PBKS vs LSG Highlights IPL 2023: 56 ರನ್‌ಗಳಿಂದ ಪಂಜಾಬ್ ಮಣಿಸಿದ ಲಕ್ನೋ ತಂಡ
Punjab Kings vs Lucknow super giants IPL 2023 Highlights in Kannada: ಮೊಹಾಲಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಭರ್ಜರಿ ಗೆಲುವು ಸಾಧಿಸಿದೆ. ಪಂಜಾಬ್ ವಿರುದ್ಧ 56 ರನ್ಗಳ ಬೃಹತ್ ಗೆಲುವು ದಾಖಲಿಸಿದ ಲಕ್ನೋ ತಂಡ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.
ಮೊಹಾಲಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಭರ್ಜರಿ ಗೆಲುವು ಸಾಧಿಸಿದೆ. ಪಂಜಾಬ್ ವಿರುದ್ಧ 56 ರನ್ಗಳ ಬೃಹತ್ ಗೆಲುವು ದಾಖಲಿಸಿದ ಲಕ್ನೋ ತಂಡ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಕೈಲ್ ಮೆಯರ್ಸ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಬಿರುಸಿನ ಅರ್ಧಶತಕದ ನೆರವಿನಿಂದ 5 ವಿಕೆಟ್ ನಷ್ಟದಲ್ಲಿ 257 ರನ್ ದಾಖಲಿಸಿತು. ಇದಕ್ಕುತ್ತರವಾಗಿ ಪಂಜಾಬ್ ತಂಡಕ್ಕೆ ಉತ್ತಮ ಆರಂಭ ಸಿಗದ ಕಾರಣ 20ನೇ ಓವರ್ನ 5ನೇ ಎಸೆತದಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಳ್ಳುವ ಮೂಲಕ 201 ರನ್‌ಗಳಿಗೆ ಆಲೌಟ್ ಆಯಿತು.
LIVE NEWS & UPDATES
-
ಲಕ್ನೋಗೆ 56 ರನ್ ಜಯ
ಲಕ್ನೋ ಸೂಪರ್ ಜೈಂಟ್ಸ್ ಪಂಜಾಬ್ ಕಿಂಗ್ಸ್ ತಂಡವನ್ನು 56 ರನ್‌ಗಳಿಂದ ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 257 ರನ್ ಗಳಿಸಿತು. ಪಂಜಾಬ್ ತಂಡ 201 ರನ್‌ಗಳಿಗೆ ಆಲೌಟ್ ಆಗುವುದರೊಂದಿಗೆ ಹೀನಾಯ ಸೋಲು ಅನುಭವಿಸಿತು.
-
ರಬಾಡ ಔಟ್
ಪಂಜಾಬ್ ನ ಒಂಬತ್ತನೇ ವಿಕೆಟ್ ಕೂಡ ಪತನವಾಯಿತು. ನವೀನ್-ಉಲ್-ಹಕ್ ಕಗಿಸೊ ರಬಾಡ ಅವರನ್ನು ಬೌಲ್ಡ್ ಮಾಡಿದರು. ರಬಾಡಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ.
-
ಜಿತೇಶ್ ಮತ್ತು ರಾಹುಲ್ ಔಟ್
18ನೇ ಓವರ್‌ನಲ್ಲಿ ಯಶ್ ಠಾಕೂರ್ ಅದ್ಭುತವಾಗಿ ಬೌಲಿಂಗ್ ಮಾಡಿ ಎರಡು ವಿಕೆಟ್ ಪಡೆದರು. ಜಿತೇಶ್ ಶರ್ಮಾ ಓವರ್‌ನ ಐದನೇ ಎಸೆತದಲ್ಲಿ ಔಟಾದರೆ ಕೊನೆಯ ಎಸೆತದಲ್ಲಿ ರಾಹುಲ್ ಚಹಾರ್ ಗೋಲ್ಡನ್ ಡಕ್ ಆದರು.
