Yuvraj Singh: ಯುವಿ ಫ್ಯಾನ್ಸ್​​ಗೆ ಸಿಹಿ ಸುದ್ದಿ: ಕ್ರಿಕೆಟ್​ಗೆ ಕಮ್​ಬ್ಯಾಕ್ ಮಾಡುವುದಾಗಿ ಘೋಷಿಸಿದ ಯುವರಾಜ್ ಸಿಂಗ್

Yuvraj Singh Comeback Announcement: ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿರುವ ವಿಡಿಯೋ ಒಂದನ್ನು ಹಂಚಿಕೊಂಡಿರುವ ಯುವರಾಜ್ ಸಿಂಗ್ ಕ್ರಿಕೆಟ್​ಗೆ ಪುನಃ ಕಮ್​ಬ್ಯಾಕ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

Yuvraj Singh: ಯುವಿ ಫ್ಯಾನ್ಸ್​​ಗೆ ಸಿಹಿ ಸುದ್ದಿ: ಕ್ರಿಕೆಟ್​ಗೆ ಕಮ್​ಬ್ಯಾಕ್ ಮಾಡುವುದಾಗಿ ಘೋಷಿಸಿದ ಯುವರಾಜ್ ಸಿಂಗ್
Yuvraj Singh
Follow us
TV9 Web
| Updated By: Vinay Bhat

Updated on: Nov 02, 2021 | 12:40 PM

ಭಾರತ ಕ್ರಿಕೆಟ್ ತಂಡದ (Indian Cricket Team) ಮಾಜಿ ಆಟಗಾರ, 2011 ಏಕದಿನ ವಿಶ್ವಕಪ್ (ICC World Cup 2011) ಹೀರೋ ಯುವರಾಜ್ ಸಿಂಗ್ (Yuvraj Singh) ಕ್ರಿಕೆಟ್ ಲೋಕಕ್ಕೆ ಮತ್ತೆ ಕಾಲಿಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ (Instagram) ಸಿಕ್ಸರ್ ಕಿಂಗ್ ಬರೆದುಕೊಂಡಿದ್ದಾರೆ. ಅಭಿಮಾನಿಗಳ ಒತ್ತಾಯದ ಮೇರೆಗೆ ಮತ್ತೆ ಪಿಚ್​ಗೆ ಹಿಂತಿರುಗುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಯುವರಾಜ್ ಅವರು 2019ರ ಜೂನ್ ತಿಂಗಳಲ್ಲಿ ಎಲ್ಲ ಮಾದರಿಯ ಕ್ರಿಕೆಟ್​ಗೆ ದಿಢೀರ್ ನಿವೃತ್ತಿ ಘೋಷಣೆ ಮಾಡಿದ್ದರು. ಬಳಿಕ ಕೆನಡದಲ್ಲಿ ಗ್ಲೋಬಲ್ ಟಿ20 ಟೂರ್ನಿ, ದುಬೈನಲ್ಲಿ ಟಿ10 ಲೀಗ್​ನಲ್ಲಿ ಆಡಿದ್ದರು. ಐಪಿಎಲ್​ನಲ್ಲಿ (IPL) ಯುವಿ ಕಿಂಗ್ಸ್​ ಇಲೆವೆನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್), ಆರ್​ಸಿಬಿ (RCB), ಮುಂಬೈ ಇಂಡಿಯನ್ಸ್ (Mumbai Indians) ಫ್ರಾಂಚೈಸಿ ಪರವಾಗಿ ಆಡಿದ್ದರು.

1996ರಲ್ಲಿ ಅಂಡರ್ 15 ವಿಶ್ವಕಪ್, 2000ರಲ್ಲಿ ಅಂಡರ್ 19 ವಿಶ್ವಕಪ್, 2007ರಲ್ಲಿ ಟಿ20 ವಿಶ್ವಕಪ್, 2011ರ ವಿಶ್ವಕಪ್ ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿರುವ ಯುವರಾಜ್ ಸಿಂಗ್ ಅವರು ವಿಶ್ವಕಪ್ ಹೀರೋ ಆಗಿ, 2007ರಲ್ಲಿ ಇಂಗ್ಲೆಂಡಿನಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದ ಕ್ರಿಕೆಟರ್ ಆಗಿ ಅಭಿಮಾನಿಗಳ ಅಚ್ಚು ಮೆಚ್ಚಿನ ಆಟಗಾರರಾಗಿ ಗುರುತಿಸಲ್ಪಟ್ಟಿದ್ದಾರೆ.

