Asian Games 2023: ಏಷ್ಯನ್ ಗೇಮ್ಸ್​ಗೆ ಪಾಕ್ ತಂಡ ಪ್ರಕಟ; ಟೂರ್ನಿಯಿಂದ ಹಿಂದೆ ಸರಿದ ಮಾಜಿ ಕ್ಯಾಪ್ಟನ್

Asian Games 2023: ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಇಬ್ಬರು ಸ್ಟಾರ್ ಆಟಗಾರ್ತಿಯರ ಅಲಭ್ಯತೆ ಪಾಕ್ ತಂಡಕ್ಕೆ ಬಿಗ್ ಶಾಕ್ ನೀಡಿದೆ.

Asian Games 2023: ಏಷ್ಯನ್ ಗೇಮ್ಸ್​ಗೆ ಪಾಕ್ ತಂಡ ಪ್ರಕಟ; ಟೂರ್ನಿಯಿಂದ ಹಿಂದೆ ಸರಿದ ಮಾಜಿ ಕ್ಯಾಪ್ಟನ್
ಭಾರತ ಮಹಿಳಾ ತಂಡದೊಂದಿಗೆ ಬಿಸ್ಮಾ ಮರೂಫ್
Follow us
ಪೃಥ್ವಿಶಂಕರ
|

Updated on:Jul 26, 2023 | 9:39 AM

ಚೀನಾದಲ್ಲಿ ನಡೆಯಲ್ಲಿರುವ 19ನೇ ಏಷ್ಯನ್ ಗೇಮ್ಸ್​ಗೆ (Asian Games) 15 ಸದಸ್ಯರ ಮಹಿಳಾ ತಂಡವನ್ನು (Pakistan women’s team) ಪಾಕ್ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ. ಇದುವರೆಗೆ ಏಷ್ಯನ್ ಗೇಮ್ಸ್​ನಲ್ಲಿ ನಡೆದಿರುವ ಎರಡು ಕ್ರಿಕೆಟ್ ಆವೃತ್ತಿಯಲ್ಲಿ ಪಾಕ್ ತಂಡ ಚಿನ್ನ ಗೆಲುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ಗುರಿಯೊಂದಿಗೆ ಕ್ರೀಡಾಕೂಟಕ್ಕೆ ಕಾಲಿಡುತ್ತಿರುವ ಪಾಕ್ ತಂಡಕ್ಕೆ ಮಾಜಿ ನಾಯಕಿಯ ಅಲಭ್ಯತೆ ಕೊಂಚ ಹಿನ್ನಡೆಯುಂಟು ಮಾಡಿದೆ. ಇದೇ ಮೊದಲ ಬಾರಿಗೆ ಟೀಂ ಇಂಡಿಯಾ (Team India), ಏಷ್ಯನ್​ ಗೇಮ್ಸ್​ನಲ್ಲಿ ಆಡಲು ಸಜ್ಜಾಗಿದೆ. ಹೀಗಾಗಿ ಉಭಯ ತಂಡಗಳ ನಡುವಿನ ಹೈವೋಲ್ಟೇಜ್ ಕದನವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. ಆದರೆ ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಇಬ್ಬರು ಸ್ಟಾರ್ ಆಟಗಾರ್ತಿಯರ ಅಲಭ್ಯತೆ ಪಾಕ್ ತಂಡಕ್ಕೆ ಬಿಗ್ ಶಾಕ್ ನೀಡಿದೆ.

ವಾಸ್ತವವಾಗಿ ಕೆಲವು ದಿನಗಳ ಹಿಂದೆ ತಂಡದ ಸ್ಫೋಟಕ ಬ್ಯಾಟರ್ 18ರ ಹರೆಯದ ಆಯೇಶಾ ನಸಿಮ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು. ಇದೀಗ ತಂಡದ ಮಾಜಿ ನಾಯಕಿ ಬಿಸ್ಮಾ ಮರೂಫ್ ಕೂಡ ಏಷ್ಯನ್​ ಗೇಮ್ಸ್​ನಿಂದ ಹಿಂದೆ ಸರಿದಿದ್ದಾರೆ. ಇದರಿಂದಾಗಿ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಒಂದೇ ವಾರದಲ್ಲಿ ಎರಡು ಹೊಡೆತ ಬಿದ್ದಿದೆ. ಧಾರ್ಮಿಕ ಕಾರಣಗಳಿಂದ ಆಯೇಶಾ ನಸಿಮ್ ಕ್ರಿಕೆಟ್​ ನಿವೃತ್ತಿ ಘೋಷಿಸಿದ್ದರು. ಆದರೆ ಬಿಸ್ಮಾ ಮಾರುಫ್ ಏಷ್ಯನ್ ಗೇಮ್ಸ್‌ ಆಡದಿರಲು ಪ್ರಮುಖ ಕಾರಣವೆಂದರೆ, ಈ ಕ್ರೀಡಾಕೂಟಕ್ಕೆ ಅಳವಡಿಸಿರುವ ನಿಯಮಗಳು.

