Bangladesh vs South Africa, T20 World Cup 2021: ದಕ್ಷಿಣ ಆಫ್ರಿಕಾಗೆ 6 ವಿಕೆಟ್ಗಳ ಭರ್ಜರಿ ಜಯ
Bangladesh vs South Africa: ಮೊದಲ ಇನಿಂಗ್ಸ್ನಲ್ಲಿ ದಕ್ಷಿಣ ಆಫ್ರಿಕಾ ಪರ ನೋಕಿಯಾ ಹಾಗೂ ಕಗಿಸೊ ರಬಾಡ ತಲಾ 3 ವಿಕೆಟ್ ಪಡೆದರೆ, ಸ್ಪಿನ್ನರ್ ಶಮ್ಸಿ 2 ವಿಕೆಟ್ ಉರುಳಿಸಿ ಮಿಂಚಿದರು.
ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿನ (T20 World Cup) 30ನೇ ಪಂದ್ಯದಲ್ಲಿ ತೆಂಬ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡ ಮೊಹಮ್ಮದುಲ್ಲ ನೇತೃತ್ವದ ಬಾಂಗ್ಲಾದೇಶ (South Africa vs Bangladesh) ವಿರುದ್ದ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ಅನ್ರಿಕ್ ನೋಕಿಯಾ, ರಬಾಡ ದಾಳಿಗೆ ತತ್ತರಿಸಿದರು. ಪರಿಣಾಮ 18.2 ಓವರ್ನಲ್ಲಿ ಕೇವಲ 84 ರನ್ಗೆ ಸರ್ವಪತನ ಕಂಡಿತು. ಈ ಸಾಧಾರಣ ಸವಾಲನ್ನು ದಕ್ಷಿಣ ಆಫ್ರಿಕಾ ತಂಡವು 13.3 ಓವರ್ನಲ್ಲಿ 4 ವಿಕೆಟ್ ಕಳೆದುಕೊಂಡು 86 ರನ್ಗಳಿಸುವ ಮೂಲಕ 6 ವಿಕೆಟ್ಗಳ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಸೆಮಿಫೈನಲ್ ಹಾದಿ ಮತ್ತಷ್ಟು ಸುಗಮವಾಗಿದೆ. ಇನ್ನು ಮೊದಲ ಇನಿಂಗ್ಸ್ನಲ್ಲಿ ದಕ್ಷಿಣ ಆಫ್ರಿಕಾ ಪರ ನೋಕಿಯಾ ಹಾಗೂ ಕಗಿಸೊ ರಬಾಡ ತಲಾ 3 ವಿಕೆಟ್ ಪಡೆದರೆ, ಸ್ಪಿನ್ನರ್ ಶಮ್ಸಿ 2 ವಿಕೆಟ್ ಉರುಳಿಸಿ ಮಿಂಚಿದರು.
ಬಾಂಗ್ಲಾದೇಶ (ಪ್ಲೇಯಿಂಗ್ XI): ಮೊಹಮ್ಮದ್ ನಯಿಮ್, ಲಿಟನ್ ದಾಸ್, ಸೌಮ್ಯ ಸರ್ಕಾರ್, ಮುಶ್ಫಿಕರ್ ರಹೀಮ್, ಮಹಮ್ಮದುಲ್ಲಾ(ನಾಯಕ), ಅಫೀಫ್ ಹೊಸೈನ್, ಶಮೀಮ್ ಹೊಸೈನ್, ಮಹೇದಿ ಹಸನ್, ನಸುಮ್ ಅಹ್ಮದ್, ಶೋರಿಫುಲ್ ಇಸ್ಲಾಂ, ತಸ್ಕಿನ್ ಅಹ್ಮದ್
ದಕ್ಷಿಣ ಆಫ್ರಿಕಾ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್ , ರೀಜಾ ಹೆಂಡ್ರಿಕ್ಸ್, ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡಾ, ಕೇಶವ್ ಮಹಾರಾಜ್, ಅನ್ರಿಕ್ ನೋಕಿಯಾ, ತಬ್ರೈಜ್ ಶಮ್ಸಿ
LIVE NEWS & UPDATES
-
ದಕ್ಷಿಣ ಆಫ್ರಿಕಾಗೆ 6 ವಿಕೆಟ್ಗಳ ಭರ್ಜರಿ ಜಯ
BAN 84 (18.2)
RSA 86/4 (13.3)
-
ದಕ್ಷಿಣ ಆಫ್ರಿಕಾ 4ನೇ ವಿಕೆಟ್ ಪತನ
ನಸುಮ್ ಅಹಮದ್ ಎಸೆತದಲ್ಲಿ ಡುಸ್ಸೆನ್ ಔಟ್
BAN 84 (18.2)
RSA 80/4 (13)
-
ಬವುಮಾ ಬೌಂಡರಿ
ಸೌಮ್ಯ ಸರ್ಕಾರ್ ಎಸೆತದಲ್ಲಿ ಬೌಂಡರಿ ಬಾರಿಸಿದ ಬುವುಮಾ
