ಏಷ್ಯಾಕಪ್‌ಗೂ (Asia Cup) ಮುನ್ನ ಪಾಕಿಸ್ತಾನ ಕ್ರಿಕೆಟ್ ತಂಡ (Pakistan cricket team) ನೆದರ್ಲೆಂಡ್ಸ್ ಪ್ರವಾಸ ಮಾಡಿದೆ. ಈ ಸರಣಿಯ ಮೂಲಕ ಪಾಕ್ ತಂಡ ಉತ್ತಮ ತಯಾರಿ ಮಾಡಿಕೊಳ್ಳಲಿದೆ ಎಂಬ ನಂಬಿಕೆ ಇದೆ. ಆದರೆ, ಬಾಬರ್ ಅಜಮ್ (Babar Azam) ತನ್ನ ಪೂರ್ಣ ಸಾಮರ್ಥ್ಯದ ತಂಡದೊಂದಿಗೆ ವಿಶ್ವದ 14 ನೇ ಶ್ರೇಯಾಂಕಿತ ನೆದರ್ಲೆಂಡ್ಸ್ ಎದುರು ಬಂದಿಳಿದಿರುವ ಕಾರಣ ಪಾಕಿಸ್ತಾನ ತಂಡ ಟೀಕೆಗೆ ಗುರಿಯಾಗಿದೆ. ಇದರ ಹೊರತಾಗಿಯೂ ಪಾಕಿಸ್ತಾನ ತಂಡ ರನ್ ಗಳಿಸಲು ಹರಸಾಹಸ ಪಟ್ಟಿದೆ. ಸರಣಿಯ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ, ನೆದರ್ಲೆಂಡ್ಸ್ ಪಾಕಿಸ್ತಾನಕ್ಕೆ ಎಂತಹ ಆಘಾತ ನೀಡಿತು ಎಂದರೆ ತಂಡವು 200 ರನ್ ತಲುಪಲು ಸಹ ಹೆಣಗಾಡಬೇಕಾಯಿತು.
ಮೂರು ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಜಯ ಸಾಧಿಸಿರುವ ಪಾಕಿಸ್ತಾನ ಈಗಾಗಲೇ ಸರಣಿಯನ್ನು ಗೆದ್ದುಕೊಂಡಿದೆ. ಆದರೆ, ಆ ಎರಡು ಗೆಲುವುಗಳು ಕೂಡ ಪಾಕ್ ತಂಡಕ್ಕೆ ಅಷ್ಟು ಸುಲಭವಾಗಿ ಧಕ್ಕಲಿಲ್ಲ. ಮೊದಲ ಪಂದ್ಯದಲ್ಲಿ 314 ರನ್ ಗಳಿಸಿದ್ದ ಪಾಕಿಸ್ತಾನ ಕೇವಲ 16 ರನ್‌ಗಳಿಂದ ಗೆದ್ದಿತ್ತು. ಎರಡನೇ ಪಂದ್ಯದಲ್ಲೂ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತ್ತು. ಇದೀಗ ಮೂರನೇ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸೋಲಿನ ಭೀತಿ ಎದುರಾಗಿದೆ.
50 ಓವರ್‌ಗಳಲ್ಲಿ 206 ರನ್
ಆಗಸ್ಟ್ 21 ರ ಭಾನುವಾರದಂದು ರೋಟರ್‌ಡ್ಯಾಮ್‌ನಲ್ಲಿ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ, ಪಾಕಿಸ್ತಾನ ಮೊದಲು ಬ್ಯಾಟ್ ಮಾಡಿತು. ಆದರೆ ಸ್ಟಾರ್ ಬ್ಯಾಟ್ಸ್‌ಮನ್‌ಗಳಿಂದ ತುಂಬಿದ ಬಾಬರ್ ಅಜಮ್ ಅವರ ಇಡೀ ತಂಡ ನೆದರ್ಲೆಂಡ್ಸ್‌ನ ಬಿಗಿಯಾದ ಬೌಲಿಂಗ್‌ನ ಮುಂದೆ ಕೇವಲ 206 ರನ್‌ಗಳಿಗೆ ಆಲೌಟ್ ಆಯಿತು. ಜೊತೆಗೆ ಪಾಕಿಸ್ತಾನಿ ತಂಡವು 50 ಓವರ್‌ಗಳನ್ನು ಸಹ ಆಡಲು ಸಾಧ್ಯವಾಗಲಿಲ್ಲ.
ನಾಯಕ ಬಾಬರ್ ಅಜಮ್ ಎಂದಿನಂತೆ ತಂಡವನ್ನು ನಿಭಾಯಿಸದಿದ್ದರೆ ಪಾಕಿಸ್ತಾನದ ಸ್ಥಿತಿ ಇನ್ನಷ್ಟು ಹದಗೆಡುತ್ತಿತ್ತು. ಬೀಳುವ ವಿಕೆಟ್‌ಗಳ ನಡುವೆ ಬಾಬರ್ ಮತ್ತೊಂದು ಅದ್ಭುತ ಅರ್ಧಶತಕ ಗಳಿಸಿ ತಂಡವನ್ನು ಹೇಗೋ ಈ ಸ್ಕೋರ್‌ಗೆ ತಂದರು. ಆದಾಗ್ಯೂ, ಬಾಬರ್ ಕೂಡ ಸಾಕಷ್ಟು ಹೋರಾಟ ಮಾಡಬೇಕಾಯಿತು. ಬಾಬರ್ 125 ಎಸೆತಗಳಲ್ಲಿ 91 ರನ್ ಗಳಿಸಿದರು.
ಆಲ್‌ರೌಂಡರ್ ಅಬ್ಬರ
22ರ ಹರೆಯದ ಯುವ ಆಲ್‌ರೌಂಡರ್ ಬೈಸ್ ಡಿಲ್ಲಿ ಪಾಕಿಸ್ತಾನದ ಬ್ಯಾಟಿಂಗ್ ಲಯವನ್ನು ಯಾಳು ಮಾಡುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದರು. ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಪಾಕಿಸ್ತಾನಕ್ಕೆ ಬೌಲಿಂಗ್ ಮತ್ತು ಬ್ಯಾಟಿಂಗ್‌ನಿಂದ ತೊಂದರೆ ನೀಡದ ಡಿಲ್ಲಿ, 9 ಓವರ್‌ಗಳಲ್ಲಿ 50 ರನ್ ನೀಡಿ 3 ವಿಕೆಟ್ ಪಡೆಯುವ ಮೂಲಕ ಪಾಕಿಸ್ತಾನದ ಮಧ್ಯಮ ಕ್ರಮಾಂಕವನ್ನು ನಾಶಪಡಿಸಿದರು. ಹೀಗಾಗಿ ಪಾಕ್ ತಂಡ 206 ರನ್ ಗಳಿಸಲಷ್ಟೇ ಶಕ್ತವಾಯಿತು.
Published On - 9:26 pm, Sun, 21 August 22