ಜಿತೇಶ್ ಸತತ 2 ಸಿಕ್ಸರ್
18ನೇ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಜಿತೇಶ್ ಶರ್ಮಾ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಮೊದಲ ಸಿಕ್ಸರ್ ಅನ್ನು ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ನ ಮೇಲೆ ಮತ್ತು ಎರಡನೆಯದನ್ನು ಲಾಂಗ್ ಆನ್ ಕಡೆ ಬಾರಿಸಿದರು.
ಕರನ್ ಔಟ್
17ನೇ ಓವರ್ನ ಕೊನೆಯ ಎಸೆತದಲ್ಲಿ ನವೀನ್ ಉಲ್ ಹಕ್ ಸ್ಯಾಮ್ ಕರನ್ ವಿಕೆಟ್ ಪಡೆದರು.
ಜಿತೇಶ್ ಸಿಕ್ಸರ್
16ನೇ ಓವರ್‌ನ ಮೂರನೇ ಎಸೆತದಲ್ಲಿ ಜಿತೇಶ್ ಶರ್ಮಾ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಬಾರಿಸಿದರು. ಓವರ್‌ನ ಅಂತಿಮ ಎಸೆತದಲ್ಲಿ, ಡೀಪ್ ಮಿಡ್-ವಿಕೆಟ್ ಮತ್ತು ಡೀಪ್ ಸ್ಕ್ವೇರ್ ಲೆಗ್ ನಡುವೆ ಬೌಂಡರಿ ಬಂತು.
ಲಿವಿಂಗ್‌ಸ್ಟನ್ ಔಟ್
ರವಿ ಬಿಷ್ಣೋಯ್ ಅವರು ಲಿವಿಂಗ್‌ಸ್ಟನ್ ಅವರನ್ನು ಬೇಟೆಯಾಡಿದ್ದಾರೆ. ಹೀಗಾಗಿ ಪಂಜಾಬ್ 5ನೇ ವಿಕೆಟ್ ಕಳೆದುಕೊಂಡಿತು.
ಕರನ್ ಸಿಕ್ಸ್
ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್‌ಗಳು ಕೂಡ ದೊಡ್ಡ ಹೊಡೆತಗಳ ಮೂಲಕ ದೊಡ್ಡ ಸ್ಕೋರ್ ವಿರುದ್ಧ ರನ್ ಗಳಿಸುತ್ತಿದ್ದಾರೆ. ಆದರೆ, ಗುರಿ ತಲುಪುವುದು ಕಷ್ಟ. 14ನೇ ಓವರ್‌ನ ಎರಡನೇ ಎಸೆತದಲ್ಲಿ ಲಿವಿಂಗ್‌ಸ್ಟನ್ ಬೌಂಡರಿ ಬಾರಿಸಿದರು. ಸ್ಯಾಮ್ ಕರನ್ ನಾಲ್ಕನೇ ಎಸೆತದಲ್ಲಿ ಫುಲ್ಲರ್ ಬಾಲ್ ಅನ್ನು ವೈಡ್ ಲಾಂಗ್ ಆನ್‌ನಲ್ಲಿ ಸಿಕ್ಸರ್‌ಗೆ ಹೊಡೆದರು.
ಅಥರ್ವ ಔಟ್
13ನೇ ಓವರ್‌ನಲ್ಲಿ ರವಿ ಬಿಷ್ಣೋಯ್ ಅಥರ್ವ ಟೈಡೆ ಅವರನ್ನು ಬೇಟೆಯಾಡಿದ್ದಾರೆ. ಟೈಡ್ ಸ್ವೀಪ್ ಮಾಡಲು ಪ್ರಯತ್ನಿಸುತ್ತಿದ್ದರು. ಆದರೆ ಚೆಂಡು ಬ್ಯಾಟ್‌ನ ಮೇಲ್ಭಾಗದ ಅಂಚನ್ನು ತಾಗಿ ಗಾಳಿಯಲ್ಲಿ ಎತ್ತರಕ್ಕೆ ಹೋಯಿತು. ಬಿಷ್ಣೋಯ್ ಅದ್ಭುತ ಕ್ಯಾಚ್ ಹಿಡಿದರು.