BAN 84 (18.2)
RSA 67/3 (11.5)
10 ಓವರ್ ಮುಕ್ತಾಯ
BAN 84 (18.2)
RSA 57/3 (10.2)
ಬವುಮಾ ಬಿಗ್ ಹಿಟ್
ನಸುಮ್ ಅಹಮದ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಬವುಮಾ
ಕ್ಯಾಪ್ಟನ್ ಹಿಟ್
ತಸ್ಕಿನ್ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ದಕ್ಷಿಣ ಆಫ್ರಿಕಾ ನಾಯಕ ಬವುಮಾ
BAN 84 (18.2)
RSA 41/3 (7.5)
ಪವರ್ಪ್ಲೇ ಮುಕ್ತಾಯ
BAN 84 (18.2)
RSA 33/3 (6)
ದಕ್ಷಿಣ ಆಫ್ರಿಕಾ 3ನೇ ವಿಕೆಟ್ ಪತನ
ತಸ್ಕಿನ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ ಮಾರ್ಕ್ರಾಮ್ (0)
BAN 84 (18.2)
RSA 33/3 (5.5)
ಬೈಸ್ 4
ತಸ್ಕಿನ್ ಅಹಮದ್ ಎಸೆತದಲ್ಲಿ ಚೆಂಡು ಬೌಂಡರಿಗೆ…ಬೈಸ್ ಫೋರ್ ರನ್
ಡಿಕಾಕ್ ಬೌಲ್ಡ್
ಮೆಹದಿ ಹಸನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಕ್ವಿಂಟನ್ ಡಿಕಾಕ್ (16)
RSA 28/2 (4.5)
ಡಿಕಾಕ್ ಬೌಂಡರಿ
ತಸ್ಕಿಕ್ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಕ್ವಿಂಟನ್ ಡಿಕಾಕ್
BAN 84 (18.2)
RSA 16/1 (3.1)
ಮೊದಲ ಓವರ್ನಲ್ಲಿ ಮೊದಲ ವಿಕೆಟ್
ತಸ್ಕಿನ್ ಅಹಮದ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದ ರೀಜಾ ಹೆಂಡ್ರಿಕ್ಸ್ (4)
BAN 84 (18.2)
RSA 6/1 (1)
ದಕ್ಷಿಣ ಆಫ್ರಿಕಾ ತಂಡಕ್ಕೆ 85 ರನ್ಗಳ ಟಾರ್ಗೆಟ್
BAN 84 (18.2)
ಬಾಂಗ್ಲಾದೇಶ್ ಇನಿಂಗ್ಸ್ ಅಂತ್ಯ
BAN 84 (18.2)
ಮೆಹದಿ ಔಟ್
ಅನ್ರಿಕ್ ನೋಕಿಯಾ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಮೆಹದಿ ಹಸನ್ (27)
BAN 84/9 (18.1)
ಮೊದಲ ಸಿಕ್ಸ್
ಶಮ್ಸಿ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಮೆಹದಿ ಹಸನ್
BAN 83/8 (17.3)
ರನೌಟ್
ಬವುಮಾ ಉತ್ತಮ ಫೀಲ್ಡಿಂಗ್…ತಸ್ಕನ್ ರನೌಟ್
BAN 77/8 (17.2)
ಬೌಂಡರಿ
ಶಮ್ಸಿ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಬೌಂಡರಿ ಬಾರಿಸಿದ ಮೆಹದಿ ಹಸನ್
BAN 70/7 (15.5)
7ನೇ ವಿಕೆಟ್ ಪತನ
ಶಮ್ಸಿ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಶಮೀಮ್ (11)
BAN 64/7 (15.2)
3 ಫೋರ್ ಮಾತ್ರ
15 ಓವರ್ವರೆಗೆ ಬಾಂಗ್ಲಾದೇಶ ಇನಿಂಗ್ಸ್ನಲ್ಲಿ ಮೂಡಿ ಬಂದಿರುವುದು ಕೇವಲ 3 ಫೋರ್
