WCL 2025 Final: ಆಫ್ರಿಕಾ- ಪಾಕಿಸ್ತಾನ ನಡುವೆ ಫೈನಲ್ ಫೈಟ್; ಪಂದ್ಯ ಎಷ್ಟು ಗಂಟೆಗೆ ಆರಂಭ?
WCL 2025 Final: ಆಗಸ್ಟ್ 2 ರಂದು, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಚಾಂಪಿಯನ್‌ಶಿಪ್ ತಂಡಗಳು ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ವಿಶ್ವ ಲೆಜೆಂಡ್ಸ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭೇಟಿಯಾಗಲಿವೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 9 ಗಂಟೆಗೆ ಆರಂಭವಾಗಲಿದೆ. ಪಾಕಿಸ್ತಾನ ತಂಡ 5 ಪಂದ್ಯಗಳಲ್ಲಿ 4 ಗೆದ್ದರೆ, ದಕ್ಷಿಣ ಆಫ್ರಿಕಾ 4 ಪಂದ್ಯಗಳಲ್ಲಿ ಗೆದ್ದಿದೆ. ಸ್ಟಾರ್ ಸ್ಪೋರ್ಟ್ಸ್ ಮತ್ತು ಫ್ಯಾನ್‌ಕೋಡ್‌ನಲ್ಲಿ ಪಂದ್ಯದ ನೇರ ಪ್ರಸಾರವಿದೆ.

2025 ರ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನ ಫೈನಲ್ (WCL 2025 Final) ಪಂದ್ಯವು ಆಗಸ್ಟ್ 2 ರಂದು ಪಾಕಿಸ್ತಾನ ಚಾಂಪಿಯನ್ಸ್ ಮತ್ತು ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ (Pakistan vs South Africa) ನಡುವೆ ನಡೆಯಲಿದೆ. ಈ ಪಂದ್ಯವು ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಪಾಕಿಸ್ತಾನ ಚಾಂಪಿಯನ್ಸ್ ತಂಡ ಇಲ್ಲಿಯವರೆಗೆ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಲೀಗ್ನಲ್ಲಿ 5 ಪಂದ್ಯಗಳನ್ನು ಆಡಿದ ಪಾಕ್, ನಾಲ್ಕು ಪಂದ್ಯಗಳನ್ನು ಗೆದ್ದರೆ, ಒಂದು ರದ್ದಾಯಿತು. ಇತ್ತ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಬಗ್ಗೆ ಹೇಳುವುದಾದರೆ, ಆಡಿದ 5 ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದರೆ, ಒಂದು ಪಂದ್ಯದಲ್ಲಿ ಸೋಲನ್ನು ಎದುರಿಸಬೇಕಾಯಿತು. ಇದೀಗ ಈ ಎರಡೂ ತಂಡಗಳು ಫೈನಲ್‌ನಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ.
ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಫೈನಲ್ ಯಾವಾಗ ನಡೆಯಲಿದೆ?
ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಪಂದ್ಯವು ಪಾಕಿಸ್ತಾನ ಚಾಂಪಿಯನ್ಸ್ ಮತ್ತು ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ನಡುವೆ ಆಗಸ್ಟ್ 2 ರ ಶನಿವಾರ ನಡೆಯಲಿದೆ.
ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಫೈನಲ್ ಪಂದ್ಯ ಎಲ್ಲಿ ನಡೆಯಲಿದೆ?
ಈ ಎರಡೂ ತಂಡಗಳ ನಡುವಿನ ಫೈನಲ್ ಪಂದ್ಯ ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಫೈನಲ್ ಪಂದ್ಯ ಎಷ್ಟು ಗಂಟೆಗೆ ಪ್ರಾರಂಭವಾಗುತ್ತದೆ?
ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಫೈನಲ್ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 9 ಗಂಟೆಗೆ ಆರಂಭವಾಗಲಿದ್ದು, ಈ ಪಂದ್ಯದ ಟಾಸ್ ರಾತ್ರಿ 8:30 ಕ್ಕೆ ನಡೆಯಲಿದೆ.
ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಫೈನಲ್ ಪಂದ್ಯವನ್ನು ನೀವು ಯಾವಾಗ ಮತ್ತು ಎಲ್ಲಿ ವೀಕ್ಷಿಸಬಹುದು?
ಪಾಕಿಸ್ತಾನ ಚಾಂಪಿಯನ್ಸ್ ಮತ್ತು ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ನಡುವಿನ ಅಂತಿಮ ಪಂದ್ಯದ ನೇರ ಪ್ರಸಾರವು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿರುತ್ತದೆ. ಈ ಪಂದ್ಯದ ನೇರ ಪ್ರಸಾರವು ಭಾರತದಲ್ಲಿ ಫ್ಯಾನ್‌ಕೋಡ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಇರುತ್ತದೆ.
WCL 2025: ಪಾಕಿಸ್ತಾನದ ವಿರುದ್ಧ ಆಡಲು ನಿರಾಕರಿಸಿ ಟೂರ್ನಿಯಿಂದ ಹೆಸರನ್ನು ಹಿಂಪಡೆದ ಭಾರತ
ಉಭಯ ತಂಡಗಳು
ಪಾಕಿಸ್ತಾನ ಚಾಂಪಿಯನ್ಸ್: ಶರ್ಜೀಲ್ ಖಾನ್, ಕಮ್ರಾನ್ ಅಕ್ಮಲ್ (ವಿಕೆಟ್ ಕೀಪರ್), ಫವಾದ್ ಆಲಂ, ಉಮರ್ ಅಮೀನ್, ಆಸಿಫ್ ಅಲಿ, ಶೋಯೆಬ್ ಮಲಿಕ್ (ನಾಯಕ), ಇಮಾದ್ ವಾಸಿಮ್, ಅಮೀರ್ ಯಾಮಿನ್, ಸೊಹೈಲ್ ಖಾನ್, ಸೊಹೈಲ್ ತನ್ವೀರ್, ಸಯೀದ್ ಅಜ್ಮಲ್, ಸೊಹೈಬ್ ಮಕ್ಸೂದ್, ಮೊಹಮ್ಮದ್ ಹಫೀಜ್, ವಹಾಬ್ ರಿಯಾಜ್, ಮಿಸ್ಬಾ-ಉಲ್-ಹಕ್, ಯೂನಿಸ್ ಖಾನ್, ಅಬ್ದುಲ್ ರಜಾಕ್
ದಕ್ಷಿಣ ಆಫ್ರಿಕಾ ಚಾಂಪಿಯನ್ಸ್: ರಿಚರ್ಡ್ ಲೆವಿ, ಎಬಿ ಡಿವಿಲಿಯರ್ಸ್ (ನಾಯಕ), ಹಾಶಿಮ್ ಆಮ್ಲಾ, ಜೀನ್-ಪಾಲ್ ಡುಮಿನಿ, ಜೆಜೆ ಸ್ಮಟ್ಸ್, ಅಲ್ಬಿ ಮೊರ್ಕೆಲ್, ಡೇನ್ ವಿಲಾಸ್ (ವಿಕೆಟ್ ಕೀಪರ್), ವೇಯ್ನ್ ಪಾರ್ನೆಲ್, ಕ್ರಿಸ್ ಮೋರಿಸ್, ಹಾರ್ಡಸ್ ವಿಲ್ಜೊಯೆನ್, ಇಮ್ರಾನ್ ತಾಹಿರ್, ಮೊರ್ನೆ ವ್ಯಾನ್ ವೈಕ್, ಆರನ್ ಇರ್ವಿಯೆರ್, ಸರೆಲ್ ಒರೆಲ್ವಿಯೊ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