ಸಿಕಂದರ್ ಔಟ್
ಯಶ್ ಠಾಕೂರ್ ಓವರ್‌ನಲ್ಲಿ ರಜಾ ನೇರವಾಗಿ ಫೀಲ್ಡರ್ ಕೃನಾಲ್ ಪಾಂಡ್ಯ ಅವರತ್ತ ಹೋಯಿತು. ಡೀಪ್ ಪಾಯಿಂಟ್ನಲ್ಲಿ ನಿಂತಿದ್ದ ಪಾಂಡ್ಯ ಮಿಸ್ ಮಾಡದೆ ಕ್ಯಾಚ್ ತೆಗೆದುಕೊಂಡರು.
ರಜಾ ಸಿಕ್ಸರ್
11ನೇ ಓವರ್‌ನ ಐದನೇ ಎಸೆತದಲ್ಲಿ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್ ಕಡೆ ರಜಾ ಫೋರ್ ಹೊಡೆದರು. ನಂತರ ಕೊನೆಯ ಚೆಂಡನ್ನು ಮಿಡ್-ವಿಕೆಟ್ ಕಡೆಗೆ ಬೃಹತ್ ಸಿಕ್ಸರ್‌ಗೆ ಎಳೆದರು. ಆ ಓವರ್‌ನಲ್ಲಿ 13 ರನ್ ಬಂದವು.
ಟೈಡೆ ಸಿಕ್ಸರ್
ಟೈಡೆ 7ನೇ ಓವರ್ನ ನಾಲ್ಕನೇ ಎಸೆತನನ್ನು ಸಿಕ್ಸರ್‌ಗೆ ಅಟ್ಟಿದರು. ಸಿಕಂದರ್ ರಜಾ ಓವರ್‌ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದರು.
ಟೈಡೆ 3 ಬೌಂಡರಿ
ಅವೇಶ್ ಖಾನ್ ಎಸೆದ ಐದನೇ ಓವರ್‌ನ ಆರಂಭದಲ್ಲಿ ಟೈಡೆ ಎರಡನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಟೈಡೆ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಸತತ ಎರಡು ಬೌಂಡರಿಗಳನ್ನು ಬಾರಿಸಿದರು.
ಪ್ರಭ್ಸಿಮ್ರಾನ್ ಸಿಂಗ್ ಔಟ್
ಪ್ರಭ್ಸಿಮ್ರಾನ್ ಸಿಂಗ್ ಔಟಾಗಿದ್ದಾರೆ. ನಾಲ್ಕನೇ ಓವರ್‌ನ ನಾಲ್ಕನೇ ಎಸೆತದಲ್ಲಿ ನವೀನ್-ಉಲ್-ಹಕ್ ಬೌಲಿಂಗ್ನಲ್ಲಿ ಡೇನಿಯಲ್ ಸೈಮ್ಸ್ಗೆ ಕ್ಯಾಚ್ ನೀಡಿ ಔಟಾದರು.
ಟೈಡೆ ಸಿಕ್ಸರ್
ಸ್ಟೊಯಿನಿಸ್ ಅವರ ಓವರ್‌ನಲ್ಲಿ ಅಥರ್ವ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್ ಮೇಲೆ ಸಿಕ್ಸರ್ ಬಾರಿಸಿದರು. ಓವರ್‌ನ ಮೂರು ಮತ್ತು ನಾಲ್ಕನೇ ಎಸೆತಗಳಲ್ಲಿ ಬೌಂಡರಿ ಬಂತು.