ಭಾರತ ತಂಡ 20111ರ ಏಕದಿನ ಮತ್ತು 2007ರ ಟಿ20 ವಿಶ್ವಕಪ್‌ ಗೆಲ್ಲುವಲ್ಲಿ ಯುವರಾಜ್‌ ಸಿಂಗ್‌ ಪಾತ್ರ ಬಹುಮಹತ್ವದ್ದಾಗಿತ್ತು. ಆದರೆ, ಬಳಿಕ ಯುವಿ ಆಟ ಮಂಕಾಯಿತು. ಫೀಲ್ಡಿಂಗ್‌ ಮತ್ತು ಬ್ಯಾಟಿಂಗ್‌ನಲ್ಲಿ ಪ್ರದರ್ಶಿಸುತ್ತಿದ್ದ ಚುರುಕುತನ ಮರೆಯಾಯಿತು. ಬೌಲಿಂಗ್‌ನಲ್ಲಿ ಕೂಡ ಯುವಿ ಸಾಮರ್ಥ್ಯ ಮೊದಲಿನಂತಿರಲಿಲ್ಲ. ಅವರ ಸಾಮರ್ಥ್ಯ ಮಸುಕಾಗಲು ಕ್ಯಾನ್ಸರ್‌ ಕಾರಣ. 2011ರಲ್ಲಿ ಅವರು ಶ್ವಾಸಕೋಶದ ಕ್ಯಾನ್ಸರ್‌ ಚಿಕಿತ್ಸೆಗೊಳಗಾಗಿ 2012ರಲ್ಲಿ ಮತ್ತೆ ಕ್ರಿಕೆಟ್‌ ಮೈದಾನಕ್ಕೆ ಮರಳಿದರು. ಆದರೆ ಅವರು ಹಿಂದಿನ ಜಾದೂತನವನ್ನು ಕಳೆದುಕೊಂಡಿದ್ದರು.

ಕ್ಯಾನ್ಸರ್​ನಿಂದ ಕಮ್​ಬ್ಯಾಕ್ ಮಾಡಿ ಕೆಲ ವರ್ಷ ಕ್ರಿಕೆಟ್ ಆಡಿದರೂ ಫಾರ್ಮ್​ ಕಂಡುಕೊಳ್ಳಲು ವಿಫಲರಾದರು. ಬಳಿಕ ಇವರನ್ನು ತಂಡದಿಂದ ಕೈಬಿಡಲಾಯಿತು. ಅಂತಿಮವಾಗಿ ಯುವರಾಜ್ 2019ರ ಜೂನ್​ನಲ್ಲಿ ಎಲ್ಲ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ನೀಡುವುದಾಗಿ ದಿಢೀರ್ ಘೋಷಣೆ ಮಾಡಿದ್ದರು. ಆದರೆ, ಸದ್ಯ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಕ್ರಿಕೆಟ್​ಗೆ ಕಮ್​ಬ್ಯಾಕ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

‘ನಿಮ್ಮ ಭವಿಷ್ಯವನ್ನು ದೇವರು ನಿರ್ಧರಿಸುತ್ತಾನೆ. ಜನರ ಒತ್ತಾಯದ ಮೇರೆಗೆ ಮುಂದಿನ ಫೆಬ್ರವರಿಯಲ್ಲಿ ನಾನು ಪಿಚ್​ಗೆ ಮತ್ತೆ ಮರಳುತ್ತೇನೆ. ನಿಮ್ಮ ಪ್ರೀತಿ ಮತ್ತು ಹಾರೈಕೆಗೆ ನನ್ನ ಧನ್ಯವಾದ. ನಮ್ಮ ತಂಡಕ್ಕೆ ಸದಾ ಬೆಂಬಲ ನೀಡುತ್ತಿರಿ. ನಿಜವಾದ ಅಭಿಮಾನಿಗಳು ಕಠಿಣ ಸಮಯದಲ್ಲೂ ಬೆಂಬಲ ಸೂಚಿಸುತ್ತಾರೆ’ ಎಂದು ಯುವರಾಜ್ ಸಿಂಗ್ ಬರೆದುಕೊಂಡಿದ್ದಾರೆ.

39 ವರ್ಷದ ಯುವರಾಜ್ ಸಿಂಗ್ ನಿವೃತ್ತಿ ಹಿಂಪಡೆದು ಕಮ್​ಬ್ಯಾಕ್ ಮಾಡಿದರೂ ಅವಕಾಶ ಸಿಗುತ್ತಾ ನೋಡಬೇಕಿದೆ. ಕೊನೆಯ ಬಾರಿಗೆ ಇವರು ಕಳೆದ ಮಾರ್ಚ್​ನಲ್ಲಿ ರೋಡ್ ಸೆಫ್ಟಿ ಟೂರ್ನಮೆಂಟ್​ನಲ್ಲಿ ಇಂಡಿಯಾ ಲೆಜೆಂಡ್ ಪರವಾಗಿ ಕಣಕ್ಕಿಳಿದಿದ್ದರು.

Rohit Sharma: ಶಾಕಿಂಗ್ ನ್ಯೂಸ್: ಇನ್ನೆರಡು ದಿನಗಳಲ್ಲಿ ಟೀಮ್ ಇಂಡಿಯಾ ಏಕದಿನ-ಟಿ20ಗೆ ಹೊಸ ನಾಯಕನ ಘೋಷಣೆ

MS Dhoni: ಎಂ ಎಸ್ ಧೋನಿ ಹಾಗೂ ರವಿ ಶಾಸ್ತ್ರಿ ನಡುವೆ ಬಿರುಕು?: ಅನುಮಾನ ಹುಟ್ಟುಹಾಕಿದ ಆ ಒಂದು ಫೋಟೋ

(Yuvraj Singh statements the he will Back on The Pitch in February in a Stunning Announcement)

Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