BAN 62/6 (15)
ಕೊನೆಯ ಐದು ಓವರ್ಗಳು ಬಾಕಿ
ಕ್ರೀಸ್ನಲ್ಲಿ ಶಮೀಮ್ ಹಾಗೂ ಮೆಹದಿ ಬ್ಯಾಟಿಂಗ್
13 ಓವರ್ ಮುಕ್ತಾಯ
13 ಓವರ್ನಲ್ಲಿ 50 ರನ್ ಗಡಿದಾಟಿದ ಬಾಂಗ್ಲಾದೇಶ
BAN 54/6 (13)
ಬಾಂಗ್ಲಾದೇಶ ನಾಟಕೀಯ ಕುಸಿತ
ಶಮ್ಸಿ ಎಸೆತದಲ್ಲಿ ಲಿಟನ್ ದಾಸ್ (24) ಎಲ್ಬಿಡಬ್ಲ್ಯೂ ಔಟ್
BAN 45/6 (11.3)
10 ಓವರ್ ಮುಕ್ತಾಯ
ಕ್ರೀಸ್ನಲ್ಲಿ ಲಿಟನ್ ದಾಸ್ ಹಾಗೂ ಶಮೀಮ್ ಹೊಸೈನ್ ಬ್ಯಾಟಿಂಗ್
BAN 40/5 (10)
ಅಫೀಫ್ ಹೊಸೈನ್ ಔಟ್
ಪ್ರಿಟೋರಿಯಸ್ ಎಸೆತದಲ್ಲಿ ಅಫೀಫ್ ಹೊಸೈನ್ (0) ಕ್ಲೀನ್ ಬೌಲ್ಡ್
BAN 34/5 (8.1)
ದಕ್ಷಿಣ ಆಫ್ರಿಕಾ ಭರ್ಜರಿ ಬೌಲಿಂಗ್
ಅನ್ರಿಕ್ ನೋಕಿಯಾ ಎಸೆತದಲ್ಲಿ ಮೊಹಮದುಲ್ಲಾ (3) ಔಟ್
BAN 34/4 (8)
ಪವರ್ಪ್ಲೇ ಮುಕ್ತಾಯ
BAN 28/3 (6)
ರಾಕಿಂಗ್ ರಬಾಡ- ಬಾಂಗ್ಲಾ 3ನೇ ವಿಕೆಟ್ ಪತನ
ರಬಾಡ ಎಸೆತದಲ್ಲಿ ಸ್ಲಿಪ್ನಲ್ಲಿ ಕ್ಯಾಚ್ ನೀಡಿದ ಮುಶ್ಫಿಕುರ್ ರಹೀಂ (0)…ಸ್ಲಿಪ್ನಲ್ಲಿ ಹೆಂಡ್ರಿಕ್ಸ್ ಉತ್ತಮ ಕ್ಯಾಚ್
BAN 24/3 (5.3)
ಬ್ಯಾಕ್ ಟು ಬ್ಯಾಕ್ ವಿಕೆಟ್
ರಬಾಡ ಮೊದಲ ಎಸೆತದಲ್ಲೇ ಎಲ್ಬಿಡಬ್ಲ್ಯೂ ಆಗಿ ಹೊರನಡೆದ ಸೌಮ್ಯ ಸರ್ಕಾರ್ (0)
BAN 22/2 (4)
ನಯೀಮ್ ಔಟ್
ರಬಾಡ ಎಸೆತದಲ್ಲಿ ಹೆಂಡ್ರಿಕ್ಸ್ಗೆ ಸುಲಭ ಕ್ಯಾಚ್ ನೀಡಿದ ಮೊಹಮ್ಮದ್ ನಯೀಮ್ (9)
BAN 22/1 (3.5)
ಮಿಸ್ ಫೀಲ್ಡಿಂಗ್
ಕೇಶವ್ ಮಹರಾಜ್ ಎಸೆತದಲ್ಲಿ ಮಿಡ್ ಆಫ್ನತ್ತ ನಯೀಮ್ ಉತ್ತಮ ಹೊಡೆತ ಮಾರ್ಕ್ರಾಮ್ ಮಿಸ್ ಫೀಲ್ಡಿಂಗ್…ಫೋರ್
BAN 17/0 (3)
ಬಾಂಗ್ಲಾದೇಶ ಶುಭಾರಂಭ
ಆರಂಭಿಕರಾಗಿ ಕಣಕ್ಕಿಳಿದ ಲಟಿನ್ ದಾಸ್ ಹಾಗೂ ನಯೀಮ್ ಉತ್ತಮ ಆರಂಭ
2 ಓವರ್ ಮುಕ್ತಾಯದ ವೇಳೆಗೆ ತಂಡದ ಮೊತ್ತ 9
BAN 9/0 (2)
ಉಭಯ ತಂಡಗಳು ಹೀಗಿವೆ
ಬಾಂಗ್ಲಾದೇಶ (ಪ್ಲೇಯಿಂಗ್ XI): ಮೊಹಮ್ಮದ್ ನಯಿಮ್, ಲಿಟನ್ ದಾಸ್, ಸೌಮ್ಯ ಸರ್ಕಾರ್, ಮುಶ್ಫಿಕರ್ ರಹೀಮ್, ಮಹಮ್ಮದುಲ್ಲಾ(ನಾಯಕ), ಅಫೀಫ್ ಹೊಸೈನ್, ಶಮೀಮ್ ಹೊಸೈನ್, ಮಹೇದಿ ಹಸನ್, ನಸುಮ್ ಅಹ್ಮದ್, ಶೋರಿಫುಲ್ ಇಸ್ಲಾಂ, ತಸ್ಕಿನ್ ಅಹ್ಮದ್
ದಕ್ಷಿಣ ಆಫ್ರಿಕಾ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್ , ರೀಜಾ ಹೆಂಡ್ರಿಕ್ಸ್, ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡಾ, ಕೇಶವ್ ಮಹಾರಾಜ್, ಅನ್ರಿಕ್ ನೋಕಿಯಾ, ತಬ್ರೈಜ್ ಶಮ್ಸಿ
Published On - Nov 02,2021 3:22 PM