ಪ್ರಭಾಸಿಮ್ರಾನ್ ಬೌಂಡರಿ
ಕೈಲ್ ಮೇಯರ್ಸ್ ಓವರ್‌ನ ಎರಡನೇ ಎಸೆತದಲ್ಲಿ ಪ್ರಭಾಸಿಮ್ರಾನ್ ಅಮೋಘ ಬೌಂಡರಿ ಬಾರಿಸಿದರು.
ಧವನ್ ಔಟ್
ಪಂಜಾಬ್ ಕಿಂಗ್ಸ್‌ಗೆ ಮೊದಲ ಓವರ್‌ನಲ್ಲಿಯೇ ದೊಡ್ಡ ಪೆಟ್ಟು ಬಿದ್ದಿತು. ತಂಡದ ಆರಂಭಿಕ ಹಾಗೂ ನಾಯಕ ಶಿಖರ್ ಧವನ್ ವಿಕೆಟ್ ಕಳೆದುಕೊಂಡಿದ್ದಾರೆ. ಕೇವಲ 1 ರನ್ ಗಳಿಸಿ ಧವನ್ ಮರಳಿದ್ದಾರೆ
ಪಂಜಾಬ್ಗೆ 250 ರನ್ ಟಾರ್ಗೆಟ್
ಲಕ್ನೋ ಇನ್ನಿಂಗ್ಸ್ ಮುಗಿದಿದೆ. ಮೊದಲು ಬ್ಯಾಟ್ ಮಾಡಿದ ಈ ತಂಡ 257 ರನ್ ಗಳಿಸಿತ್ತು. ಇದು ಈ ಸೀಸನ್ನ ಗರಿಷ್ಠ ಸ್ಕೋರ್ ಆಗಿದ್ದು, ಐಪಿಎಲ್‌ನ ಎರಡನೇ ಗರಿಷ್ಠ ಸ್ಕೋರ್ ಆಗಿದೆ. ಐಪಿಎಲ್‌ನಲ್ಲಿ ಎರಡನೇ ಬಾರಿಗೆ ಸ್ಕೋರ್ 250 ದಾಟಿದೆ.
ರಬಾಡಗೆ ಸಿಕ್ಸರ್
16ನೇ ಓವರ್ನ ನಾಲ್ಕನೇ ಎಸೆತದಲ್ಲಿ ಸ್ಟೊಯಿನಿಸ್ ಲಾಂಗ್ ಆಫ್ ಕಡೆಗೆ ಸುಲಭವಾಗಿ ಸಿಕ್ಸರ್ ಬಾರಿಸಿದರು. ಈ ಓವರ್‌ನಲ್ಲಿ ಲಕ್ನೋ 200 ರನ್ ಪೂರೈಸಿತು.
ಸ್ಟೊಯಿನಿಸ್ ಅರ್ಧ ಶತಕ
ಮಾರ್ಕಸ್ ಸ್ಟೊಯಿನಿಸ್ ಅರ್ಧಶತಕ ಪೂರೈಸಿದ್ದಾರೆ. ಅವರು 16ನೇ ಓವರ್‌ನ ಎರಡನೇ ಎಸೆತದಲ್ಲಿ ಸಿಂಗಲ್ ಕದ್ದು ಅರ್ಧಶತಕ ಪೂರೈಸಿದರು. ಈ ವೇಳೆ ಅವರು 3 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ಬಡೋನಿ ಔಟ್
ಲಕ್ನೋ ಮೂರನೇ ವಿಕೆಟ್ ಪತನಗೊಂಡಿದೆ.14ನೇ ಓವರ್‌ನ ಮೂರನೇ ಎಸೆತದಲ್ಲಿ ಬಡೋನಿ ರಾಹುಲ್ ಚಾಹರ್‌ಗೆ ಕ್ಯಾಚ್ ನೀಡಿದರು.
ಬಡೋನಿ ಸಿಕ್ಸರ್
ಲಿವಿಂಗ್ಸ್ಟನ್ ಓವರ್ನ ಎರಡನೇ ಎಸೆತದಲ್ಲಿ ಬಡೋನಿ ಸ್ವೀಪ್ ಮಾಡಿ ಸಿಕ್ಸರ್ ಬಾರಿಸಿದರು.
