ಪ್ಲೇಯಿಂಗ್ XI): ಸ್ಟೀಫನ್ ಬಾರ್ಡ್, ಮೈಕೆಲ್ ವ್ಯಾನ್ ಲಿಂಗೆನ್, ಕ್ರೇಗ್ ವಿಲಿಯಮ್ಸ್, ಗೆರ್ಹಾರ್ಡ್ ಎರಾಸ್ಮಸ್(ನಾಯಕ), ಜಾನ್ ನಿಕೋಲ್ ಲೋಫ್ಟಿ-ಈಟನ್, ಝೇನ್ ಗ್ರೀನ್, ಡೇವಿಡ್ ವೈಸ್, ಜೆಜೆ ಸ್ಮಿಟ್, ಜಾನ್ ಫ್ರಿಲಿಂಕ್, ರೂಬೆನ್ ಟ್ರಂಪೆಲ್ಮನ್, ಬೆನ್ ಶಿಕೊಂಗೊ
ಪಾಕಿಸ್ತಾನ (ಪ್ಲೇಯಿಂಗ್ XI): ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್(ನಾಯಕ), ಫಖರ್ ಜಮಾನ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಆಸಿಫ್ ಅಲಿ, ಶಾದಾಬ್ ಖಾನ್, ಇಮಾದ್ ವಾಸಿಂ, ಹಸನ್ ಅಲಿ, ಹ್ಯಾರಿಸ್ ರೌಫ್, ಶಾಹೀನ್ ಅಫ್ರಿದಿ
Published On - 7:05 pm, Tue, 2 November 21