Shikhar Dhawan Career: ಏಷ್ಯನ್ ಗೇಮ್ಸ್​ಗೂ ಬೇಡವಾದ ಶಿಖರ್ ಧವನ್; ಗಬ್ಬರ್ ಕ್ರಿಕೆಟ್ ಕೆರಿಯರ್ ಅಂತ್ಯ..?

ಮಕ್ಕಳಿಗೆ ಅವಕಾಶವಿಲ್ಲ

ವಾಸ್ತವವಾಗಿ ಕ್ರೀಡಾಪಟುಗಳು ತಮ್ಮ ಮಕ್ಕಳನ್ನು ಈ ವರ್ಷದ ಏಷ್ಯನ್ ಗೇಮ್ಸ್‌ನ ಗೇಮ್ಸ್ ವಿಲೇಜ್‌ಗೆ ಕರೆದೊಯ್ಯಲು ಅನುಮತಿ ನೀಡಲಾಗಿಲ್ಲ. ಹಾಗಾಗಿ ಬಿಸ್ಮಾ ಕೂಡ ತನ್ನ ಮಗಳನ್ನು ಗೇಮ್ಸ್ ವಿಲೇಜ್‌ಗೆ ಕರೆದುಕೊಂಡು ಹೋಗುವಂತಿಲ್ಲ. ಆದ್ದರಿಂದ ಬಿಸ್ಮಾ ತನ್ನ ಒಬ್ಬಳೇ ಮಗಳೊಂದಿಗೆ ಇರಲು ಏಷ್ಯನ್ ಗೇಮ್ಸ್​ನಲ್ಲಿ ಆಡದಿರಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯಸ್ಥೆ ತಾನ್ಯಾ ಮಲಿಕ್ ಮಾಹಿತಿ ನೀಡಿದ್ದು, ‘ಬಿಸ್ಮಾ ಮರೂಫ್ ಈ ಬಾರಿ ಏಷ್ಯನ್ ಗೇಮ್ಸ್‌ಗೆ ಲಭ್ಯವಿರುವುದಿಲ್ಲ. ಅಥ್ಲೀಟ್‌ಗಳು ತಮ್ಮ ಮಕ್ಕಳನ್ನು ಗೇಮ್ಸ್ ವಿಲೇಜ್‌ಗೆ ಕರೆದುಕೊಂಡು ಹೋಗುವಂತಿಲ್ಲ ಎಂಬ ನಿಯಮದಿಂದಾಗಿ ಬಿಸ್ಮಾ ಕ್ರೀಡಾಕೂಟದಿಂದ ಹಿಂದೆ ಸರಿದಿದ್ದಾರೆ ಎಂದಿದ್ದಾರೆ.

ಈ ಹಿಂದೆಯೂ ಇದೇ ಸಮಸ್ಯೆ ಎದುರಾಗಿತ್ತು

ಈ ಹಿಂದೆ ನಡೆದಿದ್ದ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೂ ಈ ನಿಯಮವನ್ನು ಅಳವಡಿಸಲಾಗಿತ್ತು. ಆದರೆ ಸಾಕಷ್ಟು ಮಾತುಕತೆಯ ನಂತರ ಗೇಮ್ಸ್ ಅಧಿಕಾರಿಗಳು ಬಿಸ್ಮಾ ಅವರೊಂದಿಗೆ ತಮ್ಮ ಮಗಳನ್ನು ಕರೆದುಕೊಂಡು ಹೋಗಲು ಅನುಮತಿ ನೀಡಿದ್ದರು. ಎಂದಿನಂತೆ ನಿದಾ ದಾರ್ ಅವರು 19 ನೇ ಏಷ್ಯನ್ ಗೇಮ್ಸ್‌ನಲ್ಲಿ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡವನ್ನು ಮುನ್ನಡೆಸಲಿದ್ದಾರೆ.

ಏಷ್ಯನ್ ಗೇಮ್ಸ್‌ಗೆ ಪಾಕಿಸ್ತಾನ ಮಹಿಳಾ ತಂಡ: ನಿದಾ ದಾರ್ (ನಾಯಕಿ), ಅಲಿಯಾ ರಿಯಾಜ್, ಅನೂಶಾ ನಾಸಿರ್, ಡಯಾನಾ ಬೇಗ್, ಫಾತಿಮಾ ಸನಾ, ಮುನೀಬಾ ಅಲಿ, ನಜಿಹಾ ಅಲ್ವಿ, ನಶ್ರಾ ಸುಂಧು, ನತಾಲಿಯಾ ಪರ್ವೈಜ್, ಒಮೈಮಾ ಸೊಹೈಲ್, ಸದಾಫ್ ಶಮಾಸ್, ಶಾವಾಲ್ ಜುಲ್ಫಿಕರ್, ಸಿದ್ರಾ ಅಮೀನ್, ಸೈಯದಾ ಅರೂಬ್ ಶಾ, ಉಮ್-ಎ-ಹನಿ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:38 am, Wed, 26 July 23

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