ಲಕ್ನೋ 150 ರನ್ ಪೂರ್ಣ
13ನೇ ಓವರ್‌ನ ಎರಡನೇ ಎಸೆತದಲ್ಲಿ ಮಾರ್ಕಸ್ ಸ್ಟೊಯಿನಿಸ್ ವಿಕೆಟ್ ನೀಡಿದ್ದರು. ಆದರೆ ಇಲ್ಲಿ ಲಿಯಾಮ್ ಲಿವಿಂಗ್ಸ್ಟನ್ ತಪ್ಪು ಮಾಡಿದರು.ಸ್ಟೊಯಿನಿಸ್ ಅವರ ಕ್ಯಾಚ್ ತೆಗೆದುಕೊಳ್ಳುವಾಗ ಲಿವಿಂಗ್ಸ್ಟನ್ ಬೌಂಡರಿ ಗೆರೆ ತುಳಿದರು.ಇದರಿಂದ ಸ್ಟೊಯಿನಿಸ್ ಬದುಕುಳಿದರು. ಇದರೊಂದಿಗೆ ಲಕ್ನೋದ 150 ರನ್‌ಗಳು ಪೂರ್ಣಗೊಂಡಿವೆ.
ಲಕ್ನೋ ಶತಕ ಪೂರ್ಣ
ಲಕ್ನೋದ 100 ರನ್‌ಗಳು ಪೂರ್ಣಗೊಂಡಿವೆ. ಎಂಟು ಓವರ್‌ಗಳ ನಂತರ ಲಕ್ನೋ ಸ್ಕೋರ್ ಎರಡು ವಿಕೆಟ್ ಕಳೆದುಕೊಂಡು 107 ರನ್ ಆಗಿದೆ. ಆಯುಷ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಮೈದಾನದಲ್ಲಿದ್ದಾರೆ.
ಮೇಯರ್ಸ್ ಔಟ್
ಅರ್ಧಶತಕ ಸಿಡಿಸಿದ ಮೇಯರ್ಸ್ ರಬಾಡ ಓವರ್ನಲ್ಲೇ ವಿಕೆಟ್ ಒಪ್ಪಿಸಿದರು.
ಮೇಯರ್ಸ್ ಅರ್ಧಶತಕ
ಆರಂಭಿಕರಾಗಿ ಕಣಕ್ಕಿಳಿದಿದ್ದ ಮೇಯರ್ಸ್ ಕೇವಲ 21 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ರಬಾಡ ಬೌಲ್ ಮಾಡಿದ 6ನೇ ಓವರ್‌ನಲ್ಲಿ ಭರ್ಜರಿ ಸಿಕ್ಸರ್ ಹೊಡೆದ ಮೇಯರ್ಸ್ ತಮ್ಮ ಅರ್ಧಶತಕ ಪೂರೈಸಿದರು.
5ನೇ ಓವರ್ ಮುಕ್ತಾಯ
ರಜಾ ಬೌಲ್ ಮಾಡಿದ 5ನೇ ಓವರ್‌ನಲ್ಲಿ ಮೇಯರ್ಸ್ 2 ಸಿಕ್ಸರ್ ಹಾಗೂ 1 ಬೌಂಡರಿ ಹೊಡೆದರು. ಈ ಓವರ್‌ನಲ್ಲಿ 17 ರನ್ ಬಂದವು.
ರಾಹುಲ್ ಔಟ್
ರಬಾಡ ಬೌಲ್ ಮಾಡಿದ 4ನೇ ಓವರ್‌ನ ಮೊದಲ ಎಸೆತದಲ್ಲಿ ಸಿಕ್ಸರ್ ಹೊಡೆದ ರಾಹುಲ್, ಆ ನಂತರದ ಎಸೆತದಲ್ಲಿ ಥರ್ಡ್ ಮ್ಯಾನ್ನಲ್ಲಿ ಕ್ಯಾಚಿತ್ತು ಔಟಾದರು.
ಮೇಯರ್ಸ್ ಸಿಕ್ಸರ್
3ನೇ ಓವರ್ನಲ್ಲೂ ಮೇಯರ್ಸ್ ಅಬ್ಬರಿಸಿದರು. ಈ ಓವರ್‌ನಲ್ಲಿ ಭರ್ಜರಿ ಸಿಕ್ಸರ್ ಹೊಡೆದ ಮೇಯರ್ಸ್, 2 ಬೌಂಡರಿ ಕೂಡ ಹೊಡೆದರು.
2ನೇ ಓವರ್‌ನಲ್ಲಿ 4 ಬೌಂಡರಿ
ಅರ್ಷದೀಪ್ ಬೌಲ್ ಮಾಡಿದ 2ನೇ ಓವರ್‌ನಲ್ಲಿ ಮೇಯರ್ಸ್ 4 ಬೌಂಡರಿ ಹೊಡೆದರು. ಈ ಓವರ್‌ನಲ್ಲಿ 17 ರನ್ ಬಂದವು.
ಲಕ್ನೋ ಬ್ಯಾಟಿಂಗ್ ಆರಂಭ, ರಾಹುಲ್ಗೆ ಜೀವದಾನ
ಲಕ್ನೋ ಬ್ಯಾಟಿಂಗ್ ಆರಂಭಿಸಿದೆ. ಮೊದಲ ಓವರ್ನ ಮೊದಲ ಎಸೆತದಲ್ಲೇ ರಾಹುಲ್ಗೆ ಜೀವದಾನ ಸಿಕ್ಕಿತು. ಅಥರ್ವ್ ಸುಲಭ ಕ್ಯಾಚ್ ಕೈಚೆಲ್ಲಿದರು.
ಪಂಜಾಬ್ ಕಿಂಗ್ಸ್
ಶಿಖರ್ ಧವನ್ (ನಾಯಕ), ಅಥರ್ವ್ ಟೈಡೆ, ಸಿಕಂದರ್ ರಜಾ, ಲಿಯಾಮ್ ಲಿವಿಂಗ್ಸ್ಟನ್, ಸ್ಯಾಮ್ ಕರನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಾರುಖ್ ಖಾನ್, ಕಗಿಸೊ ರಬಾಡ, ರಾಹುಲ್ ಚಾಹರ್, ಗುರ್ನೂರ್ ಬ್ರಾರ್, ಅರ್ಶ್ದೀಪ್ ಸಿಂಗ್.
ಲಕ್ನೋ ಸೂಪರ್ ಜೈಂಟ್ಸ್
ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಮಾರ್ಕಸ್ ಸ್ಟೋನಿಸ್, ಕೃನಾಲ್ ಪಾಂಡ್ಯ, ಆಯುಷ್ ಬಧೋನಿ, ನವೀನ್-ಉಲ್-ಹಕ್, ರವಿ ಬಿಷ್ಣೋಯ್, ಅವೇಶ್ ಖಾನ್, ಯಶ್ ಠಾಕೂರ್
ಟಾಸ್ ಗೆದ್ದ ಪಂಜಾಬ್
ಟಾಸ್ ಗೆದ್ದ ಪಂಜಾಬ್ ನಾಯಕ ಶಿಖರ್ ಧವನ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಪಂಜಾಬ್ಗೆ ನೆಮ್ಮದಿಯ ಸಂಗತಿಯೆಂದರೆ ಇಂಜುರಿಗೊಳಗಾಗಿದ್ದ ಧವನ್ ಇಂದಿನ ಪಂದ್ಯದಿಂದ ತಂಡಕ್ಕೆ ಮರಳಿದ್ದಾರೆ.
Published On - Apr 28,2023 7:01 PM